False US Kidnapping Case: ಫೇಕ್ ಕಿಡ್ನ್ಯಾಪ್ ಕೇಸ್‌ನಲ್ಲಿ ಅಮೆರಿಕದಲ್ಲಿ ಭಾರತೀಯನಿಗೆ ಶಿಕ್ಷೆ
ಸುಳ್ಳು ಅಪಹರಣ ಆರೋಪದಲ್ಲಿ ಭಾರತೀಯ ಮೂಲದ ಮಹೇಂದ್ರ ಪಟೇಲ್ ಎಂಬವರು ಜಾರ್ಜಿಯಾದ ಕಾಬ್ ಕೌಂಟಿ ಜೈಲಿನಲ್ಲಿ 47 ದಿನಗಳನ್ನು ಕಳೆದಿದ್ದಾರೆ. ಈ ವೇಳೆ ತಾವು ತೀವ್ರ ಯಾತನೆ ಅನುಭವಿಸಿದ್ದು, ಜಾರ್ಜಿಯಾದ ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಜಾರ್ಜಿಯಾ: ಸುಳ್ಳು ಅಪಹರಣ ಆರೋಪದಲ್ಲಿ (False US Kidnapping Case) ಯುಎಸ್ (US) ನಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಾವು ಜೈಲಿನಲ್ಲಿ ಅನುಭವಿಸಿದ ಕಿರಿಕಿರಿಯನ್ನು ಹೇಳಿಕೊಂಡಿದ್ದು, ಕಾನೂನು ಜಾರಿ ಸಂಸ್ಥೆಗಳು (law enforcement agencies) ಸಾರ್ವಜನಿಕವಾಗಿ ತಮ್ಮ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಜಾರ್ಜಿಯಾ ವಾಲ್‌ಮಾರ್ಟ್‌ನಲ್ಲಿ ( Georgia Walmart) ಸುಳ್ಳು ಅಪಹರಣ ಆರೋಪದಿಂದ ಭಾರತೀಯ ಮೂಲದ ಮಹೇಂದ್ರ ಪಟೇಲ್ 47 ದಿನಗಳ ಸೆರೆಮನೆ ವಾಸವನ್ನು ಅನುಭವಿಸಿದರು. ಕಾಬ್ ಕೌಂಟಿ ಜೈಲಿನಲ್ಲಿದ್ದ (Cobb County jail) ಅವರು ತಾವು ಜೈಲಿನಲ್ಲಿ ಅನುಭವಿಸಿದ ತೀವ್ರ ಕಷ್ಟಕರವಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಸುಳ್ಳು ಅಪಹರಣ ಆರೋಪದಲ್ಲಿ ಮಹೇಂದ್ರ ಪಟೇಲ್ 47 ದಿನಗಳ ಕಾಲ ಕಾಬ್ ಕೌಂಟಿ ಜೈಲಿನಲ್ಲಿದ್ದರು. ಇದಕ್ಕಾಗಿ ಈಗ ಅವರು ಜಾರ್ಜಿಯಾದ ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಾರ್ಜಿಯಾ ವಾಲ್‌ಮಾರ್ಟ್‌ನಲ್ಲಿ 2 ವರ್ಷದ ಮಗನನ್ನು ತನ್ನಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಾಯಿಯೊಬ್ಬಳು ಆರೋಪಿಸಿದ ಅನಂತರ ಮಹೇಂದ್ರ ಪಟೇಲ್ ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್ 3ರಂದು ಅವರ ಮೇಲೆ ದೋಷಾರೋಪಣೆ ಮಾಡಲಾಯಿತು. ಬಳಿಕ ಪಟೇಲ್ ಅವರನ್ನು 47 ದಿನಗಳ ಕಾಲ ಕಾಬ್ ಕೌಂಟಿ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿತ್ತು.
ಇದೀಗ ಅವರ ವಿರುದ್ಧ ಆರೋಪ ಸುಳ್ಳೆಂದು ಸಾಬೀತಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲುವಾಸದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಪಟೇಲ್, ತಾವು ಸಸ್ಯಾಹಾರಿಯಾಗಿದ್ದರಿಂದ ಕೇವಲ ಬ್ರೆಡ್, ಕಡಲೆಕಾಯಿ ಬೆಣ್ಣೆ ಮತ್ತು ಹಾಲು ಸೇವಿಸಿ ಬದುಕುತ್ತಿದ್ದೆ. ಇತರ ಕೈದಿಗಳು ಬೆದರಿಕೆ ಹಾಕುತ್ತಿದ್ದು, ಭಯದಿಂದಲೇ ಇರಬೇಕಿತ್ತು ಎಂದು ತಿಳಿಸಿದ್ದಾರೆ.
