ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Richest District: ದೇಶದ ಶ್ರೀಮಂತ ಜಿಲ್ಲೆಗಳು ಯಾವುವು? ಕರ್ನಾಟಕ ಈ ಎರಡು ಜಿಲ್ಲೆಗಳಿಗೂ ಸಿಕ್ಕಿದೆ ಸ್ಥಾನ!

Bangalore and Dakshina Kannada are Richest District: ಪ್ರತಿವರ್ಷವು ಶ್ರೀಮಂತ ಜಿಲ್ಲೆಗಳ ಪಟ್ಟಿಯನ್ನು ಬಹಿರಂಗಪಡಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ‘ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು’ ಬಿಡುಗಡೆ ಮಾಡಿದೆ. ಶ್ರೀಮಂತ ನಗರ ಎಂಬ ಪಟ್ಟವನ್ನು ನಗರಗಳಿಗೆ ನೀಡಲು ಅನೇಕ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಭಾರತದ ಅತ್ಯಂತ ಶ್ರೀಮಂತ ನಗರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು, ಎರಡನೇ ಸ್ಥಾನವನ್ನು ಹರಿಯಾಣದ ಗುರುಗ್ರಾಮ, ಹಾಗೂ ಮೂರನೇ ಸ್ಥಾನವನ್ನು ಕರ್ನಾಟಕದ ಬೆಂಗಳೂರು ನಗರ ಪಡೆದಿದೆ. ಜಿಡಿಪಿ ತಲಾ ಆದಾಯವನ್ನು ಆಧರಿಸಿ, ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿರುವ ಮೊದಲ ಮೂರು ಟಾಪ್ ಜಿಲ್ಲೆಗಳು, ಭಾರತದ ವ್ಯಾಪಾರ ಮತ್ತು ಐಟಿ ಹಬ್ ಗಳಾಗಿವೆ. ಪಟ್ಟಿಯಲ್ಲಿರುವ ಕೆಲವು ನಗರಗಳು, ಔಷಧೀಯ, ಆಹಾರ ಸಂಸ್ಕರಣೆಯ ಆಧಾರದ ಮೇಲೆ ಸ್ಥಾನವನ್ನು ಪಡೆದಿದೆ.

ಭಾರತದ ಶ್ರೀಮಂತ ಜಿಲ್ಲೆಗಳ ಯಾವುವು ಗೊತ್ತಾ..?

ಬೆಂಗಳೂರು ಮತ್ತು ದಕ್ಷಿಣ ಕನ್ನಡ ದೇಶದ ಅತಿ ಶ್ರೀಮಂತ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆ(ಸಂಗ್ರಹ ಚಿತ್ರ) -

Profile Sushmitha Jain Nov 5, 2025 7:00 AM

ಬೆಂಗಳೂರು: ಭಾರತ ಆರ್ಥಿಕವಾಗಿ(Indian Economy) ಸದೃಢತೆಯನ್ನು ಹೊಂದುತ್ತಾ ಇದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಬಾವ ಬೀರುತ್ತಿದ್ದು, ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ ಎಂದು ಗುರುತಿಸಿಕೊಂಡಿದೆ. ಇದೀಗ ಭಾರತದ ಅತೀ ಶ್ರೀಮಂತ ಜಿಲ್ಲೆಗಳ(Richest District) ಪಟ್ಟಿ ಬಿಡುಗಡೆಯಾಗಿದ್ದು, 2024 - 25ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಭಾರತದ ವಿವಿಧ ರಾಜ್ಯಗಳ ಜಿಲ್ಲೆಗಳ ಪೈಕಿ, ಟಾಪ್ ಟೆನ್ ಶ್ರೀಮಂತ ಜಿಲ್ಲೆಗಳ ಮಾಹಿತಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕರ್ನಾಟಕದ(Karnataka) ಎರಡು ಜಿಲ್ಲೆಗಳು ಈ ಸಮೀಕ್ಷೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಅದರ ಪ್ರಕಾರ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಭಾರತದ ಅತ್ಯಂತ ಶ್ರೀಮಂತ ನಗರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು, ಎರಡನೇ ಸ್ಥಾನವನ್ನು ಹರಿಯಾಣದ ಗುರುಗ್ರಾಮ, ಹಾಗೂ ಮೂರನೇ ಸ್ಥಾನವನ್ನು ಕರ್ನಾಟಕದ ಬೆಂಗಳೂರು ನಗರ ಪಡೆದಿದೆ. ದಕ್ಷಿಣ ಕನ್ನಡ 8ನೇ ಸ್ಥಾನವನ್ನು ಪಡೆದಿದ್ದು, ಭಾರತದ ಶ್ರೀಮಂತ ನಗರವೆನಿಸಿಕೊಂಡಿದೆ.

ಜಿಡಿಪಿ ತಲಾ ಆದಾಯವನ್ನು ಆಧರಿಸಿ, ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿರುವ ಮೊದಲ ಮೂರು ಟಾಪ್ ಜಿಲ್ಲೆಗಳು, ಭಾರತದ ವ್ಯಾಪಾರ ಮತ್ತು ಐಟಿ ಹಬ್ ಗಳಾಗಿವೆ. ಪಟ್ಟಿಯಲ್ಲಿರುವ ಕೆಲವು ನಗರಗಳು, ಔಷಧೀಯ, ಆಹಾರ ಸಂಸ್ಕರಣೆಯ ಆಧಾರದ ಮೇಲೆ ಸ್ಥಾನವನ್ನು ಪಡೆದಿದೆ.

ರಂಗಾರೆಡ್ಡಿ, ತೆಲಂಗಾಣ:

11.46 ಲಕ್ಷ ಜಿಡಿಪಿಯನ್ನು ಸಾಧಿಸುವ ಮೂಲಕ ಭಾರತದ ಅತೀ ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಅಗ್ರಸ್ಥಾನದಲ್ಲಿದೆ. ಐಟಿ ಕ್ಷೇತ್ರ, ಪ್ರಸಿದ್ಧ ಟೆಕ್ ಪಾರ್ಕ್‌ಗಳು, ಜೈವಿಕ ತಂತ್ರಜ್ಞಾನ ಮತ್ತು ಔಷಧ ಕಂಪನಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ರಂಗಾರೆಡ್ಡಿ ಜಿಲ್ಲೆ ಮೂಂಚೂಣಿಯಲ್ಲಿದ್ದು, ಇಲ್ಲಿನ ಜಿಡಿಪಿ 11.46 ಲಕ್ಷದಷ್ಟಿದೆ.

ಈ ಸುದ್ದಿಯನ್ನು ಓದಿ: Viral Video: 20 ರೂಪಾಯಿಗಳ ಚಿಲ್ಲರೆ ಮೂಟೆ ಕೊಂಡೊಯ್ದು ಪತ್ನಿಗೆ ಚಿನ್ನದ ಸಹ ಕೊಡಿಸಿದ ಆದರ್ಶ ಪತಿ: ವಿಡಿಯೊ ವೈರಲ್

ಗುರುಗ್ರಾಮ, ಹರಿಯಾಣ

ಭಾರತದ ಟಾಪ್‌ 10 ಶ್ರೀಮಂತ ಜಿಲ್ಲೆಗಳಲ್ಲಿ ಹರಿಯಾಣದ ಗುರುಗ್ರಾಮವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ನಗರದಲ್ಲಿ ಐಷಾರಾಮಿ ಮಾಲ್‌ಗಳು, ಸ್ಟಾರ್ ಹೊಟೇಲ್ ಗಳು, ಸುಂದರವಾದ ಗೋಪುರಗಳ ಹೆಚ್ಚಾಗಿದ್ದು, ವಾಣಿಜ್ಯದ ಜೊತೆಗೆ ಪ್ರವಾಸಿ ತಾಣವಾಗಿಯೂ ಜನರನ್ನು ತನ್ನತ್ತ ಸೆಳೆಯುತ್ತದೆ.

ಬೆಂಗಳೂರು ನಗರ

ಕರ್ನಾಟಕದ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಎಂದೇ ಬಿರುದು ಪಡೆದುಕೊಂಡಿರುವ ಬೆಂಗಳೂರು ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಆಧುನಿಕ ಜೀವನ ಶೈಲಿ - ಉದ್ಯೋಗಾವಕಾಶ, ತಂತ್ರಜ್ಞಾನ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕಾರಣ ಅತೀ ಹೆಚ್ಚಿನ ಜನರು ಇಲ್ಲಿ ನೆಲೆಸಿದ್ದಾರೆ. ಇಲ್ಲಿನ ಜಿಡಿಪಿ ಪ್ರಮಾಣ 8.93 ಲಕ್ಷ ಇದ್ದು, ಬೆಂಗಳೂರು ನಗರ ಭಾರತದ ಶ್ರೀಮಂತ ನಗರಗಳಲ್ಲಿ ಒಂದಾಗಿದೆ.

