ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಿರುಕುಳ, ಸಹಾಯಕ್ಕಾಗಿ ಮೊರೆ: ಜೈಪುರ ಶಾಲಾ ಬಾಲಕಿಯ ಸಾವಿಗೂ ಮುಂಚಿನ ಸಿಸಿಟಿವಿ ದೃಶ್ಯಾವಳಿ ವೈರಲ್

ಜೈಪುರದ ನೀರ್ಜಾ ಮೋದಿ ಶಾಲೆಯ 9 ವರ್ಷದ ವಿದ್ಯಾರ್ಥಿನಿ ಅಮೇರಾ ಸಾವಿಗೂ ಮುನ್ನದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ತರಗತಿಯಲ್ಲಿ ಆತಂಕದಲ್ಲಿದ್ದ ಬಾಲಕಿ ಹಲವು ಬಾರಿ ಶಿಕ್ಷಕಿಯ ಬಳಿ ಸಹಾಯ ಕೇಳಲು ಪ್ರಯತ್ನಿಸಿದ್ದರೂ ನಿರ್ಲಕ್ಷ್ಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಆಕೆ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ. ಪ್ರಕರಣದಲ್ಲಿ ಶಾಲೆಯ ವಿರುದ್ಧ ಕುಟುಂಬ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಸಿಬಿಎಸ್‌ಇ ಕೂಡ ಸುರಕ್ಷತಾ ವೈಫಲ್ಯದ ಬಗ್ಗೆ ಶೋಕಾಸ್ ನೋಟಿಸ್ ನೀಡಿದೆ.

ಕಿರುಕುಳಕ್ಕೆ ಬಲಿಯಾದ 9 ವರ್ಷದ ಬಾಲಕಿ..!

ಕಿರುಕುಳದ ದೃಶ್ಯ -

Profile
Sushmitha Jain Jul 10, 2026 8:36 PM

ಜೈಪುರ: ಕಳೆದ ನವೆಂಬರ್‌ನಲ್ಲಿ ಜೈಪುರ (Jaipur)ದ ನೀರ್ಜಾ ಮೋದಿ ಶಾಲೆ (Neerja Modi School) ಯ 4ನೇ ತರಗತಿ ವಿದ್ಯಾರ್ಥಿನಿ 9 ವರ್ಷದ ಅಮೇರಾ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಸಿಸಿಟಿವಿ ದೃಶ್ಯಗಳು ಮತ್ತೆ ಜೀವ ತುಂಬಿವೆ. ದೃಶ್ಯಗಳ ಪ್ರಕಾರ, ಅಮೇರಾ ಎಂದಿನಂತೆ ಶಾಂತವಾಗಿ ತರಗತಿ ಪ್ರವೇಶಿಸಿ, ನೃತ್ಯ (Self Harming) ತರಗತಿಯಲ್ಲೂ ಉತ್ಸಾಹದಿಂದ ಪಾಲ್ಗೊಂಡಿದ್ದಳು. ಆದರೆ ನಂತರ ತರಗತಿಯಲ್ಲಿ ಕೆಲವು ಮಕ್ಕಳು ಡಿಜಿಟಲ್ ಸ್ಲೇಟ್‌ನಲ್ಲಿ ಏನನ್ನೋ ತೋರಿಸಿದ ಬಳಿಕ ಆಕೆಯ ನಡವಳಿಕೆ ಬದಲಾಗಿದೆ. ಆಕೆ ತೀವ್ರ ಮುಜುಗರ, ತಳಮಳ ಮತ್ತು ಆತಂಕಕ್ಕೆ ಒಳಗಾಗಿದ್ದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ತನ್ನ ಆತಂಕವನ್ನು ತೋಡಿಕೊಳ್ಳಲು ಅಮೇರಾ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಹಲವು ಬಾರಿ ತರಗತಿ ಶಿಕ್ಷಕಿಯ ಬಳಿ ಹೋಗಿದ್ದಾಳೆ. ಆದರೆ ಪ್ರತಿ ಬಾರಿಯೂ ಬೇರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಶಿಕ್ಷಕಿಯ ಗಮನ ಬೇರೆಡೆ ಸೆಳೆದಿದ್ದಾರೆ. ಅಮೇರಾ ಕೈ ಮುಗಿದು, ಬಾಯಿ ಮತ್ತು ತಲೆ ಮುಚ್ಚಿಕೊಂಡು ತನ್ನ ಅಸಹಾಯಕತೆಯನ್ನು ವಿವರಿಸಲು ಯತ್ನಿಸಿದರೂ, ಶಿಕ್ಷಕಿ ಆಕೆಯ ಮಾತನ್ನು ಆಲಿಸದೆ ಗದರಿಸಿ ಸೀಟಿಗೆ ಮರಳಿ ಕಳುಹಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ತರಗತಿಯ ಒಳಗೆ ಇಷ್ಟೆಲ್ಲಾ ಗೊಂದಲಗಳು ನಡೆಯುತ್ತಿದ್ದರೂ ಶಿಕ್ಷಕಿ ಮಾತ್ರ ಪರಿಸ್ಥಿತಿಯನ್ನು ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ.

