IT Stocks: ಕೊನೆಗೂ ಚೇತರಿಸಿದ ಐಟಿ ಸ್ಟಾಕ್ಸ್; ಸೆನ್ಸೆಕ್ಸ್ 174 ಅಂಕ ಗಳಿಕೆ
Share Market: ಎರಡು ವಾರಗಳಿಂದ ಕುಸಿಯುತ್ತಿದ್ದ ಐಟಿ ಸ್ಟಾಕ್ಸ್‌ಗಳ ದರದಲ್ಲಿ ಮಂಗಳವಾರ ಚೇತರಿಕೆ ದಾಖಲಾಗಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೊ ಷೇರುಗಳ ದರದಲ್ಲಿ ಗಣನೀಯ ಹೆಚ್ಚಳವಾಗಿದೆ. ಮಂಗಳವಾರ ಐಟಿ ಷೇರುಗಳ ದರದಲ್ಲಿ 4.50 ಪರ್ಸೆಂಟ್ ತನಕ ಹೆಚ್ಚಳವಾಯಿತು. ಮಂಗಳವಾರ ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್ 174 ಅಂಕ ಚೇತರಿಸಿಕೊಂಡು 83,451ಕ್ಕೆ ಸ್ಥಿರವಾಯಿತು.
ಸಾಂದರ್ಭಿಕ ಚಿತ್ರ. -
ಮುಂಬಯಿ, ಫೆ. 17: ಎಐ ಟೆಕ್ನಾಲಜಿಯ ಕುರಿತ ಭೀತಿಯಿಂದ ಕಳೆದ ಎರಡು ವಾರಗಳಿಂದ ಕುಸಿಯುತ್ತಿದ್ದ ಐಟಿ ಸ್ಟಾಕ್ಸ್‌ಗಳ (IT Stocks) ದರದಲ್ಲಿ ಮಂಗಳವಾರ ಚೇತರಿಕೆ ದಾಖಲಾಗಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೊ ಷೇರುಗಳ ದರದಲ್ಲಿ ಗಣನೀಯ ಹೆಚ್ಚಳವಾಗಿದೆ. ಎಐ ಬಗ್ಗೆ ಇದ್ದ ಭೀತಿ ಕ್ರಮೇಣ ಕಡಿಮೆಯಾಗುತ್ತಿದೆ. ಎಐನಿಂದಾಗಿ ಸಾಂಪ್ರದಾಯಿಕ ಐಟಿ ಸರ್ವೀಸ್‌ಗೆ ಅಪಾಯ ಇದ್ದೇ ಇದೆ ಎಂಬುದಾಗಿ ಬ್ರೋಕರೇಜ್ ಕಂಪನಿಗಳು ಎಚ್ಚರಿಕೆ ನೀಡಿದ್ದರೂ, ಎಐ ಟೆಕ್ನಾಲಜಿಯಿಂದಲೂ ಹೊಸ ಬಿಸಿನೆಸ್ ಮಾಡೆಲ್ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವೂ ಉಂಟಾಗಿದೆ. ಮಂಗಳವಾರ ಐಟಿ ಷೇರುಗಳ ದರದಲ್ಲಿ 4.50 ಪರ್ಸೆಂಟ್ ತನಕ ಹೆಚ್ಚಳವಾಯಿತು. ಮಂಗಳವಾರ ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್ 174 ಅಂಕ ಚೇತರಿಸಿಕೊಂಡು 83,451ಕ್ಕೆ ಸ್ಥಿರವಾಯಿತು (Share Market). ನಿಫ್ಟಿ 43 ಅಂಕ ಗಳಿಸಿಕೊಂಡು 25,725ಕ್ಕೆ ತಲುಪಿತು.
ಇನ್ಫೋಸಿಸ್ ಕಂಪನಿಯು ಆಂಥ್ರೊಪಿಕ್ ಎಐ ಟೂಲ್ ತಯಾರಕ ಕಂಪನಿಯ ಜತೆಗೇ ಒಪ್ಪಂದ ಮಾಡಿಕೊಂಡ ಬಳಿಕ ಇನ್ಫೋಸಿಸ್ ಷೇರಿನ ದರದಲ್ಲಿ 4.50 ಪರ್ಸೆಂಟ್‌ಗೂ ಹೆಚ್ಚು ಏರಿಕೆ ಉಂಟಾಯಿತು. ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ವಿಪ್ರೊ, ಎಂಫಸಿಸ್ ಷೇರುಗಳ ದರದಲ್ಲಿ ಏರಿಕೆ ಉಂಟಾಯಿತು.
ಟೆಕ್ಸ್ ಮ್ಯಾಕೊ ರೈಲ್ ಷೇರಿನ ದರದಲ್ಲಿ 10 ಪರ್ಸೆಂಟ್ ಏರಿಕೆ ಆಯಿತು. ಕಂಪನಿಯು 240 ಕೋಟಿ ರುಪಾಯಿ ಮೌಲ್ಯದ ಎರಡು ಆರ್ಡರ್‌ಗಳನ್ನು ಗಳಿಸಿರುವುದು ಇದಕ್ಕೆ ಕಾರಣ. ಮುಂಬಯಿ ರೈಲ್ವೆ ವಿಕಾಸ್ ಕಾರ್ಪೊರೇಷನ್‌ನಿಂದ ಸಿಗ್ನಲಿಂಗ್ ಸಿಸ್ಟಮ್‌ಗೆ ಆರ್ಡರ್ ಗಳಿಸಿದೆ. ಎರಡನೆಯದಾಗಿ ಸೌತ್ ವೆಸ್ಟರ್ನ್ ರೈಲ್ವೆಯಿಂದ ಆರ್ಡರ್ ಗಳಿಸಿದೆ.
