ಎಟಿಎಂನಲ್ಲಿ ಹಣ ಬಾರದೇ ಇರುವುದಕ್ಕೆ ಸಿಕ್ಕಿತು 3.28 ಲಕ್ಷ ರೂ. ಪರಿಹಾರ
ಎಟಿಎಂನಿಂದ ಹಣ ಪಡೆಯಲು ಹೋದವನಿಗೆ ಹಣ ಸಿಗಲಿಲ್ಲ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಬಗ್ಗೆ ದೂರು ಸಲ್ಲಿಸಿದ ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಒಂಬತ್ತು ವರ್ಷಗಳ ಬಳಿಕ ಗ್ರಾಹಕನಿಗೆ 3.28 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕಿಗೆ ಆದೇಶಿಸಿದೆ.
ಸಂಗ್ರಹ ಚಿತ್ರ -
ಸೂರತ್: ಎಟಿಎಂನಲ್ಲಿ (ATM) ಹಣ ಸಿಗಲಿಲ್ಲ ಎಂದು ನ್ಯಾಯ ಕೇಳಲು ಹೋದ ಸೂರತ್ ವ್ಯಕ್ತಿಗೆ (Surat man) 3.28 ಲಕ್ಷ ರೂ. ಅನ್ನು ಒಂಬತ್ತು ವರ್ಷಗಳ ಬಳಿಕ ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು (surat district consumer disputes redressal commission) ಕೊಡಿಸಿದೆ. ಈ ಘಟನೆ 2017ರಲ್ಲಿ ನಡೆದಿತ್ತು. ಜಿತೇಶ್ ಕುಮಾರ್ ಗಾಂಧಿ ಎಂಬವರು ಬ್ಯಾಂಕ್ ಆಫ್ ಬರೋಡಾದ (Bank of baroda) ತಮ್ಮ ಖಾತೆಯಿಂದ ನಗದು ಪಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of india) ಎಟಿಎಂಗೆ ಹೋಗಿದ್ದರು. ಆದರೆ ಅಲ್ಲಿ ನಗದು ಬಂದಿರಲಿಲ್ಲ. ಆದರೆ ಖಾತೆಯಿಂದ ಹಣ ಕಡಿತವಾಗಿತ್ತು.
2017ರ ಫೆಬ್ರವರಿ 18ರಂದು ಜಿತೇಶ್ ಕುಮಾರ್ ಗಾಂಧಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ 10,000 ರೂ. ನಗದು ಪಡೆಯಲು ಪ್ರಯತ್ನಿಸಿದ್ದು, ಈ ವೇಳೆ ಅವರಿಗೆ ನಗದು ಅಥವಾ ವಹಿವಾಟು ರಶೀದಿ ಸಿಗಲಿಲ್ಲ. ಆದರೂ ಅವರ ಖಾತೆಯಿಂದ ಹಣ ಕಡಿತಗೊಂಡಿತ್ತು.
ತೈಲ ಬಿಕ್ಕಟ್ಟಿನ ನಡುವೆ ಮತ್ತೊಂದು ಬರೆ; ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಿಸಿದ ಝೊಮೆಟೊ
ಈ ಕುರಿತ ಅವರು ದೂರು ಸಲ್ಲಿಸಿದ್ದು, ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಎಟಿಎಂ ವಹಿವಾಟಿನಿಂದ ಯಾವುದೇ ನಗದು ಬರದಿದ್ದರೂ ವ್ಯಕ್ತಿಯೊಬ್ಬರ ಖಾತೆಯಿಂದ 10,000 ರೂ. ನಗದು ಕಡಿತವಾಗಿರುವುದಕ್ಕೆ ಒಂಬತ್ತು ವರ್ಷಗಳ ಬಳಿಕ ಅವರ ಖಾತೆ ಇರುವ ಬ್ಯಾಂಕ್ ಆಫ್ ಬರೋಡಾ 3.28 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ಸೂಚಿಸಿದೆ.
ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಫೆಬ್ರವರಿ 26ರಂದು ಈ ಕುರಿತು ತೀರ್ಪು ನೀಡಿದ್ದು, ವಾರ್ಷಿಕ ಶೇ. 9ರ ಬಡ್ಡಿಯೊಂದಿಗೆ 10,000 ರೂ. ಮರುಪಾವತಿಸುವಂತೆ ನಿರ್ದೇಶಿಸಿದ್ದಲ್ಲದೆ, ವಿಳಂಬಕ್ಕೆ ಪರಿಹಾರವಾಗಿ 3.28 ಲಕ್ಷ ರೂ. ಪಾವತಿಸುವಂತೆ ಆದೇಶಿಸಿದೆ. ಹೆಚ್ಚುವರಿಯಾಗಿ ಮಾನಸಿಕ ಯಾತನೆಗೆ 3,000 ರೂ. ಮತ್ತು ಮೊಕದ್ದಮೆ ವೆಚ್ಚಕ್ಕಾಗಿ 2,000 ರೂ. ಪಾವತಿಸಲು ಕೂಡ ಬ್ಯಾಂಕ್‌ಗೆ ಸೂಚಿಸಲಾಗಿದೆ.
ಏನಾಗಿತ್ತು?
2017ರ ಫೆಬ್ರವರಿ 18ರಂದು ಜಿತೇಶ್ ಕುಮಾರ್ ಗಾಂಧಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ 10,000 ರೂ.ಗಳನ್ನು ನಗದು ಪಡೆಯಲು ಪ್ರಯತ್ನಿಸಿದ್ದರು. ಆದರೆ ಅವರಿಗೆ ನಗದು ಅಥವಾ ವಹಿವಾಟು ರಶೀದಿ ದೊರೆತಿರಲಿಲ್ಲ. ಆದರೂ ಅವರ ಖಾತೆಯಿಂದ ಹಣ ಕಡಿತಗೊಂಡಿತು.
ವಹಿವಾಟಿನ ಬಳಿಕ ಗಾಂಧಿ ಅವರು ಹಲವು ಬಾರಿ ಎರಡೂ ಬ್ಯಾಂಕನ್ನು ಸಂಪರ್ಕಿಸಿದರು. ಯಾವುದೇ ಪ್ರಯೋಜನವಾಗದೇ ಇದ್ದುದರಿಂದ ಬ್ಯಾಂಕ್ ಆಫ್ ಬರೋಡಾದ ದುಂಭಾಲ್ ಶಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ನಾ ಶಾಖೆ ವಿರುದ್ಧ ದೂರು ದಾಖಲಿಸಿದ್ದರು.
ಇರಾನ್ ಯುದ್ಧ ಎಫೆಕ್ಟ್: 11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ
ಈ ಕುರಿತ ವಿಚಾರಣೆ ವೇಳೆ ಎಟಿಎಂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರಿದ್ದು ಮತ್ತು ವಹಿವಾಟು ಯಶಸ್ವಿಯಾಗಿದೆ ಎಂದು ದಾಖಲಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ವಾದಿಸಿದರೂ, ಗಾಂಧಿ ಅವರು ನಗದು ಪಡೆದಿದ್ದಾರೆ ಎಂಬುದಕ್ಕೆ ಬ್ಯಾಂಕ್ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ.
ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ ವಿವಾದಿತ ಎಟಿಎಂ ವಹಿವಾಟಿನ ಮೊತ್ತವನ್ನು ನಿಗದಿತ ಸಮಯದೊಳಗೆ ಮರುಪಾವತಿಸಬೇಕಿತ್ತು. ಅದನ್ನು ಮಾಡದೇ ಇರುವುದಕ್ಕೆ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.