ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಚರಣೆ ಹೆಸರಲ್ಲಿ ಲೈಂಗಿಕ ಶೋಷಣೆ: ನಕಲಿ ದೇವಮಾನವನ ಕರ್ಮಕಾಂಡ ಬೆಳಕಿಗೆ ಬಂದಿದ್ದು ಹೇಗೆ?

Gym Trainer Turned Godman: ಜಿಮ್ ತರಬೇತುದಾರ ಆಗಿದ್ದ ವ್ಯಕ್ತಿಯೊಬ್ಬ ಸ್ವಯಂಘೋಷಿತ ದೇವಮಾನವನಾದ ಕಥೆಯಿದು. ನಾಲ್ಕು ವರ್ಷಗಳ ಹಿಂದಿನವರೆಗೂ ಮುಂಬೈಯ ರಿದಮ್ ಪಾಂಚಾಲ್ ಅಲಿಯಾಸ್ ಮಾಂಟಿ ಎಂಬಾತ ಜಿಮ್ ತರಬೇತುದಾರರಾಗಿದ್ದ. ನಂತರ, ಒಂದು ದಿನ ಏಕಾಏಕಿ ಸ್ವಯಂಘೋಷಿತ ದೇವಮಾನವನಾದ. ಆತನ ಕುರಿತಾದ ವಿವರ ಇಲ್ಲಿದೆ.

ಜಿಮ್ ತರಬೇತುದಾರ ದೇವಮಾನವನಾಗಿದ್ದೇಗೆ?

ಜಿಮ್ ತರಬೇತುದಾರ ರಿದಮ್ ಪಾಂಚಾಲ್ (ಸಂಗ್ರಹ ಚಿತ್ರ) -

Priyanka P
Priyanka P Apr 16, 2026 7:50 PM

ಮುಂಬೈ, ಏ. 16: ಜಿಮ್ ತರಬೇತುದಾರನೊಬ್ಬ ಸ್ವಯಂಘೋಷಿತ ದೇವ ಮಾನವನಾದ (Gym Trainer Turned Godman) ಕಥೆಯಿದು (Crime News). ನಾಲ್ಕು ವರ್ಷಗಳ ಹಿಂದಿನವರೆಗೂ, ರಿದಮ್ ಪಾಂಚಾಲ್ ಅಲಿಯಾಸ್ ಮಾಂಟಿ ಎಂಬಾತ ಜಿಮ್ ತರಬೇತುದಾರರಾಗಿದ್ದ. ನಂತರ, ಒಂದು ದಿನ ಏಕಾಏಕಿ ಸ್ವಯಂ ಘೋಷಿತ ದೇವಮಾನವನಾದ. 37 ವರ್ಷದ ಪಾಂಚಾಲ್, ಮಾಂತ್ರಿಕ ಶಕ್ತಿಗಳು ಮತ್ತು ದೆವ್ವಗಳನ್ನು ಓಡಿಸುವುದಾಗಿ ಹೇಳಿಕೊಂಡಿದ್ದ. ಇದಕ್ಕಾಗಿ ಭಕ್ತರಿಂದ ಹಣವನ್ನು ಮಾತ್ರವಲ್ಲದೆ, ಮದ್ಯ, ಸಿಗರೇಟ್, ಜೀವಂತ ಕೋಳಿಗಳು ಮತ್ತು ಮೇಕೆ ಯಕೃತ್ತನ್ನು ಸಹ ಕೇಳುತ್ತಿದ್ದ ಎನ್ನಲಾಗಿದೆ .

