ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ

ಈಗೀಗ ಮಾಳು (Malu) ಅವರು ಮನೆಯಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ನೇರ ನುಡಿಗಳಿಂದ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ. ಈ ಬಾರಿ ಬಕೆಟ್‌ (Bucket Gyang) ಗ್ಯಾಂಗ್‌ಗೆ ಚೆನ್ನಾಗಿ ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ. ಅಶ್ವಿನಿ (Ashwini Gowda) ಅವರಿಗೆ ಕಪ್ಪು ನೀರನ್ನು ಹಾಕಿದ ಮಾಳು, ಕಾರಣ ಕೊಟ್ಟಿದ್ದು ಹೀಗೆ. ʻಅಶ್ವಿನಿ ಅವರಲ್ಲಿ ಕಲ್ಮಶ ಜಾಸ್ತಿ. ಬೇಕು ಅಂತಲೇ ರಕ್ಷಿತಾ ಅವರನ್ನ ತುಂಬಾ ಹರ್ಟ್‌ ಮಾಡುತ್ತ ಇರ್ತಾರೆʼ ಎಂದರು. ಈ ಒಂದು ಕಾರಣ ಅಶ್ವಿನಿ ಅವರನ್ನ ಕೋಪ ಬರಿಸುವಂತೆ ಮಾಡಿದೆ.

ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 11, 2025 6:25 PM

ಬಿಗ್‌ ಬಾಸ್‌ ಸೀಸನ್‌ 12 (Bigg Boss Kannada 12) ಆರಂಭವಾದಾಗಿನಿಂದ ಮಾಳು ಅವರು ತುಂಬಾ ಸೈಲೆಂಟ್‌ ಎಂದು ಉಳಿದ ಸ್ಪರ್ಧಿಗಳು ಹೇಳುತ್ತಲೇ ಬರುತ್ತಿದ್ದರು. ಅದ್ಯಾವಾಗ, ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿತ್ತೋ ಅಂದೇ ಮಾಳು (malu nipanal) ಅಸಲಿ ಮುಖ ರಿವೀಲ್‌ ಆಗಿದೆ. ಈಗೀಗ ಮಾಳು ಅವರು ಮನೆಯಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ನೇರ ನುಡಿಗಳಿಂದ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ. ಈ ಬಾರಿ ಬಕೆಟ್‌ (Bucket Gyang) ಗ್ಯಾಂಗ್‌ಗೆ ಚೆನ್ನಾಗಿ ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ.

ಟಾಸ್ಕ್‌ ಏನು?

ಬಿಗ್‌ ಬಾಸ್‌ ಈ ವಾರ ಟಾಸ್ಕ್‌ ಒಂದನ್ನ ನೀಡಿದ್ದಾರೆ. ಈ ಮನೆಯ ಕಸ ಯಾರು? ಸಗಣಿ ಯಾರಿಗೆ ಸೂಕ್ತ? ಕಪ್ಪು ನೀರು ಯಾರ ವ್ಯಕ್ತಿತ್ವಕ್ಕೆ ಸೂಕ್ತ ಎಂದು ಮಾಳು ನಿರ್ಧಾರ ತೆಗೆದುಕೊಂಡು ಸ್ಪರ್ಧಿಯ ತಲೆ ಮೇಲೆ ನೀರು ಚೆಲ್ಲಬೇಕು.

ಇದನ್ನೂ ಓದಿ: Bigg Boss Kannada: ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್‌! ಗಿಲ್ಲಿ ಹೇಳಿದ್ದು ಕೊನೆಗೂ ಸತ್ಯವಾಯ್ತು

ಮೊದಲಿಗೆ ಜಾಹ್ನವಿ ಹೆಸರನ್ನು ಹೇಳಿ ಕ್ಯಾಪ್ಟನ್‌ ಮಾಳು ಕೊಟ್ಟ ಕಾರಣ ಹೀಗಿತ್ತು. ʻಅಡುಗೆ ಕೆಲಸವನ್ನ ಸರಿಯಾಗಿ ಮಾಡಲ್ಲ, ಕ್ಯಾಮೆರಾ ನನ್ನನ್ನು ನೋಡಲಿ, ನನ್ನ ಮೇಕಪ್‌ ನೋಡಲಿ ಅನ್ನೋದೇ ಅವರ ಗುರಿಯಾಗಿರುತ್ತದೆʼ ಎಂದರು.

ಕ್ಷಮೆ ಕೇಳಿದ ಮಾತ್ರಕ್ಕೆ ಸೋತಿದ್ದೇನೆ ಅಂತಲ್ಲ

ಅಶ್ವಿನಿ ಅವರಿಗೆ ಕಪ್ಪು ನೀರನ್ನು ಹಾಕಿದ ಮಾಳು, ಕಾರಣ ಕೊಟ್ಟಿದ್ದು ಹೀಗೆ. ʻಅಶ್ವಿನಿ ಅವರಲ್ಲಿ ಕಲ್ಮಶ ಜಾಸ್ತಿ. ಬೇಕು ಅಂತಲೇ ರಕ್ಷಿತಾ ಅವರನ್ನ ತುಂಬಾ ಹರ್ಟ್‌ ಮಾಡುತ್ತ ಇರ್ತಾರೆʼ ಎಂದರು. ಈ ಒಂದು ಕಾರಣ ಅಶ್ವಿನಿ ಅವರನ್ನ ಕೋಪ ಬರಿಸುವಂತೆ ಮಾಡಿದೆ. ಅಶ್ವಿನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻಬೇರೆ ಅವರ ಹೆಸರು ಬಳಸಿಕೊಂಡು ಟಾಂಟ್‌ ಮಾಡಬಾರದು. ನಾನು ಕ್ಷಮೆ ಕೇಳಿದ ಮಾತ್ರಕ್ಕೆ ಸೋತಿದ್ದೇನೆ ಅಂತಲ್ಲ. ಮಾಳು ಮತ್ತು ಅಶ್ವಿನಿ ನಡುವೆ ಏನಾದರೂ ಸಮಸ್ಯೆ ಇದೆಯಾ? ಈ ಬಗ್ಗೆ ಉತ್ತರ ಬೇಕುʼ ಎಂದು ಅಬ್ಬರಿಸಿದ್ದಾರೆ.

ರಾಶಿಕಾ ವಿಚಾರವಾಗಿಯೂ ಮಾಳು ಬಲವಾದ ಕಾರಣವನ್ನೇ ಕೊಟ್ರು. ಮಾಳು ಅವರು ರಾಶಿಕಾ ಅವರ ಮೇಲೆ ಕಸ ಹಾಕಿದ್ದಾರೆ, ಧ್ರುವಂತ್ ಅವರ ಮೇಲೆ ಸಗಣಿ ನೀರು ಸುರಿದಿದ್ದಾರೆ. ರಾಶಿಕಾ ವ್ಯಕ್ತಿತ್ವದ ಬಗ್ಗೆ ಮಾಳು ಅವರು ಆಡಿರುವ ಮಾತುಗಳಿಂದ ರಾಶಿಕಾ ಘಾಸಿಗೊಂಡಿದ್ದು, ಕಣ್ಣೀರು ಹಾಕಿದ್ದಾರೆ.

ಈ ವೇಳೆ ಮಾಳು ನಿಪನಾಳ ಹಾಗೂ ಕಾಕ್ರೋಚ್‌ ಸುಧಿ ಅವರಿಗೂ, ಕಾಕ್ರೋಚ್‌ ಸುಧಿ, ರಾಶಿಕಾ ಶೆಟ್ಟಿ ನಡುವೆ ಜಗಳ ನಡೆದಿದೆ. ಆಗ ರಾಶಿಕಾ ಅವರು ಥೂ ಎಂದಿದ್ದಾರೆ. ಮಾಳು ನಿಪನಾಳ ಅವರು, “ಥೂ ಎಲ್ಲ ಬೇಡ” ಎಂದಿದ್ದಾರೆ. ಆಗ ಗಿಲ್ಲಿ ನಟ ಕೂಡ “ಥೂ ಬಿಡಿ” ಎಂದಿದ್ದಾರೆ. ರಾಶಿಕಾ ಅವರು ಮತ್ತೆ “ಮುಚ್ಕೊಂಡು ಕೂತ್ಕೋ” ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ ಬಿಗ್‌ ಬಾಸ್‌ ಮನೆಯ ಕಸ ಆದರೆ ಸಗಣಿ ಧ್ರುವಂತೆ ಅಂತೆ; ಮಾಳು ಕೊಟ್ಟ ಕಾರಣ ಇದು

ಸೂರಜ್‌ ಬಳಿ ಕಣ್ಣೀರು ಹಾಕಿದ ರಾಶಿಕಾ

ಟಾಸ್ಕ್‌ ಆದ ಬಳಿಕ ರಾಶಿಕಾ ಅವರು ಸೂರಜ್‌ ಬಳಿ ಅಳಲು ತೋಡಿಕೊಂಡರು. ರಾಶಿಕಾ ಅವರನ್ನು ಅವರ ಆಪ್ತ ಗೆಳೆಯ ಸೂರಜ್ ಸಮಾಧಾನ ಪಡಿಸಿದ್ದಾರೆ. ಸೂರಜ್‌ ಜೊತೆ ರಾಶಿಕಾ ಮಾತನಾಡಿ, ʻಈ ಮನೆಯಲ್ಲಿ ನಾನು ತುಂಬಾ ಸುಲಭವಾಗಿ ಟಾರ್ಗೆಟ್ ಆಗುತ್ತೇನೆ. ನನಗೆ ಮುಖವಾಡ ಹಾಕಿಕೊಂಡು ಬದುಕಲು ಬರುವುದಿಲ್ಲ. ಮಾಳು ಅವರು ನನ್ನ ಹೆಸರು ತೆಗೆದುಕೊಂಡರೆ ಅವರ ಆಟದಲ್ಲಿ ಏನು ತೊಂದರೆ ಆಗುವುದಿಲ್ಲʼಎಂದು ಕೂಗಾಡಿದ್ದಾರೆ.