ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on October 29, 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ರೇಟ್‌ ಚೆಕ್‌ ಮಾಡಿ

Gold Silver Price Today: ಗುರುವಾರ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,195 ರೂಪಾಯಿ ಇದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 14,395 ರೂಪಾಯಿ ಪಾವತಿಸಬೇಕು.

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 29, 2026 2:11 PM

ಬೆಂಗಳೂರು, ಅ. 29: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ದೇಶದ ಅತೀ ದೊಡ್ಡ ಹಬ್ಬಗಳಲ್ಲಿ ಒಂದಾದ ಇದರ ಆಚರಣೆಗೆ ಸಿದ್ಧತೆ ಈಗಾಗಲೇ ನಡೆಯುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಬಹುತೇಕರ ಕನಸು. ಆದರೆ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ. ಗುರುವಾರ ತುಸು ಸಮಾಧಾನದ ಸುದ್ದಿ ಹೊರ ಬಂದಿದ್ದು, ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ (Gold Price Today on October 29, 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,195 ರೂಪಾಯಿ ಇದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 14,395 ರೂಪಾಯಿ ಪಾವತಿಸಬೇಕು.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,560 ರೂಪಾಯಿ, 10 ಗ್ರಾಂ ಬೆಲೆ 1,31,950 ರೂಪಾಯಿ ಹಾಗೂ 100 ಗ್ರಾಂ ಬೆಲೆ 13,19,500 ರೂಪಾಯಿ ಇದೆ. 24 ಕ್ಯಾರಟ್‌ 8 ಗ್ರಾಂಗೆ 1,15,160 ರೂಪಾಯಿ, 10 ಗ್ರಾಂಗೆ 1,43,950 ರೂಪಾಯಿ ಹಾಗೂ 100 ಗ್ರಾಂಗೆ 14,39,500 ರೂಪಾಯಿ ನೀಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,195 ರೂಪಾಯಿ 14,395 ರೂಪಾಯಿ
ಮುಂಬೈ 13,195 ರೂಪಾಯಿ 14,395 ರೂಪಾಯಿ
ದೆಹಲಿ 13,210 ರೂಪಾಯಿ 14,410 ರೂಪಾಯಿ
ಕೋಲ್ಕತಾ 13,195 ರೂಪಾಯಿ 14,395 ರೂಪಾಯಿ
ಹೈದರಾಬಾದ್‌ 13,195 ರೂಪಾಯಿ 14,395 ರೂಪಾಯಿ

ನವೆಂಬರ್‌ 1ರ ದೆಹಲಿ ರಾಮ್‌ಲೀಲಾ ಮೈದಾನದ ಕಾಂಗ್ರೆಸ್ ರ‍್ಯಾಲಿಗೆ ವ್ಯಾಪಾರಿಗಳಿಂದ ತೀವ್ರ ವಿರೋಧ: ದೀಪಾವಳಿ ಖರೀದಿಗೆ ಅಡ್ಡಿಯಾಗುವ ಆತಂಕ

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 5 ರೂಪಾಯಿ ಕಡಿಮೆಯಾಗಿ 215 ರೂಪಾಯಿಗೆ ಬಂದಿದೆ. ಇನ್ನು 10 ಗ್ರಾಂಗೆ 2,150 ರೂಪಾಯಿ ಮತ್ತು 1 ಕೆಜಿಗೆ 2,15,000 ರೂಪಾಯಿ ಇದೆ.