ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಗ್ಲೆಂಡ್ ನಲ್ಲೂ ಇಂಡಿಗೋ ಬಿಕ್ಕಟ್ಟು ನೆನಪಿಸುವ ತಾಂತ್ರಿಕ ದೋಷ: 2 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು; ಭಾರತದ ಮೇಲೂ ಪರಿಣಾಮ

ಯುಕೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳ ಕಾರಣದಿಂದ 2,000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಭಾರತದಿಂದ ಯುಕೆಗೆ ಹೋಗುವ 24 ವಿಮಾನಗಳಲ್ಲಿ 7 ವಿಮಾನಗಳು ರದ್ದುಗೊಂಡಿವೆ. ಇದರಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಲಂಡನ್ ಮಾರ್ಗಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

2,000ಕ್ಕೂ ಹೆಚ್ಚು ಯುಕೆ ವಿಮಾನಗಳು ರದ್ದು

ಸಂಗ್ರಹ ಚಿತ್ರ -

ಲಂಡನ್: ಭಾರತದಿಂದ ಲಂಡನ್ (IndiGo flight) ಮಾರ್ಗಗಳಲ್ಲಿ ತೆರಳುವ ಸಾವಿರಾರು ಪ್ರಯಾಣಿಕರು ದಾರಿ ಮಧ್ಯೆ ಸಿಲುಕಿಕೊಂಡಿದ್ದಾರೆ. ಯುಕೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ (UK’s air traffic control) ತಾಂತ್ರಿಕ ವೈಫಲ್ಯ (technical issue) ಉಂಟಾಗಿದ್ದರಿಂದ ಕಳೆದೆರಡು ದಿನಗಳಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೀಥ್ರೂ ಸೇರಿದಂತೆ 15 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಭಾರತದಿಂದ ಯುಕೆಗೆ ಹೋಗುವ 24 ವಿಮಾನಗಳಲ್ಲಿ 7 ವಿಮಾನಗಳು ರದ್ದುಗೊಂಡಿವೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಮರು ಬುಕ್ಕಿಂಗ್, ವಿಮಾನ ಹಾರಾಟ, ಲ್ಯಾಂಡಿಂಗ್ ಸಮಯಗಳ ಮರು ಹೊಂದಿಕೆ ಕಾರ್ಯವನ್ನು ಪ್ರಾರಂಭಿಸಿದ್ದು, ಇದರಿಂದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಬುಧವಾರ ವಿಮಾನ ಕಾರ್ಯಾಚರಣೆಗಳಲ್ಲಿ ವಿಳಂಬ ಉಂಟಾಗಿತ್ತು.

ಯುಕೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿ ಕಳೆದೆರಡು ದಿನಗಳಲ್ಲಿ 2,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ದೇಶಾದ್ಯಂತ ಇರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಮರು ಬುಕ್ಕಿಂಗ್, ವಿಮಾನಯಾನದ ಸಮಯ ಹೊಂದಾಣಿಕೆ ಕಾರ್ಯ ನಡೆಸುತ್ತಿದೆ.

Bigg Boss Kannada 13: ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌! ರಿವೆಂಜ್‌ ತಗೊಂಡ್ರಾ ನಟ?

ಯುಕೆ ವಿಮಾನ ನಿಲ್ದಾಣಗಳಲ್ಲಿ ಬುಧವಾರ 291 ವಿಮಾನಗಳಲ್ಲಿ 120 ನಿರ್ಗಮನ ಮತ್ತು 171 ಆಗಮನಗಳು ರದ್ದುಗೊಂಡಿವೆ. ಇದು 5,869 ನಿಗದಿತ ವಿಮಾನಗಳ ಶೇಕಡಾ 5ರಷ್ಟಾಗಿದೆ. ಇದರ ಹಿಂದಿನ ದಿನವೆಂದರೆ ಮಂಗಳವಾರ 5,800 ನಿಗದಿತ ವಿಮಾನಗಳಲ್ಲಿ ಸುಮಾರು ಶೇಕಡಾ 30.1ರಷ್ಟು ರದ್ದುಗೊಂಡಿತ್ತು ಎಂದು ವಾಯುಯಾನ ವಿಶ್ಲೇಷಣಾ ಕಂಪೆನಿ ತಿಳಿಸಿದೆ.

ಭಾರತದಿಂದ ಯುಕೆಗೆ ತೆರಳಬೇಕಿದ್ದ 24 ವಿಮಾನಗಳಲ್ಲಿ ಏಳು ವಿಮಾನಗಳನ್ನು ಬುಧವಾರ ಸಂಜೆ 4 ಗಂಟೆಯ ಹೊತ್ತಿಗೆ ರದ್ದುಗೊಳಿಸಲಾಗಿದೆ. ಇಂಡಿಗೋದ ಮುಂಬೈ- ಲಂಡನ್ ಸೇವೆ 6ಇ001 ಅನ್ನು ಮಂಗಳವಾರ ಆಮ್ಸ್ಟರ್‌ಡ್ಯಾಮ್‌ಗೆ ಮತ್ತು ಅದರ ದೆಹಲಿ- ಲಂಡನ್ ವಿಮಾನ 6ಇ003 ಅನ್ನು ಪ್ಯಾರಿಸ್‌ಗೆ ತಿರುಗಿಸಲಾಗಿದೆ. ಈ ಎರಡು ವಿಮಾನಗಳ ಹಾರಾಟವನ್ನು ಬುಧವಾರ ರದ್ದುಗೊಳಿಸಲಾಗಿದೆ. ಏರ್ ಇಂಡಿಯಾದ ನಾಲ್ಕು ಲಂಡನ್ ವಿಮಾನಗಳನ್ನು ಮಂಗಳವಾರ ಬೇರೆ ಕಡೆಗೆ ತಿರುಗಿಸಿ ಬುಧವಾರದ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಮುಂಬೈ ವಿಮಾನದಲ್ಲಿದ್ದ ಪ್ರಯಾಣಿಕ ಮಿಲಿಂದ್ ದಿಯೋರಾ, ಆಮ್ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಸುಮಾರು 24 ಗಂಟೆಗಳ ಕಾಲ ಸಿಲುಕಿಕೊಂಡಿದ್ದಾಗಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಯುಕೆ ರಾಷ್ಟ್ರೀಯ ವಾಯು ಸಂಚಾರ ಸೇವಾ ಸಂಸ್ಥೆ, ಯುಕೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿದೆ. ಮಂಗಳವಾರ ಮಧ್ಯಾಹ್ನ ಮೂಲ ದೋಷವನ್ನು ಪರಿಹರಿಸಲಾಗಿದೆ. ಆದರೆ ಉಂಟಾಗಿರುವ ಅಡಚಣೆಯನ್ನು ಪರಿಹರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದೆ.

ಬಡವರಿಗೆ ಡಿಕೆಶಿ‌ ಸರಕಾರದಿಂದ 15 ಲಕ್ಷ ಉಚಿತ ನಿವೇಶನ ಹಂಚಿಕೆ

ಪ್ರಕರಣಕ್ಕೆ ಸಂಬಂಧಿಸಿ ಯುಕೆ ರಾಷ್ಟ್ರೀಯ ವಾಯು ಸಂಚಾರ ಸೇವಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಟಿನ್ ರೋಲ್ಫ್ ಅವರು ರಾಜೀನಾಮೆ ನೀಡಬೇಕೆಂದು ಏರ್‌ಲೈನ್ಸ್ ಒತ್ತಾಯಿಸಿದೆ. ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ವಿಮಾನ ಸಂಚಾರ ಸೇವೆ ಸ್ಥಗಿತಗೊಂಡಿದೆ ಎಂದು ಹೇಳಿದೆ. ಮಾರ್ಟಿನ್ ರೋಲ್ಫ್ ಅವರು ಆಗಿರುವ ತೊಂದರೆಗಾಗಿ ಕ್ಷಮೆಯಾಚಿಸಿದ್ದು, ಯುಕೆ ವ್ಯವಸ್ಥೆಯು ವಿಶ್ವದ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.