ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prabhas: ‘ಫೌಜಿ’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ರಾಜೇಶ್‌ ಶರ್ಮಾಗೆ ಕಚ್ಚಿತೇ ವಿಷಜಂತು? ಅಸಲಿಗೆ ನಡೆದಿದ್ದು ಏನು?

ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ರಾಜೇಶ್ ಶರ್ಮಾ ಅವರಿಗೆ ವಿಷಜಂತು ಕಚ್ಚಿ ಆಸ್ಪತ್ರೆ ಸೇರಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಆದರೆ, ಈ ಸುದ್ದಿಯನ್ನು ತಳ್ಳಿಹಾಕಿರುವ ನಟನ ಆಪ್ತ ಸಹಾಯಕ, ರಾಜೇಶ್ ಶರ್ಮಾ ಅವರು ಮಧುಮೇಹ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Prabhas: ʻಫೌಜಿʼ ಸೆಟ್‌ನಲ್ಲಿ ಬಾಲಿವುಡ್‌ ನಟನಿಗೆ ವಿಷಜಂತು ಕಚ್ಚಿತೇ?

-

Avinash GR
Avinash GR Jul 9, 2026 12:09 PM

ನಟ ಪ್ರಭಾಸ್ ಅಭಿನಯದ, ಬಹುನಿರೀಕ್ಷಿತ ‘ಫೌಜಿ’ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬಾಲಿವುಡ್ ನಟ ರಾಜೇಶ್ ಶರ್ಮಾ ಅವರಿಗೆ ವಿಷಜಂತು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆದರೆ, ಈ ಸುದ್ದಿಯ ಹಿಂದಿನ ಅಸಲಿ ಸತ್ಯವನ್ನು ನಟನ ಆಪ್ತ ಸಹಾಯಕ (PA) ಬಹಿರಂಗಪಡಿಸಿದ್ದಾರೆ.

ವೈರಲ್ ಆಗಿದ್ದ ಸುದ್ದಿಯೇನು?

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಫೌಜಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ, ದಟ್ಟವಾದ ಗಿಡಗಂಟಿಗಳಿಂದ ಆವೃತವಾಗಿದ್ದ ಪ್ರದೇಶದಲ್ಲಿ ನಿಂತಿದ್ದ ನಟ ರಾಜೇಶ್ ಶರ್ಮಾ ಅವರಿಗೆ ವಿಷಪೂರಿತ ಕೀಟ ಅಥವಾ ಜೇಡ ಕಚ್ಚಿದೆ ಎಂದು ವರದಿಯಾಗಿತ್ತು. ಆರಂಭದಲ್ಲಿ ಅವರು ಇದನ್ನು ನಿರ್ಲಕ್ಷಿಸಿದ್ದು, 6 ಗಂಟೆಗಳ ನಂತರ ಅವರಿಗೆ ಬಲಗಾಲಿನಲ್ಲಿ ತೀವ್ರ ನೋವು, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎನ್ನಲಾಗಿತ್ತು.

ರಾಜೇಶ್‌ ಶರ್ಮಾ ಆಪ್ತ ಸಹಾಯಕ ಹೇಳಿದ್ದೇನು?



ಖಾಸಗಿ ಆಸ್ಪತ್ರೆಗೆ ದಾಖಲು

"ಆರು ಗಂಟೆಗಳ ನಂತರ ಅವರ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಪರಿಸ್ಥಿತಿ ಹದಗೆಡುತ್ತಿದ್ದರೂ, ಅವರು ಕೋಲ್ಕತ್ತಾಗೆ ವಾಪಸಾಗಲು ವಿಮಾನ ಹತ್ತಿದ್ದರು. ಪ್ರಯಾಣದ ಸಮಯದಲ್ಲಿಯೇ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು, ಆರೋಗ್ಯ ಮತ್ತಷ್ಟು ಕ್ಷೀಣಿಸಿತು. ಮರುದಿನ ಅವರನ್ನು ಧಾಕುರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು" ಎಂದು ಹೇಳಲಾಗಿದೆ. ಅವರಿಗೆ ಇನ್ನೂ ತೀವ್ರ ಜ್ವರ ಇದ್ದು, ಉಸಿರಾಟದ ತೊಂದರೆ ಮತ್ತು ಬಲಗಾಲಿನಲ್ಲಿ ಹರಡುತ್ತಿರುವ ಸೋಂಕಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು.

Actor Prabhas: 'ಕಲ್ಕಿ 2898 ಎಡಿ' ಸೀಕ್ವೆಲ್ ಚಿತ್ರೀಕರಣ ಆರಂಭ: ಇಬ್ಬರು ಸ್ಟಾರ್ ನಟರ ಎಂಟ್ರಿ?

ಅಸಲಿ ಸತ್ಯ ಬಿಚ್ಚಿಟ್ಟ ರಾಜೇಶ್ ಶರ್ಮಾ ಪಿಎ

ಈ ವಿವಾದ ಮತ್ತು ವದಂತಿಗಳಿಗೆ ತೆರೆ ಎಳೆದಿರುವ ರಾಜೇಶ್ ಶರ್ಮಾ ಅವರ ಪಿಎ ಸುಭಾಶಿಶ್ ಪಾಂಡಾ, ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. "ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸಂಪೂರ್ಣ ಸುಳ್ಳು. 'ಫೌಜಿ' ಶೂಟಿಂಗ್ ವೇಳೆ ಯಾವುದೇ ವಿಷಜಂತು ಕಚ್ಚಿಲ್ಲ. ರಾಜೇಶ್ ಶರ್ಮಾ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ನಿಜ, ಆದರೆ ಅದಕ್ಕೆ ಕಾರಣ ಡಯಾಬಿಟಿಸ್ (ಮಧುಮೇಹ) ಸಮಸ್ಯೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ರಾಜೇಶ್ ಶರ್ಮಾ ಅವರು ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆ ಮತ್ತು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Prabhas: ‘ಕಲ್ಕಿ 2’ ಅಡ್ಡದಿಂದ ದೀಪಿಕಾ ಪಡುಕೋಣೆ‌ ಔಟ್‌; ಸೈಲೆಂಟ್‌ ಆಗಿ ಅಖಾಡಕ್ಕಿಳಿದ ನಟಿ ಆಲಿಯಾ ಭಟ್!

ಭಾರಿ ಬಜೆಟ್‌ನ 'ಫೌಜಿ' ಸಿನಿಮಾ

ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫೌಜಿ’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಯುದ್ಧದ ಹಿನ್ನೆಲೆಯನ್ನು ಹೊಂದಿರುವ ಈ ಕಾಲ್ಪನಿಕ ಐತಿಹಾಸಿಕ ಪ್ರೇಮಕಥೆಯಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಇಮಾನ್ ಎಸ್ಮಾಯಿಲ್ ನಟಿಸುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ಜಯಪ್ರದಾ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಮತ್ತು ರಾಜೇಶ್ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ ಇರಲಿದ್ದು, ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.