ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಕಾರಣನಾಗುತ್ತಾನಾ?
ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮಕರ ರಾಶಿಗೆ ಚಂದ್ರನು ದಾಂಪತ್ಯದ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮಕರ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.
Pushpa Kumari
Apr 17, 2026 2:39 PM
ಬೆಂಗಳೂರು,ಎ.17: ಮಕರ ರಾಶಿಗೆ ಚಂದ್ರನು ಅನೇಕ ರೀತಿಯ ಸಮಸ್ಯೆಯನ್ನು ಉಂಟು ಮಾಡಬಹುದು. ಚಂದ್ರ ದಾಂಪತ್ಯದಲ್ಲಿ ದುಷ್ಟನಾಗಿ ಕಾಡಿದರೂ ವಿವಿಧ ಗ್ರಹದ ಪ್ರಭಾವದ ಮೂಲಕ ದಾಂಪತ್ಯದಲ್ಲಿ ಸವಾಲುಗಳಿದ್ದರೂ ಸರಿದೂಗಿಸಬಹುದು ಆದರೆ ಚಂದ್ರ ಮಾತ್ರ ದುಷ್ಟನಾಗಿ ಇದ್ದರೆ ದಾಂಪತ್ಯದಲ್ಲಿ ಕಲಹ, ಡಿವೊರ್ಸ್, ಮಾನಸಿಕ ಹಿಂಸೆಗಳು ಕಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ವಿವಿಧ ಸವಾಲುಗಳು ಕೂಡ ನಿಮಗೆ ಎದುರಾಗಬಹುದು. ಇದನ್ನು ಎಚ್ಚರಿಕೆ ಯಿಂದ ನಿಭಾಯಿಸಬೇಕು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.