ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Economy: ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಐದು ರಾಷ್ಟ್ರಗಳಾವುವು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದತ್ತಾಂಶದ ಪ್ರಕಾರ ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಭಾರತದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಘೋಷಿಸಿದ್ದಾರೆ. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಭಾರತಕ್ಕೆ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ವಿಶ್ವದ ಆರ್ಥಿಕತೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ ?

ನವದೆಹಲಿ: ವಿಶ್ವದಲ್ಲೇ ಭಾರತ (India Economy) ನಾಲ್ಕನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ವರ್ಷದಲ್ಲಿ ಜಪಾನ್ (Japan economy) ನ ಆರ್ಥಿಕತೆಯನ್ನು ಹಿಂದಿಕ್ಕಿರುವ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದ್ದು, 2026ರಲ್ಲಿ ಇದು ಇನ್ನಷ್ಟು ಬೆಳೆಯುವ ಭರವಸೆಯನ್ನು ಮೂಡಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಸಂಗ್ರಹಿಸಿರುವ 2025 ಏಪ್ರಿಲ್‌ವರೆಗಿನ ಅಂಕಿ ಅಂಶಗಳ ಪ್ರಕಾರ ಭಾರತದ ಆರ್ಥಿಕತೆಯು 2025ರಲ್ಲಿ ಶೇ.6.2ರಷ್ಟಾಗಿದ್ದು, ಇದು 2026ರಲ್ಲಿ ಶೇ. 6.3ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಭಾರತದ ನೀತಿ ಆಯೋಗದ (NITI Aayog) ಸಿಇಒ ಬಿವಿಆರ್ ಸುಬ್ರಹ್ಮಣ್ಯಂ (BVR Subrahmanyam) ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದತ್ತಾಂಶದ ಪ್ರಕಾರ ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಭಾರತದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಘೋಷಿಸಿದ್ದಾರೆ.

ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಭಾರತಕ್ಕೆ ಅನುಕೂಲಕರವಾಗಿದೆ. ಈಗ ನಾವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಭಾರತವು ಪ್ರಸ್ತುತ ಸುಮಾರು 4 ಟ್ರಿಲಿಯನ್ ಡಾಲರ್ ಅಂದರೆ ಸರಿಸುಮಾರು 34 ಸಾವಿರ ಕೋಟಿ ರೂ. ಮೌಲ್ಯದ ಆರ್ಥಿಕತೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಐಎಂಎಫ್ ಪ್ರಕಾರ ಭಾರತದ ಜಿಡಿಪಿ ಪ್ರಸ್ತುತ 4.187 ಟ್ರಿಲಿಯನ್ ಡಾಲರ್ ಆಗಿದ್ದು, ಜಪಾನ್‌ನ ಜಿಡಿಪಿ 4.186 ಟ್ರಿಲಿಯನ್ ಡಾಲರ್ ಆಗಿದೆ. ಜಪಾನ್ ನ ಜಿಡಿಪಿಯನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ. ಐಎಂಎಫ್ ದತ್ತಾಂಶವನ್ನು ಉಲ್ಲೇಖಿಸಿರುವ ಸುಬ್ರಹ್ಮಣ್ಯಂ ಭಾರತ ಇಂದು ಜಪಾನ್‌ಗಿಂತ ದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು

ಜಿಡಿಪಿಯನ್ನು ಪರಿಗಣಿಸಿ ಭಾರತವು ಈಗ ನಾಲ್ಕನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಮುಂದಿರುವ ರಾಷ್ಟ್ರಗಳೆಂದರೆ ಯುಎಸ್ ಎ, ಚೀನಾ, ಜರ್ಮನಿ. ಯುಎಸ್ಎ 30.51 ಟ್ರಿಲಿಯನ್ ಡಾಲರ್, ಚೀನಾ 19.23 ಟ್ರಿಲಿಯನ್ ಡಾಲರ್, ಜರ್ಮನಿ 4.74 ಟ್ರಿಲಿಯನ್ ಡಾಲರ್ . ಯುಕೆ 3.38 ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ಹೊಂದಿದ್ದು, ಭಾರತ 4.187 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಯುಕೆಗಿಂತಲೂ ಮುಂದೆ ಇದೆ. ಅಮೆರಿಕದ ಜಿಡಿಪಿ ಈಗಿನ ಭಾರತದ ಜಿಡಿಪಿಗಿಂತ 7 ಪಟ್ಟು ಹೆಚ್ಚಾಗಿದೆ.

ತಲಾ ಜಿಡಿಪಿಯಲ್ಲಿ ಭಾರತಕ್ಕೆ 144ನೇ ಸ್ಥಾನ

ಜಿಡಿಪಿಯಲ್ಲಿ ಪ್ರಗತಿ ಪಥದಲ್ಲಿರುವ ಭಾರತ ತಲಾ ಜಿಡಿಪಿಯಲ್ಲಿ ವಿಶ್ವದಲ್ಲೇ 144ನೇ ಸ್ಥಾನದಲ್ಲಿದೆ. ಇದು 2,850-2,900 ಡಾಲರ್ ನಷ್ಟಿದೆ. ಇತರ ಕೆಲವು ಸಣ್ಣ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ. ತಲಾ ಜಿಡಿಪಿಯಲ್ಲಿ ಲಕ್ಸೆಂಬರ್ಗ್ 141,080 ಡಾಲರ್ , ಸ್ವಿಟ್ಜರ್ಲೆಂಡ್ 111,716 ಡಾಲರ್ ಮತ್ತು ಐರ್ಲೆಂಡ್ 107,243 ಡಾಲರ್ ಹೊಂದಿದ್ದು, ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ.

ಇದನ್ನೂ ಓದಿ: ‌Viral Video: ಮಲಗಿದ್ದ ವ್ಯಕ್ತಿಯ ಮೈ ಮೇಲೆ ಹರಿದ ದೈತ್ಯ ಕಾಳಿಂಗ ಸರ್ಪ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿ ಚೀನಾ ತನ್ನ ಜಿಡಿಪಿ ಬೆಳವಣಿಗೆಯಲ್ಲಿ ಮುಂದಿನ 25 ವರ್ಷಗಳಲ್ಲಿ ತೀವ್ರ ಕುಸಿತವನ್ನು ಕಾಣಲಿದೆ ಎನ್ನಲಾಗುತ್ತದೆ. 2016–18ರ ಸರಾಸರಿಗೆ ಹೋಲಿಸಿದರೆ ಶೇ. 2.7 ರಷ್ಟು ಚೀನಾ ಜಿಡಿಪಿ ಈಗ ಕುಸಿತವಾಗಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಭಾರತದ ಜಿಡಿಪಿಯು ಮುಂದಿನ 25 ವರ್ಷಗಳಲ್ಲಿ ಸಣ್ಣ ಪ್ರಮಾಣ ಕುಸಿತವನ್ನು ಅನುಭವಿಸಲಿದೆ. ಇದು ಸುಮಾರು ಶೇ. 0.7ರಷ್ಟಾಗಿರಲಿದೆ. ಆದರೆ 2050ರ ಬಳಿಕ ಈ ಕುಸಿತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞರು.