ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರುಪಾಯಿ ಮೌಲ್ಯದೊಂದಿಗೆ ಸೆನ್ಸೆಕ್ಸ್‌ ಕೂಡ ಕುಸಿತ; ಹೂಡಿಕೆದಾರರಿಗೆ ಭಾರಿ ನಷ್ಟ

ಮುಂಬೈ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸಿದರು. ಸೆನ್ಸೆಕ್ಸ್‌ ಮಂಗಳವಾರ 500 ಅಂಕ ಪತನವಾಗಿದ್ದು, 84,679ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದರೆ ನಿಫ್ಟಿ ಸೂಚ್ಯಂಕವು 167 ಅಂಕ ಇಳಿಕೆಯಾಗಿ 25,860ಕ್ಕೆ ಸ್ಥಿರವಾಯಿತು. ಡಾಲರ್‌ ಎದುರು ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 91 ರುಪಾಯಿಗೆ ಇಳಿಕೆಯಾಗಿದೆ.

ಡಾಲರ್ ಎದುರು 91 ರೂ. ಕುಸಿದ ರೂಪಾಯಿ ಮೌಲ್ಯ

ಸಾಂದರ್ಭಿಕ ಚಿತ್ರ -

ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪರಿಸ್ಥಿತಿಯಿಂದಾಗಿ ಮಂಗಳವಾರ ಸ್ಟಾಕ್‌ ಮಾರ್ಕೆಟ್‌ನಲ್ಲಿ (stack market) ಅಪಾರ ಪ್ರಮಾಣದ ನಷ್ಟವಾಗಿದೆ. ಮುಂಬೈ ಷೇರು ಮಾರುಕಟ್ಟೆ (Mumbai share market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 500 ಅಂಕ ಪತನವಾಗಿದ್ದು, 84,679ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದರೆ ನಿಫ್ಟಿ ಸೂಚ್ಯಂಕವು (Nifty Index) 167 ಅಂಕ ಇಳಿಕೆಯಾಗಿ 25,860ಕ್ಕೆ ಸ್ಥಿರವಾಯಿತು.ಹೂಡಿಕೆದಾರರು ಸುಮಾರು 4 ಲಕ್ಷ ಕೋಟಿ ರುಪಾಯಿಗಳ ನಷ್ಟ ಅನುಭವಿಸಿದರು. ಯುರೋಪ್‌ ಮತ್ತು ಏಷ್ಯಾದ ನಾನಾ ಸ್ಟಾಕ್‌ ಮಾರ್ಕೆಟ್‌ಗಳಲ್ಲಿ ಷೇರು ಸೂಚ್ಯಂಕಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 471 ಲಕ್ಷ ಕೋಟಿ ರುಪಾಯಿಗಳಿಂದ 467 ಲಕ್ಷ ಕೋಟಿ ರುಪಾಯಿಗೆ ಇಳಿಯಿತು. ಎಚ್‌ಸಿಎಲ್‌ ಟೆಕ್‌, ಟಾಟಾ ಸ್ಟೀಲ್‌ ಷೇರು ದರ ತಲಾ 2 ಪರ್ಸೆಂಟ್‌ ಇಳಿಯಿತು. ಎಕ್ಸಿಸ್‌ ಬ್ಯಾಂಕ್‌ ಷೇರಿನ ದರದಲ್ಲಿ ಇವತ್ತು ಶೇ. 5 ತಗ್ಗಿತು. ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಬ್ಯಾಂಕ್‌ನ ಬಡ್ಡಿ ಅದಾಯ ಇಳಿಯಬಹುದು ಎಂಬ ಸಿಟಿ ಬ್ರೋಕರೇಜ್‌ ವರದಿ ನಕಾರಾತ್ಮಕ ಪ್ರಭಾವ ಬೀರಿತು.

HDFC Flexi Cap Fund : ತಿಂಗಳಿಗೆ 10,000 ರೂ SIP ; 5 ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಕೆ ಮಾಡಬಹುದಾ?



ಸ್ಟಾಕ್‌ ಮಾರ್ಕೆಟ್‌ ಏಕೆ ಕುಸಿಯಿತು?

