8ನೇ ವೇತನ ಆಯೋಗ: ಶೇಕಡ 400ರಷ್ಟು ಸಂಬಳ ಹೆಚ್ಚಳ; ಏನಿದು 5 ಫಿಟ್‌ಮೆಂಟ್ ಫ್ಯಾಕ್ಟರ್ ಸೂತ್ರ?
8th Pay Commission: 8ನೇ ವೇತನ ಆಯೋಗದ ಚರ್ಚೆಗಳು ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದು, ವಿವಿಧ ವೇತನ ಶ್ರೇಣಿಗಳಿಗೆ 5 ಪ್ರತ್ಯೇಕ ಫಿಟ್‌ಮೆಂಟ್ ಫ್ಯಾಕ್ಟರ್ ಬಳಸುವ ಹೊಸ ಸೂತ್ರ ಪ್ರಸ್ತಾಪಿಸಲಾಗಿದೆ. ಈ ಸೂತ್ರ ಜಾರಿಯಾದರೆ ಹಿರಿಯ ಅಧಿಕಾರಿಗಳ ಸಂಬಳದಲ್ಲಿ ಶೇಕಡ 400ರವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಕನಿಷ್ಠ ವೇತನವನ್ನು 72 ಸಾವಿರ ರುಪಾಯಿಗೆ ಹೆಚ್ಚಿಸುವ ಬೇಡಿಕೆಯೂ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 27: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 8ನೇ ವೇತನ ಆಯೋಗದ (8th Pay Commission) ಚರ್ಚೆಗಳು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಬಾರಿ ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘವು (Indian Railway Technical Supervisors' Association) ಎಲ್ಲರಿಗೂ ಒಂದೇ ಸಮಾನವಾದ ಫಿಟ್‌ಮೆಂಟ್ ಫ್ಯಾಕ್ಟರ್ ನೀಡುವ ಬದಲಾಗಿ, ವಿವಿಧ ವೇತನ ಶ್ರೇಣಿಗಳಿಗೆ 5 ಪ್ರತ್ಯೇಕ ಫಿಟ್‌ಮೆಂಟ್ ಫ್ಯಾಕ್ಟರ್‌ಗಳನ್ನು ಬಳಸುವಂತೆ ವಿಶಿಷ್ಟ ಸೂತ್ರವನ್ನು ಪ್ರಸ್ತಾಪಿಸಿದೆ. ಈ ಸೂತ್ರ ಅಂಗೀಕಾರಗೊಂಡರೆ ಕೆಲವು ಹಿರಿಯ ಅಧಿಕಾರಿಗಳ ಸಂಬಳ 400%ಕ್ಕಿಂತಲೂ ಅಧಿಕವಾಗಲಿದೆ.
ಪ್ರಸ್ತಾಪಿತ ಫಿಟ್‌ಮೆಂಟ್ ಫ್ಯಾಕ್ಟರ್ ಸೂತ್ರ
- ಲೆವೆಲ್ 1ರಿಂದ 5: 2.92 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 6ರಿಂದ 8: 3.50 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 9ರಿಂದ 12: 3.80 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 13 ರಿಂದ 16: 4.09 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 17 ರಿಂದ 18: 4.38 ಫಿಟ್‌ಮೆಂಟ್ ಫ್ಯಾಕ್ಟರ್
8ನೇ ವೇತನ ಆಯೋಗದ ಲೆಕ್ಕಾಚಾರ:
IRTSA has proposed salary changes for the upcoming 8th Pay Commission.
