ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monetary Policy Decisions: ಟ್ರಂಪ್‌ ಟಾರಿಫ್‌ ಭವಿಷ್ಯ ಹೇಳೋದು ಕಷ್ಟ ಎಂದ RBI- ಬಡ್ಡಿ ದರ ಇಳಿಸಿಲ್ಲ ಏಕೆ?

ಬಡ್ಡಿ ದರ ಇಳಿಕೆಯ ಟ್ರೆಂಡ್‌ ಮುಂದುವರಿಯಲಿದೆಯೇ ಎಂಬ ಕುತೂಹಕ ಜನರಲ್ಲಿ ಇತ್ತು. ಆದರೆ ಇದೀಗ ಆರ್‌ಬಿಐ ನ್ಯೂಟ್ರಲ್‌ ನಿಲುವು ತೆಗೆದುಕೊಂಡಿದೆ. ಈ ಸಲ ಬಡ್ಡಿ ದರ ಇಳಿಸಿಲ್ಲ. ಏಕೆ ಎಂಬುದು ಹಲವರ ಪ್ರಶ್ನೆ. ಇದಕ್ಕೂ ಆರ್‌ಬಿಐ ಉತ್ತರಿಸಿದೆ. ಈ ವರ್ಷ ಕೇವಲ 4 ತಿಂಗಳಿನಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಇದರ ಪ್ರಕ್ರಿಯೆ ಈಗಲೂ ನಡೆಯುತ್ತಿದೆ.

RBI ರೆಪೊ ರೇಟ್‌ ಇಳಿಸಿಲ್ಲ ಏಕೆ?

ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ವರ್ಷ ಫೆಬ್ರವರಿಯಿಂದ ಮೂರು ಸಲ ಬಡ್ಡಿ ದರ(RBI Repo Rate) ಇಳಿಸಿತ್ತು. ಬಡ್ಡಿ ದರ ಇಳಿಕೆಯ ಟ್ರೆಂಡ್‌ ಮುಂದುವರಿಯಲಿದೆಯೇ ಎಂಬ ಕುತೂಹಕ ಜನರಲ್ಲಿ ಇತ್ತು. ಆದರೆ ಇದೀಗ ಆರ್‌ಬಿಐ ನ್ಯೂಟ್ರಲ್‌ ನಿಲುವು ತೆಗೆದುಕೊಂಡಿದೆ. ಈ ಸಲ ಬಡ್ಡಿ ದರ ಇಳಿಸಿಲ್ಲ. ಏಕೆ ಎಂಬುದು ಹಲವರ ಪ್ರಶ್ನೆ. ಇದಕ್ಕೂ ಆರ್‌ಬಿಐ ಉತ್ತರಿಸಿದೆ. ಈ ವರ್ಷ ಕೇವಲ 4 ತಿಂಗಳಿನಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಇದರ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಆದ್ದರಿಂದ ಈ ಸಲ ರೆಪೊ ದರವನ್ನು ಮತ್ತೆ ಕಡಿತಗೊಳಿಸಿಲ್ಲ ಎಂದು ಆರ್‌ಬಿಐ ಉತ್ತರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ವಿರುದ್ಧ ಸಾರಿರುವ ಟಾರಿಫ್‌ ವಾರ್‌ನ ಪರಿಣಾಮಗಳನ್ನು ಅಂದಾಜು ಮಾಡುವುದು ಕಷ್ಟ ಎಂದು ಆರ್‌ಬಿಐ ಇಂದು ಹೇಳಿದೆ. " ನಾವು ಈಗಾಗಲೇ 2025-26ರ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು 6.7%ರಿಂದ 6.5%ಕ್ಕೆ ಇಳಿಸಿದ್ದೇವೆ. ಆದರೆ ಕೆಲವು ಜಾಗತಿಕ ಅನಿಶ್ಚಿತತೆಗಳು ಈಗಾಲೇ ಪ್ರಭಾವ ಬೀರಲು ಆರಂಭಿಸಿವೆ. ಆದ್ದರಿಂದ ಹೀಗೆಯೇ ಆಗಲಿದೆ ಎಂದು ನಿರೀಕ್ಷಿಸುವುದು ಬಹಳ ಕಷ್ಟಕರ ಎಂದು ಆರ್‌ಬಿಐ ಒಪ್ಪಿಕೊಂಡಿದೆ. " ಟಾರಿಫ್‌ ಪರಿಣಾಮಗಳನ್ನು ಗ್ರಹಿಸುವುದು ಕಷ್ಟʼʼ ಎಂದು ಆರ್‌ಬಿಐನ ಎಂಪಿಸಿ ಸದಸ್ಯರು ತಿಳಿಸಿದ್ದಾರೆ.

ಇವತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾನಿಟರಿ ಪಾಲಿಸಿ ಕಮಿಟಿಯು ರೆಪೊ ದರವನ್ನು 5.5% ರ ಯಥಾಸ್ಥಿತಿಯಲ್ಲಿ ಇರಿಸಿದೆ. ಹೀಗಾಗಿ ಸಾಲದ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಸಮಿತಿಯಲ್ಲಿ ಅವಿರೋಧವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ಫೆಬ್ರವರಿಯಿಂದ ಮೂರು ಸಲ ರೆಪೊ ದರವನ್ನು ಇಳಿಸಿ ಹ್ಯಾಟ್ರಿಕ್‌ ದಾಖಲಿಸಿದ್ದ ಆರ್‌ಬಿಐ ಈ ಬಾರಿ ನ್ಯೂಟ್ರಲ್‌ ನಿಲುವನ್ನು ತೆಗೆದುಕೊಂಡಿದೆ. ಈ ವರ್ಷ 100 ಬೇಸಿಸ್‌ ಪಾಯಿಂಟ್‌ ಅಥವಾ 1% ರೆಪೊ ದರ ಕಡಿತ ಆಗಿತ್ತು. ಗೃಹ ಸಾಲಗಾರರಿಗೆ ಇದರ ಪ್ರಯೋಜನ ಲಭಿಸಿದ್ದು, ಇಎಂಐ ಇಳಿಕೆ ಈಗಾಗಲೇ ಆಗಿದೆ.

ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ. ಇದು ಕಡಿಮೆಯಾದಾಗ ಬ್ಯಾಂಕ್‌ಗಳಿಗೆ ಸಾಲ ವಿತರಣೆಯ ಖರ್ಚು ಕಡಿಮೆಯಾಗುವುದು ಮತ್ತು ಸಾಲಗಾರರಿಗೆ ಇಎಂಐ ಇಳಿಕೆಯಾಗಿ ಅನುಕೂಲವಾಗುವುದು. ಆದರೆ ಈಗಿನ ಜಾಗತಿಕ ಆರ್ಥಿಕತೆಯ ಮಂದಗತಿ, ಜಾಗತಿಕ ವ್ಯಾಪಾರದ ಸವಾಲುಗಳು, ಟ್ರಂಪ್‌ ಅವರ ಟಾರಿಫ ಸಂಘರ್ಷದ ನೂರೆಂಟು ಸವಾಲುಗಳ ನಡುವೆ ಭಾರತ ಈ ವರ್ಷ ತನ್ನ ಜಿಡಿಪಿ ಬೆಳವಣಿಗೆಯನ್ನು ಅಬಾಧಿತವಾಗಿ ಉಳಿಸಿಕೊಳ್ಳಲಿದೆ ಎಂಬ ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಹೇಳಿಕೆಯೇ ಸಮಾಧಾನಕರ ಎನ್ನಬಹುದು. ಜತೆಗೆ ಟ್ರಂಪ್‌ ಟಾರಿಫ್‌ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯವನ್ನು ದೇಶದ ಆರ್ಥಿಕತೆ ಒಳಗೊಂಡಿರುವುದು ಕೂಡ ಗಮನಾರ್ಹ.

ಹಾಗಾದರೆ ಆರ್‌ಬಿಐ ಗವರ್ನರ್‌ ಹೇಳಿದ್ದೇನು? ವಿವರವಾಗಿ ತಿಳಿದುಕೊಳ್ಳೋಣ.

ಮಾನಿಟರಿ ಪಾಲಿಸಿ ಕಮಿಟಿಯು ಆರಂಭದಲ್ಲಿಯೇ ಜಾಗತಿಕ ಮಟ್ಟದಲ್ಲಿ ಸವಾಲುಗಳು ಮುಂದುವರಿದಿರುವುದನ್ನು ಒತ್ತು ಕೊಟ್ಟು ಪ್ರಸ್ತಾಪಿಸಿದೆ. ವ್ಯಾಪಾರ ಕುರಿತ ಮಾತುಕತೆಗಳು ವಿಳಂಬವಾಗುತ್ತಿವೆ. ಇವುಗಳ ಬಿಕ್ಕಟ್ಟಿನಿಂದ ಸಮಸ್ಯೆ ಉಂಟಾಗಿದೆ. ಹೀಗಿದ್ದರೂ, ಭಾರತದ ಆರ್ಥಿಕತೆ ಚೇತರಿಸುತ್ತಿದೆ ಎಂದು ಆರ್‌ಬಿಐ ಹೇಳಿದೆ.

ಇದಕ್ಕೆ ಕಾರಣವೇನು? ಭಾರತದಲ್ಲಿ ಖಾಸಗಿ ವಲಯದ ಖರ್ಚು ವೆಚ್ಚಗಳು ಚೆನ್ನಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಪುಷ್ಟಿ ನೀಡಿದೆ. ಸರಕಾರದ ಬಂಡವಾಳ ವೆಚ್ಚ ಸಹಕರಿಸಿದೆ. ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದೆ. ಮುಂಗಾರು ಮಳೆ ಉತ್ತಮವಾಗಿ ಆಗಿರುವುದರಿಂದ ಮುಂಗಾರಿನ ಬಿತ್ತನೆ ಕಾರ್ಯಗಳು ಸಕ್ರಿಯವಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಕೃಷಿ ಚಟುವಟಿಕೆಗಳನ್ನು ಇದು ಉತ್ತೇಜಿಸಿದೆ. ಸೇವಾ ಕ್ಷೇತ್ರ ಮತ್ತು ನಿರ್ಮಾಣ ವಲಯ ಗಣನೀಯವಾಗಿ ಸುಧಾರಿಸಿದೆ. ಕೈಗಾರಿಕೆ, ವಿದ್ಯುತ್‌ ಮ್ತು ಗಣಿಗಾರಿಕೆ ವಲಯ ಮಾತ್ರ ಮಂದಗತಿಯಲ್ಲಿದೆ ಎಂದು ಆರ್‌ಬಿಐ ತಿಳಿಸಿದೆ.

ಸಾಮಾನ್ಯ ಮಟ್ಟಕ್ಕಿಂತ ಮೇಲಿರುವ ಮುಂಗಾರು ಮಳೆ, ನಿಯಂತ್ರಣದಲ್ಲಿರುವ ಹಣದುಬ್ಬರ, ಅನುಕೂಲಕರ ವಿತ್ತೀಯ ಪರಿಸ್ಥಿತಿಯಿಂದಾಗಿ ಜಿಡಿಪಿ ಬೆಳವಣಿಗೆ ಮುಂದುವರಿಯಲಿದೆ. 2025-26ರಲ್ಲಿ ಜಿಡಿಪಿ ಬೆಳವಣಿಗೆ 6.5% ರ ಮಟ್ಟದಲ್ಲಿ ಉಳಿದುಕೊಳ್ಳಲಿದೆ. ಪ್ರಸಕ್ತ ಸಾಲಿಗೆ ಹಣದುಬ್ಬರದ ಅಂದಾಜನ್ನು ಕೂಡ 3.7%ರಿಂದ 3.1% ಕ್ಕೆ ಇಳಿಸಿರುವುದು ಗಮನಾರ್ಹ.

ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಜೂನ್‌ ವೇಳೆಗೆ 2.1% ಮಟ್ಟದಲ್ಲಿದೆ. ಇದು ಕಳೆದ 77 ತಿಂಗಳುಗಳಲ್ಲಿಯೇ ಕನಿಷ್ಠ ಮಟ್ಟದ್ದಾಗಿದೆ. ಕೃಷಿ ಚಟುವಟಿಕೆಯಿಂದ ಆಹಾರ ಪೂರೈಕೆ ಸಮೃದ್ಧವಾಗಿರುವುದೇ ಚಿಲ್ಲರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಆದ್ದರಿಂದ ಅನ್ನದಾತರಾದ ರೈತರಿಗೆ ಎಲ್ಲರೂ ಈ ಸಂದರ್ಭ ಧನ್ಯವಾದವನ್ನು ತಿಳಿಸಬೇಕಾಗಿದೆ. ಜೂನ್‌ನಲ್ಲಿ ಆಹಾರ ಹಣದುಬ್ಬರವು ಮೈನಸ್‌ 0.2%ಕ್ಕೆ ಇಳಿಕೆಯಾಗಿದೆ. ಫೆಬ್ರವರಿಯಿಂದ ಮೇ ತನಕ ಕೋರ್‌ ಇನ್‌ಫ್ಲೆಶನ್‌ 4.1-4.2% ಮಟ್ಟದಲ್ಲಿ ಇತ್ತು. ಜೂನ್‌ನಲ್ಲಿ ಮಾತ್ರ ಇದು 4.4% ಕ್ಕೆ ಏರಿತ್ತು. ಇದಕ್ಕೆ ಕಾರಣ ಬಂಗಾರದ ದರ ಏರಿಕೆ ಆಗಿರುವುದು.

ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್‌ ವೈರ್‌! ವಿಡಿಯೊ ಫುಲ್‌ ವೈರಲ್‌

ಒಂದು ಕಡೆ ಮುಂಗಾರು ಮಳೆ ದೇಶವನ್ನು ವ್ಯಾಪಿಸುತ್ತಿದೆ. ಮತ್ತೊಂದು ಕಡೆ ಹಬ್ಬಗಳ ಸೀಸನ್‌ ಸಮೀಪಿಸುತ್ತಿದೆ. ರಕ್ಷಾ ಬಂಧನ, ಸ್ವಾತಂತ್ರ್ಯ ದಿನ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಈ ತಿಂಗಳು ಬರುತ್ತಿದೆ. ಹಬ್ಬಗಳ ಸೀಸನ್‌ನಲ್ಲಿ ಆರ್ಥಿಕ ಚಟುವಟಿಕೆಗಳೂ ಹೆಚ್ಚುತ್ತವೆ. ಹಬ್ಬಗಳ ಶಾಪಿಂಗ್‌ ಇಡೀ ದೇಶದಲ್ಲಿ ನಡೆಯಲಿದೆ. ಇದು ಆರ್ಥಿಕ ಬೆಳವಣಿಗೆಗೆ ಕೂಡ ಪುಷ್ಟಿದಾಯಕವಾಗಿದೆ. ಸ್ವತಃ ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅನೇಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಉಜ್ವಲವಾಗಿ ಆಕರ್ಷಿಸುತ್ತಿದೆ. ಬೆಳವಣಿಗೆ ಹೊಂದುತ್ತಿದೆ. ಕೆಲವು ಅಡ್ವಾನ್ಡ್ಸ್‌ ಎಕಾನಮಿಗಳಲ್ಲಿ ಕೂಡ ಹಣದುಬ್ಬರ ಏರುಗತಿಯಲ್ಲಿದೆ. ನಾನಾ ಕಡೆಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ ಮುಖ್ಯಸ್ಥರು ಮಂದಗತಿಯ ಬೆಳವಣಿಗೆಯನ್ನು ಬಿಂಬಿಸಿದ್ದಾರೆ. ಮಂದಗತಿಯ ಬೆಳವಣಿಗೆ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಾಲದ ಹೊರೆಯಿಂದ ಹಲವು ಇಕಾನಮಿಗಳಿಗೆ ಸವಾಲಾಗಿದೆ. ನ್ಯೂ ಗ್ಲೋಬಲ್‌ ಆರ್ಡರ್‌ ಉಂಟಾಗುತ್ತಿದೆ. ಈ ಹೊಸ ಗ್ಲೋಬಲ್‌ ಆರ್ಡರ್‌ನಲ್ಲಿ ಭಾರತ ಪ್ರಬಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ.