Safari: ಪ್ರತಿಷ್ಠೆಗೆ ಬಿದ್ದು ನಿರ್ಬಂಧ, ನೂರಾರು ಕುಟುಂಬ ಬೀದಿಗೆ
ಜಂಗಲ್ ರೆಸಾರ್ಟ್ ನಿಗಮದ ರೆಸಾರ್ಟ್‌ನಲ್ಲಿ 180ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕೆಲ ಐಷಾರಾಮಿ ರೆಸಾರ್ಟ್‌ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ರೆಸಾರ್ಟ್, ಹೋಮ್ ಸ್ಟೇಗಳಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿಯ ಮನೆಯಲ್ಲಿ ನಾಲ್ಕು ಜನರಿದ್ದರೂ, ಈ ಸಫಾರಿಗೆ ಬರುವ ಪ್ರವಾಸಿಗರಿಂದಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನರ ಜೀವನ ಅವಲಂಬಿಸಿದೆ.
-
ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಎರಡು ಸಾವಿರಕ್ಕೂ ಹೆಚ್ಚು ಕುಟುಂಬಕ್ಕೆ ಕಬಿನಿ, ಬಂಡೀಪುರ ಸಫಾರಿ ಜೀವನಾಧಾರ
ಪ್ರತಿಷ್ಠೆಗೆ ಬಿದ್ದು ವಿಶ್ವವಿಖ್ಯಾತ ನಾಗರಹೊಳೆ, ಬಂಡೀಪುರ ಸಫಾರಿ ಮೇಲೆ ನಿರ್ಬಂಧ ಹೇರಿದ ಪರಿಣಾಮ ಎರಡೂವರೆ ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವ ಆತಂಕ ಶುರುವಾಗಿದೆ. ಕೂಡಲೇ ಸಫಾರಿ ಪುನರಾರಂಭಿಸದಿದ್ದರೆ ಕಬಿನಿ, ಬಂಡೀಪುರ ಸುತ್ತಮುತ್ತಲಿನ 50ಕ್ಕೂ ಹೆಚ್ಚು ರೆಸಾರ್ಟ್, ಹೋಮ್ ಸ್ಟೇಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ.
ಮಾನವನ ಮೇಲೆ ಹುಲಿ ದಾಳಿ ನಡೆಸಿದೆ ಎನ್ನುವ ಕಾರಣಕ್ಕೆ ಸಫಾರಿ ನಿರ್ಬಂಧಿಸಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದು, ಇದರಿಂದ ನಿತ್ಯ ಲಕ್ಷಾಂತರ ರುಪಾಯಿ ನಷ್ಟವಾಗುವುದಷ್ಟೇ ಅಲ್ಲದೇ ಸ್ಥಳೀಯವಾಗಿರುವ ಅನೇಕ ಕುಟುಂಬ ಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಫಾರಿ ನಿರ್ಬಂಧದಿಂದ ಕಬಿನಿ, ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ‘ಶೂನ್ಯ’ಕ್ಕೆ ಬಂದಿಳಿದಿದೆ. ಇದರಿಂದ ಜರ್ಜರಿತರಾಗಿರುವ ಮಾಲೀಕರು ಸಫಾರಿ ಪುನರಾರಂಭಿಸ ದಿದ್ದರೆ ರೆಸಾರ್ಟ್‌ಗಳನ್ನೇ ಮುಚ್ಚಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ.
ನಿರಂತರವಾಗಿ ಸಫಾರಿ ನಿರ್ಬಂಧಿಸಿರುವುದರಿಂದ ವಿದೇಶಿ ಪ್ರವಾಸಿಗರು ಹಾಗೂ ದೇಶೀಯ ಪ್ರವಾಸಿ ಗರ ಸಂಖ್ಯೆ ಕುಸಿದಿದೆ. ರೆಸಾರ್ಟ್ ಹಾಗೂ ಹೋಮ್ ಸ್ಟೇಗಳಲ್ಲಿ ಪ್ರವಾಸಿಗರಿಲ್ಲದಿದ್ದರೂ ಪುನರಾ ರಂಭದ ನಿರೀಕ್ಷೆಯಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಿ ಕೆಲಸದಲ್ಲಿ ಮುಂದುವರಿಸಿದ್ದಾರೆ.
