Real Estate: ರಿಯಲ್ ಎಸ್ಟೇಟ್ ಹೂಡಿಕೆಗೆ ಸೂಕ್ತ ಸಮಯ ಯಾವುದು? ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ!
Real Estate: ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ, ಡಿಮಾಂಡ್ ಮತ್ತು ಸಪ್ಲೇ, ಬಡ್ಡಿದರಗಳು, ಸರ್ಕಾರದ ನೀತಿಗಳು, ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳು. ಇವುಗಳ ಬಗ್ಗೆ ತಿಳಿದುಕೊಂಡು, ನೀವು ಸೂಕ್ತ ಸಮಯದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.
-
ಬೆಂಗಳೂರು: ರಿಯಲ್ ಎಸ್ಟೇಟ್‌ನಲ್ಲಿ (Real Estate) ಹೂಡಿಕೆಗೆ ಸೂಕ್ತ ಸಮಯ ಯಾವುದು? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕೋಣ. ಅಂದಹಾಗೆ ಯಾವಾಗ ಹೂಡಿಕೆ ಮಾಡಿದರೆ ಲಾಭ? ಯಾವಾಗ ತಾಳ್ಮೆ ಹಿಡಿದರೆ ಉತ್ತಮ? ಎಲ್ಲವನ್ನೂ ಈ ಲೇಖನದ ಮೂಲಕ ತಿಳಿಸಲಿದ್ದೇವೆ. ಮೊದಲಿಗೆ ರಿಯಲ್ ಎಸ್ಟೇಟ್ ಹೂಡಿಕೆಗೆ ಸಮಯದ ಪ್ರಾಮುಖ್ಯತೆ ಬಗ್ಗೆ ಅರ್ಥಮಾಡಿಕೊಳ್ಳೋಣ. ರಿಯಲ್ ಎಸ್ಟೇಟ್ ಅಂದರೆ ದೀರ್ಘಾವಧಿ ಹೂಡಿಕೆ. ಇಲ್ಲಿ ಬೆಲೆ ಏರಿಕೆ ಮತ್ತು ಇಳಿಕೆ ಚಕ್ರದಲ್ಲಿ ನೀವು ಯಾವ ಹಂತದಲ್ಲಿ ಹೂಡಿಕೆ ಮಾಡಲು ಪ್ರವೇಶಿಸುತ್ತೀರೋ ಅದು ಲಾಭವನ್ನು ನಿರ್ಧರಿ ಸುತ್ತದೆ. ತಪ್ಪಾದ ಸಮಯದಲ್ಲಿ ಹೂಡಿಕೆ ಮಾಡಿದರೆ ಹಣ ಸಿಲುಕಿ ಕೊಳ್ಳಬಹುದು, ಸೂಕ್ತ ಸಮಯ ದಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ ತಂದುಕೊಡಬಹುದು.
ಇದಕ್ಕೂ ಮುನ್ನ ಮಾರುಕಟ್ಟೆಯ ಪರಿಸ್ಥಿತಿ ತಿಳಿಯಬೇಕು. ಅಂದರೆ, ಬೇಡಿಕೆ ಮತ್ತು ಪೂರೈಕೆ ಹೇಗಿದೆ ಎಂದು ಲೆಕ್ಕಾಚಾರ ಮಾಡಬೇಕು. ಒಂದು ವೇಳೆ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ ಎಂದಾದರೆ ಅಲ್ಲಿ ಬೆಲೆ ಏರುತ್ತದೆ. ಬಡ್ಡಿದರಗಳು ಅದರಲ್ಲೂ ಬ್ಯಾಂಕ್‌ಗಳು ನೀಡುವ ಹೋಮ್ ಲೋನ್‌ಗಳ ಬಡ್ಡಿ ದರ ಕಡಿಮೆ ಇದ್ದಾಗ ಹೂಡಿಕೆ ಮಾಡುವುದು ಸೂಕ್ತ. ಏಕೆಂದರೆ ಬಡ್ಡಿ ಹೆಚ್ಚಾದರೆ EMI ಒತ್ತಡವೂ ಹೆಚ್ಚುತ್ತದೆ.
ಇನ್ನು ಸರ್ಕಾರದ ನೀತಿಗಳ ಬಗ್ಗೆಯೂ ಗಮನ ಇಡಬೇಕು. ರೇರಾ ನಿಯಮಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ಟ್ಯಾಂಪ್ ಡ್ಯೂಟಿ ಕಡಿತ ಇತ್ಯಾದಿಗಳ ಬಗ್ಗೆ ಅರಿತು ಹೂಡಿಕೆಗೆ ಕೈಹಾಕಬೇಕು. ಜೊತೆಗೆ ಆರ್ಥಿಕ ಸ್ಥಿತಿ ಬಗ್ಗೆ ಗಮನ ನೀಡಬೇಕು. ಏಕೆಂದರೆ ಉದ್ಯೋಗ, ಉದ್ಯಮ, ವೇತನ ಹೆಚ್ಚಳ ಇತ್ಯಾದಿ ಸಕಾರಾತ್ಮಕ ಸೂಚನೆಗಳು ಇದ್ದಾಗಲೂ ಬೆಲೆ ಏರಿಕೆಯಾಗುತ್ತದೆ.