— Nalini Unagar (@NalinisKitchen) May 27, 2026
Level 1–5 employees
If the basic pay is ₹20,000 × 2.92 = ₹58,400
Level 6–8 employees
If the basic pay is ₹45,000 × 3.50 = ₹1,57,500
Level 13–16 employees
If the basic pay is ₹1,20,000 × 4.09 =…
ವೇತನದ ಮೇಲಾಗುವ ಪ್ರಭಾವ
7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ 2.57 ಆಗಿತ್ತು. ಪ್ರಸ್ತುತ ಹೊಸ ಸೂತ್ರದ ಪ್ರಕಾರ, ಲೆವೆಲ್ 17-18ರಲ್ಲಿ 2.5 ಲಕ್ಷ ರುಪಾಯಿ ಮೂಲ ವೇತನ ಪಡೆಯುವ ಹಿರಿಯ ಅಧಿಕಾರಿಯ ಸಂಬಳ ಸುಮಾರು 10.95 ಲಕ್ಷ ರುಪಾಯಿಗೆ ಏರಿಕೆಯಾಗಲಿದೆ. ಹಾಗೆಯೆ ಲೆವೆಲ್ 6-8ರ ಅಡಿಯಲ್ಲಿ 45,000 ರುಪಾಯಿ ಮೂಲ ವೇತನ ಹೊಂದಿರುವ ನೌಕರನ ಸಂಬಳ 1.57 ಲಕ್ಷ ರುಪಾಯಿಗೆ ತಲುಪಲಿದೆ.
ಹಿಮಾಚಲ ಪ್ರದೇಶದ ವಾಯುಪಡೆ ನಿಲ್ದಾಣದ ಬಳಿ ಹೊತ್ತಿ ಉರಿದ ಅರಣ್ಯ
ಇತರ ಪ್ರಮುಖ ಬೇಡಿಕೆಗಳು ಮತ್ತು ಸವಾಲುಗಳು
ನೌಕರರ ಒಕ್ಕೂಟಗಳು ಕನಿಷ್ಠ ಮೂಲ ವೇತನವನ್ನು 69,000 ರುಪಾಯಿಯಿಂದ 72,000 ರುಪಾಯಿಗೆ ಹೆಚ್ಚಿಸಲು, ವಾರ್ಷಿಕ ಇಂಕ್ರಿಮೆಂಟ್ ಅನ್ನು ಶೇಕಡ 5ಕ್ಕೆ ಏರಿಸಲು ಮತ್ತು ಹೊಸ ವೇತನ ಲೆಕ್ಕಾಚಾರಕ್ಕೂ ಮುನ್ನ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನದೊಂದಿಗೆ ವಿಲೀನಗೊಳಿಸಲು ಒತ್ತಾಯಿಸುತ್ತಿವೆ. ಅಲ್ಲದೆ ಗಗನಕ್ಕೇರಿರುವ ಜೀವನ ವೆಚ್ಚ ನಿಭಾಯಿಸಲು 'ಕುಟುಂಬದ ಘಟಕ' ಸೂತ್ರವನ್ನು 3ರಿಂದ 5ಕ್ಕೆ ಬದಲಾಯಿಸುವಂತೆ ಹಾಗೂ ಹಳೇ ಪಿಂಚಣಿ ಯೋಜನೆ (OPS) ಮಾದರಿಯ ಸುರಕ್ಷತೆ ನೀಡುವಂತೆ ಕೋರಿವೆ.
ಆದರೆ ಇಷ್ಟೊಂದು ಭಾರಿ ಪ್ರಮಾಣದ ವೇತನ ಪರಿಷ್ಕರಣೆಯು ಸರ್ಕಾರದ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಒತ್ತಡ, ನಿವೃತ್ತಿ ವೇತನದ ಹೊಣೆ ಹಾಗೂ ಹಣದುಬ್ಬರದ ಅಪಾಯವನ್ನು ತಂದೊಡ್ಡಬಹುದು. ಕೇಂದ್ರ ಸರ್ಕಾರದ ನಿರ್ಧಾರದ ಬೆನ್ನಲ್ಲೇ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮ ನೌಕರರ ವೇತನವನ್ನು ಪರಿಷ್ಕರಿಸುವುದರಿಂದ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಇದರ ಪ್ರಭಾವ ಬೀರುತ್ತದೆ. ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಆಯೋಗವು ಪ್ರಸ್ತುತ ದೇಶಾದ್ಯಂತ ತೀವ್ರ ಸಮಾಲೋಚನೆ ನಡೆಸುತ್ತಿದ್ದು, ಇದು ಸುಮಾರು 1.1 ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಭವಿಷ್ಯವನ್ನು ನಿರ್ಧರಿಸಲಿದೆ.