ಗೌತಮ್ ಬುದ್ಧ ನಗರ (ನೋಯ್ಡಾ)

ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರ ಅಥವಾ ನೋಯ್ಡಾ 8.48 ಲಕ್ಷ ಜಿಡಿಪಿಯನ್ನು ಹೊಂದಿದ್ದು, ಪ್ರವಾಸಿ ಕ್ಷೇತ್ರದಲ್ಲಿಯೂ ಮೈಲುಗೈ ಸಾಧಿಸಿದೆ. ಮನೋಹರಕ ಹಾಗೂ ಸುಂದರ ಅನೇಕ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಈ ಜಿಲ್ಲೆ ಆರ್ಥಿಕವಾಗಿಯೂ ಸುಸ್ಥಿರವನ್ನು ಹೊಂದಿದೆ.

ಸೋಲನ, ಹಿಮಾಚಲ್ ಪ್ರದೇಶ:

ಇಲ್ಲಿನ ಪ್ರತಿ ವ್ಯಕ್ತಿಯ ಪ್ರತಿ ವ್ಯಕ್ತಿಯ ಆದಾಯ ಹಾಗೂ ಜಿಡಿಪಿ ಸರಾಸರಿ 8.10 ಲಕ್ಷವಿದೆ. ಈ ಜಿಲ್ಲೆಯೂ ಪ್ರಕೃತಿಯ ಸೌಂದರ್ಯ, ಅನುಕೂಲಕರ ಹವಾಮಾನ ಮತ್ತು ಶಾಂತಿಯುತ ವಾತಾವರಣದಿಂದ ಕೂಡಿದ್ದು, ಜನರನ್ನು ಆಕರ್ಷಿಸುತ್ತದೆ. ಕರೋಲ್ ತಿಬ್ಬಾ ಮತ್ತು ಶೂಳಿನಿ ಮಾತಾ ದೇವಸ್ಥಾನಗಳು ಇಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.

ಉತ್ತರ ಮತ್ತು ದಕ್ಷಿಣ ಗೋವಾ:

ಯುವಕರ ಅತ್ಯಂತ ಪ್ರಿಯವಾದ ಪ್ರವಾಸಿ ತಾಣವಾಗಿರುವ ಗೋವಾ 7.63 ಲಕ್ಷ ರೂ. ತಲಾದಾಯ ಹೊಂದಿದ್ದು, ಭಾರತ ಆರನೇ ಶ್ರೀಮಂತ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಮನೋಹರ ಕಡಲ ತೀರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಎರಡು ಜಿಲ್ಲೆಗಳು ಮೋಜು-ಮಸ್ತಿಗೆ ಹೆಸರುವಾಸಿಯಾಗಿದ್ದು, ಪ್ರವಾಸಿಗರನ್ನು ತನ್ನ ಸೆಳೆಯುವತ್ತ ಯಶಸ್ವಿಯಾಗಿದೆ. ಉತ್ತರ ಗೋವಾ ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದರೆ, ದಕ್ಷಿಣ ಗೋವಾ ಶಾಂತಿ ಮತ್ತು ವಿಶ್ರಾಂತಿಗೆ ಖ್ಯಾತಿ ಪಡೆದಿದೆ.

ಈ ಸುದ್ದಿಯನ್ನು ಓದಿ: Viral Video: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

ಸಿಕ್ಕಿಂ

ಸಿಕ್ಕಿಂ ಪ್ರತಿಯೊಬ್ಬ ಪ್ರವಾಸಿಗನ ಕನಸುಗಳ ತಾಣವಾಗಿದ್ದು, ಇಲ್ಲಿನ ಜಿಡಿಪಿ 7.46 ಲಕ್ಷ ರಷ್ಟಿದೆ. ಹಿಮಾಲಯ ಪರ್ವತಗಳಲ್ಲಿ ನೆಲೆಗೊಂಡಿರುವ ಈ ರಾಜ್ಯವು ಬಿಳಿ ಹಿಮದ ಶಿಖರಗಳು, ಧಾರ್ಮಿಕ ಕ್ಷೇತ್ರಗಳು ಮತ್ತು ಕಣ್ಮನ ಸೆಳೆಯುವ ಹೋಮ್‌ಸ್ಟೇಗನ್ನು ಹೊಂದಿದೆ. ಅಲ್ಲದೆ, ತ್ಸೊಮ್ಗೋ ಸರೋವರ, ನಾಥುಲಾ ಪಾಸ್, ಮಂಗನ್ ಹೂವು ತೋಟಗಳು ಮತ್ತು ಶಾಪಿಂಗ್ ಸ್ಟ್ರೀಟ್ ಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತವೆ.

