ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daisy Shah: ಶೂಟಿಂಗ್‌ ವೇಳೆ ಕಿರುಕುಳ ಅನುಭವಿಸಿದ್ದ ಬಗ್ಗೆ ನಟಿ ಡೈಸಿ ಶಾ ಹೇಳಿದ್ದೇನು?

ಕನ್ನಡದಲ್ಲೂ ನಟಿಸಿದ್ದ ಬಾಲಿವುಡ್‌ ನಟಿ ಡೈಸಿ ಶಾ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ್ದ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಡೊಂಬಿವ್ಲಿಯ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಮೈ ಮುಟ್ಟಿದ ಕೆಟ್ಟ ಅನುಭವ ಕಾಡುವುದಾಗಿ ತಿಳಿಸಿದ್ದಾರೆ.

ಚಿತ್ರೀಕರಣ ವೇಳೆ ಕಿರುಕುಳ ಅನುಭವಿಸಿದ್ದ ಬಾಲಿವುಡ್ ನಟಿ ಡೈಸಿ ಶಾ

Daisy Shah

Profile Pushpa Kumari Aug 24, 2025 8:34 PM

ಮುಂಬೈ: ಬಹುಭಾಷಾ ನಟಿ, ಮಾಡೆಲ್, ಡ್ಯಾನ್ಸರ್ ಡೈಸಿ ಶಾ (Daisy Shah) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಇವರು ಹಿಂದಿಯ ಜನಪ್ರಿಯ ಶೋ ʼಫಿಯರ್ ಫ್ಯಾಕ್ಟರಿ ಖತ್ರೋನ್ ಕಿ ಖಿಲಾಡಿʼಯಲ್ಲಿ ಕೂಡ ಭಾಗವಹಿಸಿದ್ದಾರೆ. ಇವರ ನಟನೆಯ ಸಲ್ಮಾನ್ ಖಾನ್ ಜತೆಗಿನ ʼಜೈ ಹೋʼ, ʼಹೇಟ್ ಸ್ಟೋರಿ 3ʼ ಹಿಂದಿ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದಾರೆ. 2003ರಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದ ಇವರು ಇದೀಗ ಸಿನಿಮಾ ಜರ್ನಿ ಆರಂಭಕ್ಕೂ ಮುನ್ನ ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ಇತ್ತೀಚೆಗೆ ತಮ್ಮ ಹುಟ್ಟೂರು ಮುಂಬೈ ಬಳಿಯ ಡೊಂಬಿವ್ಲಿ ಹಾಗೂ ಜೈಪುರದಲ್ಲಿ ನಡೆದ ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಡೈಸಿ ಶಾ ಇತ್ತೀಚೆಗಷ್ಟೆ ಸಂದರ್ಶನದಲ್ಲಿ ಭಾಗಿಯಾಗಿದ್ದು, ತಾವು ಅನುಭವಿಸಿದ್ದ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ʼʼಡೊಂಬಿವ್ಲಿಯ ಫುಟ್‌ಪಾತ್‌ನಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಹಿಂದಿನಿಂದ ನಡೆದು ಬಂದು ನನ್ನ ಮೈ ಮುಟ್ಟಿದ. ಆ ಕೆಟ್ಟ ಅನುಭವ ಈಗಲೂ ಕಾಡುತ್ತಿರುತ್ತದೆ. ನಾನು ತಿರುಗಿ ನೋಡುವ ಸಮಯಕ್ಕೆ ಆ ಪ್ರದೇಶವು ಜನದಟ್ಟಣೆಯಿಂದ ಕೂಡಿದ್ದರಿಂದ ಆ ವ್ಯಕ್ತಿ ಯಾರೆಂದು ತಿಳಿಯಲೇ ಇಲ್ಲʼʼ ಎಂದು ಅವರು ಹೇಳಿದ್ದಾರೆ. ಜನ ದಟ್ಟಣೆ ಮತ್ತು ಅವ್ಯವಸ್ಥೆಯಿಂದಾಗಿ ಆ ಸಮಯದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.

ʼʼಬಳಿಕ ಜೈಪುರದಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದೆ. ಸಿನಿಮಾ ಶೂಟಿಂಗ್‌ಗಾಗಿ ಜೈಪುರಕ್ಕೆ ನಾವೆಲ್ಲ ತೆರಳಿದ್ದೆವು. ಸಿನಿಮಾದ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ ಕೂಡ ನನಗೆ ಕೆಟ್ಟ ಅನುಭವ ನೀಡಿದೆ. ನಾವು ಜೈಪುರದ ಹವೇಲಿಯಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡುತ್ತಿದ್ದೆವು. ಅದೊಂದು ಪ್ರವಾಸಿ ತಾಣವಾಗಿದ್ದು, ಆ ವೇಳೆ ಸುಮಾರು 500 ಜನರು ಇದ್ದರು. ಆಗ ಆ ಗುಂಪಿನಲ್ಲಿ, ಯಾರೋ ನನ್ನ ಬೆನ್ನನ್ನು ತುಂಬಾ ಕೆಟ್ಟದಾಗಿ ಮುಟ್ಟಿದʼʼ ಡೈಸಿ ಶಾ ತಿಳಿಸಿದ್ದಾರೆ.

ಇದನ್ನು ಓದಿ:Bestie Movie: ‘ಬೆಸ್ಟಿ’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್

ಬಳಿಕ ಮಾತನಾಡಿ, ʼʼನನಗೆ ಆಗ ಅದು ಯಾರೆಂದು ಗೊತ್ತಾಗಲಿಲ್ಲ. ನಾನು ಯಾರನ್ನು ನೋಡಿದರೂ ಕೋಪ ಬರುತ್ತಿತ್ತು. ನನ್ನ ಬೆನ್ನ ಹಿಂದೆ ನಿಂತಿದ್ದ ಸ್ಥಳೀಯ ವ್ಯಕ್ತಿಯೊಬ್ಬ ನನ್ನ ಜತೆ ಅಸಭ್ಯವಾಗಿ ವರ್ತಿಸಿದ್ದು ಅವಾಚ್ಯವಾಗಿ ಬೈಯಲು ಮುಂದಾಗಿದ್ದಾನೆ. ಹೀಗಾಗಿ ನನ್ನ ಬೆನ್ನಹಿಂದೆ ಇದ್ದ ವ್ಯಕ್ತಿಗೆ ಹೊಡೆದುಬಿಟ್ಟಿದ್ದೆ. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸ್ಥಳೀಯರೊಬ್ಬರು ನನಗೆ ಬೆದರಿಕೆ ಹಾಕಿದರು. ನಾನು ಅವರ ಬೆದರಿಕೆಗೆ ಅಂಜಲಿಲ್ಲʼʼ ಎಂದಿದ್ದಾರೆ.

ಡೈಸಿ ಕನ್ನಡದ ʼಭದ್ರʼ, ʼಬಾಡಿಗಾರ್ಡ್ʼ ಮುಂತಾದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರು ಕೊನೆಯ ಬಾರಿಗೆ 2023ರಲ್ಲಿ ಬಿಡುಗಡೆಯಾದ ʼಮಿಸ್ಟರಿ ಆಫ್ ದಿ ಟ್ಯಾಟೂʼ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಯಾವುದೇ ಹೊಸ ಚಿತ್ರವನ್ನು ಅವರು ಘೋಷಿಸಿಲ್ಲ. ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 19ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಕೂಡ ಹರಿದಾಡಿತ್ತು. ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಎಂದಿಗೂ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅವರು ಗಾಸಿಪ್ ಬಗ್ಗೆ ಇವರು ಸ್ಪಷ್ಟನೆ ನೀಡಿದ್ದರು.