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 91 ರುಪಾಯಿಗೆ ಇಳಿಕೆಯಾಗಿದೆ. ಇದು ಡೊಮೆಸ್ಟಿಕ್‌ ಮಾರುಕಟ್ಟೆಯ ರಿಕವರಿಗೆ ಸಮಸ್ಯೆ ಆಗಬಹುದೇ ಎಂಬ ಆತಂಕ ಹೂಡಿಕೆದಾರರಲ್ಲಿ ಉಂಟಾಗಿತ್ತು. ಇದರ ಪರಿಣಾಮ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಹೆಚ್ಚಿನ ಪ್ರಮಾಣದಲ್ಲಿತ್ತು.

ಅಮೆರಿಕ ಮತ್ತು ಭಾರತದ ನಡುವಿನ ಟ್ರೇಡ್‌ ಡೀಲ್‌ ಮುಕ್ತಾಯವಾಗೇಕಿದೆ. ರುಪಾಯಿಯ ಸ್ಥಿರತೆಯನ್ನು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ ಎಂದು ಜಿಯೊಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸಾಮಾನ್ಯವಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಕುಸಿಯುವಾಗ ಆರ್‌ ಬಿಐ ಮಧ್ಯಪ್ರವೇಶಿಸುತ್ತದೆ. ಆದರೆ ಈ ಸಲ ಆರ್‌ಬಿಐ ಮಧ್ಯಪ್ರವೇಶಿಸಿಲ್ಲ. ಕರೆನ್ಸಿಯ ಇಳಿಕೆಗೆ ಅದು ಬಿಟ್ಟಿದೆ. ಆರ್‌ಬಿಐ ಮಧ್ಯಪ್ರವೇಶಿಸದೆ ಇರಲು ಕಾರಣ ಹಣದುಬ್ಬರ ಇಳಿದಿರುವುದು. ಭಾರತದ ಹಣದುಬ್ಬರ ನವೆಂಬರ್‌ನಲ್ಲಿ ಕೇವಲ ಶೇ. 0.71 ನಷ್ಟಿದೆ. ಆದ್ದರಿಂದ ಆರ್‌ಬಿಐಗೆ ರುಪಾಯಿ ಕುಸಿದರೂ ಆತಂಕವಾಗಿಲ್ಲ. ಮಧ್ಯಪ್ರವೇಶಿಸಬೇಕಾದ ಅಗತ್ಯ ಉಂಟಾಗಿಲ್ಲ. ಏಕೆಂದರೆ ಅದು ಇಕಾನಮಿಯನ್ನು ಹರ್ಟ್‌ ಮಾಡುತ್ತಿಲ್ಲ.

ವಿದೇಶಿ ಹೂಡಿಕೆದಾರರು ಈ ವರ್ಷ 18 ಶತಕೋಟಿ ಡಾಲರ್‌ ಮೌಲ್ಯದ ಷೇರುಗಳನ್ನು ಮಾರಿದ್ದರೂ, ಡೊಮೆಸ್ಟಿಕ್‌ ಹೂಡಿಕೆದಾರರು ಬಲವಾಗಿ ನಿಂತಿದ್ದಾರೆ. ಅವರು ಷೇರುಗಳನ್ನು ಭರ್ಜರಿಯಾಗಿ ಖರೀದಿಸುತ್ತಿದ್ದಾರೆ. ಹೀಗಾಗಿ ಸೂಚ್ಯಂಕಗಳು ಸದೃಢವಾಗಿವೆ.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಉನ್ನತ ಸ್ಥಾನದಲ್ಲಿ 11 ಷೇರುಗಳು ಲಾಭವನ್ನು ಗಳಿಸಿತು. ಭಾರ್ತಿ ಏರ್‌ಟೆಲ್‌, ಟೈಟನ್‌ ಕಂಪನಿ, ಟಾಟಾ ಕನ್‌ ಸ್ಯೂಮರ್‌ ಪ್ರಾಡಕ್ಟ್ಸ್‌ ಟಾಪ್‌ ಗೈನರ್ಸ್‌ ಪಟ್ಟಿಯಲ್ಲಿ ಇತ್ತು. ಎಕ್ಸಿಸ್‌ ಬ್ಯಾಂಕ್‌ ಶೇ. 5.12, ಎಟರ್ನಲ್‌ ಶೇ. 4.67, ಜೆಎಸ್‌ಡಬ್ಲ್ಯು ಸ್ಟೀಲ್‌ ಶೇ. 2.66 ನಷ್ಟ ಅನುಭವಿಸಿತು.

