ಮಂಡ್ಯ ನಗರ ಸಾರಿಗೆ ಇಲ್ಲದೇ ಜನತೆ ಹೈರಾಣ !
ನಗರದಲ್ಲಿನ ಬಡ ಕಾಲೇಜು ವಿದ್ಯಾರ್ಥಿಗಳು, ನಾಗರೀಕರು, ವೃದ್ಧರು ಖಾಸಗಿ ವ್ಯವಸ್ಥೆಯನ್ನೇ ಅವಲಂಬಿ ಸುವಂತೆ ಪರಿಸ್ಥಿತಿ ನಿರ್ಮಿಸಲಾಗಿದೆ. ಇದಕ್ಕೆ ನಗರದಲ್ಲಿದ್ದ “ಮಿಡಿ ಬಸ್" ವ್ಯವಸ್ಥೆಯನ್ನು ಸ್ಥಗಿತ ಗೊಳಿಸಿರುವುದೇ ಕಾರಣ. ಕೋವಿಡ್ ಸಂದರ್ಭಕ್ಕೂ ಮೊದಲು ನಗರದ ಬಡವಾಸಿಗಳಿಗೆ ಅನುಕೂಲ ವಾಗುವಂತೆ ಸಾಮಾನ್ಯ ಗಾತ್ರಕ್ಕಿಂತ ಸಣ್ಣ ಗಾತ್ರದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
-
ಶೇಷಣ್ಣ, ಎಂ., ಮಂಡ್ಯ
ಆಟೋ ರಿಕ್ಷಾಗಳ ಹಾವಳಿ
ದಿನಗೂಲಿ ನೌಕರರು, ನಿವಾಸಿಗಳು, ವೃದ್ಧರು, ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆ
ನಗರದ ವಾಸಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇರದೇ ಇದು ಉತ್ತಮ ಹಣಕಾಸಿನ ವ್ಯವಸ್ಥೆ ಇರುವ ಸಿರಿವಂತರಿಗೆ ಮಾತ್ರ ಸೃಷ್ಠಿಯಾದ ನಗರ ಎಂಬಂತಾಗಿದೆ. ಹೌದು.. ಇಲ್ಲಿ ವಾಸಿಸುವ ಕೇಂದ್ರದಲ್ಲಿನ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಪೇಟೆಗೆ ತೆರಳು ನಗರ ಸಾರಿಗೆ ಇಲ್ಲವಾಗಿದೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರಯಾಣ ಬೆಳೆಸಲು ಮನೆಯಲ್ಲಿ ವಾಹನ ಉಳ್ಳವರ ಅಥವಾ ಆಟೋ ರಿಕ್ಷಾಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದರಿಂದ ಇಲ್ಲಿನ ದಿನಗೂಲಿ ನೌಕರರು, ಬಡ ನಿವಾಸಿಗಳು, ವೃದ್ಧರು ಸರಕಾರಿ ಸಾರಿಗೆ ವ್ಯವಸ್ಥೆ ಇಲ್ಲದೇ ವನವಾಸವನ್ನೇ ಅನುಭವಿಸುವಂತಾಗಿದೆ. ಕೇಂದ್ರ ಬಸ್ನಿಲ್ದಾಣಕ್ಕೆ ಬರುವ ಕೆಎಸ್‌ಆರ್ಟಿಸಿ ಸಾರಿಗೆ ಬಸ್ಗಳು ನಗರದೊಳಗೆ ಬರುತ್ತವೆ. ಆದರೆ ಅವುಗಳು ದೂರದ ಪ್ರದೇಶಗಳು ಎಂದರೆ ಸುತ್ತಮುತ್ತಲು ತಾಲೂಕುಗಳು ಹಾಗೂ ಪಟ್ಟಣಗಳಿಂದ ನಗರದ ಸಂಪರ್ಕಕ್ಕೆ ಬರುತ್ತವೆ. ಆದರೆ ಇವುಗಳಲ್ಲಿ ಪಯಣ ಮಾಡಲು ಸ್ಥಳವೇ ಇಲ್ಲದ ಪರಿಸ್ಥಿತಿ ಇರುತ್ತದೆ. ಯೌವ್ವನಾವಸ್ಥೆಯ ಜನರು ನಿಲ್ಲಲೂ ಸ್ಥಳವಿಲ್ಲದೇ ಇದ್ದರೂ ಪಯಣ ಮಾಡಬಲ್ಲರು. ಆದರೆ ಆರೋಗ್ಯ ಸ್ಥಿತಿ ಸರಿಯಿಲ್ಲದವರು, ವೃದ್ಧರ ಕಥೆಯೇನು.? ಇದನ್ನು ಸಂಬಂಧಿತ ಅಧಿಕಾರಿಗಳು ಗಮನಿಸಬೇಕಿದೆ.
