ಅಮೇಜಾನ್ ಪೇ ಇಂದ ಭಾರತದಲ್ಲಿ ಹಣಕಾಸು ಸೇವೆಗಳ ಪೋರ್ಟ್‌ಫೋಲಿಯೊ ವಿಸ್ತರಣೆ
ಗ್ರಾಹಕರು ಈಗ ಅಮೇಜಾನ್ ಪೇಯಲ್ಲಿ ಕೇವಲ 1,000 ರೂಪಾಯಿಗಳಿಂದ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಬಹುದು. ವಿಶೇಷವೆಂದರೆ, ಪ್ರತಿಯೊಂದು ಸಂಸ್ಥೆಯಲ್ಲೂ ಪ್ರತ್ಯೇಕ ಉಳಿತಾಯ ಖಾತೆ ಗಳನ್ನು ತೆರೆಯುವ ಅಗತ್ಯವಿಲ್ಲದೆಯೇ ವಿವಿಧ ಪಾಲುದಾರ ಸಂಸ್ಥೆಗಳ ಆಯ್ಕೆಗಳನ್ನು ಪಡೆಯ ಬಹುದು. ಈ ಪಾಲುದಾರ ಸಂಸ್ಥೆಗಳು ವಾರ್ಷಿಕವಾಗಿ ಗರಿಷ್ಠ ಶೇ. 8 ರವರೆಗೆ ಬಡ್ಡಿ ದರವನ್ನು ನೀಡುತ್ತಿವೆ.
-
5 ಬ್ಯಾಂಕ್‌ಗಳು ಮತ್ತು 2 ಎನ್‌ಬಿಎಫ್‌ಸಿಗಳೊಂದಿಗೆ ಸಹಭಾಗಿತ್ವ: ಕೇವಲ 1,000 ರೂಪಾಯಿಗಳಿಂದ ಹೂಡಿಕೆ ಆರಂಭ;
ಶೇ. 8 ರವರೆಗೆ ಬಡ್ಡಿ ದರ.
ಅಮೇಜಾನ್ ಪೇ ಇಂದು ಭಾರತದಲ್ಲಿ ತನ್ನ ಹಣಕಾಸು ಸೇವೆಗಳ ಪರಿಸರ ವ್ಯವಸ್ಥೆಯನ್ನು ಗಣನೀಯವಾಗಿ ವಿಸ್ತರಿಸುತ್ತಾ 'ಫಿಕ್ಸೆಡ್ ಡೆಪಾಸಿಟ್' ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಶ್ರೀರಾಮ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್‌ನಂತಹ ಎರಡು ಪ್ರಮುಖ NBFCಗಳು ಹಾಗೂ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಲೈಸ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳೊಂದಿಗೆ ಮಹತ್ವದ ಸಹಭಾಗಿತ್ವ ಹೊಂದುವ ಮೂಲಕ, ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸ್ಥಿರ ಠೇವಣಿ ಆಯ್ಕೆಗಳನ್ನು ಅಮೇಜಾನ್ ಪೇ ನೀಡುತ್ತಿದೆ.
ಗ್ರಾಹಕರು ಈಗ ಅಮೇಜಾನ್ ಪೇಯಲ್ಲಿ ಕೇವಲ 1,000 ರೂಪಾಯಿಗಳಿಂದ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಬಹುದು. ವಿಶೇಷವೆಂದರೆ, ಪ್ರತಿಯೊಂದು ಸಂಸ್ಥೆಯಲ್ಲೂ ಪ್ರತ್ಯೇಕ ಉಳಿತಾಯ ಖಾತೆ ಗಳನ್ನು ತೆರೆಯುವ ಅಗತ್ಯವಿಲ್ಲದೆಯೇ ವಿವಿಧ ಪಾಲುದಾರ ಸಂಸ್ಥೆಗಳ ಆಯ್ಕೆಗಳನ್ನು ಪಡೆಯ ಬಹುದು. ಈ ಪಾಲುದಾರ ಸಂಸ್ಥೆಗಳು ವಾರ್ಷಿಕವಾಗಿ ಗರಿಷ್ಠ ಶೇ. 8 ರವರೆಗೆ ಬಡ್ಡಿ ದರವನ್ನು ನೀಡುತ್ತಿವೆ. ಅಲ್ಲದೆ, ಎಲ್ಲಾ ಪಾಲುದಾರರು ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇ. 0.5 ರಷ್ಟು ಬಡ್ಡಿಯನ್ನು ನೀಡುತ್ತಿವೆ. ಶ್ರೀರಾಮ್ ಫೈನಾನ್ಸ್ ಮಹಿಳಾ ಹೂಡಿಕೆದಾರರಿಗೆ ಹೆಚ್ಚುವರಿ ಯಾಗಿ ಶೇ. 0.5 ರಷ್ಟು ಬಡ್ಡಿಯನ್ನು ನೀಡುತ್ತದೆ.
ಈ ಕುರಿತು ಮಾತನಾಡಿದ ಅಮೇಜಾನ್ ಪೇ ಸಿಇಒ ವಿಕಾಸ್ ಬನ್ಸಾಲ್, "ಸ್ಥಿರ ಆದಾಯದ ಸಾಧನಗಳು ಅವುಗಳ ಸರಳ ರಚನೆ, ಖಾತರಿಯ ಆದಾಯ ಮತ್ತು ಕಡಿಮೆ ರಿಸ್ಕ್‌ನ ಗುಣಲಕ್ಷಣ ಗಳಿಂದಾಗಿ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಹೊಸ ವರ್ಷದ ಆರಂಭದಲ್ಲಿ ಈ ಸೌಲಭ್ಯ ವನ್ನು ಪ್ರಾರಂಭಿಸುವ ಮೂಲಕ, ನಾವು ಗ್ರಾಹಕರ ಆಯ್ಕೆಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ಅವರಿಗೆ ಉಳಿತಾಯದ ಮೇಲೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತಿದ್ದೇವೆ. ಇದು ಅವರ 2026ರ ಆರ್ಥಿಕ ಗುರಿಗಳಿಗೆ ಒಂದು ಭದ್ರ ಬುನಾದಿಯಾಗಲಿದೆ. ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಸಮಗ್ರ ಹಣಕಾಸು ಪರಿಹಾರಗಳ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ," ಎಂದು ತಿಳಿಸಿದರು.
ಇದನ್ನೂ ಓದಿ: Amazon.in ನಲ್ಲಿ ‘ಹೋಮ್ ಶಾಪಿಂಗ್ ಸ್ಪ್ರೀ’
ಈ ಬಿಡುಗಡೆಯು ಅಮೇಜಾನ್ ಪೇ ಕೇವಲ ಪಾವತಿ ಪ್ಲಾಟ್‌ಫಾರ್ಮ್ ಆಗಿ ಉಳಿಯದೆ, ಒಂದು ಪೂರ್ಣ ಪ್ರಮಾಣದ ಆರ್ಥಿಕ ಸಹಚರನಾಗಿ ವಿಕಸನಗೊಳ್ಳುತ್ತಿರುವುದನ್ನು ಸಾಬೀತುಪಡಿಸುತ್ತದೆ. ಈಗಾಗಲೇ ಇದು UPI ಪಾವತಿಗಳು, ಸಾಲದ ಸೌಲಭ್ಯಗಳು, ಬಿಲ್ ಪಾವತಿಗಳು, ಪ್ರಯಾಣದ ಬುಕ್ಕಿಂಗ್‌ಗಳನ್ನು ನೀಡುತ್ತಿದ್ದು, ಈಗ ಹೂಡಿಕೆ ಉತ್ಪನ್ನಗಳನ್ನೂ ತನ್ನ ಪಟ್ಟಿಗೆ ಸೇರಿಸಿಕೊಂಡಿದೆ. ಪಾಲುದಾರ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಗಸಂಸ್ಥೆ ಯಾದ ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ಪ್ರತಿ ಬ್ಯಾಂಕ್‌ನಲ್ಲಿ ಪ್ರತಿ ಠೇವಣಿದಾರರಿಗೆ 5 ಲಕ್ಷ ರೂಪಾಯಿಗಳವರೆಗೆ ವಿಮೆಯನ್ನು ಹೊಂದಿರು ತ್ತವೆ. ಇದು ಗ್ರಾಹಕರಿಗೆ ಆಕರ್ಷಕ ಆದಾಯದ ಜೊತೆಗೆ ನಿಯಂತ್ರಕ ರಕ್ಷಣೆಯನ್ನೂ ಒದಗಿಸುತ್ತದೆ.
ಗ್ರಾಹಕರು ನೇರವಾಗಿ ಅಮೇಜಾನ್ ಪೇ ಮೂಲಕ ಫಿಕ್ಸೆಡ್ ಡೆಪಾಸಿಟ್ ವೈಶಿಷ್ಟ್ಯವನ್ನು ಬಳಸಿಕೊಳ್ಳ ಬಹುದು. ಇಲ್ಲಿ ವಿವಿಧ ಪಾಲುದಾರ ಸಂಸ್ಥೆಗಳ ಆಫರ್‌ಗಳನ್ನು ಹೋಲಿಸಿ ನೋಡಲು, ತಮಗೆ ಇಷ್ಟವಾದ ಬ್ಯಾಂಕ್ ಅಥವಾ NBFC ಮತ್ತು ಅವಧಿಯನ್ನು ಆಯ್ಕೆ ಮಾಡಲು ಹಾಗೂ ಅತ್ಯಂತ ಸರಳವಾದ ಡಿಜಿಟಲ್ ಇಂಟರ್‌ಫೇಸ್ ಮೂಲಕ ಠೇವಣಿ ಖಾತೆಯನ್ನು ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವಿದೆ.