AUS vs IRE: ನೇಥನ್ ಎಲ್ಲಿಸ್ ಮಾರಕ ದಾಳಿ, ಆಸ್ಟ್ರೇಲಿಯಾ ತಂಡಕ್ಕೆ ಸುಲಭ ತುತ್ತಾದ ಐರ್ಲೆಂಡ್!
2026ರ ಐಸಿಸಿ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಐರ್ಲೆಂಡ್ ತಂಡವನ್ನು 67 ರನ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾದ ಬೌಲರ್‌ಗಳನ್ನು ಎದುರಿಸಲು ಐರಿಶ್ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ್ದ ಆಸೀಸ್, 20 ಓವರ್‌ಗಳಿಗೆ 182 ರನ್ ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಐರ್ಲೆಂಡ್ 115 ರನ್‌ಗಳಿಗೆ ಆಲ್‌ಔಟ್ ಆಯಿತು.
ಐರ್ಲೆಂಡ್ ವಿರುದ್ಧ 4 ವಿಕೆಟ್ ಕಿತ್ತ ನೇಥನ್ ಎಲ್ಲಿಸ್. -
ಕೊಲಂಬೊ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಆಸ್ಟ್ರೇಲಿಯಾ ತಂಡ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ (AUS vs IRE) 67 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಇದು ಐರ್ಲೆಂಡ್‌ನ ಸತತ ಎರಡನೇ ಸೋಲಾಗಿದ್ದು, ಮುಂದಿನ ಸುತ್ತಿಗೆ ಮುನ್ನಡೆಯುವುದು ಈ ತಂಡಕ್ಕೆ ಹೆಚ್ಚು ಕಷ್ಟಕರವಾಗಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ನಂತರ ಗುರಿಯನ್ನು ಹಿಂಬಾಲಿಸಿದ ಐರ್ಲೆಂಡ್ ತಂಡವನ್ನು 17ನೇ ಓವರ್‌ನಲ್ಲಿ 115 ರನ್‌ಗಳಿಗೆ ಆಸೀಸ್ ಬೌಲರ್‌ಗಳು ಆಲ್‌ಔಟ್ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಕಳಪೆ ಆರಂಭವನ್ನು ಪಡೆದಿತ್ತು. ಮಿಚೆಲ್ ಮಾರ್ಷ್ ಬದಲಿಗೆ ನಾಯಕರಾಗಿದ್ದ ಟ್ರಾವಿಸ್ ಹೆಡ್ ಎರಡನೇ ಓವರ್‌ನಲ್ಲಿ 6 ರನ್ ಗಳಿಸಿ ರನೌಟ್ ಆದರು. ನಂತರ ಜಾಶ್ ಇಂಗ್ಲಿಸ್ ಮತ್ತು ಕ್ಯಾಮೆರಾನ್ ಗ್ರೀನ್ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದರು. ಅವರು ಕೇವಲ 23 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 49 ರನ್ ಸೇರಿಸಿದರು. ಆದಾಗ್ಯೂ, ಅವರ ಇನಿಂಗ್ಸ್ 7ನೇ ಓವರ್‌ನಲ್ಲಿ ಕೊನೆಗೊಂಡಿತು. ಇಂಗ್ಲಿಸ್ 17 ಎಸೆತಗಳಲ್ಲಿ 37 ರನ್ ಗಳಿಸಿದರೆ, ಗ್ರೀನ್ 11 ಎಸೆತಗಳಲ್ಲಿ 21 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
T20 World Cup: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಇಶಾನ್ ಕಿಶನ್ ಗಾಯದ ಭೀತಿ!