ಇದಾದ ಕೆಲವೇ ಕ್ಷಣಗಳಲ್ಲಿ ಅಮೇರಾ ತರಗತಿಯಿಂದ ಹೊರನಡೆದು, ಶಾಲೆಯ ಯಾವುದೇ ಸಿಬ್ಬಂದಿಯ ಕಣ್ಣಿಗೆ ಬೀಳದಂತೆ ನೆಲಮಹಡಿಯಿಂದ 4ನೇ ಮಹಡಿಗೆ ವೇಗವಾಗಿ ಹೋಗಿದ್ದಾಳೆ. ಕಾರಿಡಾರ್‌ಗಳಲ್ಲಿ ಓಡುತ್ತಿದ್ದ ಆಕೆಯನ್ನು ತಡೆಯಲು ಯಾರೂ ಇರಲಿಲ್ಲ. ನವೆಂಬರ್ 1 ರಂದು ಆಕೆ ಅಲ್ಲಿಂದ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.

Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

ಕಠಿಣ ಕ್ರಮಕ್ಕೆ ಕುಟುಂಬದ ಒತ್ತಾಯ:

ಮಗಳ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪೋಷಕರು, ಕೇವಲ ವರ್ಗ ಶಿಕ್ಷಕಿ ಮಾತ್ರವಲ್ಲದೆ ಶಾಲೆಯ ಪ್ರಾಂಶುಪಾಲರು ಮತ್ತು ಅಧ್ಯಕ್ಷರ ಮೇಲೂ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರ ನಿಷ್ಕ್ರಿಯತೆಯ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.

ಸಿಬಿಎಸ್‌ಇ ತನಿಖಾ ಸಮಿತಿಯು ಶಾಲೆಗೆ ಶೋಕಾಸ್ ನೋಟಿಸ್ ನೀಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಶಾಲೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದೆ. ಕಳೆದ 18 ತಿಂಗಳುಗಳಿಂದ ಅಮೇರಾ ಶಾಲೆಯಲ್ಲಿ ನಿರಂತರವಾಗಿ ಸಹಪಾಠಿಗಳಿಂದ ಕಿರುಕುಳಕ್ಕೊಳಗಾಗಿದ್ದಳು. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ತಂದೆಯು ದೂರು ನೀಡಿದ್ದರೂ, ಶಿಕ್ಷಕಿ ಪುನೀತಾ ಶರ್ಮಾ ಅದನ್ನು ನಿರ್ಲಕ್ಷಿಸಿ "ಇತರ ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ" ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಾಲೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಆಲ್-ರೌಂಡರ್ ಹಾಗೂ ಅತ್ಯಂತ ಪ್ರತಿಭಾವಂತ ಬಾಲಕಿಯೊಬ್ಬಳು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವುದು ಇಡೀ ದೇಶದಲ್ಲೇ ತೀವ್ರ ಆಘಾತ ಮೂಡಿಸಿದೆ.