ಇದನ್ನೂ ಓದಿ: Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ
ಆದರೆ ಮೂರು ತಿಂಗಳ ಬಳಿಕವೂ, ಆರಂಭವಾಗದಿದ್ದರೆ ಮುಂದಿನ ದಿನದಲ್ಲಿ ಸಿಬ್ಬಂದಿಗಳ ಕಡಿತ ಹಾಗೂ ರೆಸಾರ್ಟ್‌ಗಳನ್ನು ಮುಚ್ಚುವ ಸಾಧ್ಯತೆಯಿದೆ. ಒಂದು ವೇಳೆ ಮಾಲೀಕರು ಇಂತಹ ಕಠಿಣ ತೀರ್ಮಾನಕ್ಕೆ ಮುಂದಾದರೆ, 10 ಸಾವಿರಕ್ಕೂ ಹೆಚ್ಚು ಜನ, ಎರಡು ಸಾವಿರಕ್ಕೂ ಹೆಚ್ಚು ಕುಟುಂಬ ಗಳು ಬೀದಿಗೆ ಬರುವುದು ನಿಶ್ಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
2 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ವೈಲ್ಡ್‌ಲೈಫ್ ಟೂರಿಸಂನಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನದಲ್ಲಿರುವ ಕಬಿನಿ ಹಾಗೂ ಬಂಡೀಪುರ ಭಾಗದಲ್ಲಿ 20ಕ್ಕೂ ಹೆಚ್ಚು ರೆಸಾರ್ಟ್ ಹಾಗೂ 30ಕ್ಕೂ ಹೆಚ್ಚು ಹೋಂ ಸ್ಟೇಗಳು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ.
ಜಂಗಲ್ ರೆಸಾರ್ಟ್ ನಿಗಮದ ರೆಸಾರ್ಟ್‌ನಲ್ಲಿ 180ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕೆಲ ಐಷಾರಾಮಿ ರೆಸಾರ್ಟ್‌ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ರೆಸಾರ್ಟ್, ಹೋಮ್ ಸ್ಟೇಗಳಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಒಬ್ಬ ಸಿಬ್ಬಂದಿಯ ಮನೆಯಲ್ಲಿ ನಾಲ್ಕು ಜನರಿದ್ದರೂ, ಈ ಸಫಾರಿಗೆ ಬರುವ ಪ್ರವಾಸಿಗ ರಿಂದಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನರ ಜೀವನ ಅವಲಂಬಿಸಿದೆ. ಇದೀಗ ಸಫಾರಿ ನಿರ್ಬಂಧಿಸಿರುವುದರಿಂದ ಬಹುತೇಕ ರೆಸಾರ್ಟ್‌ಗಳು ಖಾಲಿ ಹೊಡೆಯುತ್ತಿವೆ. ಇದು ಹೀಗೆ ಮುಂದು ವರಿದರೆ ಎರಡು ಸಾವಿರ ಕುಟುಂಬಗಳು ಆರ್ಥಿಕ ಆದಾಯವೇ ಬಂದ್ ಆಗುವ ಆತಂಕವಿದೆ.
ಈ ಭಾಗದಲ್ಲಿರುವ ಬಹುತೇಕ ರೆಸಾರ್ಟ್ʼಗಳಲ್ಲಿ ಶೇ.90ರಷ್ಟು ಸಿಬ್ಬಂದಿಗಳು ಸ್ಥಳೀಯರೇ ಆಗಿದ್ದಾರೆ. ಅದರಲ್ಲಿಯೂ ಕಾಡಿನಂಚಿನಲ್ಲಿರುವ ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಒಂದು ವೇಳೆ ಈ ಸಿಬ್ಬಂದಿಗಳು ಕೆಲಸ ಕಳೆದುಕೊಂಡರೆ, ಗಿರಿಜನ ಜನಾಂಗದ ನೂರಾರು ಕುಟುಂಬಗಳಿಗೆ ಹೊಡೆತ ಬೀಳಲಿದೆ. ಆದ್ದರಿಂದ ಅವೈಜ್ಞಾನಿಕವಾಗಿ ರದ್ದುಪಡಿಸಿರುವ ಸಫಾರಿ ಯನ್ನು ಕೂಡಲೇ ಆರಂಭಿಸಬೇಕು ಎನ್ನುವುದು ರೆಸಾರ್ಟ್ ಮಾಲೀಕರು, ಸ್ಥಳೀಯರ ಆಗ್ರಹವಾಗಿದೆ.
