ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ನಿಷೇಧ ಜನವರಿ 23ರವರೆಗೆ ವಿಸ್ತರಣೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ವಾಯುಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ಪ್ರವೇಶವನ್ನು ಮುಚ್ಚಲಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದ್ದರೂ ನಿಷೇಧವನ್ನು ಮುಂದುವರಿಸಲಾಗಿದೆ. ಇದೀಗ ಪಾಕಿಸ್ತಾನ ವಾಯುಪ್ರದೇಶವನ್ನು ಭಾರತೀಯ ವಿಮಾನಗಳಿಗೆ ಜನವರಿ 23 ರವರೆಗೆ ನಿಷೇಧಿಸಿರುವುದಾಗಿ ತಿಳಿಸಿದೆ.

ಪಾಕಿಸ್ತಾನ ವಾಯುಪ್ರದೇಶ ಭಾರತೀಯ ವಿಮಾನಗಳಿಗೆ ನಿಷೇಧ ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ -

ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್ (Pagalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (terror attack) ಪ್ರತಿಯಾಗಿ ಭಾರತೀಯ ಸೇನೆಯು (Indian army) ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಪಾಕಿಸ್ತಾನವು ತನ್ನ ವಾಯುಪ್ರದೇಶದೊಳಗೆ (Pakistan airspace) ಭಾರತೀಯ ವಿಮಾನ ಪ್ರವೇಶವನ್ನು ನಿಷೇಧಿಸಿತ್ತು. ಈ ನಿಷೇಧವನ್ನು ಇದೀಗ ಜನವರಿ 23ರವರೆಗೆ ಅಂದರೆ ಇನ್ನೊಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಭಾರತವೂ ಕೂಡ ಪಾಕಿಸ್ತಾನ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿಷೇಧ (Airspace Ban) ಅವಧಿಯನ್ನು ವಿಸ್ತರಿಸಿದೆ.

ಕಳೆದ ಏಪ್ರಿಲ್ ತಿಂಗಳಾಂತ್ಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ್ದರಿಂದ ಪಾಕಿಸ್ತಾನವು ಎಲ್ಲಾ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಇದರ ಬೆನ್ನಲ್ಲೇ ಭಾರತವೂ ಕೂಡ ಪಾಕಿಸ್ತಾನದ ಮೇಲೆ ಈ ನಿರ್ಬಂಧ ವಿಧಿಸಿತ್ತು. ಬುಧವಾರ ಪಾಕಿಸ್ತಾನ ನಿಷೇಧವನ್ನು ವಿಸ್ತರಿಸಿದ್ದರಿಂದ ಭಾರತವು ಕೂಡ ನಿಷೇಧ ಅವಧಿಯನ್ನು ವಿಸ್ತರಿಸಿದೆ.

ಶಾಶ್ವತವಾಗಿ ದೇಶ ಬಿಟ್ಟು ಹೋಗುತ್ತಿದ್ದಾರೆ ಲಕ್ಷಾಂತರ ಭಾರತೀಯರು... ಕಾರಣ ಏನು ಗೊತ್ತೇ?

ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರು ಒಂಬತ್ತು ತಿಂಗಳಿನಿಂದ ವಿಮಾನ ಕಾರ್ಯಾಚರಣೆಗಳನ್ನು ನಿರ್ಬಂಧಿಸಲಾಗಿದೆ. ಇದು ಭಾರತದ ವಾಯುಯಾನದ ಹಣಕಾಸಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ನಿಷೇಧದ ಹಿಂದಿನ ವಿಸ್ತರಣೆ ಅವಧಿಯು ಡಿಸೆಂಬರ್ 24ರಂದು ಕೊನೆಯಾಗಬೇಕಿತ್ತು. ಆದರೆ ಇದಕ್ಕೂ ಮುನ್ನವೇ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ ಈ ನಿರ್ಬಂಧವನ್ನು ಜನವರಿ 23 ರವರೆಗೆ ಮುಂದುವರಿಸಿರುವುದಾಗಿ ತಿಳಿಸಿದೆ.

ಭಾರತೀಯ ವಿಮಾನಯಾನ ನಿರ್ವಾಹಕರು, ಮಿಲಿಟರಿ ವಿಮಾನಗಳ ಒಡೆತನದ, ನಿರ್ವಹಿಸುವ ಅಥವಾ ಗುತ್ತಿಗೆ ಪಡೆದಿರುವ ಭಾರತೀಯ ನೋಂದಾಯಿತ ವಿಮಾನಗಳಿಗೆ ಈ ನಿಷೇಧ ಅನ್ವಯವಾಗುತ್ತದೆ ಎಂದು ಪಾಕಿಸ್ತಾನ ದೃಢಪಡಿಸಿದೆ.

ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ ಭಾರತೀಯ ವಿಮಾನಯಾನ ನಿರ್ವಾಹಕರು ಅರೇಬಿಯನ್ ಸಮುದ್ರ ಮತ್ತು ಮಧ್ಯ ಏಷ್ಯಾದ ಮೇಲೆ ದೀರ್ಘ ಪ್ರಯಾಣ ಮಾರ್ಗಗಳನ್ನು ಬಳಸುತ್ತಿರುವುದನ್ನು ಮುಂದುವರಿಸಬೇಕಾಗುತ್ತದೆ. ಇದು ಹೆಚ್ಚಿನ ಇಂಧನ ದಹನ, ದೀರ್ಘ ಹಾರಾಟದ ಸಮಯ, ವಿಶೇಷವಾಗಿ ಯುರೋಪ್, ಪಶ್ಚಿಮ ಏಷ್ಯಾ ವಲಯಗಳಲ್ಲಿ ಹೆಚ್ಚಿನ ಕಾರ್ಯಾಚರಣೆಯ ವೆಚ್ಚಗಳಿಗೆ ಕಾರಣವಾಗುತ್ತದೆ.

ಈ ನಿರ್ಬಂಧ ಭಾರತೀಯ ವಿಮಾನಯಾನ ನಿರ್ವಾಹಕರು ನಿರ್ವಹಿಸುವ ಸುಮಾರು 800 ವಿಮಾನಗಳ ಪ್ರಯಾಣದ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಮುಖ್ಯವಾಗಿ ದೆಹಲಿ, ಅಮೃತಸರ ಮತ್ತು ಜೈಪುರದಂತಹ ಉತ್ತರ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಿಂದ ಪಶ್ಚಿಮ ಏಷ್ಯಾ, ಯುರೋಪ್, ಯುನೈಟೆಡ್ ಕಿಂಗ್‌ಡಮ್, ಕಾಕಸಸ್ ಮತ್ತು ಪೂರ್ವ ಉತ್ತರ ಅಮೆರಿಕ ಸೇರಿದಂತೆ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಸೇರಿವೆ.

World’s Richest Families: ವಿಶ್ವದ ಶ್ರೀಮಂತ ಕುಟುಂಬಗಳ ಪೈಕಿ ಒಂದೇ ಒಂದು ಭಾರತೀಯ ಕುಟುಂಬಕ್ಕೆ ಸ್ಥಾನ!

ಈಗಾಗಲೇ ಪಾಕಿಸ್ತಾನಿ ವಾಯುಪ್ರದೇಶ ಮುಚ್ಚುವಿಕೆಯಿಂದ ವಾರ್ಷಿಕವಾಗಿ 4,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಅಂದಾಜಿಸಿದೆ. 2019ರಲ್ಲಿ ನಾಲ್ಕು ತಿಂಗಳ ಮುಚ್ಚಿದ್ದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳು ಸುಮಾರು 700 ಕೋಟಿ ರೂ. ನಷ್ಟ ಅನುಭವಿಸಿತ್ತು.