ಸೆನ್ಸೆಕ್ಸ್ 485 ಅಂಕ ಜಿಗಿತ 6 ಲಕ್ಷ ಕೋಟಿ ಲಾಭ ಇಳಿದಿದ್ದ ಚಿನ್ನ-ಬೆಳ್ಳಿ ದರ ಮತ್ತೆ ಏರಿಕೆ
ಕೊಚ್ಚಿನ್ ಶಿಪ್ ಯಾರ್ಡ್ ಕಂಪನಿಯು ನೌಕಾಪಡೆಯಿಂದ 5,000 ಕೋಟಿ ರುಪಾಯಿಗಳ ಮೆಗಾ ಆರ್ಡರ್ ಗಳಿಸಿದೆ. ಇದರ ಬೆನ್ನಲ್ಲೇ ಕಂಪನಿಯ ಷೇರು ದರದಲ್ಲಿ 6 ಪರ್ಸೆಂಟ್ ಏರಿಕೆ ಆಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ 5 ವರ್ಷಗಳ ರಿಟರ್ನ್ ಗಮನಿಸಿದರೆ ಸ್ವಾರಸ್ಯಕರ ಅಂಶಗಳನ್ನು ತಿಳಿದುಕೊಳ್ಳಬಹುದು.
ಕೆಲವು ಖಾಸಗಿ ಬ್ಯಾಂಕ್‌ಗಳಿಗಿಂತ ಸಾರ್ವಜನಿಕ ಬ್ಯಾಂಕ್‌ಗಳ ಷೇರುಗಳು ಹೆಚ್ಚು ರಿಟರ್ನ್ ನೀಡಿರುವುದನ್ನು ಗಮನಿಸಬಹುದು.
- ಐಸಿಐಸಿಐ ಬ್ಯಾಂಕ್: 118%
- ಎಕ್ಸಿಸ್: 77%
- ಎಚ್‌ಡಿಎಫ್‌ಸಿ: 14%
ಸಾರ್ವಜನಿಕ ವಲಯದ ಬ್ಯಾಂಕ್‌ಗಳು:
- ಬ್ಯಾಂಕ್ ಆಫ್ ಇಂಡಿಯಾ: 178%
- ಎಸ್‌ಬಿಐ: 204%
- ಬ್ಯಾಂಕ್ ಆಫ್ ಬರೋಡಾ: 267%
- ಬ್ಯಾಂಕ್ ಆಫ್ ಮಹಾರಾಷ್ಟ್ರ: 313%
- ಇಂಡಿಯನ್ ಬ್ಯಾಂಕ್: 608%
ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯ ಷೇರುದರದಲ್ಲಿ 5 ಪರ್ಸೆಂಟ್ ಇಳಿಕೆ ದಾಖಲಾಗಿದ್ದು ಬಿಎಸ್‌ಇನಲ್ಲಿ ಶುಕ್ರವಾರ ಮಧ್ಯಂತರದಲ್ಲಿ 27 ರುಪಾಯಿ ಆಸುಪಾಸಿಗೆ ತಗ್ಗಿದೆ. ಇಂಟರ್‌ನ್ಯಾಶನಲ್ ಬ್ರೋಕರೇಜ್ ಸಂಸ್ಥೆ ಸಿಟಿ, ಓಲಾ ಎಲೆಕ್ಟ್ರಿಕ್ ಕಂಪನಿಯ ರೇಟಿಂಗ್ ಅನ್ನು 'ಬೈʼನಿಂದ 'ಸೆಲ್ʼಗೆ ಡೌನ್ ಗ್ರೇಡ್ ಮಾಡಿರುವುದು ಇದಕ್ಕೆ ಕಾರಣ.
ಹಣದುಬ್ಬರ ಲೆಕ್ಕಾಚಾರಕ್ಕೆ ಚಿನ್ನ-ಬೆಳ್ಳಿ ಸೇರ್ಪಡೆ, ಸೆನ್ಸೆಕ್ಸ್ 250 ಅಂಕ ಜಿಗಿತ
ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮಂಗಳವಾರ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಮ್‌ಗೆ 153 ರುಪಾಯಿ ಇಳಿಕೆ ಆಗಿದ್ದು, 15,491 ರುಪಾಯಿಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರದಲ್ಲಿ 140 ರುಪಾಯಿ ಇಳಿಕೆಯಾಗಿದ್ದು 14,200 ರುಪಾಯಿಗೆ ತಗ್ಗಿದೆ. 1 ಕೆಜಿ ಬೆಳ್ಳಿಯ ದರದಲ್ಲಿ 8,000 ರುಪಾಯಿ ತಗ್ಗಿದ್ದು, 2 ಲಕ್ಷದ 60 ಸಾವಿರ ರುಪಾಯಿಗೆ ಇಳಿಕೆಯಾಗಿದೆ.