ನಾನು ಜೈಲಿನಲ್ಲಿ 17 ಪೌಂಡ್‌ಗಳನ್ನು ಕಳೆದುಕೊಂಡೆ. ಹಲವು ದಿನಗಳಿಂದ ಔಷಧಗಳು ಸಿಗಲಿಲ್ಲ. ನಾನು ಸಸ್ಯಾಹಾರಿ. ಆದ್ದರಿಂದ ನಾನು ಬ್ರೆಡ್, ಕಡಲೆಕಾಯಿ, ಬೆಣ್ಣೆ ಮತ್ತು ಹಾಲು ಸೇವಿಸಿ ಬದುಕಿದೆ. ಇತರ ಕೈದಿಗಳು ನನ್ನನ್ನು ಬೆದರಿಸಿದರು. ಒಬ್ಬ ನಾನು ನಿನ್ನನ್ನು ಸ್ನಾನಕ್ಕೆ ಕರೆದುಕೊಂಡು ಹೋಗಿ ಹೊಡೆದರೆ, ಏನು ಮಾಡುತ್ತೀಯ ಎಂದು ಕೇಳಿದನು. ಇನ್ನೊಬ್ಬ, ರಕ್ಷಣೆಗಾಗಿ ಅರ್ಧ ಮಿಲಿಯನ್ ಡಾಲರ್‌ಗಳನ್ನು ನೀಡುವಂತೆ ಹೇಳುತ್ತಿದ್ದ ಎಂದು ಪಟೇಲ್ ವಿವರಿಸಿದ್ದಾರೆ.
ಅಪಹರಣ ಆರೋಪದ ಬಳಿಕ ತನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಲಾಗಿತ್ತು. ಗಡೀಪಾರು ಮಾಡುವಂತೆ ಅನೇಕರು ಒತ್ತಾಯಿಸಿದ್ದರು. ಕೆಲವರು ನನ್ನನ್ನು ಜೀವಂತವಾಗಿ ಸುಡಬೇಕು ಎಂದು ಹೇಳಿದ್ದರು. ಇದರಿಂದ ತೀವ್ರ ಚಿತ್ರಹಿಂಸೆಯಾಗಿದೆ. ಆದ್ದರಿಂದ ನಾನು ಪೊಲೀಸರು ಮತ್ತು ಜಿಲ್ಲಾ ವಕೀಲರು ಸಾರ್ವಜನಿಕವಾಗಿ ನನ್ನ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ. ಇನ್ನೊಬ್ಬ ನಿರಪರಾಧಿಗೆ ಇಂತಹ ಶಿಕ್ಷೆ ಎಂದಿಗೂ ಆಗಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: Alia Bhatt: ವೆಕೇಷನ್ ಮೂಡ್‌ನಲ್ಲಿ ಆಲಿಯಾ ಭಟ್- ಬಿಕಿನಿ ಫೋಟೋಶೂಟ್ ಹೇಗಿದೆ ಗೊತ್ತಾ?
ಪಟೇಲ್ ನಿರಪರಾಧಿ ಎಂಬುದು ಸಿಸಿಟಿವಿ ಕೆಮರಾ ದೃಶ್ಯಗಳಿಂದ ಸಾಬೀತಾಗಿದೆ. ಅಕ್ವರ್ತ್ ನಗರದ ವಾಲ್‌ಮಾರ್ಟ್‌ನಲ್ಲಿ ದೂರುದಾರೆ ಕ್ಯಾರೋಲಿನ್ ಮಿಲ್ಲರ್ ತನ್ನ ಇಬ್ಬರು ಮಕ್ಕಳೊಂದಿಗೆ ಮೋಟಾರ್ ಕಾರ್ಟ್ ಸವಾರಿ ಮಾಡುತ್ತಿದ್ದರು. ಈ ವೇಳೆ ಪಟೇಲ್ ತನ್ನ 2 ವರ್ಷದ ಮಗನನ್ನು ಕಸಿದುಕೊಂಡಿದ್ದು, ಈ ವೇಳೆ ಆಕೆ ಮಗುವನ್ನು ಹಿಂದಕ್ಕೆ ಎಳೆದಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಪಟೇಲ್ ಮಗು ಬೀಳದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನುವುದು ದೃಢಪಟ್ಟಿದೆ.