ಒಂದು ವೇಳೆ ಸಫಾರಿ ಹೋಗಿದ್ದ ಸಮಯದಲ್ಲಿ ಹುಲಿ ಅಥವಾ ಇನ್ಯಾವುದೇ ಪ್ರಾಣಿಗಳಿಂದ ದಾಳಿಯಾಗಿ ಪ್ರವಾಸಿಗರಿಗೆ ಸಮಸ್ಯೆಯಾಗಿದ್ದರೆ ಈ ರೀತಿಯ ಕಠಿಣ ತೀರ್ಮಾನ ತಗೆದುಕೊಳ್ಳುವು ದರಲ್ಲಿ ಅರ್ಥವಿತ್ತು. ಆದರೆ ಸಫಾರಿ ನಡೆಯುವ ಸ್ಥಳಕ್ಕೂ, ಹುಲಿಗಳ ದಾಳಿ ಯಾಗಿರುವುದಕ್ಕೂ ಸುಮಾರು 40 ಕಿಮೀ ಅಂತರವಿದೆ. ಹೀಗಿರುವಾಗ, ‘ಪ್ರತಿಷ್ಠೆ’ ಅಥವಾ ‘ಅವೈಜ್ಞಾನಿಕ’ ತೀರ್ಮಾನಕ್ಕೆ ಸಫಾರಿ ನಿರ್ಬಂಧಿಸಿ ಸಾವಿರಾರು ಕುಟುಂಬಗಳನ್ನು ‘ಬೀದಿ’ಗೆ ತರುವ ತೀರ್ಮಾನ ಕೂಡಲೇ ಹಿಂಪಡೆಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಸ್ಥಳೀಯರಿಗೆ ಭಾರೀ ನಷ್ಟ
ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಕೆಲಸ ಮಾಡುವವರು ಒಂದೆಡೆಯಾದರೆ, ನಾಗರಹೊಳೆ, ಬಂಡೀಪುರ ಭಾಗದಲ್ಲಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಬಹುತೇಕ ರೆಸಾರ್ಟ್‌ಗಳು ಸ್ಥಳೀಯರೊಂದಿಗೆ ದೈನಂದಿನ ವ್ಯವಹಾರ ಹೊಂದಿದ್ದಾರೆ. ಹಾಲು, ಮೊಸರು ಮಾತ್ರವಲ್ಲದೇ ತರಕಾರಿಗಳನ್ನು ಸ್ಥಳೀಯರಿಂದಲೇ ಖರೀದಿಸುತ್ತಾರೆ. ಇದು ಸ್ಥಳೀಯ ನೂರಾರು ಕುಟುಂಬಗಳಿಗೆ ಜೀವನ ಸಾಗಿಸಲು ‘ಮೂಲ’ ಆದಾಯವಾಗಿದೆ. ಇದೀಗ ಕಳೆದ ಮೂರು ತಿಂಗಳಿನಿಂದ ಸಫಾರಿ ನಿರ್ಬಂಧಿಸಿರುವುದರಿಂದ, ರೆಸಾರ್ಟ್‌ಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಇದರಿಂದ ಸ್ಥಳೀಯರು ಬೆಳೆಯುವ ಸೊಪ್ಪು, ತರಕಾರಿ, ಹಾಲು ಮೊಸರಿಗೆ ಬೇಡಿಕೆ ಇಲ್ಲವಾಗಿದೆ. ಇದರಿಂದಾಗಿ ಸುಮಾರು ಎರಡು ಸಾವಿರ ಜನರ ಸ್ಥಿತಿ ಅತಂತ್ರಕ್ಕೆ ಸಿಲುಕಿದೆ.
ನೆರೆ ರಾಜ್ಯಕ್ಕೆ ಲಾಭ
ಅವೈಜ್ಞಾನಿಕವಾಗಿ ರಾಜ್ಯ ಅರಣ್ಯ ಇಲಾಖೆಯ ತೀರ್ಮಾನದಿಂದ ಕರ್ನಾಟಕದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ನಷ್ಟವಾಗುತ್ತಿದ್ದರೆ, ಲಾಭವಾಗುತ್ತಿರುವುದು ಮಾತ್ರ ನೆರೆ ರಾಜ್ಯಗಳಿಗೆ. ಕಬಿನಿಯಲ್ಲಿ ಸಫಾರಿ ಸ್ಥಗಿತವಾಗಿರುವುದರಿಂದ ಪ್ರವಾಸಿಗರು ಕೇರಳದ ವಯನಾಡಿಗೆ, ಬಂಡೀಪುರ ಸಫಾರಿ ಸ್ಥಗಿತವಾಗಿರುವುದರಿಂದ ತಮಿಳುನಾಡಿನ ಮದುಮಲೈನತ್ತ ಪ್ರವಾಸಿಗರು ಹೋಗುತ್ತಿದ್ದಾರೆ. ಪ್ರತಿ ವರ್ಷ ಐದು ಸಾವಿರಕ್ಕೂ ಹೆಚ್ಚು ವಿದೇಶಿಗರು, ಲಕ್ಷಾಂತರ ದೇಶೀಯ ಪ್ರವಾಸಿಗರು ನೆರೆ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿದರೆ, ಅದರ ನಷ್ಟ ರೆಸಾರ್ಟ್ ಮಾಲೀಕರಿಗಷ್ಟೇ, ರಾಜ್ಯ ಸರಕಾರಕ್ಕೆ ಬರಬೇಕಿರುವ ತೆರಿಗೆ ಹಾಗೂ ಅರಣ್ಯ ಇಲಾಖೆಗೂ ಬಹುದೊಡ್ಡ ನಷ್ಟ