UPI New Rules: ಫೋನ್‌ಪೇ, ಗೂಗಲ್ ಪೇ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಂದಿನಿಂದ ಹಲವು ನಿಯಮಗಳಲ್ಲಿ ಬದಲಾವಣೆ
ಇಂದಿನಿಂದ ಯುಪಿಐನಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಎನ್‌ಪಿಸಿಐ ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂಗೆ ಈ ನಿಯಮಗಳು ಅನ್ವಯಿಸುತ್ತವೆ. ಇನ್ಷೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ , ಷೇರು ಮಾರುಕಟ್ಟೆ, ಮತ್ತು ಇತರ ದೊಡ್ಡ ಮೊತ್ತದ ವಹಿವಾಟುಗಳಿಗೆ ಒಂದೇ ಬಾರಿಗೆ 5 ಲಕ್ಷ ರೂ.ವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ವರೆಗೆ ಪಾವತಿಸುವ ಮಿತಿಯನ್ನು ಹೆಚ್ಚಿಸಲಾಗಿದೆ.

-

ನವದೆಹಲಿ: ಭಾರತದ ಜನಪ್ರಿಯ ಡಿಜಿಟಲ್ ಪಾವತಿ (Digital Payment) ವ್ಯವಸ್ಥೆ ಯುಪಿಐನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಇನ್ಷೂರೆನ್ಸ್ (Insurance), ಕ್ರೆಡಿಟ್ ಕಾರ್ಡ್ ಬಿಲ್ (Credit Card Bill), ಷೇರು ಮಾರುಕಟ್ಟೆ (Stock Market), ಮತ್ತು ಇತರ ದೊಡ್ಡ ಮೊತ್ತದ ವಹಿವಾಟುಗಳಿಗೆ ಒಂದೇ ಬಾರಿಗೆ 5 ಲಕ್ಷ ರೂ.ವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ವರೆಗೆ ಪಾವತಿಸುವ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಸೆಪ್ಟೆಂಬರ್ 15 ಅನ್ವಯವಾಗಲಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಆ್ಯಪ್‌ಗಳ ಮೂಲಕ ದೊಡ್ಡ ಮೊತ್ತದ ಪಾವತಿ ಈಗ ಸುಲಭವಾಗಿದೆ.
ಇನ್ಷೂರೆನ್ಸ್ ಮತ್ತು ಸಾಲದ ಇಎಂಐ: ಇನ್ಷೂರೆನ್ಸ್ ಪ್ರೀಮಿಯಂ, ಸಾಲದ ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗೆ ಒಮ್ಮೆಗೆ 5 ಲಕ್ಷ ರೂ.ವರೆಗೆ ಪಾವತಿಸಬಹುದು. ದಿನಕ್ಕೆ 10 ಲಕ್ಷ ರೂ.ವರೆಗೆ (ಇನ್ಷೂರೆನ್ಸ್ ಮತ್ತು ಇಎಂಐ) ಮತ್ತು 6 ಲಕ್ಷ ರೂ.ವರೆಗೆ (ಕ್ರೆಡಿಟ್ ಕಾರ್ಡ್) ಮಿತಿಯಿದೆ. ಈ ಹಿಂದೆ ದೊಡ್ಡ ಮೊತ್ತವನ್ನು ಸಣ್ಣ ಕಂತುಗಳಲ್ಲಿ ಪಾವತಿಸಬೇಕಿತ್ತು, ಆದರೆ ಈಗ ಒಂದೇ ಬಾರಿಗೆ ಸಾಧ್ಯವಿದೆ.
ಷೇರು ಮಾರುಕಟ್ಟೆ ವಹಿವಾಟು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ.ವರೆಗೆ ಪಾವತಿಸಬಹುದು, ದಿನಕ್ಕೆ 10 ಲಕ್ಷ ರೂ.ವರೆಗೆ ಮಿತಿಯಿದೆ. ಇದು ದೊಡ್ಡ ಹೂಡಿಕೆಗೆ ಸಹಾಯಕವಾಗಲಿದೆ.
ಪ್ರಯಾಣ ಮತ್ತು ಒಡವೆ ಖರೀದಿ: ಪ್ರಯಾಣದ ಬುಕಿಂಗ್‌ಗೆ ಒಮ್ಮೆಗೆ 5 ಲಕ್ಷ ರೂ.ವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ವರೆಗೆ ಪಾವತಿಸಬಹುದು. ಒಡವೆ ಖರೀದಿಗೆ ಒಂದೇ ಬಾರಿಗೆ 5 ಲಕ್ಷ ರೂ. ಮತ್ತು ದಿನಕ್ಕೆ 6 ಲಕ್ಷ ರೂ.ವರೆಗೆ ಮಿತಿಯಿದೆ. ವರ್ತಕರಿಗೆ ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ. ಪಾವತಿಗೆ ಅವಕಾಶವಿದೆ, ಆದರೆ ದೈನಂದಿನ ಮಿತಿಯನ್ನು ನಿಗದಿಪಡಿಸಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ (P2P) ಪಾವತಿಯ ಮಿತಿ 1 ಲಕ್ಷ ರೂ. ಆಗಿಯೇ ಉಳಿದಿದೆ. ಈ ವಿಭಾಗದಲ್ಲಿ ಯಾವುದೇ ಬದಲಾವಣೆಯಿಲ್ಲ.
ಯುಪಿಐನ ಉಪಯೋಗ
ಈ ಮಿತಿ ಹೆಚ್ಚಳದಿಂದ ಯುಪಿಐ ವ್ಯವಸ್ಥೆಯ ಉಪಯುಕ್ತತೆ ಇನ್ನಷ್ಟು ಹೆಚ್ಚಲಿದೆ. ದೊಡ್ಡ ಮೊತ್ತದ ವಹಿವಾಟುಗಳು ಈಗ ಸುಲಭವಾಗಿ, ಸುರಕ್ಷಿತವಾಗಿ ನಡೆಯಬಹುದು. ಆರ್‌ಬಿಐನ ಈ ಕ್ರಮವು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲಿದೆ ಎಂದು ತಜ್ಞರು ಭಾವಿಸಿದ್ದಾರೆ. ಗ್ರಾಹಕರು ತಮ್ಮ ಯುಪಿಐ ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಿಕೊಂಡು ಹೊಸ ಮಿತಿಗಳ ಲಾಭ ಪಡೆಯಬಹುದು.