ಇದನ್ನೂ ಓದಿ: Mandya News: ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ನಿಖಿಲ್ ಸಾಂತ್ವನ
ನಗರದಲ್ಲಿನ ಬಡ ಕಾಲೇಜು ವಿದ್ಯಾರ್ಥಿಗಳು, ನಾಗರೀಕರು, ವೃದ್ಧರು ಖಾಸಗಿ ವ್ಯವಸ್ಥೆಯನ್ನೇ ಅವಲಂಭಿಸುವಂತೆ ಪರಿಸ್ಥಿತಿ ನಿರ್ಮಿಸಲಾಗಿದೆ. ಇದಕ್ಕೆ ನಗರದಲ್ಲಿದ್ದ “ಮಿಡಿ ಬಸ್" ವ್ಯವಸ್ಥೆ ಯನ್ನು ಸ್ಥಗಿತಗೊಳಿಸಿರುವುದೇ ಕಾರಣ. ಕೋವಿಡ್ ಸಂದರ್ಭಕ್ಕೂ ಮೊದಲು ನಗರದ ಬಡವಾಸಿ ಗಳಿಗೆ ಅನುಕೂಲವಾಗುವಂತೆ ಸಾಮಾನ್ಯ ಗಾತ್ರಕ್ಕಿಂತ ಸಣ್ಣ ಗಾತ್ರದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದು ನಗರದೊಳಗೆ ಎಲ್ಲಡೆ ಸಂಚರಿಸುವಂತೆ ಮಾರ್ಗ ನಿರ್ಮಿಸಲಾಗಿತ್ತು. ಆದರದೀಗ ಆಟೋ ರಿಕ್ಷಾ ಸಂಘಗಳ ಒತ್ತಾಯದ ಮೇರೆಗೆ ಸಂರ್ಪೂಣವಾಗಿ ನಿಂತು ಹೋಗಿದೆ.
ನಗರದೊಳಗೆ ಸಾರಿಗೆ ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡುತ್ತಿದೆ. ಇಲ್ಲಿ ವಾಸಿಸುವ ಬಡವರು, ಪೌರಕಾರ್ಮಿಕರು, ಶ್ರಮಿಕರು ಸೇರಿದಂತೆ ಬಡತನ ರೇಖೆಗಿಂತಲೂ ತಳಮಟ್ಟದ ಸಾರ್ವಜನಿಕರು ಸರಕಾರಿ ಸಾರಿಗೆ ವ್ಯವಸ್ಥೆಗೆ ಹವಣಿಸುತ್ತಿದ್ದಾರೆ. ನಗರದೊಳಗೆ ಸಂಚರಿಸಲು ದುಬಾರಿ ಹಣ ನೀಡಿ ಆಟೋ ರಿಕ್ಷಗಳ ಮೊರೆ ಹೋಗಲಾದರೆ ನಟರಾಜ"ನನ್ನು ನೆನೆದು ನಡೆದು ಕೊಂಡೆ ಹೋಗುವಂತಾಗಿದೆ. ಇನ್ನು ಕೀಲು ನೋವಿಗೊಳಗಾದವರ ಸಮಸ್ಯೆ ಹೇಳತೀರದ್ದು.
ಬಡಾವಣೆಗಳಲ್ಲಿ ಹೊಸ ಆಟೋ ಸಂಘಗಳು: ನಗರದಲ್ಲಿ ಸಂಪರ್ಕ ಸಾರಿಗೆ ವ್ಯವಸ್ಥೆ ನಿಂತದ್ದೇ ಆಯಾ ಬಡಾವಣೆಗಳ 2 ಅಡ್ಡರಸ್ತೆಗೆ ಒಂದರಂತೆ ಆಟೋ ಸಂಘಗಳು ಸೃಷ್ಠಿಯಾಗಿವೆ. ಬಡಾವಣೆ ಯೊಂದರಲ್ಲೇ ಮರ್ನಾಲ್ಕು ಆಟೋ ವೃತ್ತಗಳು ಕಾಣುತ್ತಿವೆ. ಕರೆದೊಡನೆ ಪ್ರಯಾಣಿಕರನ್ನು ಕರೆದೊಯ್ದು ಬೇಕಾದ ಸ್ಥಳಕ್ಕೆ ಇಳಿಸಿ ಬರುತ್ತಾರೆ, ಆದರೆ ದುಬಾರಿ. ಇದು ಬಡವರ ಜೇಬಿಗೆ ಕತ್ತ ಹಾಕುತ್ತಿದೆ. ಮನೆಯ ನಿರ್ವಹಣೆಯೇ ಕಷ್ಟವಾಗಿರುವಾಗ ಆಟೋ ರಿಕ್ಷಾಗಳಿಗೆ ಹಣ ನೀಡಿ ಎಲ್ಲಿಗೆ ಹೋಗುವುದು ಎಂದು ಮನೆಯಲ್ಲೇ ಉಳಿಯುವವರು ಒಂದೆಡೆಯಾದರೆ, ಬೇರೆ ವಿಧಿಯಿಲ್ಲ ಎಂದು ನಡೆದುಕೊಂಡೇ ತಮ-- ದಿನನಿತ್ಯದ ಕೆಲಸಗಳನ್ನು ಸಾಗಿಸುವವರು ಮತ್ತೊಂದೆಡೆ ಇದ್ದಾರೆ. ದರ ಹೆಚ್ಚಿಸಿದರೂ ಜನರಿಂದ ಸುಲಿಗೆ: ಆಟೋರಿಕ್ಷಾ ದರ ಹೆಚ್ಚಳ ಸಂಬಂಧ 2026ರ ಜನವರಿ 24ರಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 1.9 ಕಿ.ಮೀ ಕನಿಷ್ಠ ಪ್ರಯಾಣಕ್ಕೆ 25 ರು.ನಿಂದ 30 ರು.ಗೆ ಏರಿಕೆ ಮಾಡಲಾಯಿತು. ಆದರೂ ಆಟೋ ಚಾಲಕರು ನಗರದೊಳಗೆ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದರು. ಇದೀಗ ಪೆಟ್ರೋಲ್, ಡೀಸೆಲ್ ಮತ್ತು ಆಟೋ ಗ್ಯಾಸ್ ಬೆಲೆಯೂ ಹೆಚ್ಚಾಗಿದೆ.
ಇದು ಆಟೋರಿಕ್ಷಾ ಚಾಲಕರಿಗೂ ಹೊರೆಯಾಗಿದ್ದು, ನಗರದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ. ಮಿಡಿ ಬಸ್" ಮತ್ತೆ ಮಿಡಿಯುವುದೇ: ನಗರ ಸಂಪರ್ಕ ಸಾರಿಗೆಯೆಂದೇ ಕರೆಲಾಗುತ್ತಿದ್ದ ಮಿಡಿ ಬಸ್ಗಾಗಿ ನಾಗರೀಕರು ತವಕಿಸುತ್ತಿದ್ದಾರೆ. ಇದು ನಗರದಲ್ಲಿ ತನ್ನ ಮಿಡಿತ ಆರಂಭಿಸಿದರೆ ಬಡಜನರಿಗೆ ಉಪಟಳ ವಾಗು ತ್ತಿರುವ ಸಮಸ್ಯೆ ದೂರಾಗಲಿದೆ. ಜಿಲ್ಲಾ ಕೇಂದ್ರಕ್ಕೆ ಬರುವ ಕೆಎಸ್‌ಆರ್ಟಿಸಿ ಬಸ್ ಸಂಪಕಿಸುವುದನ್ನು ಗಮನದಲ್ಲಿರಿಸಿ ಮಿಡಿ ಬಸ್ಗೆ ಸಮಯ ನಿಗದಿ ಪಡಿಸಿದರೆ ನಗರ ವಾಸಿಗಳಿಗೂ ಅನುಕೂಲವಾಗಲಿದೆ.
