ರಸ್ತೆಯಲ್ಲಿ ತರಕಾರಿ ಮಾರಾಟ, ಟ್ರಾಫಿಕ್ ಜಾಮ್
ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಸಾಗರ ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ ಪ್ರಸ್ತುತ ವಾಹನ ದಟ್ಟಣೆಯ ಸಾಲಿನಲ್ಲಿ ಶಿವಮೊಗ್ಗದ ನಂತರದ ಸ್ಥಾನದಲ್ಲಿದೆ ಎನ್ನಬಹುದು. ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತವಾದ ಸಾರಿಗೆ ನಿಯಮ ಅನುಸರಿಸುವುದಕ್ಕೆ ಪೂರಕ ಸೌಲಭ್ಯ ಕೂಡ ಈಗಾಗಲೆ ಅಳವಡಿಸಲಾಗಿದೆ ಕೆಲ ವರ್ಷಗಳಿಂದಲೇ ಅಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇದೆ.
-
ರಮೇಶ್ ಹೆಗಡೆ ಗುಂಡೂಮನೆ ಸಾಗರ
ವಾಹನ ಸವಾರರಿಗೆ ಕಿರಿಕಿರಿ
ಕಣ್ಣು ಮುಚ್ಚಿ ಕುಳಿತ ಪೊಲೀಸ್ ಇಲಾಖೆ, ನಗರ ಸಭೆ ಅಧಿಕಾರಿಗಳು ರಸ್ತೆಯಲ್ಲಿ ತರಕಾರಿ ಮಾರಾಟ, ಟ್ರಾಫಿಕ್ ಜಾಮ್
ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಸಾಗರ ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ ಪ್ರಸ್ತುತ ವಾಹನ ದಟ್ಟಣೆಯ ಸಾಲಿನಲ್ಲಿ ಶಿವಮೊಗ್ಗದ ನಂತರದ ಸ್ಥಾನದಲ್ಲಿದೆ ಎನ್ನಬಹುದು. ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತವಾದ ಸಾರಿಗೆ ನಿಯಮ ಅನು ಸರಿಸುವುದಕ್ಕೆ ಪೂರಕ ಸೌಲಭ್ಯ ಕೂಡ ಈಗಾಗಲೆ ಅಳವಡಿಸಲಾಗಿದೆ ಕೆಲ ವರ್ಷ ಗಳಿಂದಲೇ ಅಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇದೆ.
ಈಗಂತೂ ಅತ್ಯಾಧುನಿಕ ತಾಂತ್ರಿಕತೆಗಳನ್ನು ಬಳಸಿರುವುದು ಜನರು ಜಾಗೃತರಾಗಿದ್ದಾರೆ. ಆದರೆ ಸಾಗರದ ವೃತ್ತಗಳಲ್ಲಿ ವಾಹನ ದಟ್ಟಣೆಯ ಅವ್ಯವಸ್ಥೆ ಕೆಲ ವರ್ಷಗಳಿಂದ ಕಂಡು ಬರುತ್ತಿದ್ದರೂ ಇದುವರೆಗೂ ಹೇಳಿಕೊಳ್ಳುವ ರೀತಿಯಲ್ಲಿ ಅದಕ್ಕೆ ಪೂರಕ ವ್ಯವಸ್ಥೆ ಮಾಡಿಲ್ಲದಿರುವುದು ನಿತ್ಯವೂ ಪರದಾಡುವಂತಾಗಿದೆ ಜತೆಗೆ ಇಲ್ಲಿಯ ಜನರೂ ರಸ್ತೆ ನಿಯಮದಲ್ಲಿ ಇನ್ನೂ ಜಾಗೃತರಾಗದೆ ಹೇಗಂದರೆ ಹಾಗೆ ಚಾಲನೆ ಮತ್ತು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ.
ಪ್ರಸ್ತುತ ಸಾಗರದ ಅಂಚೆ ಇಲಾಖೆಯ ವೃತ್ತದ ಬಳಿಯಂತೂ ತರಕಾರಿ ಮಾರುಕಟ್ಟೆಯೇ ಸ್ಥಾಪನೆಗೊಂಡಿದ್ದು ಪಟ್ಟಣದೊಳಗಿನ ಪ್ರಮುಖ ರಸ್ತೆ ಎನ್ನಿಸಿಕೊಂಡಿರುವ ಚಾಮರಾಜ ಪೇಟೆ ರಸ್ತೆಯ ಸಂಚಾರ ಅಪಾಯಕ್ಕೆ ಎಡೆ ಮಾಡಿದೆ.
ಇದನ್ನೂ ಓದಿ: Naveen Sagar Column: ಸೋತಾಗ ಗಂಭೀರನಾಗಿ...ಗೆದ್ದಾಗ ಗೌತಮನಾಗಿ...!
ಆ ವೃತ್ತದಿಂದ ಹಿಡಿದು ಸುಮಾರು ನಗರ ಸಭೆಯವರೆಗೆ ವಿವಿಧ ತರಕಾರಿಗಳನ್ನು ಇಟ್ಟು ವ್ಯಾಪಾರ ಮಾಡುವುದಕ್ಕೆ ಮುಂದಾಗಿರುವ ಪರಿಣಾಮ ಖರೀದಿ ಮಾಡುವವರು ತಾವು ಎಲ್ಲಿದ್ದೇವೆ ಎಂಬ ಅರಿವೂ ಇಲ್ಲದ ರೀತಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಕ್ಕೆ ಇಳಿದಿರುತ್ತಾರೆ. ಆಸ್ಪತ್ರೆ ಇತ್ಯಾದಿ ತುರ್ತು ಸಂದರ್ಭದಲ್ಲಿ ವಾಹನ ಬಂದರೂ ರಸ್ತೆಯ ಮಧ್ಯದಲ್ಲಿರುವ ಅಡ್ಡದಿಡ್ಡಿ ವಾಹನದ ನಿಲುಗಡೆಯ ಕಾರಣ ತೊಂದರೆ ಅನು ಭವಿಸುವುದು ಒಂದು ಕಡೆಯಾದರೆ ಪೇಟೆಯ ಸಹಜ ಕಾರ್ಯಗಳಿಗೂ ತೆರಳುವವ ರಿಗೂ ಇಲ್ಲಿ ರಸ್ತೆ ಉದ್ದಕ್ಕೂ ವಾಹನ ಅಡ್ಡದಿಡ್ಡಿ ನಿಲ್ಲಿಸಿರುವುದು ಮತ್ತು ಕೆಲವೊಮ್ಮೆ ವ್ಯಾಪಾರ ದ ಜನ ದಟ್ಟಣೆಯಲ್ಲಿ ಸಂಚಾರ ಕಷ್ಟವಾಗಿ ಪರಸ್ಪರ ಜಗಳ ನಿತ್ಯ ಸಾಮಾನ್ಯ ಎನ್ನುವಂತಾಗಿದೆ.
ಸಾಗರ ಪಟ್ಟಣದೊಳಗಿನ ಪ್ರಮುಖರ ರಸ್ತೆ ಎಂದರೆ ಅದು ಚಾಮರಾಜಪೇಟೆ ರಸ್ತೆ ದಿನದ ಎಲ್ಲ ಸಮಯದಲ್ಲಿಯೂ ಈ ರಸ್ತೆ ಸಂಚಾರದಿಂದ ತುಂಬಿರುವ ರಸ್ತೆ ಅಂತಹ ರಸ್ತೆಯ ನಡುವೆ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ನಗರ ಸಭೆಯ ಕ್ರಮ ಅಪಹಾಸ್ಯಕ್ಕೆ ಒಳಗಾಗಿರುವುದು ಒಂದಾದರೆ, ಬೇರೆಲ್ಲೋ ವಾಹನ ನಿಲುಗಡೆ ಮಾಡಿರುವುದನ್ನು ಪ್ರಶ್ನಿ ಸುವ ಪೊಲೀಸ್ ಇಲಾಖೆ ಇಲ್ಲೊಂದು ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವು ದನ್ನು ನೋಡಿಯೂ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅವಘಡಕ್ಕೂ ಮುನ್ನ ಎಚ್ಚೆತ್ತುಕೊಳ್ಳಲಿ
ರಸ್ತೆಯನ್ನು ರಸ್ತೆಯಾಗಿಸುವುದು ಇದು ಯಾವ ಇಲಾಖೆಯ ಕೆಲಸ ಎನ್ನುವುದಕ್ಕಿಂತ ರಸ್ತೆ ಯನ್ನು ತರಕಾರಿ ಮಾರುಕಟ್ಟೆ ಮಾಡಿರುವ ಕ್ರಮವನ್ನು ಪೊಲೀಸ್ ಇಲಾಖೆ ಪ್ರಶ್ನಿಸಲೇ ಬೇಕಿತ್ತಾದರೂ ಆ ಕಾರ್ಯ ಅವರು ಮಾಡಿಲ್ಲ. ಇನ್ನು ನಗರ ಸಭೆಗೆ ಜನ ಹೇಗೆ ಹೋದರೆ ಅವರಿಗೇನು ಹಾಗಾಗಿ ಅವರು ಮಾತನಾಡುವುದಿಲ್ಲ. ಆದರೆ ಸಾಗರ ನಗರದ ಪ್ರಮುಖರ ರಸ್ತೆಯೊಂದರ ನಡುವೆ ತರಕಾರಿ ಮಾರುಕಟ್ಟೆ ಮಾಡಿರುವುದರಿಂದ ಸಂಚಾರ ದಟ್ಟಣೆಯ ಇಲ್ಲಿ ಯಾವುದೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಎಲ್ಲರ ಮೇಲೂ ಹರಿದಾಡಿದಾಗ ಮಾತ್ರ ಎಚ್ಚರಾಗುವ ಇಲಾಖೆಗಳು ಅವಘಡಕ್ಕೂ ಮುನ್ನ ಕಣ್ಣು ತೆರೆದರೆ ಎಲ್ಲರಿಗೂ ಉತ್ತಮ.