'ಮಾಂಟಿ ಬಾಬಾ' ಎಂದೇ ಕರೆಯಲ್ಪಡುವ ಪಾಂಚಾಲ್ ವಿರುದ್ಧ 60ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ ನಂತರ ಮಹಾರಾಷ್ಟ್ರದ ಮುಂಬೈಯ ಮಲಾಡ್ (ಪೂರ್ವ) ಪ್ರದೇಶದಲ್ಲಿ ಆತನನ್ನು ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ. ಪಾಂಚಾಲ್ ಮಲಾಡ್‌ನ ಖಾಲಿ ಜಾಗದಲ್ಲಿ ಪ್ರತಿ ಗುರುವಾರ ಮತ್ತು ಶನಿವಾರ ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ದರ್ಬಾರ್ ನಡೆಸುತ್ತಿದ್ದ. ತನ್ನ ಮೈಮೇಲೆ ದೇವರು ಬಂದಿದೆ ಎಂದು ಹೇಳಿಕೊಂಡು ಮಕ್ಕಳನ್ನು ಹೆರಲು ಸಹಾಯ ಮಾಡುವ ನೆಪದಲ್ಲಿ ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದ.

ಜನರ ಗಮನ ಸೆಳೆದದ್ದು ಮಾಂಟಿ ಬಾಬಾನ ವಿಧಾನಗಳು. ಪ್ರೇತಗಳನ್ನು ಹೊರಹಾಕಲು, ಬಾಯಿಯಲ್ಲಿ ಉರಿಸಿದ ಸಿಗರೇಟನ್ನು ಹಿಡಿದುಕೊಂಡು ಅಘೋರಿ ಆಚರಣೆಗಳನ್ನು ಮಾಡುತ್ತಿದ್ದ. ದುಬಾರಿ ಮದ್ಯ, ಸಿಗರೇಟ್ ಮತ್ತು ಪ್ರಾಣಿಗಳ ಯಕೃತ್ತಿಗೆ ಇಡುತ್ತಿದ್ದ ಬೇಡಿಕೆಗಳು ಕೆಲವು ಭಕ್ತರು ಮತ್ತು ಸ್ಥಳೀಯರಲ್ಲಿ ಅನುಮಾನಗಳಿಗೆ ಕಾರಣವಾಯಿತು.

‘ʼಮಗು ಬೇಕಾದರೆ ಪತ್ನಿಯನ್ನು ನನ್ನ ಬಳಿಗೆ ಕಳ್ಸುʼʼ: ಟಿಸಿಎಸ್ ಉದ್ಯೋಗಿ ಬಳಿ ಬಾಸ್‌ನ ಅಸಭ್ಯ ನಡವಳಿಕೆ

ಕೆಲವರು ಅವನ ಆಚರಣೆಗಳನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ, ಹಣ ಮತ್ತು ಸರಕುಗಳಿಗಾಗಿ ಅವನ ಬೇಡಿಕೆಗಳನ್ನು ಪೂರೈಸಲು ವಿಫಲವಾದಾಗ ಅಂತಹವರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಒಡ್ಡುತ್ತಿದ್ದ. ಹೀಗಾಗಿ ಸಂತ್ರಸ್ತರು ಬಿಜೆಪಿ ಮಾಜಿ ಕಾರ್ಪೊರೇಟರ್ ಆಗಿದ್ದ ವಕೀಲ ಸಿದ್ಧಾರ್ಥ್ ಶರ್ಮಾ ಅವರನ್ನು ಸಂಪರ್ಕಿಸಿ ಮಧ್ಯರಾತ್ರಿಯ ಆಚರಣೆಗಳು, ಲೈಂಗಿಕ ಶೋಷಣೆ ಮತ್ತು ಆರ್ಥಿಕ ಸುಲಿಗೆಯ ಬಗ್ಗೆ ಮಾಹಿತಿ ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂತು.

ಈ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಹಲವು ಮಂದಿ ಆತನ ವಿರುದ್ಧ ದೂರು ದಾಖಲಿಸಲು ಮುಂದೆ ಬಂದರು. ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ತನಿಖೆ ನಡೆಸಿದಾಗ ಪಂಚಲ್ ಜಿಮ್‌ನ ಮಾಜಿ ತರಬೇತುದಾರನಾಗಿದ್ದು, ಯಾವುದೇ ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ. ಧೂಮಪಾನ ಮಾಡುವಾಗ ದೆವ್ವ ಹಿಡಿದಂತೆ ನಟಿಸಿದನೆಂದು ವರದಿಯಾಗಿದೆ.

ಈ ಸಂಬಂಧ ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸದ್ಯ ಪಂಚಲ್‌ನನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.