ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ದೀಪಿಕಾ ಪಡುವಕೋಣೆಗೆ ‘ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್' ಪ್ರತಿಷ್ಠಿತ ಗೌರವ ಪುರಸ್ಕಾರ

ನಟಿ ದೀಪಿಕಾ ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧಿ ಪಡೆದಿದ್ದು ಅನೇಕ ಪ್ರಸಿದ್ಧ ನಟರ ಜೊತೆಗೆ ಅಭಿನಯಿಸಿ ಸೂಪರ್‌ಸ್ಟಾರ್‌ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಅನೇಕ ಫ್ಯಾಶನ್ ಇವೆಂಟ್ ಶೋಗಳಲ್ಲಿ ಭಾರತದ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿ ಕೊಂಡಿದ್ದಾರೆ. ಇದೀಗ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ 2026 ಪ್ರಶಸ್ತಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ ಸ್ಟಾರ್ ಪುರಸ್ಕಾರ ನಟಿ ದೀಪಿಕಾ ಅವರಿಗೆ ಒಲಿದಿದೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹಾಲಿವುಡ್‌ನ ಗೌರವ ಪುರಸ್ಕಾರ!

Profile Pushpa Kumari Jul 3, 2025 4:42 PM

ನವದೆಹಲಿ: ಭಾರತೀಯ ಚಲನಚಿತ್ರೋದ್ಯಮದ ಬಹುಬೇಡಿಕೆ ನಟಿಯರಲ್ಲಿ ದೀಪಿಕಾ ಕೂಡ ಒಬ್ಬರು‌ (Deepika Padukone) 2006ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐಶ್ವರ್ಯ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಇವರು ಬಳಿಕ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದರು. ಸದ್ಯ ಅವರು ಪ್ಯಾನ್ ಇಂಡಿಯಾ ಮತ್ತು ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ.ಇವರ ಸಿನಿಮಾ ಕ್ಷೇತ್ರದ ಸಾಧನೆಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದು ಇದೀಗ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ 2026 ರ ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ ಸ್ಟಾರ್ (Hollywood Walk Of Fame) ಪಟ್ಟವನ್ನು ದೀಪಿಕಾಗೆ ನೀಡಿ ಗೌರವಿಸಿದೆ. ಈ ಮೂಲಕ ದೀಪಿಕಾ ಅವರು ಭಾರತದಿಂದ ಈ ಪ್ರಶಸ್ತಿ ಪಡೆದ ಮೊದಲಿಗರು ಆಗಿದ್ದಾರೆ.

ನಟಿ ದೀಪಿಕಾ ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧಿ ಪಡೆದಿದ್ದು ಅನೇಕ ಪ್ರಸಿದ್ಧ ನಟರ ಜೊತೆಗೆ ಅಭಿನಯಿಸಿ ಸೂಪರ್‌ಸ್ಟಾರ್‌ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಅನೇಕ ಫ್ಯಾಶನ್ ಇವೆಂಟ್ ಶೋ ಗಳಲ್ಲಿ ಭಾರತದ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ 2026 ಪ್ರಶಸ್ತಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ ಸ್ಟಾರ್ ಪುರಸ್ಕಾರ ನಟಿ ದೀಪಿಕಾ ಅವರಿಗೆ ಒಲಿದಿದೆ.

ಇದನ್ನು ಓದಿ:Django Krishnamurthy Movie: ‘ಡಿಜಾಂಗೋ ಕೃಷ್ಣಮೂರ್ತಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಎಮಿಲಿ ಬ್ಲಂಟ್, ಟಿಮೊಥಿ ಚಲಮೆಟ್, ರಾಮಿ ಮಲೆಕ್, ರಾಚೆಲ್ ಮ್ಯಾಕ್ ಆಡಮ್ಸ್, ಸ್ಟಾನ್ಲಿ ಟುಸಿ ಮತ್ತು ಡೆಮಿ ಮೂರ್ ಅವರಂತಹ ಪ್ರಸಿದ್ಧ ಕಲಾವಿದರಿಗೆ ಈ ಹಿಂದೆ ಹಾಲಿವುಡ್ ವಾಕ್ ಆಫ್ ಫೇಮ್‌ ಸ್ಟಾರ್ ಪುರಸ್ಕಾರ ಲಭಿಸಿತ್ತು. ಆದರೆ ಭಾರತದ ಯಾರಿಗೂ ಈ ಸ್ಟಾರ್ ಪಟ್ಟ ಲಭಿಸಿರಲಿಲ್ಲ. ಇದೀಗ ನಟಿ ದೀಪಿಕಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪುರಸ್ಕಾರ ಪಡೆದ ಭಾರತದ ಮೊದಲ ಮಹಿಳೆಯಾಗಿದ್ದಾರೆ.

2018 ರಲ್ಲಿ ಟೈಮ್ ಗ್ರೂಪ್ಸ್ ನಿಂದ ಕೊಡಮಾಡುವ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಿಗೆ ನೀಡಲಾಗುವ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿಯನ್ನು ಕೂಡ ನಟಿ ದೀಪಿಕಾ ಸ್ವೀಕರಿಸಿದ್ದರು.‌ ಕತಾರ್ ನಲ್ಲಿ FIFA ವಿಶ್ವಕಪ್ ಅಂತಿಮ ಪಂದ್ಯ ನಡೆದ ಸಂದರ್ಭದಲ್ಲಿ ಟ್ರೋಫಿಯನ್ನು ಅನಾವರಣ ಗೊಳಿಸುವ ಮೂಲಕ ಅವರು ಅಲ್ಲಿ ಕೂಡ ಪ್ರಭಾವಿ ವ್ಯಕ್ತಿ ಎಂದು ಖ್ಯಾತಿ ಪಡೆದಿದ್ದಾರೆ.

ಸದ್ಯ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಮಗುವಿನ ಆರೈಕೆ ಕೆಲಸ ಕಾರ್ಯದಲ್ಲಿ ಬ್ಯುಸಿ ಯಾಗಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ನಾಯಕರಾಗಿ ನಟಿಸುವ ಅಟ್ಲಿ ಅವರು ನಿರ್ದೇಶಿಸಿರುವ ಹೊಸ ಸಿನಿಮಾದಲ್ಲಿ ಕೂಡ ಅಭಿನಯಿಸಲಿದ್ದಾರೆ. ಇದಾದ ಬಳಿಕ ಪಥನ್ 2 ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.