ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಬ್ಲಿಂಕ್‌ಇಟ್‌ ಎಡವಟ್ಟು": ಭೋಪಾಲ್‌ನ ವ್ಯಕ್ತಿಗೆ ಆರ್ಡರ್‌ ಜತೆ ಸಿಕ್ತು ಅಪರಿಚಿತ ವ್ಯಕ್ತಿಯ ವೈಯಕ್ತಿಕ ದಾಖಲೆ

Viral Video: ಇತ್ತೀಚೆಗಷ್ಟೇ ಕ್ವಿಕ್ ಕಾಮರ್ಸ್ ಆ್ಯಪ್ ಬ್ಲಿಂಕ್‌ಇಟ್‌ ಡಾಕ್ಯುಮೆಂಟ್ ಪ್ರಿಂಟಿಂಗ್ ಸೇವೆಯನ್ನು ಆರಂಭಿಸಿದೆ. ಆದರೆ ಇದು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಮೂಡುವಂತಾಗಿದೆ. ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ಇಲ್ಲಿ ನೀಡುವುದು ಸುರಕ್ಷತವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಮಧ್ಯ ಪ್ರದೇಶದ ಭೋಪಾಲ್‌ನ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಪ್ರಿಂಟ್ ಪ್ಯಾಕೆಟ್‌ನಲ್ಲಿ ಬೇರೊಬ್ಬರ ದಾಖಲೆಗಳು ಸಿಕ್ಕಿದೆ.

ಬ್ಲಿಂಕ್‌ಇಟ್‌ ಡೆಲಿವರಿಯಲ್ಲಿ ಸಿಕ್ಕಿದ್ದು ಅಪರಿಚಿತ ವ್ಯಕ್ತಿಯ ದಾಖಲೆ

ಬ್ಲಿಂಕ್‌ಇಟ್ ಡೆಲಿವರಿ ಪ್ಯಾಕ್‌ನಲ್ಲಿ ಅಪರಿಚಿತ ವ್ಯಕ್ತಿಯ ದಾಖಲೆ ಸಿಕ್ಕಿದ್ದಾಗಿ ತಿಳಿಸಿದ ವ್ಯಕ್ತಿ -

Profile
Pushpa Kumari Jul 18, 2026 10:36 PM

ಭೋಪಾಲ್‌, ಜು. 18: ಇಂದು ಏನೇ ಅಗತ್ಯ ವಸ್ತು ಬೇಕೆಂದಾಗ ಅಂಗಡಿಗಳಿಗೆ ಅಲೆಯಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅಗತ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ ಹೀಗೆ ಹಲವು ಅ್ಯಪ್‌ಗಳು ಶೀಘ್ರ ಡೆಲಿವರಿ ಮಾಡುವ ಮೂಲಕ ಜನಪ್ರಿಯವಾಗಿವೆ. ಇತ್ತೀಚೆಗಷ್ಟೇ ಕ್ವಿಕ್ ಕಾಮರ್ಸ್ ಆ್ಯಪ್ ಬ್ಲಿಂಕ್‌ಇಟ್‌ ಡಾಕ್ಯುಮೆಂಟ್ ಪ್ರಿಂಟಿಂಗ್ ಸೇವೆಯನ್ನು ಕೂಡ ಗ್ರಾಹಕರಿಗೆ ನೀಡುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಮೂಡುವಂತಾಗಿದೆ. ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ಇಲ್ಲಿ ನೀಡುವುದು ಸುರಕ್ಷತೆವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಮಧ್ಯ ಪ್ರದೇಶದ ಭೋಪಾಲ್‌ನ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಪ್ರಿಂಟ್ ಪ್ಯಾಕೆಟ್‌ನಲ್ಲಿ ಬೇರೊಬ್ಬರ ದಾಖಲೆಗಳು ಬಂದಿದ್ದು, ವಿಡಿಯೊ ಭಾರಿ ವೈರಲ್ (Viral News) ಆಗಿದೆ.

ಬ್ಲಿಂಕ್‌ಇಟ್‌ ಗ್ರಾಹಕರೊಬ್ಬರು ತಮ್ಮ ಪ್ರಿಂಟ್ ಆರ್ಡರ್‌ನಲ್ಲಿ ಬೇರೊಬ್ಬರ ಗೌಪ್ಯ ದಾಖಲೆಗಳಿವೆ ಎಂದು ಹೇಳಿಕೊಂಡಿರುವ ವಿಡಿಯೊ ವೈರಲ್ ಆಗಿದೆ. ಆನ್‌ಲೈನ್ ವ್ಯವಹಾರವು ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಭೋಪಾಲ್‌ನ ವ್ಯಕ್ತಿಯೊಬ್ಬರು ಬ್ಲಿಂಕ್‌ಇಟ್‌ ಮೂಲಕ ಪಾಸ್‌ಪೋರ್ಟ್ ಸೈಜ್ ಫೋಟೊಗಳನ್ನು ಪ್ರಿಂಟ್ ಮಾಡಲು ಆರ್ಡರ್ ಮಾಡಿದ್ದರು. ಆದರೆ ಇದರ ಜತೆ ಇರುವ ದಾಖಲೆ ಕಂಡು ಅವರೇ ದಂಗಾಗಿ ಹೋಗಿದ್ದಾರೆ.

ವಿಡಿಯೊ ನೋಡಿ:

ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಅನ್ಶ್_ಬಾಸಿಯಾ ಎಂಬವರು ಪೋಸ್ಟ್ ಮಾಡಿದ್ದಾರೆ. ಅವರು ಬ್ಲಿಂಕ್‌ಇಟ್‌ ಮೂಲಕ ಪಾಸ್‌ಪೋರ್ಟ್ ಗಾತ್ರದ ಫೋಟೋ ಆರ್ಡರ್ ಮಾಡಿರುವುದಾಗಿ ಹೇಳಿದ್ದಾರೆ. ಆದಾಗ್ಯೂ ಡೆಲಿವರಿ ಬಂದಾಗ, ಪ್ಯಾಕೇಜ್ ಒಳಗೆ ಸಂಬಂಧವಿಲ್ಲದ ದಾಖಲೆಗಳ ಸೆಟ್ ಕಂಡುಬಂದಿದೆ. ಇದರಲ್ಲಿ ಫೋಟೊ ಜತೆಗೆ, ಭೋಪಾಲ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಟ್ಟ ಮತ್ತೊಬ್ಬ ವ್ಯಕ್ತಿಯ ಅಧಿಕೃತ ಆರ್‌ಟಿಜಿಎಸ್ ರಶೀದಿ ಪತ್ರಗಳೂ ಇದ್ದವು.

1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ವಿಡಿಯೊ ಮಾಡಿದ ವ್ಯಕ್ತಿ "ನನಗೆ ಇದನ್ನು ನಂಬಲು ಆಗುತ್ತಿಲ್ಲ. ನಾನು ಇನ್ನು ಮುಂದೆ ಬ್ಲಿಂಕ್‌ಇಟ್‌ ಅನ್ನು ನಂಬುವುದಿಲ್ಲ" ಎಂದು ಹೇಳಿದರು. ಬಳಕೆದಾರರ ಗೌಪ್ಯತೆಯ ಬಗ್ಗೆ ಕಂಪನಿಯ ಹಕ್ಕುಗಳನ್ನು ಪ್ರಶ್ನಿಸಿ​ದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಹಲವು ಬಳಕೆದಾರರು ತಮಗೂ ಇಂತಹುದೇ ಅನುಭವಗಳಾಗಿವೆ ಎಂದು ಕಮೆಂಟ್ ಮಾಡಿದ್ದಾರೆ.

ಒಬ್ಬರು, ʼʼಒಂದು ವರ್ಷದ ಹಿಂದೆ, ನನ್ನ ಆಧಾರ್ ಕಾರ್ಡ್ ಅನ್ನು ಬ್ಲಿಂಕ್‌ಇಟ್ ಮೂಲಕ ಮುದ್ರಿಸಿದೆ. ಆದರೆ ಬೇರೆಯವರಿಗೆ ಪ್ರತಿ ತಲುಪಿದ್ದು ಅವರು ನನಗೆ ಕರೆ ಮಾಡಿದರುʼʼ ಎಂದು ಒಬ್ಬರು ಅನುಭವ ಹಂಚಿಕೊಂಡಿದ್ದಾರೆ. ಮತ್ತೊಬ್ಬರು, ʼʼಬ್ಲಿಂಕ್‌ಇಟ್‌ 2026ರ NEET ಪ್ರಶ್ನೆ ಪತ್ರಿಕೆಯನ್ನು ಆಕಸ್ಮಿಕವಾಗಿ ತಲುಪಿಸುತ್ತದೆ" ಎಂದು ತಮಾಷೆ ಮಾಡಿದ್ದಾರೆ.