ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dharmendra: ಧರ್ಮೇಂದ್ರ ಅಭಿನಯದ ನೋಡಲೇಬೇಕಾದ ದಿ ಬೆಸ್ಟ್ ಸಿನಿಮಾಗಳಿವು!

Best Movies of Dharmendra: ಧರ್ಮೇಂದ್ರ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇಡೀ ದೇಶವೇ ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದೆ. ಪಂಜಾಬ್‌ನ ಒಂದು ಸಣ್ಣ ಹಳ್ಳಿಯಿಂದ ಬಂದ ಅವರು, ಯಾವ ಗಾಡ್ ಫಾದರ್ ಇಲ್ಲದೇ ಬಿಟೌನ್ ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನೂರಾರು ಹಿಟ್ ಚಿತ್ರಗಳನ್ನು ನೀಡಿರುವ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ಅವರ ಫ್ಯಾನ್ಸ್ ಗಳು ನೋಡಲೇಬೇಕಾದ ಇಲ್ಲಿವರೆಗೂ ನಟಿಸಿದ ದಿ ಬೆಸ್ಟ್ ಚಿತ್ರಗಳ ಪಟ್ಟಿ ಇಲ್ಲಿದೆ ಓದಿ.

ಬಾಲಿವುಡ್‌ನ ಹೀಮ್ಯಾನ್‌ನ ಬೆಸ್ಟ್ ಚಿತ್ರಗಳಿವು

ನಟ ಧರ್ಮೇಂದ್ರ(ಸಂಗ್ರಹ ಚಿತ್ರ) -

Profile
Sushmitha Jain Nov 11, 2025 4:38 PM

ಮುಂಬೈ: 1960-70 ರ ದಶಕದಲ್ಲಿ ಹಿಂದಿ ಚಿತ್ರೋದ್ಯಮಕ್ಕೆ (Film Industry) ಎಂಟ್ರಿ ಕೊಟ್ಟ ಧರ್ಮೇಂದ್ರ ಅವರ ನಟನೆಯನ್ನು ಇನ್ನೂ ಸಹ ಹಿಂದಿ ಸಿನೆಮಾದ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಧರ್ಮೇಂದ್ರ (Dharmendra) ಅವರು 1960 ರ ದಶಕದ ಆರಂಭದಲ್ಲಿ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಅವರ ಮನೋಹರಕ ಅಭಿನಯದಿಂದಾಗಿ ಬೇಗನೆ ಜನಪ್ರಿಯತೆಯನ್ನು ಪಡೆದರು. ಅರ್ಜುನ್ ಹಿಂಗೋರಾಣಿಯವರ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಕಲಾ ಬದುಕನ್ನು ಪ್ರಾರಂಭಿಸಿದ ಧರ್ಮೇಂದ್ರ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು, ತಮ್ಮ ವೃತ್ತಿಜೀವನದಲ್ಲಿ 238 ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ 93 ಚಿತ್ರಗಳು ಹಿಟ್ ಆಗಿವೆ. ಅವುಗಳ ಪೈಕಿ ಇಲ್ಲಿವರೆಗೂ ನಟಿಸಿದ ದಿ ಬೆಸ್ಟ್ ಚಿತ್ರಗಳ ಪಟ್ಟಿ ಇಲ್ಲಿದ್ದು, ಅವರ ಪ್ರತಿಯೋರ್ವ ಅಭಿಮಾನಿಯೂ ನೋಡಲೇಬೇಕಾದ ಟಾಪ್ ಹತ್ತು ಚಿತ್ರಗಳು ಇಲ್ಲಿವೆ.

ಶೋಲೆ (1975):

ಶೋಲೆ ಚಿತ್ರ ಅಂದಿನ ಒಂದು ಟೈಮ್ಲೆಸ್ ಕ್ಲಾಸಿಕ್ ಚಿತ್ರವಾಗಿದ್ದು, ಇಂದಿಗೂ ಸಹ ಸಿನಿ ಪ್ರೇಕ್ಷಕರಿಗೆ ಈ ಚಿತ್ರ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ ಮತ್ತು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಈ ಚಲನಚಿತ್ರದಲ್ಲಿ ಬಾಲಿವುಡ್ ಅಂಗಳದ ಖ್ಯಾತ ನಟರುಗಳ ದೊಡ್ಡ ತಾರಾ ಬಳಗವೇ ಇತ್ತು. ನಟ ಧರ್ಮೇಂದ್ರ, ಸಂಜೀವ್ ಕುಮಾರ್, ಅಮಿತಾಭ್ ಬಚ್ಚನ್, ಅಮ್ಜದ್ ಖಾನ್, ಹೇಮಾ ಮಾಲಿನಿ, ಜಯಾ ಬಚ್ಚನ್ ಮುಂತಾದ ಅಪ್ರತಿಮ ತಾರೆಗಳನ್ನು ಶೋಲೆ ಚಿತ್ರ ಒಳಗೊಂಡಿತ್ತು. ಇವೆರೆಲ್ಲರ ಮಧ್ಯೆ ಧರ್ಮೇಂದ್ರ ಅವರ ಅಮೋಘವಾದ ನಟನೆ ಸಿನಿ ರಸಿಕರಿಗೆ ತುಂಬಾನೇ ಇಷ್ಟವಾಗಿತ್ತು. ಇಂದಿಗೂ ಅವರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

ಫೂಲ್ ಔರ್ ಪತ್ತರ್ (1966):

ಧರ್ಮೇಂದ್ರವರ ಸಿನಿ ಪಯಣದಲ್ಲಿ ಟಾರ್ನಿಂಗ್ ಪಾಯಿಂಟ್ ತಂದುಕೊಟ್ಟ ಚಿತ್ರದಾಗಿದ್ದು, ತೀವ್ರ ಭಾವನಾತ್ಮಕವಾದ ಪಾತ್ರ ಸಮರ್ಥವಾಗಿ ನಿಭಾಯಿಸುವ ಮೂಲಕ ಮತ್ತೋಮ್ಮೆ ಅವರು ಅದ್ಭುತ ಕಲಾವಿದ ಎಂಬುದನ್ನು ಸಾಬೀತು ಮಾಡಿದ್ದರು. ಈ ಚಿತ್ರ ಅವರಿಗೆ ಫೇಮ್ - ನೇಮ್ ಎರಡನ್ನು ತಂದುಕೊಟ್ಟಿತ್ತು.

ಈ ಸುದ್ದಿಯನ್ನು ಓದಿ: Actor Dharmendra : ಧರ್ಮೇಂದ್ರ ಅಭಿಮಾನಿಗಳಿಗೆ ಕೊಟ್ಟ ಸಂದೇಶವಾದ್ರೂ ಏನು? ನಟನ ಕೊನೆಯ ಇನ್‌ಸ್ಟಾ ಪೋಸ್ಟ್‌ ವೈರಲ್‌

ಸೀತಾ ಔರ್ ಗೀತಾ (1972):

ಧರ್ಮೇಂದ್ರ ಹಾಗೂ 'ಡ್ರೀಮ್‌ ಗರ್ಲ್' ಎಂದೇ ಖ್ಯಾತಿಗೊಳಗಾಗಿದ್ದ ಹೇಮಾ ಮಾಲಿನಿ ಜತೆಯಾಗಿ ರಾಜಾ ಜಾನಿ, ಸೀತಾ ಔರ್ ಗೀತಾ, ಶರಾಫತ್, ಶೋಲೇ ಹಾಗೂ ನಯಾ ಜಮಾನಾ ಸೇರಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳ ಪೈಕಿ ಸೀತಾ ಔರ್ ಗೀತಾ ಚಿತ್ರ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಮಾಡಿತ್ತು. ಅಷ್ಟು ಗಾಢವಾಗಿ ಈ ಚಿತ್ರದಲ್ಲಿ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ನಟಿಸಿದ್ದರು. ನಟನೆ ಬಗ್ಗೆ ಅವರಲಿದ್ದ ಪ್ರೀತಿ ತೆರೆ ಮೇಲೆ ಕಾಣುತ್ತಿತ್ತು.

ಯಾವ್ದೋನ್ ಕಿ ಬಾರಾತ್ (1973):

1973 ರಲ್ಲಿ ಬಿಡುಗಡೆಯಾದ ಯಾದೋನ್ ಕಿ ಬಾರಾತ್. ಚಿತ್ರದಲ್ಲಿ ಧರ್ಮೇಂದ್ರ, ಜೀನತ್ ಅಮನ್, ವಿಜಯ್ ಅರೋರಾ ಮತ್ತು ಇತರರು ನಟಿಸಿದ್ದಾರೆ. ಕಲ್ಟ್ ಮ್ಯೂಸಿಕಲ್ ಡ್ರಾಮಾ ಎಂದೇ ಪ್ರಸಿದ್ಧಿ ಪಡೆದ ಯಾವ್ದೋನ್ ಕಿ ಬಾರಾತ್ ಚಿತ್ರದಲ್ಲಿ ಧರ್ಮೇಂದ್ರ ಅವರ ಪಾತ್ರ ನೆನಪಿನಲ್ಲೇ ಉಳಿಯುವಂತದ್ದು. ಅವರ ನಟನೆ ಜೊತೆಗೆ ಚಿತ್ರದ ಐಕಾನಿಕ್ ಹಾಡುಗಳು ಹಾಗೂ ಕಥೆಯು ಸಿನೆಮಾವನ್ನು ಮತ್ತಷ್ಟು ಹೆಸರುಗಳಿಸಲು ಕಾರಣವಾಯಿತು.

ಜುಗ್ನು (1973):

ನಟ ಧರ್ಮೇಂದ್ರ ಅವರು ನಟಿಸಿದ 'ಜುಗ್ನು' ಚಲನಚಿತ್ರವು 1973ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಆಕ್ಷನ್ ಮತ್ತು ರೋಮ್ಯಾಂಟಿಕ್ ಪಾತ್ರಗಳೆರಡರಲ್ಲೂ ಮಿಂಚಿದ ಅವರು, ವ್ಯಾಪಕ ಜನಪ್ರಿಯತೆಗಳಿಸಿದ್ದರು. ಈ ಸಿನೆಮಾವೂ ಸೂಪರ್ ಹಿಟ್ ಆಯಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತದಲ್ಲಿ ಲಾಭಗಳಿಸಿತ್ತು.

ಸತ್ಯಕಾಮ್ (1969):

ಸಾಮಾಜಿಕ ವಿಷಯವನ್ನಾಧರಿಸಿದ ಸತ್ಯಕಾಮ್ ಚಿತ್ರವು ಧರ್ಮೇಂದ್ರ ಅವರಿಗೆ ನಟನೆ ಮೇಲಿದ್ದ ವ್ಯಾಮೋಹವನ್ನು ತೋರಿಸಿತು. ಭ್ರಷ್ಟ ಜಗತ್ತಿನ ಮಧ್ಯೆ ನೈತಿಕತೆಯನ್ನು ಕಾಪಾಡಿಕೊಂಡು ಬದುಕುವ ವ್ಯಕ್ತಿಯ ಪಾತ್ರವನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ನಟಿಸಿ ತೋರಿಸಿದರು. ಈ ಚಿತ್ರವು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿ ಪರಿಗಣಿಸಲಾಟ್ಟಿತ್ತು.

ಅನುಪಮಾ (1966):

ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಸಂವೇದನಾಶೀಲ ಅಭಿನಯವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಆಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು ಭಾವನಾತ್ಮಕ ಜೀವಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ನಟನೆಗೆ ಸಿನಿ ರಸಿಕರು ಮನಸೋತರು.

ಈ ಸುದ್ದಿಯನ್ನು ಓದಿ: Bollywood Actor Dharmendra: ಬಾಲಿವುಡ್ ಶೋಲೆ ಸಿನಿಮಾ ಖ್ಯಾತಿಯ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ!.

ಚುಪ್ಕೆ ಚುಪ್ಕೆ(1975)

ಹೃಷಿಕೇಶ ಮುಖರ್ಜಿ ನಿರ್ದೇಶಿಸಿದ ಈ ಹಾಸ್ಯಚಿತ್ರದಲ್ಲಿ ಧರ್ಮೇಂದ್ರ ಅವರು ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಜೊತೆಗೆ ಅಚ್ಚುಕಟ್ಟಾದ ಕಾಮಿಡಿಯನ್ ಅಂಶವುಳ್ಳ ನಟನೆಯನ್ನು ಮಾಡಿ ಸೈ ಎನ್ನಿಸಿಕೊಂಡರು. ಈ ಸಿನೆಮಾದಲ್ಲಿ ಅವರ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್ ಗಳು ಸಿನಿ ಪ್ರಿಯರ ಮನ ಸೆಳೆಯಿತು. ಹಾಸ್ಯಪೂರ್ಣ ಅಭಿನಯದಿಂದ ಚುಪ್ಕೆ ಚುಪ್ಕೆ ಚಿತ್ರವು ಬಾಲಿವುಡ್‌ನ ಅತ್ಯಂತ ಬೆಸ್ಟ್ ಹಾಸ್ಯಮಯ ಚಿತ್ರ ಎಂಬ ಬಿರುದನ್ನು ಪಡೆಯಿತು.

ಬಂಧಿನಿ (1963):

ಧರ್ಮೇಂದ್ರ ಅವರ ಆರಂಭಿಕ ಚಿತ್ರಗಳಲ್ಲಿ ಒಂದಾದ ಬಂಧಿನಿ ವಿಮರ್ಶಕರಿಂದ ಉನ್ನತ ಮೆಚ್ಚುಗೆ ಪಡೆದುಕೊಂಡಿತು. ಸಹಪಾತ್ರದಲ್ಲಿದ್ದರೂ ಅವರು ತಮ್ಮ ಅಭಿನಯದ ಪ್ರತಿಭೆಯನ್ನು ಸ್ಪಷ್ಟವಾಗಿ ತೋರಿಸಿದರು, ಇದು ಅವರ ಮುಂದಿನ ಯಶಸ್ಸಿಗೆ ಅಡಿಪಾಯವಾಯಿತು.

ಪ್ಯಾರ್ ಕಿಯಾ ತೋ ದರ್ನಾ ಕಿಯಾ (1998):

ಧರ್ಮೇಂದ್ರ ಅವರ ನಂತರದ ಕಾಲದ ಈ ರೊಮ್ಯಾಂಟಿಕ್ ಹಿಟ್ ಚಿತ್ರದಲ್ಲಿ ಅವರ ಪ್ರಬುದ್ಧ ಹಾಗೂ ಆಕರ್ಷಕ ನಟನೆ ಪ್ರೇಕ್ಷಕರ ಮನ ಗೆದ್ದಿತು. ಈ ಚಿತ್ರದಿಂದ ಅವರು ಯುವ ಜನರೇಶನ್ ಮೆಚ್ಚಿನ ನಟರಾಗಿ ಗುರುತಿಸಿಕೊಂಡರು.