ಆಸೀಸ್‌ಗೆ ಮಾರ್ಕಸ್ ಸ್ಟೋಯ್ನಿಸ್ ಆಸರೆ
88 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಬಿದ್ದ ನಂತರ ಮಾರ್ಕಸ್ ಸ್ಟೋಯ್ನಿಸ್ ಕ್ರೀಸ್‌ಗೆ ಬಂದರು. ಅವರು ಮ್ಯಾಟ್ ರೆನ್‌ಶಾ ಅವರೊಂದಿಗೆ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆರಂಭದಲ್ಲಿ ಇಬ್ಬರೂ ಹೋರಾಡಿದರೂ, ಅವರು 44 ಎಸೆತಗಳಲ್ಲಿ 61 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರೆನ್‌ಶಾ 33 ಎಸೆತಗಳಲ್ಲಿ 37 ರನ್ ಗಳಿಸಿದರು. ಸ್ಟೋಯ್ನಿಸ್ ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದರು, 29 ಎಸೆತಗಳಲ್ಲಿ 45 ರನ್‌ಗಳ ಕೊಡುಗೆ ನೀಡಿ ಔಟಾದರು. ಕೊನೆಯಲ್ಲಿ, ಕೂಪರ್ ಕಾನ್ನೆಲ್ಲಿ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ 13 ಎಸೆತಗಳಲ್ಲಿ ಅಜೇಯ 23 ರನ್‌ಗಳನ್ನು ಸೇರಿಸಿ ತಂಡವನ್ನು 180 ದಾಟಿಸಿದರು. ಕೊನೆಯ ಐದು ಓವರ್‌ಗಳಲ್ಲಿ ಐರ್ಲೆಂಡ್ 53 ರನ್‌ಗಳನ್ನು ಬಿಟ್ಟುಕೊಟ್ಟಿತು. ಐರ್ಲೆಂಡ್ ಪರ ಮಾರ್ಕಸ್ ಅಡೈರ್ ಎರಡು ವಿಕೆಟ್‌ಗಳನ್ನು ಪಡೆದರು.
Australia begin their #T20WorldCup campaign with a dominant victory over Ireland 🔥
— ICC (@ICC) February 11, 2026
📝: https://t.co/JAY98fldkw pic.twitter.com/ACelQ3NsCH
ಐರ್ಲೆಂಡ್ ತಂಡದ ಬ್ಯಾಟಿಂಗ್ ವಿಫಲ
ಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟರ್ಲಿಂಗ್ ಒಂದು ಎಸೆತದ ನಂತರ ಗಾಯಗೊಂಡು ನಿವೃತ್ತರಾದರು ಮತ್ತು ಮತ್ತೆ ಬ್ಯಾಟಿಂಗ್ ಮಾಡಲಿಲ್ಲ. ಐರ್ಲೆಂಡ್ ಪರ ಜಾರ್ಜ್ ಡಾಕ್ರೆಲ್ 41 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಐರ್ಲೆಂಡ್ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ಯಾಟ್ ಕಮಿನ್ಸ್ ಮತ್ತು ಜಾಶ್ ಹೇಝಲ್‌ವುಡ್ ಗಾಯದ ಕಾರಣದಿಂದಾಗಿಆಯ್ಕೆಗೆ ಲಭ್ಯರಿರಲಿಲ್ಲ. ಹಾಗಾಗಿ ನೇಥನ್ ಎಲ್ಲಿಸ್ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು. ಇದರ ಫಲವಾಗಿ ಎಲ್ಲಿಸ್ ತನ್ನ ಆರಂಭಿಕ ಮೂರು ಓವರ್‌ಗಳಲ್ಲಿ ಒಂಬತ್ತು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಅವರು ರಾಸ್ ಅಡೈರ್ (12), ಕರ್ಟಿಸ್ ಕ್ಯಾಂಪರ್ (04), ಬೆನ್ ಕ್ಯಾಲಿಟ್ಜ್ (02) ಅವರನ್ನು ಔಟ್ ಮಾಡಿದರು.
Nathan Ellis' clever bowling paved the way for a solid Australia win and got him the @aramco POTM award 👌 pic.twitter.com/jMTrwOFJTf
— ICC (@ICC) February 11, 2026
ಆಡಮ್ ಝಾಂಪ ನಂತರ ಗ್ಯಾರೆತ್ ಡೆಲಾನಿ (11), ಲೋರ್ಕನ್ ಟಕರ್ (24), ಡಾಕ್ರೆಲ್ ಮತ್ತು ಮಾರ್ಕ್ ಅಡೈರ್ (12) ಅವರ ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಐರ್ಲೆಂಡ್ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಎಲಿಸ್ ಬ್ಯಾರಿ, ಮೆಕಾರ್ಥಿ (2) ಅವರನ್ನು ಔಟ್ ಮಾಡಿ ಪಂದ್ಯವನ್ನು ಮುಗಿಸಿದರು. ಎಲಿಸ್ 12 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಝಾಂಪ 23 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು.