ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rishab Shetty: ಪ್ರಗತಿ-ರಿಷಬ್ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ; ಕ್ಯೂಟ್‌ ಫೋಟೋ ಶೇರ್‌ ಮಾಡಿದ್ರು ಡಿವೈನ್ ಸ್ಟಾರ್

Rishab: ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪ್ರೀತಿಗೆ ಹತ್ತು ವರ್ಷಗಳು ತುಂಬಿದೆ. ಸೋಶಿಯಲ್ ಮೀಡಿಯಾದಲ್ಲಿ ರಿಷಬ್, ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಹಳೆಯ ಮಧುರ ಕ್ಷಣಗಳ ಫೋಟೊಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದೀಗ ರಿಷಬ್‌ ಕ್ಯೂಟ್‌ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು. ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು ಎಂದು ಬರೆದುಕೊಂಡಿದ್ದಾರೆ.

ಪ್ರಗತಿ-ರಿಷಬ್ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Jan 24, 2026 9:21 PM

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಪ್ರಗತಿ ಶೆಟ್ಟಿ ಪ್ರೀತಿಗೆ ಹತ್ತು ವರ್ಷಗಳು ತುಂಬಿದೆ. ಸೋಶಿಯಲ್ ಮೀಡಿಯಾದಲ್ಲಿ ರಿಷಬ್, ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಹಳೆಯ ಮಧುರ ಕ್ಷಣಗಳ ಫೋಟೊಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದೀಗ ರಿಷಬ್‌ ಕ್ಯೂಟ್‌ (Cute Photo) ಫೋಟೋವನ್ನು ಹಂಚಿಕೊಂಡಿದ್ದಾರೆ. ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು. ಸಿನಿಮಾನೇ ಸಂಗಾತಿಯಾಗಿದ್ದ (Marriage) ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು ಎಂದು ಬರೆದುಕೊಂಡಿದ್ದಾರೆ.

ದಶಕದ ಸಂವತ್ಸರ

ಪ್ರೀತಿಗೆ ಪ್ರೀತಿಯಾಗಿ

ನಗುವಿಗೆ ನಗುವಾಗಿ

ಬಿಂಬಕ್ಕೆ ಪ್ರತಿಬಿಂಬವಾಗಿ

ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ...ಅಂತ ಇದಕ್ಕೂ ಮುಂಚೆ ವಿಡಿಯೋ ಪೋಸ್ಟ್‌ ಮಾಡಿಕೊಂಡಿದ್ದರು. ಇದೀಗ ರಿಷಬ್‌ ಸೆಲೆಬ್ರೇಷನ್‌ ಫೋಟೋಸ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: King Release Date: ಹೈ-ಆಕ್ಟೇನ್ ಆಕ್ಷನ್ ಶಾರುಖ್‌ ಮೂವಿ ʻಕಿಂಗ್‌ʼ! ರಿಲೀಸ್‌ ಡೇಟ್‌ ಅನೌನ್ಸ್‌

ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಶೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು.

ಸುಂದರವಾದ ಚಿತ್ರಕಥೆ

ಕನಸುಗಳನ್ನು ಕಟ್ಟುವ ಸಣ್ಣ ಭೇಟಿಗಳು, ನಿಮ್ಮೊಂದಿಗಿನ ಪ್ರತಿ ಕ್ಷಣವೂ ನಾನು ಬದುಕಿದ ಅತ್ಯಂತ ಸುಂದರವಾದ ಚಿತ್ರಕಥೆಯಂತೆ ಭಾಸವಾಗುತ್ತದೆ. ಪ್ರೀತಿಯಲ್ಲಿ ಆಳವಾಗಿ ಬೀಳುವ 10 ವರ್ಷಗಳು ಮತ್ತು ಇನ್ನೂ ಒಂದು ಜೀವಿತಾವಧಿ ಇಲ್ಲಿದೆ. ಕೋಟಿ ನೆನಪಗಳನ್ನು ಮತ್ತೆ ಹಸಿರಾಗಿಸುತ್ತಾ ಎಂದು ಬರೆದುಕೊಂಡಿದ್ದಾರೆ.

ಪ್ರಗತಿ ಶೆಟ್ಟಿ ಮೊದಲ ಬಾರಿ ರಿಷಬ್ ಅವರನ್ನು ಭೇಟಿಯಾದಾಗ ಅವರ ಹೆಸರು ಏನು? ಅವರು ಯಾರು ಅಂತಾನೇ ಗೊತ್ತಿರಲಿಲ್ಲವಂತೆ. 'ಉಳಿದವರು ಕಂಡಂತೆ' ಸಿನಿಮಾ ಬಳಿಕ, ಪ್ರಗತಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು, ಹಾಗಾಗಿ ಸ್ನೇಹಿತರ ಜೊತೆ ರಿಕ್ಕಿ ಸಿನಿಮಾ ನೋಡೋದಕ್ಕೆ ಹೋಗಿದ್ದರಂತೆ. ಆ ಸಂದರ್ಭದಲ್ಲಿ ಥಿಯೇಟರ್ ಗೆ ಚಿತ್ರತಂಡ ವಿಸಿಟ್ ಮಾಡಿತ್ತು. ಅಲ್ಲಿ ಪ್ರಗತಿಗೆ ರಿಷಬ್ ರಿಕ್ಕಿ ಸಿನಿಮಾದ ನಿರ್ದೇಶಕರು ಅನ್ನೋದು ಗೊತ್ತಾಗಿದೆ. ಎಲ್ಲರೂ ಸೆಲ್ಫಿ ತೆಗೆಯುವಂತೆ ತಾವು ಹೋಗಿ ಫೋಟೊ ತೆಗೆಸಿಕೊಂಡಿದ್ದರು.ʼ

ಇದನ್ನೂ ಓದಿ: Ranbir Kapoor: ಅನಿಮಲ್‌ ಸಿನಿಮಾಗೆ ರಣಬೀರ್ ಕಪೂರ್ ತಯಾರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್‌

ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು ರಿಷಬ್. ಬಳಿಕ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ, ಮನೆಯವರನ್ನು ಒಪ್ಪಿಸಿ ಆ ವರ್ಷವೇ ಮದುವೆ ಆಗಿದ್ದರು ಈ ಜೋಡಿ.