ದಕ್ಷಿಣ ಕನ್ನಡ (ಮಂಗಳೂರು)

ಕರಾವಳಿ ಪ್ರದೇಶವಾಗಿರುವ ಮಂಗಳೂರು ಸುಂದರ ಕಡಲತೀರಗಳಿಗೆ ಹೆಸರುವಾಸಿಯಾಗಿದ್ದು, ಪ್ರಾಚೀನ ದೇವಾಲಯಗಳು ಮತ್ತು ಇಲ್ಲಿನ ಆಚಾರ-ವಿಚಾರಗಳು ವಿಭಿನ್ನವಾಗಿದೆ. ಅಲ್ಲದೆ, ಪೋರ್ಚುಗೀಸ್, ತುಳು ಮತ್ತು ಕೊಂಕಣಿ ಸಂಸ್ಕೃತಿಗಳ ಮಿಶ್ರಣವು ವಿಶಿಷ್ಟವಾದ ಪಾಕಶೈಲಿಯನ್ನು ನೀಡಲಿದ್ದು, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಪಣಂಬೂರು ಬೀಚ್ ಇಲ್ಲಿನ ಪ್ರಮುಖ ಆಕರ್ಷಣೆ ತಾಣಗಳಾಗಿವೆ.

ಮುಂಬೈ, ಮಹಾರಾಷ್ಟ್ರ

ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬಯಿ ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, 6.57 ಲಕ್ಷ ತಲಾ ಆದಾಯವನ್ನು ಹೊಂದಿದೆ. ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿದ್ದು, ಬಾಲಿವುಡ್ ಚಿತ್ರರಂಗದ ನೆಲೆಯಾಗಿದೆ. ಈ ನಗರವು ಪರಂಪರೆ ಮತ್ತು ಆಧುನಿಕತೆಯ ಅದ್ಭುತ ಮಿಶ್ರಣದಿಂದ ಪ್ರಸಿದ್ಧವಾಗಿದ್ದು, ಚಾತ್ರಪತಿ ಶಿವಾಜಿ ಟರ್ಮಿನಸ್‌ನ ಗೋಥಿಕ್ ಶಿಖರಗಳು, ಮರೀನ್ ಡ್ರೈವ್‌ನ ಸುಂದರ ಸೂರ್ಯಾಸ್ತಗಳು ಪ್ರವಾಸಿಗರಿಗೆ ಮನೋಹರ ಅನುಭವ ನೀಡುತ್ತವೆ. ಮುಂಬೈ ತನ್ನ ಜೀವಂತಿಕೆ, ವೈವಿಧ್ಯಮಯ ಸಂಸ್ಕೃತಿಸ್ ಸೇರಿದಂತೆ ಇತರೆ ಆಕರ್ಷಣೆಗಳನ್ನು ಹೊಂದಿದೆ.

ಅಹಮದಾಬಾದ್, ಗುಜರಾತ್

ಭಾರತದ ಮೊದಲ ಯುನೆಸ್ಕೋ ವಿಶ್ವ ಪರಂಪರೆಯ ನಗರ ಎಂಬ ಬಿರುದನ್ನು ತನ್ನದಾಗಿಸಿಕೊಂಡಿರುವ ಅಹಮದಾಬಾದ್ 6.54 ಲಕ್ಷ ತಲಾ ಆದಾಯದೊಂದಿಗೆ ಹತ್ತನೇ ಸ್ಥಾನದಲ್ಲಿದ್ದು, ತನ್ನ ಸಮೃದ್ಧ ಪರಂಪರೆ ಮತ್ತು ಆಧುನಿಕತೆಯ ಜೀವನ ಶೈಲಿಯನ್ನು ಹೊಂದಿದೆ. ಮೊಘಲ್ ಶೈಲಿ ಮಸೀದಿಗಳು, ಆಧುನಿಕ ಕಲಾ ಗ್ಯಾಲರಿಗಳು, ಮತ್ತು ಸಾಬರಮತಿ ನದಿ ತೀರದ ಸುಂದರತೆ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ.