ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಬಿಎದಲ್ಲಿ 6 ಕೋಟಿ ಅಕ್ರಮ ನಡೆಸಲು ಈಗ ಫ್ರೀಡಂ

ರಾಜ್ಯ ಸರಕಾರ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಂಸ್ಕೃತಿಕ ಹಬ್ಬದ ಮೂಲಕ ವಿನೂತನ ವಾಗಿ ಆಚರಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಜಿಬಿಎ ( ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಗೆ ವಹಿಸಲಾಗಿದೆ. ಹೀಗಾಗಿ ನಗರದಲ್ಲಿ ಆ.15ರಂದು ವಿಧಾನಸೌಧದ ಮುಂಭಾಗದಲ್ಲಿ ಫ್ರೀಡಂ ಹಬ್ಬ ನಡೆಯಲಿದ್ದು, ಅಂದು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು, ಆಹಾರ ಮಳಿಗೆಗಳು ಮತ್ತು ಲೈವ್ ಸಂಗೀತ ಕಛೇರಿ ಸೇರಿದಂತೆ ದಿನವಿಡೀ ಮನರಂಜನೆ ನಡೆಯಲಿದೆ.

ಜಿಬಿಎದಲ್ಲಿ 6 ಕೋಟಿ ಅಕ್ರಮ ನಡೆಸಲು ಈಗ ಫ್ರೀಡಂ

-

Profile
Ashok Nayak Aug 14, 2026 9:31 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸ್ವಾತಂತ್ರೋತ್ಸವ ಕಾಮಗಾರಿ ಅಕ್ರಮದ ವಾಸನೆ, ಟೆಂಡರ್ ಇಲ್ಲದೆ, ಕೆಲಸ ಮುಗಿಸಿದ ಗುತ್ತಿಗೆದಾರ

ರಾಜಧಾನಿ ಬೆಂಗಳೂರಿನಲ್ಲಿ ಫ್ರೀಡಂ ಹಬ್ಬ ಆಚರಿಸುವ ನೆಪದಲ್ಲಿ ಅಧಿಕಾರಿಗಳು ಅಕ್ರಮಗಳ ಹಬ್ಬವನ್ನೇ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 6 ಕೋಟಿ ರು. ವೆಚ್ಚದಲ್ಲಿ ಈ ಫ್ರೀಡಂ ಹಬ್ಬ ನಡೆಸಲು ಅಧಿಕಾರಿಗಳು ಟೆಂಡರ್ ಕರೆಯದೇ ಕಾಮಗಾರಿ ನಡೆಸಲು ಯತ್ನಿಸಿದ್ದಾರೆ ಎನ್ನುವ ಅನುಮಾನಗಳು ಮೂಡಿದೆ.

ರಾಜ್ಯ ಸರಕಾರ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಂಸ್ಕೃತಿಕ ಹಬ್ಬದ ಮೂಲಕ ವಿನೂತನವಾಗಿ ಆಚರಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಜಿಬಿಎ ( ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಗೆ ವಹಿಸಲಾಗಿದೆ. ಹೀಗಾಗಿ ನಗರದಲ್ಲಿ ಆ.15ರಂದು ವಿಧಾನಸೌಧದ ಮುಂಭಾಗದಲ್ಲಿ ಫ್ರೀಡಂ ಹಬ್ಬ ನಡೆಯಲಿದ್ದು, ಅಂದು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು, ಆಹಾರ ಮಳಿಗೆಗಳು ಮತ್ತು ಲೈವ್ ಸಂಗೀತ ಕಛೇರಿ ಸೇರಿದಂತೆ ದಿನವಿಡೀ ಮನರಂಜನೆ ನಡೆಯಲಿದೆ.

ಆದರೆ ಇದಕ್ಕಾಗಿ ಕನಿಷ್ಟ ಒಂದು ತಿಂಗಳ ಮುನ್ನವೇ ಟೆಂಡರ್ ಪ್ರಕ್ರಿಯೆ ನಡೆಸಿ ಫ್ರೀಡಂ ಹಬ್ಬದ ಕಾಮಗಾರಿಗಳನ್ನು ಅನುಷ್ಟಾನ ಮಾಡಬೇಕಿತ್ತು. ಆದರೆ ಇಲ್ಲಿ ನಡೆದಿರುವುದೇ ಬೇರೆ. ಕಾಮಗಾರಿ ಯನ್ನು ಆರಂಭಿಸಿ ನಂತರ ಟೆಂರ್ಡ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬಹುತೇಕ ಕಡೆ ಟೆಂಡರ್ ನಡೆಸಿ ವರ್ಷವೇ ಕಳೆದರೂ ಗುತ್ತಿಗೆದಾರರು ಕೆಲಸ ಆರಂಭಿಸದೆ ಪ್ರಕರಣಗಳೇ ಹೆಚ್ಚಾಗಿರುವ ಸನ್ನಿವೇಶದಲ್ಲಿ ವಿಧಾನಸೌಧದ ಮುಂಭಾಗದಲ್ಲಿ 6 ಕೋಟಿ ವೆಚ್ಚದಲ್ಲಿ ಟೆಂಡರ್ ನಡೆಸಿ ಕಾರ್ಯಾದೇಶ ಪಡೆಯದೇ ಕಾಮಗಾರಿ ಆರಂಭಿಸಿರುವ ಭೂಪ ಗುತ್ತಿಗೆದಾರರು ಈಗ ಜಿಬಿಎದಲ್ಲಿ ತಲೆ ಎತ್ತಿದ್ದಾರೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.

ಇದನ್ನೂ ಓದಿ: NEET exam question paper leak scandal: ನೀಟ್ ಹಗರಣಕ್ಕೆ ಕಾಂಗ್ರೆಸ್ ಆಕ್ರೋಶ: ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆಗೆ ಹೋರಾಟ ಮುಂದುವರಿಕೆ

ಒಂದು ಕಡೆ ಬೆಂಗಳೂರು ಉಸ್ತುವಾರಿ ಸಚಿವರು ಫುಟ್ ಪಾತ್ ತೆರವು ಮತ್ತು ಅಕ್ರಮಗಳ ತಡೆ ಸೇರಿದಂತೆ ಹತ್ತು ಹಲವು ಸುಧಾರಣೆಗೆ ಮುಂದಾಗಿದ್ದಾರೆ. ಆದರೆ ಇತ್ತ ಜಿಬಿಎ ಗುತ್ತಿಗೆದಾರರು ಟೆಂಡರ್ ಇಲ್ಲದೆ ಕಾಮಗಾರಿ ನಡೆಸಿ ಅಕ್ರಮಗಳಿಗೆ ದಾರಿ ತೋರಿಸುತ್ತಿರವುದು ಸಚಿವರ ಕಾರ್ಯ ವನ್ನೇ ಅಣಿಸಿದಂತಾಗಿದೆ. ‌

ಬೇಸರದ ಸಂಗತಿ ಎಂದರೆ ಜಿಬಿಎ ಅಧಿಕಾರಿಗಳು ಸಚಿವರಿಗೇ ತಿಳಿಯದಂತೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಇಂಥ ಅನೇಕ ಅಕ್ರಮಗಳು ನಡೆಯುತ್ತಿದ್ದು, ಇದನ್ನು ಪತ್ತೆ ಹಚ್ಚಬೇಕಿರುವುದು ಸಚಿವರಿಗೆ ದೊಡ್ಡ ಸವಾಲೇ ಆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏನಿದು ಅಕ್ರಮಗಳ ಫ್ರೀಡಂ?: ಫ್ರೀಡಂ ಹಬ್ಬ ಆಚರಣೆಗಾಗಿ ವಿಧಾನಸೌಧದ ಮುಂಭಾಗದಲ್ಲಿ ವೇದಿಕೆ ನಿರ್ಮಿಸುವುದು, ಶಾಮಿಯಾನ ಹಾಕುವುದು, ಬೆಳಕು ಮತ್ತು ಧ್ವನಿವರ್ಧಕಗಳ ವ್ಯವಸ್ಥೆ, ಕಾರ್ಯಕ್ರಮದ ಹಾರ, ತುರಾಯಿ, ಪ್ರಶಸ್ತಿ ಫಲಕಗಳು, ನೆನಪಿನ ಕಾಣಿಕೆಗಳು, ಕಲಾವಿದರು ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಪೂರೈಸಲು ಸುಮಾರು 6 ಕೋಟಿ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಲು ಜಿಬಿಎ ತೀರ್ಮಾನಿಸಿತ್ತು. ಈ ಕೆಲಸ ತಿಂಗಳಿಗೂ ಮುನ್ನವೇ ನಡೆಯ

ಬೇಕಿತ್ತು.

Screenshot_2 ಒಕ

ಆದರೆ ಜಯನಗರ ಕಾಂಪ್ಲೆಕ್ಸ್‌ʼನಲ್ಲಿರುವ ಜಿಬಿಎ ಪ್ರಾಜೆಕ್ಟ್ ಇಂಪ್ಲಿಮೆಂಟೇಷನ್ ವಿಭಾಗದ ಕಾರ್ಯ ಪಾಲಕ ಎಂಜಿನಿರ್ಯ ದಯಾನಂದ್ ಅವರು ಆ.7ರಂದು ಟೆಂಡರ್ ಆಹ್ವಾನಿಸಿದ್ದು, ಆ.13ರಂದು ದಾಖಲೆಗಳನ್ನು ಸಲ್ಲಿಸಬಹುದಾಗಿತ್ತು. ಹಾಗೆಯೇ ಆ.14ರಂದು ಟೆಂಡರ್‌ನ ತಾಂತ್ರಿಕ ಬಿಡ್ ಮತ್ತು ಹಣಕಾಸಿನ ಬಿಡ್ ತೆರೆಯಲಾಗುತ್ತದೆ. ಅಂದರೆ ಸ್ವಾತಂತ್ಯ ದಿನಾಚರಣೆಯಂದು ನಡೆಯುವ ಫ್ರೀಡಂ ಹಬ್ಬದ ಹಿಂದಿನ ದಿನ ಅಂದರೆ ಶುಕ್ರವಾರ ಟೆಂಡರ್ ತೆರೆದು ಮರುದಿನ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುತ್ತದೆ.

ಆದರೆ ವಿಚಿತ್ರವೆಂದರೆ, ಫ್ರೀಡಂ ಹಬ್ಬಕ್ಕೆ ಬೇಕಾದ ಬಹುತೇಕ ಕಾಮಗಾರಿ ಮತ್ತು ಸಿದ್ಧತಾ ಕೆಲಸ ವನ್ನು ಗುತ್ತಿಗೆದಾರರು ಕಾರ್ಯಾದೇಶ ಇಲ್ಲದೆ, ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಮುಗಿಸಿ ಬಿಟ್ಟಿದ್ದಾರೆ. ಹೀಗಾಗಿ ಅವರಿಗೆ ಕಾರ್ಯಕ್ರಮ ಮುಗಿದ ನಂತರ ಕಾರ್ಯಾದೇಶ ನೀಡಬೇಕಾದ ದುಸ್ಥಿತಿ ಇದೆ. ಅಂದರೆ ಇದರಲ್ಲಿ ಅಕ್ರಮದ ಕಮಟು ವಾಸನೆ ಬಲವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ನಡೆದಿದ್ದು ಹೀಗೆ ಮೂಲಗಳ ಪ್ರಕಾರ, ಫ್ರೀಡಂ ಹಬ್ಬದ ಟೆಂಡರ್‌ನಲ್ಲಿ ಕೇವಲ ಒಬ್ಬರೇ ಭಾಗವಹಿಸುವಂತೆ ಮಾಡಲಾಗಿದ್ದು, ಇಂತ ಸಂದರ್ಭದಲ್ಲಿ ಮರು ಟೆಂಡರ್ ಕೂಡ ಮಾಡದೆ, ತುರ್ತು ಕಾಮಗಾರಿಯಾಗಿದ್ದರೆ, ಕೆಟಿಪಿಪಿ ಕಾಯ್ದೆಯಲ್ಲಿ 4ಜಿ ವಿನಾಯತಿ ಪಡೆಯಬೇಕಿತ್ತು. ಆದರೆ ಅಧಿಕಾರಿಗಳು ಇದ್ಯಾವುದೂ ಬೇಡ ಎಂದು ನೇರ ಸಿಂಗಲ್ ಟೆಂಡರ್ ಮಾಡುವ ನಿರ್ಧಾರಕ್ಕೆ ಬಂದವಂತೆ ತಮಗೆ ಬೇಕಾದ ಗುತ್ತಿಗೆದಾರರಿಗೆ 6 ಕೋಟಿ ವೆಚ್ಚದ ಫ್ರೀಡಂ ಹಬ್ಬದ ಕಾಮಗಾರಿ ಯನ್ನು ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಗುತ್ತಿಗೆದಾರರು ಯಾವುದೇ ಕಾರ್ಯಾದೇಶ ಇಲ್ಲದೆ, ಫ್ರೀಡಂ ಹಬ್ಬ ನಾಲ್ಕು ದಿನ ಮುನ್ನವೇ ಕಾಮಗಾರಿ ಆರಂಭಿಸಿ, ಗುರುವಾರ ಬಹೇತೇಕ ಪೂರ್ಣಗೊಳಿಸಿzರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.