Actor Upendra: ಸಿಲಿಂಡರ್‌ಗೂ ನನಗೂ ಲಿಂಕ್ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ
Upendra: ಸಿನಿಮಾ ಆಗಲಿ, ರಾಜಕೀಯ ವಿಚಾರಗಳೇ ಆಗಲಿ ಅಥವಾ ಸಮಾಜದ ಆಗು ಹೋಗುಗಳ ಕುರಿತು ಹೇಳುವ ರೀತಿ ಉಪೇಂದ್ರ ಅವರ ಸ್ಟೈಲ್ ಬೆರೆಯೇ. ಉಪ್ಪಿ ಶೇರ್ ಮಾಡಿದ ಪ್ರತಿ ಪೋಸ್ಟ್‌ನಲ್ಲೂ ಸೀಕ್ರೆಟ್ ಅರ್ಥಗಳು ಒಳಗೊಂಡಿರುತ್ತೆ. ಅದೇ ರೀತಿ ನಿನ್ನೆ ಕೂಡ ಒಂದು ಪೋಸ್ಟ್ ಶೇರ್ ಮಾಡಿದ್ದರು. ಇಂದೂ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ನಾನು ಶೇರ್ ಮಾಡಿದ ಲಿಂಕ್‌ಗೂ ಸಿಲಿಂಡರ್ ಫೋಟೋಗೂ ನೀವು ತಿಳಿದುಕೊಂಡ ರೀತಿಗೂ ಸಂಬಂಧವಿಲ್ಲ ಎಂದಿದ್ದಾರೆ.
ನಟ ಉಪೇಂದ್ರ -
ಸಿನಿಮಾ (Cinema) ಆಗಲಿ, ರಾಜಕೀಯ ವಿಚಾರಗಳೇ ಆಗಲಿ ಅಥವಾ ಸಮಾಜದ ಆಗು ಹೋಗುಗಳ ಕುರಿತು ಹೇಳುವ ರೀತಿ ಉಪೇಂದ್ರ ಅವರ ಸ್ಟೈಲ್ ಬೆರೆಯೇ. ಉಪ್ಪಿ (Uppi) ಶೇರ್ ಮಾಡಿದ ಪ್ರತಿ ಪೋಸ್ಟ್‌ನಲ್ಲೂ ಸೀಕ್ರೆಟ್ ಅರ್ಥಗಳು ಒಳಗೊಂಡಿರುತ್ತೆ. ಅದೇ ರೀತಿ ನಿನ್ನೆ ಕೂಡ ಒಂದು ಪೋಸ್ಟ್ ಶೇರ್ ಮಾಡಿದ್ದರು. ಇಂದೂ ಒಂದು ಪೋಸ್ಟ್ ಶೇರ್ (Post Share) ಮಾಡಿದ್ದಾರೆ. ನಾನು ಶೇರ್ ಮಾಡಿದ ಲಿಂಕ್‌ಗೂ ಸಿಲಿಂಡರ್ (cylinder) ಫೋಟೋಗೂ ನೀವು ತಿಳಿದುಕೊಂಡ ರೀತಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಆದ್ರೂ ಲಿಂಕ್ ಹಾಕ್ತೀನಿ
“ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ, ಅದಕ್ಕೆ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ. ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ? ಹಾಗೆ ನಾನ್ ಮುಂದೆ ಹಾಕೋ ಲಿಂಕ್ ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ (ಯಾವಾಗ ?) ಕ್ಲಿಕ್ ಮಾಡ್ಬೇಡಿ! ಕೇಳಲೂ ಬೇಡಿ ನನಗ್ಯಾಕೆ ಈ ಟ್ರಬಲ್” ಎಂದು ಕ್ಯಾಪ್ಶನ್ ಬರೆದು ನಿನ್ನೆ ತಾವೇ ಶೇರ್ ಮಾಡಿದ ಸಿಲಿಂಡರ್ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Dharmendra: ಆಸ್ಕರ್ ವೇದಿಕೆಯಲ್ಲಿ ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ
ಈ ಪೋಸ್ಟ್ ಹಿಂದೆ ಕೂಡ ಸಿಲಿಂಡರ್ ವಿಚಾರವೇ ಅಡಗಿದ್ದರೂ, ವ್ಯವಸ್ಥೆಯ ಬಗ್ಗೆ ಹೇಳಿರುವಂತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ ಫ್ಯಾನ್ಸ್.
ಮುಂಬರುವ ದಿನಗಳಲ್ಲಿ ಮತ್ತೊಂದು ಲಿಂಕ್ ಶೇರ್ ಮಾಡುತ್ತೇನೆ. ನೀವು ಓಪನ್ ಮಾಡ್ಬೇಡಿ ಎಂದು ಬರೆದುಕೊಂಡಿದ್ದಾರೆ. ಆ ಲಿಂಕ್ ನಿಜಕ್ಕೂ ಸಿನಿಮಾಗೆ ಸಂಬಂಧ ಪಟ್ಟಿದ್ದಾ? ಉಪ್ಪಿ ಸ್ಟೈಲ್ ಪೋಸ್ಟ್ ಇರುತ್ತಾ? ಶೇರ್ ಮಾಡಿದಾಗಲೇ ಫ್ಯಾನ್ಸ್‌ಗೆ ಗೊತ್ತಾಗಲಿದೆ.
ನಿನ್ನೆ ಅರ್ಥಾತ್ ಮಾರ್ಚ್ 14ರಂದು ನಟ ಉಪೇಂದ್ರ ಅವರು ನಾಳೆ ಒಂದು ಲಿಂಕ್ ಶೇರ್ ಮಾಡ್ತೇನೆ. ಇದು ಸೀಕ್ರೆಟ್ ಲಿಂಕ್. 10 ಗಂಟೆಗೆ ನಾನು ಒಂದು ಲಿಂಕ್ ಪೋಸ್ಟ್ ಮಾಡ್ತೀನಿ, ಅದನ್ನು ಕೆಲ ಹೊತ್ತಲ್ಲೇ ಡಿಲೀಟ್ ಕೂಡ ಮಾಡ್ತೀನಿ. ಯಾಕೆಂದ್ರೆ ಹೀಗೆ ಮಾಡಬೇಕು ಎಂದು ನನಗೆ ತಿಳಿಸಲಾಗಿದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: Rashmika Mandanna: ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್; ಜೋಡಿ ಸಂಭ್ರಮ ಹೀಗಿತ್ತು
ಸಿನಿಮಾ ವಿಚಾರಕ್ಕೆ ಬರೋದಾದರೆ, ಉಪೇಂದ್ರ ಅವರು ನಿರ್ದೇಶನದ ಕ್ಯಾಪ್ ತೊಟ್ಟು 'UI' ಸಿನಿಮಾ ಮಾಡಿದ್ದರು.ತಮಿಳಿನಲ್ಲಿ ಕೂಲಿ, ತೆಲುಗುವಿನಲ್ಲಿ ಆಂಧ್ರ ಕಿಂಗ್ ತಾಲೂಕಾ ಹಾಗೂ ಕನ್ನಡದಲ್ಲಿ 45 ಸಿನಿಮಾದಲ್ಲಿ ನಟಿಸಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿಯಲ್ಲಿ ರಜನಿಕಾಂತ್ ಮಿತ್ರನಾದ ಕಲೀಶಾ ಪಾತ್ರದಲ್ಲಿ ನಟಿಸಿದ್ದರು.