ಹೂಡಿಕೆಗೆ ಮುನ್ನ ಈ ಸೂಚನೆಗಳನ್ನು ಗಮನಿಸಬೇಕು
ವಾಸಕ್ಕಾಗಿ ಖರೀದಿ ಮಾಡುತ್ತಿದ್ದೀರಾ? ಅಥವಾ ಹೂಡಿಕೆ/ಮರು ಮಾರಾಟಕ್ಕಾಗಿ ಮಾಡುತ್ತಿದ್ದೀರಾ? ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು.ಬೆಳೆಯುತ್ತಿರುವ ಏರಿಯಾಗಳು, ಅಭಿವೃದ್ಧಿ ಯೋಜನೆಗಳು, ಮೆಟ್ರೋ ಸಂಪರ್ಕ, ಐಟಿ ಪಾರ್ಕ್‌ಗಳ ಬಗ್ಗೆ ತಿಳಿದಿರಬೇಕು. ಮಾರುಕಟ್ಟೆ ಚಕ್ರ ಅರ್ಥಮಾಡಿಕೊಳ್ಳಿ. ಪ್ರಾಪರ್ಟಿ ಬೆಲೆಗಳು ಇತ್ತೀಚಿಗೆ ಏರಿಕೆಯಲ್ಲಿದೆಯೇ ಅಥವಾ ಸ್ಥಿರವಾಗಿದೆಯೇ ನೋಡಿ.ಬೆಲೆ ಇಳಿಕೆ ನಂತರ ಮಾರುಕಟ್ಟೆ ಸ್ಟೇಬಲ್ ಆದಾಗ ಹೂಡಿಕೆ ಮಾಡಿದರೆ ಸುರಕ್ಷಿತ. ಪ್ರಾಜೆಕ್ಟ್‌ಗಳು ವಿವರ, ಬಿಲ್ಡರ್‌ನ ಹಿನ್ನಲೆ ಮತ್ತು ಸರ್ಕಾರದ ಅನುಮೋದನೆ ಬಗ್ಗೆ ರಿಸರ್ಚ್ ಮಾಡಿ.
ಇದಕ್ಕೆ ಸೂಕ್ತ ಉದಾಹರಣೆಗಳನ್ನು ತಿಳಿಯೋಣ
ಪ್ರೀ-ಲಾಂಚ್ ಪ್ರಾಜೆಕ್ಟ್ಸ್: ಆರಂಭಿಕ ಹಂತದಲ್ಲಿ ಬೆಲೆ ಕಡಿಮೆ ಇರುತ್ತದೆ ಆದರೆ ರಿಸ್ಕ್ ಕೂಡ ಹೆಚ್ಚು. ಅಂಡರ್ ಕನ್‌ಸ್ಟ್ರಕ್ಷನ್: ಈ ಪ್ರಾಜೆಕ್ಟ್‌ಗಳಲ್ಲಿ ಪ್ರಾಪರ್ಟಿ ಮಧ್ಯಮ ಬೆಲೆಗೆ ಲಭ್ಯ, ಆದರೆ ಸಮಯಕ್ಕೆ ಕಂಪ್ಲೀಟ್ ಆಗುತ್ತದೆಯೇ? ನೋಡಬೇಕು. ರೆಡಿ ಟು ಮೂವ್: ಈ ಪ್ರಾಪರ್ಟಿಗಳು ಸುರ ಕ್ಷಿತ, ಆದರೆ ಕೊಂಚ ದುಬಾರಿ ಆಗಿರುತ್ತವೆ. ರಿಸೆಷನ್ ಅಥವಾ ಮಾರುಕಟ್ಟ ಸ್ಲೋ-ಡೌನ್ ಆದ ಸಮಯದಲ್ಲಿ ರಿಯಲ್ ಎಸ್ಟೇಟ್ ಬೆಲೆ ಕಡಿಮೆ, ಆಗ ಹೂಡಿಕೆಗೆ ಅದ್ಭುತ ಚಾನ್ಸ್.
ವೈಯಕ್ತಿಕ ಹಣಕಾಸಿನ ಅರಿವು ಮುಖ್ಯ
ನಿಮ್ಮ ಹಣಕಾಸಿನ ಸ್ಥಿತಿ ಗಮನದಲ್ಲಿಟ್ಟು ಡೌನ್ ಪೇಮೆಂಟ್ ಮಾಡಿ. ಇದರಿಂದ EMI ಹೊರೆ ನಿರ್ವಹಣೆ ಸುಲಭವಾಗುತ್ತದೆ. ಯಾವುದೇ ತುರ್ತು ಅವಶ್ಯಕತೆ ಇಲ್ಲದಿದ್ದರೆ ತಾಳ್ಮೆಯಿಂದ ಪ್ರಾಪರ್ಟಿ ಖರೀದಿಸಲು ಸೂಕ್ತ ಸಮಯಕ್ಕೆ ಕಾಯುವುದು ಲಾಭದಾಯಕ.
ಅಂತಿಮವಾಗಿ ಹೇಳೋದೇನೆಂದರೆ, ಹೂಡಿಕೆ ಮಾಡಲು ಒಂದು ‘ಪರ್ಫೆಕ್ಟ್’ ಸಮಯ ಅಂತ ಏನೂ ಇರುವುದಿಲ್ಲ. ನಿಮ್ಮ ಉದ್ದೇಶ, ಮಾರುಕಟ್ಟೆ ಪರಿಸ್ಥಿತಿ, ಬಡ್ಡಿದರ, ಸ್ಥಳ ಅಭಿವೃದ್ಧಿ ಈ ಎಲ್ಲಾ ಅಂಶ ಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳಬೇಕು. ಆಗ ಮಾತ್ರ ನಿಮ್ಮ ಹೂಡಿಕೆ ಸುರಕ್ಷಿತವೂ, ಲಾಭದಾಯಕವೂ ಆಗುತ್ತದೆ.
ಲೇಖಕರು: ವಿಜೇತ್ ಕುಮಾರ್ ಡಿ.ಎನ್, ಸೀನಿಯರ್ ಡಿಜಿಟಲ್ ಕಂಟೆಂಟ್ ಎಡಿಟರ್