ಸೆಕ್ಟರ್‌ ವೈಸ್‌ ನಿಫ್ಟಿ ಬ್ಯಾಂಕ್‌ ಶೇ. 0.72 ಇಳಿಕೆಯಾಯಿತು. ಫೈನಾನ್ಷಿಯಲ್‌ ಸರ್ವೀಸ್‌ ಇಂಡೆಕ್ಸ್‌ ಶೇ. 0.79 ತಗ್ಗಿತು. ನಿಫ್ಟಿ ಪ್ರೈವೇಟ್‌ ಬ್ಯಾಂಕ್‌ ಶೇ. 1.23 ಮತ್ತು ರಿಯಾಲ್ಟಿ ಇಂಡೆಕ್ಸ್‌ ಶೇ. 1.29 ಇಳಿಯಿತು. ಪಿಎಸ್‌ಯು ಬ್ಯಾಂಕ್‌, ಐಟಿ, ಆಯಿಲ್‌ ಆಂಡ್‌ ಗ್ಯಾಸ್‌ ಸೆಕ್ಟರ್‌ ಷೇರುಗಳೂ ಇಳಿಕೆ ದಾಖಲಿಸಿತು.

ಹೆಚ್ಚು ಆಕ್ಟಿವ್‌ ಆಗಿದ್ದ ಷೇರುಗಳ ಪಟ್ಟಿಯಲ್ಲಿ ವೊಡಾಫೋನ್‌ ಐಡಿಯಾ 71 ಕೋಟಿ ಷೇರುಗಳು, ಮೀಶೋ 17 ಕೋಟಿ ಷೇರುಗಳು, ಟಾಟಾ ಟೆಲಿ ಸರ್ವೀಸ್ 13 ಕೋಟಿ ಷೇರುಗಳಾಗಿದ್ದವು.

Gold Price Today on 16th December 2025: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ದರವೇನು?

ಇವತ್ತು ಶೇ. 15ಕ್ಕಿಂತಲೂ ಹೆಚ್ಚು ಏರಿಕೆ ದಾಖಲಿಸಿದ 8 ಷೇರುಗಳು: ಅಮಿನೆಸ್‌ ಆಂಡ್‌ ಪ್ಲಾಸ್ಟಿಕ್‌ಜೆರ್ಸ್‌, ಆಶಿ ಸನ್‌ಗ್ವಾನ್‌ ಕಲರ್ಸ್‌, ಅಂಪೊವೋಲ್ಟಾಸ್‌, ಶಿಶ್‌ ಇಂಡಸ್ಟ್ರೀಸ್‌, ಪಿಎಂಸಿ ಫಿನ್‌ಕಾರ್ಪ್‌, ತಿಲಕ್‌ ವೆಂಚರ್ಸ್‌, ಅಗ್ರಿ-ಟೆಕ್‌, ಇಪ್ಯಾಕ್‌ ಡ್ಯೂರಬಲ್‌ ಷೇರಿನ ದರ ಬಿಎಸ್‌ಇನಲ್ಲಿ ಶೇ. 15 ಗೂ ಹೆಚ್ಚು ಏರಿಕೆ ದಾಖಲಿಸಿತು.

ಬಿಎಸ್‌ಇನಲ್ಲಿ ಟ್ರೇಡ್‌ ಆಗಿದ್ದ 4,335 ಷೇರುಗಳ ಪೈಕಿ 1,654 ಷೇರುಗಳು ಲಾಭ ಗಳಿಸಿತು. 2,523 ಷೇರುಗಳು ನಷ್ಟಕ್ಕೀಡಾಯಿತು. 158 ಷೇರುಗಳು ಯಥಾಸ್ಥಿತಿಯಲ್ಲಿತ್ತು. ವೇದಾಂತ, ಹಿಂದುಸ್ತಾನ್‌ ಝಿಂಕ್‌, ಅಶೋಕ್‌ ಲೇಲ್ಯಾಂಡ್‌ ಸೇರಿದಂತೆ 135 ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿತು.