ಸ್ಕಿನ್ -ಹೌಸ್ ಆಫ್ ಟೈಟಾನ್ ಸಂಸ್ಥೆಯಿಂದ ಅಮಾಲ್ಫಿ ರಿವೇರಿಯಾ ಎಂಬ ಹೊಸ ಯುನಿಸೆಕ್ಸ್ ಸುಗಂಧ ದ್ರವ್ಯದ ಬಿಡುಗಡೆ
ಎಲ್ಲಾ ಲಿಂಗದವರು ಬಳಸಬಹುದಾದ ಸುಗಂಧ ದ್ರವ್ಯಗಳ ವಿಭಾಗಕ್ಕೆ ಈ ಮೂಲಕ ಬ್ರ್ಯಾಂಡ್ ಚೊಚ್ಚಲ ಪ್ರವೇಶವನ್ನು ಮಾಡಿದೆ. ಅಮಾಲ್ಫಿ ರಿವೇರಿಯಾ ಸುಗಂಧ ದ್ರವ್ಯವು ಸೂರ್ಯ ಹೆಚ್ಚು ಧಗಧಗಿಸುವ ಕರಾವಳಿಗಳು, ಸಿಟ್ರಸ್ ಮತ್ತು ಸಮುದ್ರದ ಉಪ್ಪಿನ ರುಚಿಯ ತಂಗಾಳಿ ಹಾಗೂ ಸಾಗರದ ಅಲೆಗಳ ಶಾಂತ ಲಯಗಳ ಸ್ಫೂರ್ತಿಯಿಂದ ರಚಿತಗೊಂಡಿದೆ. ಇದು ಒಂದು ಪರಿಪೂರ್ಣ ಬೇಸಿಗೆ ರಜೆಯ ಅನುಭೂತಿ ನೀಡುತ್ತದೆ.
-
ಪ್ರಸಿದ್ಧ ಅಮಾಲ್ಫಿ ಕಲೆಕ್ಷನ್ ನ ಭಾಗವಾಗಿ ಮೂಡಿಬಂದಿರುವ ಈ ಹೊಸ ಸುಗಂಧ ದ್ರವ್ಯದ ಪ್ರಚಾರ ಅಭಿಯಾನದಲ್ಲಿ ನಟ ಅಭಯ್ ಡಿಯೋಲ್ ಕಾಣಿಸಿಕೊಂಡಿದ್ದು, ಈ ಜಾಹೀರಾತು "ಈ ಬೇಸಿಗೆ ನಿಮ್ಮಲ್ಲಿ ಉಳಿಯಲಿದೆ" ಎಂಬ ಘೋಷವಾಕ್ಯವನ್ನು ಹೊಂದಿದೆ.
ಬೆಂಗಳೂರು: 2019ರಲ್ಲಿ ಬಿಡುಗಡೆಯಾಗಿ ಅಪಾರ ಜನಪ್ರಿಯತೆ ಗಳಿಸಿದ ಅಮಾಲ್ಫಿ ಕಲೆಕ್ಷನ್ ಯಶಸ್ಸಿನಿಂದ ಸ್ಫೂರ್ತಿ ಪಡೆದು ಹೌಸ್ ಆಫ್ ಟೈಟಾನ್ ನ ಸ್ಕಿನ್ ಫೈನ್ ಫ್ರಾಗ್ರೆನ್ಸಸ್ ಸಂಸ್ಥೆಯು ಈಗ ಅಮಾಲ್ಫಿ ರಿವೇರಿಯಾ ಎಂಬ ಹೊಸ ಯುನಿಸೆಕ್ಸ್ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದೆ. ಈ ಉತ್ಪನ್ನವನ್ನು ಸೂರ್ಯನ ಬೆಳಕಿನಿಂದ ಮಿಂದೇ ಳುವ ಕರಾವಳಿ ತೀರದ ಸುಂದರ ಅನುಭವವನ್ನು ಕಟ್ಟಿಕೊಡುವಂತೆ ವಿನ್ಯಾಸ ಗೊಳಿಸಲಾಗಿದೆ.
ಎಲ್ಲಾ ಲಿಂಗದವರು ಬಳಸಬಹುದಾದ ಸುಗಂಧ ದ್ರವ್ಯಗಳ ವಿಭಾಗಕ್ಕೆ ಈ ಮೂಲಕ ಬ್ರ್ಯಾಂಡ್ ಚೊಚ್ಚಲ ಪ್ರವೇಶವನ್ನು ಮಾಡಿದೆ. ಅಮಾಲ್ಫಿ ರಿವೇರಿಯಾ ಸುಗಂಧ ದ್ರವ್ಯವು ಸೂರ್ಯ ಹೆಚ್ಚು ಧಗಧಗಿಸುವ ಕರಾವಳಿಗಳು, ಸಿಟ್ರಸ್ ಮತ್ತು ಸಮುದ್ರದ ಉಪ್ಪಿನ ರುಚಿಯ ತಂಗಾಳಿ ಹಾಗೂ ಸಾಗರದ ಅಲೆಗಳ ಶಾಂತ ಲಯಗಳ ಸ್ಫೂರ್ತಿಯಿಂದ ರಚಿತಗೊಂಡಿದೆ. ಇದು ಒಂದು ಪರಿಪೂರ್ಣ ಬೇಸಿಗೆ ರಜೆಯ ಅನುಭೂತಿ ನೀಡುತ್ತದೆ.
ಉಷ್ಣವಲಯದ ಹವಾಮಾನ ಮತ್ತು ಆಧುನಿಕ ಜೀವನಶೈಲಿಗೆ ಸೂಕ್ತವಾದ ಸುಗಂಧ ದ್ರವ್ಯಗಳನ್ನು ಇಷ್ಟಪಡುವ ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತರಲಾಗಿದೆ.
ಇದನ್ನೂ ಓದಿ: Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್
ಈ ಉತ್ಪನ್ನ ಬಿಡುಗಡೆಯ ಭಾಗವಾಗಿ ಹೊಸ ಜಾಹೀರಾತು ಅಭಿಯಾನ ಬಿಡುಗೆಯಾಗಿದೆ. ಈ ಅಭಿಯಾನದ ಭಾಗವಾಗಿ, ನಟ ಅಭಯ್ ಡಿಯೋಲ್ ಅವರು ಕರಾವಳಿಯ ಹಿನ್ನೆಲೆ ಯಲ್ಲಿ ಚಿತ್ರೀಕರಿಸಲಾದ ಸುಂದರ ಬೇಸಿಗೆಯ ದೃಶ್ಯಗಳನ್ನು ಒಳಗೊಂಡ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಲೀಲಾಜಾಲವಾದ ನಟನೆ ಹೆಸರಾದ ಅಭಯ್ ಡಿಯೋಲ್ ಅವರು, ಅಮಾಲ್ಫಿ ರಿವೇರಿಯಾ ಸುಗಂಧ ದ್ರವ್ಯದ ಮೂಲ ಸತ್ವವಾದ ಮುಕ್ತ ಮನೋ ಭಾವ, ಆಧುನಿಕತೆ ಮತ್ತು ಆತ್ಮವಿಶ್ವಾಸವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾರೆ.
ಈ ಪ್ರಚಾರ ಚಿತ್ರವು ನಿಧಾನಗತಿಯ ಮತ್ತು ಆಪ್ತವಾದ ಕಥೆ ಹೇಳುವ ಶೈಲಿಯ ಮೂಲಕ ಒಂದು ವಿಶಿಷ್ಟ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. "ಅಮಾಲ್ಫಿ ಕರಾವಳಿಯ ಆ ದೀರ್ಘ ಬೇಸಿಗೆಯ ದಿನಗಳು" ಎಂಬ ಪರಿಕಲ್ಪನೆಯಲ್ಲಿ ಈ ಜಾಹೀರಾತು ಮೂಡಿ ಬಂದಿದ್ದು, ಬಿಡುವಿಲ್ಲದ ಬದುಕಿನಿಂದ ತುಸು ದೂರ ಸರಿದು ನಿಧಾನವಾಗಿ ಜೀವನವನ್ನು ಆನಂದಿ ಸಲು ಒಂದು ಸೂಕ್ಷ್ಮ ಆಹ್ವಾನ ನೀಡುವಂತೆ ಭಾಸವಾಗುತ್ತದೆ.
ಈ ಸುಗಂಧ ದ್ರವ್ಯವನ್ನು ಸೂಕ್ಷ್ಮ ಮತ್ತು ಭಾವನಾತ್ಮಕ ಸುಗಂಧ ದ್ರವ್ಯ ರಚನೆಗಳಿಗೆ ಹೆಸರಾದ ಸುಗಂಧ ತಜ್ಞ ಸಂತೋಷ್ ಶಿಂಧೆ ಅವರು ಸಿದ್ಧಪಡಿಸಿದ್ದಾರೆ. ಅಮಾಲ್ಫಿ ರಿವೇರಿ ಯಾದಲ್ಲಿ ಅವರು ಕರಾವಳಿಯ ಬೇಸಿಗೆಯ ಚೈತನ್ಯವನ್ನು ಬಿಂಬಿಸುವ ಉಲ್ಲಾಸದಾಯಕ ಅಂಶಗಳನ್ನು ಒಂದೆಡೆ ತಂದಿದ್ದಾರೆ, ಜೊತೆಗೆ ಸ್ಕಿನ್ ಸುಗಂಧ ದ್ರವ್ಯಗಳು ಹೊಂದಿರುವ ವಿಶಿಷ್ಟ ಘನತೆ ಮತ್ತು ಸೊಗಸನ್ನು ಇದರಲ್ಲಿ ಕಾಪಾಡಿಕೊಂಡಿದ್ದಾರೆ.
ಈ ಬಿಡುಗಡೆಯ ಕುರಿತು ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ಸುಗಂಧ ದ್ರವ್ಯ ಮತ್ತು ಆಕ್ಸೆಸರೀಸ್ ವಿಭಾಗದ ಸಿಇಓ ಮನೀಶ್ ಗುಪ್ತಾ ಅವರು, "ಅಮಾಲ್ಫಿ ರಿವೇರಿಯಾವು ನಮ್ಮ ಅಮಾಲ್ಫಿ ಸರಣಿಯ ಸೊಗಸಾದ ಬೆಳವಣಿಗೆಯನ್ನು ಪ್ರತಿಬಿಂಬಿ ಸುತ್ತದೆ. ಈ ಉತ್ಪನ್ನ ಬಿಡುಗಡೆಯ ಮೂಲಕ ನಾವು ಕೇವಲ ಯಶಸ್ವಿಯಾಗಿ ಸರಣಿಯನ್ನು ವಿಸ್ತರಿಸುತ್ತಿರುವುದು ಮಾತ್ರವೇ ಅಲ್ಲ, ಬದಲಿಗೆ ಹೆಚ್ಚು ತಾಜಾ, ಅಭಿವ್ಯಕ್ತಿಶೀಲ ಮತ್ತು ಯುನಿಸೆಕ್ಸ್ ಸುಗಂಧ ದ್ರವ್ಯಗಳ ಕಡೆಗೆ ಗ್ರಾಹಕರಲ್ಲಿ ಉಂಟಾಗಿರುವ ಆಸಕ್ತಿಗೆ ಸ್ಪಂದಿಸು ತ್ತಿದ್ದೇವೆ. ಈ ಸುಗಂಧವು ಆಧುನಿಕ ಸಿಟ್ರಸ್ ಮೆರಿನ್ ಅನುಭವವನ್ನು ನೀಡುತ್ತದೆ. ಅಮಾಲ್ಫಿ ರಿವೇರಿಯಾವು ಆಧುನಿಕ ಕಾಲದ ಬೇಸಿಗೆ ಸಂದರ್ಭವನ್ನು ಹೇಗೆ ಎದುರುಗೊಳ್ಳ ಬಹುದು ಎಂಬುದಕ್ಕೆ ನಮ್ಮ ಉತ್ತರವಾಗಿದ್ದು, ಇದು ತಾಜಾತನ ಮತ್ತು ಆಹ್ಲಾದತೆಯಿಂದ ಕೂಡಿದೆ" ಎಂದು ಹೇಳಿದರು.
ಈ ಸುಗಂಧ ದ್ರವ್ಯವು ಡರ್ಮಟಾಲಾಜಿಕಲೀ ಪರೀಕ್ಷಿತಗೊಂಡಿದ್ದು, ಐ ಎಫ್ ಆರ್ ಎ ನಿಯಮಗಳಿಗೆ ಬದ್ಧವಾಗಿದೆ ಮತ್ತು ಯುರೋಪಿಯನ್ ಯೂನಿಯನ್ (ಇಯು) ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ. 90 ಮಿಲೀ ಗಾತ್ರದ ಅಮಾಲ್ಫಿ ರಿವೇರಿಯಾದ ಬೆಲೆ 3,095 ರೂ.ಗಳಾಗಿದ್ದು, ಇದು ಬ್ರ್ಯಾಂಡ್ ನ ಅಧಿಕೃತ ವೆಬ್ ಸೈಟ್, ಭಾರತದಾದ್ಯಂತ ಇರುವ ಸ್ಕಿನ್ ಕಿಯೋಸ್ಕ್ ಗಳು, ಟೈಟಾನ್ ವರ್ಲ್ಡ್ ಸ್ಟೋರ್ ಗಳು, ಶಾಪರ್ಸ್ ಸ್ಟಾಪ್, ಲೈಫ್ ಸ್ಟೈಲ್ ಮಳಿಗೆಗಳು ಮತ್ತು ಪ್ರಮುಖ ಇ- ಕಾಮರ್ಸ್ ತಾಣಗಳಲ್ಲಿ ಲಭ್ಯವಿದೆ.