ಅಲ್ಲದೇ ಈ ಸಂಪರ್ಕ ಸಾರಿಗೆ ಕೇಂದ್ರ ಬಸ್ ನಿಲ್ದಾಣವಲ್ಲದೇ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಪರ್ಕ ಕಲ್ಪಿಸಿದರೆ ಸರಿಯಾದ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ನಗರ ಸಂಪರ್ಕ ಸಾರಿಗೆ ನಿಲ್ಲಲು ಕಾರಣ: ಮಿಡಿ ಬಸ್" ಹೆಸರಿನಲ್ಲಿ ಒದಗಿಸಲಾಗುತ್ತಿದ್ದ ನಗರ ಸಾರಿಗೆ ಯಿಂದ ಇಲಾಖೆಗೆ ನಷ್ಟವಾಗುತ್ತಿತ್ತು. ಇದರಿಂದ ಹಣಕಾಸು ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೇ 15 ವರ್ಷ ಮೀರಿದ ವಾಹನಗಳ ವಿಲೇವಾ ರಿಗೆ ಸುಪ್ರೀಂ ಆದೇಶ ನೀಡಿದ ಹಿನ್ನಲೆ ರಾಜ್ಯದೆಲ್ಲೆಡೆ ಬಸ್ ಸೇವಾ ವ್ಯವಸ್ಥೆಯಲ್ಲಿ ತೊಡಕು ಉಂಟಾಗಿತ್ತು. ಜಿಲ್ಲೆಯ 41 ಬಸ್ಗಳನ್ನು ವಿಲೇ ಮಾಡಲಾಗಿತ್ತು. ಅಂತೆಯೇ ಮಂಡ್ಯ ನಗರದಲ್ಲಿದ್ದ ಮಿಡಿ ಬಸ್ಗಳನ್ನು ಬೃಹತ್ ಗಾತ್ರದ ನಗರಗಳಿಗೆ ರವಾನಿಸಿ ಕೊರತೆ ನೀಗಿಸಲಾಯಿತು. ಈ ಎಲ್ಲ ಕಾರಣಗಳು ನಗರ ಸಂಪರ್ಕ ಸಾರಿಗೆ ವ್ಯವಸ್ಥೆ ನಿಲ್ಲಲು ಕಾರಣವಾದವು.
![]()
ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೆ ವಾಹನಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಎಲೆಕ್ಟ್ರಿಕ್ ಬಸ್ಗಳನ್ನು ನೀಡುವ ಯೋಜನೆಯಿದೆ. ಲಭ್ಯತೆ ಹೆಚ್ಚಾದಾಗ ನಗರದಲ್ಲಿ ಸಂಪರ್ಕ ಸಾರಿಗೆ ವ್ಯವಸ್ಥೆ ನೀಡಲಾಗುವುದು.
-ಕೆ.ಎಂ.ಶರಣ ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ ಆರ್‌ಟಿಸಿ, ಮಂಡ್ಯ
![]()
ಕೆಲಸ ಸಂಬಂಧ ನಗರಕ್ಕೆ ಬಂದರೆ ಬಸ್ಗಳು ದೂರದ ಊರಿಂದ ಬರುವ ಬಸ್ಗಳು ತುಂಬಿರುತ್ತವೆ. ನಗರ ಸಾರಿಗೆ ವ್ಯವಸ್ಥೆ ಇಲ್ಲದೇ ಬೆಳಗ್ಗೆ ಮತ್ತು ಸಂಜೆ ನಗರ ಸಂಚಾರಕ್ಕೂ ದೂರದೂರಿನ ಬಸ್ಗಳನ್ನೇ ಅವಲಂಭಿಸಬೇಕಿದೆ.
-ಶ್ವೇತ, ಕೊಡಿಯಾಲ ಗ್ರಾಮ ನಿವಾಸಿ