ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಮಹಿಳಾ ಲೀಗ್ 2 ರಲ್ಲಿ ಬಿ ಎಲ್ ಕೆ ರೂಟ್ಸ್ ಎಫ್.ಸಿ ಭಾಗವಹಿಸುವಿಕೆ, ಭವಿಷ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ

"ಭಾರತದಲ್ಲಿ ಮಹಿಳಾ ಫುಟ್ಬಾಲ್ ಅನ್ನು ಬೆಂಬಲಿಸುವ ಮತ್ತು ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನ ದಲ್ಲಿ ಭಾರತೀಯ ಮಹಿಳಾ ಲೀಗ್ 2 ರಲ್ಲಿ ಭಾಗವಹಿಸುವಿಕೆ ಮಹತ್ವದ ಹೆಜ್ಜೆಯಾಗಿದೆ. ಈ ಹಂತವು ನಮ್ಮ ಆಟಗಾರರಿಗೆ ಸ್ಪರ್ಧಾತ್ಮಕ ಫುಟ್ಬಾಲ್‌ʼಗೆ ಮಾನ್ಯತೆ ಒದಗಿಸಿದೆ ಮತ್ತು ಅದು ಆಟಗಾರರ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ.

ಬಿ.ಎಲ್.ಕೆ ರೂಟ್ಸ್ ಎಫ್ಸಿಯಲ್ಲಿ, ಬಲವಾದ ಅಡಿಪಾಯ ನಿರ್ಮಿಸಲು ಬದ್ಧ

-

Profile
Ashok Nayak Apr 17, 2026 2:25 PM

ಬೆಂಗಳೂರು: ಸ್ಪರ್ಧಾತ್ಮಕ ಮಾನ್ಯತೆ ಪಡೆಯಲು ಮತ್ತು ಭಾರತದಲ್ಲಿ ಮಹಿಳಾ ಫುಟ್ಬಾಲ್ ಪ್ರತಿಭೆಗಳನ್ನು ಪೋಷಿಸುವ ತನ್ನ ಬದ್ಧತೆ ರೂಪವಾಗಿ ಬಿ ಎಲ್ ಕೆ ರೂಟ್ಸ್ ಎಫ್.ಸಿ ಭಾರತೀಯ ಮಹಿಳಾ ಲೀಗ್ 2 ರಲ್ಲಿ ಭಾಗವಹಿಸುವ ಮೂಲಕ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಂಡಿತು.

ಕರ್ನಾಟಕ, ಮಣಿಪುರ, ಹರಿಯಾಣ, ಮೇಘಾಲಯ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಆಟಗಾರರನ್ನು ಒಳಗೊಂಡ ಬಿ ಎಲ್ ಕೆ ರೂಟ್ಸ್ ಎಫ್.ಸಿ ತಂಡವು ದೇಶದಲ್ಲಿ ತಳಮಟ್ಟದ ಫುಟ್ಬಾಲ್ ಪ್ರತಿಭೆಗೆ ಕನ್ನಡಿ ಹಿಡಿದಿದೆ. ಈ ಪಂದ್ಯಾವಳಿಯು ಆಟಗಾರರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ರಚನಾತ್ಮಕ ಲೀಗ್ ಫುಟ್ಬಾಲ್‌ನ ತೀವ್ರತೆ ಅನುಭವಿಸಲು ಅವಕಾಶ ಒದಗಿಸಿತು.

ಇದನ್ನೂ ಓದಿ: Bangalore News: ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ: ಆಡಳಿತ ವ್ಯವಸ್ಥೆಯ ಮೇಲೆ ಕರಿನೆರಳು

"ಭಾರತದಲ್ಲಿ ಮಹಿಳಾ ಫುಟ್ಬಾಲ್ ಅನ್ನು ಬೆಂಬಲಿಸುವ ಮತ್ತು ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನದಲ್ಲಿ ಭಾರತೀಯ ಮಹಿಳಾ ಲೀಗ್ 2 ರಲ್ಲಿ ಭಾಗವಹಿಸುವಿಕೆ ಮಹತ್ವದ ಹೆಜ್ಜೆಯಾಗಿದೆ. ಈ ಹಂತವು ನಮ್ಮ ಆಟಗಾರರಿಗೆ ಸ್ಪರ್ಧಾತ್ಮಕ ಫುಟ್ಬಾಲ್‌ʼಗೆ ಮಾನ್ಯತೆ ಒದಗಿಸಿದೆ ಮತ್ತು ಅದು ಆಟಗಾರರ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ.

ಬಿ.ಎಲ್.ಕೆ ರೂಟ್ಸ್ ಎಫ್ಸಿಯಲ್ಲಿ, ಭವಿಷ್ಯಕ್ಕಾಗಿ ಬಲವಾದ ಅಡಿಪಾಯ ನಿರ್ಮಿಸಲು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳ ಸೃಷ್ಟಿಸಲು ಬದ್ಧರಾಗಿದ್ದೇವೆ" ಎಂದು ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್ನ ಯೋಜನೆಗಳು ಮತ್ತು ಕಾರ್ಯತಂತ್ರ ನಿರ್ದೇಶಕಿ ಶ್ರೀಮತಿ ಶ್ರುತಿ ಕಶ್ಯಪ್ ಚೌಧರಿ ಹೇಳಿದರು.