ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಪತ್ತೆಯಾಗಿದ್ದ ವೃದ್ಧ ದಂಪತಿ ಮನೆಯಲ್ಲೇ ಶವವಾಗಿ ಪತ್ತೆ; ಜೋಡಿ ಕೊಲೆಗೆ ಬೆಚ್ಚಿಬಿದ್ದ ಸ್ಥಳೀಯರು

Crime News: ನಾಪತ್ತೆಯಾಗಿದ್ದ ದಂಪತಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯ ಪೂನವಾಲಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 65 ವರ್ಷದ ಲಹ್ರಿ ಲಾಲ್ ಪಲಿವಾಲ್ ಮತ್ತು 62 ವರ್ಷದ ರಾಧಾ ದೇವಿ ಎಂದು ಪೊಲೀಸರು ಗುರುತಿಸಿದ್ದಾರೆ. ಪಲಿವಾಲ್ ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಿದ್ದರು.

ನಾಪತ್ತೆಯಾಗಿದ್ದ ವೃದ್ಧ ದಂಪತಿ ಮನೆಯಲ್ಲೇ ಶವವಾಗಿ ಪತ್ತೆ!

ಸಾಂದರ್ಭಿಕ ಚಿತ್ರ -

Priyanka P
Priyanka P Aug 14, 2026 8:48 PM

ಜೈಪುರ, ಆ.14: ನಾಪತ್ತೆಯಾಗಿದ್ದ ದಂಪತಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ರಾಜಸ್ಥಾನದ (Rajasthan) ಉದಯಪುರ ಜಿಲ್ಲೆಯ ಪೂನವಾಲಿ ಗ್ರಾಮದಲ್ಲಿ ನಡೆದಿದೆ. ಮೃತರ ಮನೆಯಲ್ಲಿ ಶುಕ್ರವಾರ (ಆ.14) ಬೆಳಗ್ಗೆ ಟ್ರಂಕ್‌ನಲ್ಲಿ ದಂಪತಿಗಳ ಮೃತದೇಹ ಪತ್ತೆಯಾಗಿವೆ ಎಂದು (Crime News) ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 12ರ ಬೆಳಗ್ಗೆಯಿಂದ ದಂಪತಿಗಳು ಕಾಣೆಯಾಗಿದ್ದರು .

ಮೃತರನ್ನು 65 ವರ್ಷದ ಲಹ್ರಿ ಲಾಲ್ ಪಲಿವಾಲ್ ಮತ್ತು 62 ವರ್ಷದ ರಾಧಾ ದೇವಿ ಎಂದು ಪೊಲೀಸರು ಗುರುತಿಸಿದ್ದಾರೆ. ಪಲಿವಾಲ್ ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಿದ್ದರು. ದಂಪತಿಗಳು ತಮ್ಮ ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ. ಲಹ್ರಿ ಲಾಲ್ ಪಲಿವಾಲ್ ಮತ್ತು ಅವರ ಪತ್ನಿ ರಾಧಾ ದೇವಿ ಅವರ ಶವಗಳು ಅವರ ಮನೆಯಲ್ಲಿ ಟ್ರಂಕ್ ಒಳಗೆ ಪತ್ತೆಯಾಗಿವೆ. ದಂಪತಿಗಳು ಮಂಗಳವಾರ (ಆ.11) ತಡರಾತ್ರಿ ಕೊಲೆಯಾಗಿರಬಹುದು ಎಂದು ಸಾಯ್ರಾ ಪೊಲೀಸ್ ಠಾಣೆಯ ಅಧಿಕಾರಿ ಶೈತಾನ್ ಸಿಂಗ್ ನಾಥಾವತ್ ಹೇಳಿದ್ದಾರೆ.

ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಟ್ರಂಕ್ ಒಳಗೆ ಇಡಲಾಗಿತ್ತು. ಮೃತದೇಹಗಳನ್ನು ಮರೆಮಾಡಲು ಹಾಸಿಗೆಯಿಂದ ಮುಚ್ಚಲಾಗಿತ್ತು. ನಾವು ಶಂಕಿತರು ಮತ್ತು ನೆರೆಹೊರೆಯವರನ್ನು ಪ್ರಶ್ನಿಸುತ್ತಿದ್ದೇವೆ. ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕದಲ್ಲಿ ತಾಯಿ, ಸಹೋದರನನ್ನು ಕೊಂದ ಭಾರತೀಯ ಮೂಲದ ಅಪ್ರಾಪ್ತ

ಲಹರಿ ಲಾಲ್ ಹಾಲು ತಲುಪಿಸದಿದ್ದಾಗ ದಂಪತಿಯ ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲಿಸಲು ಹೋದ ನೆರೆಹೊರೆಯವರು ಬಾಗಿಲು ತೆರೆದಿರುವುದನ್ನು ಮತ್ತು ಮನೆ ಖಾಲಿಯಾಗಿರುವುದನ್ನು ಕಂಡರು. ಕೂಡಲೇ ನೆರೆಹೊರೆಯವರು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕೆಲಸ ಮಾಡುತ್ತಿರುವ ಅವರ ಪುತ್ರ ಮನೋಹರ್‌ಗೆ ಮಾಹಿತಿ ನೀಡಿದರು.

ದಂಪತಿಗಳನ್ನು ಪತ್ತೆ ಹಚ್ಚಲು ವಿಫಲವಾದ ನಂತರ, ಮನೋಹರ್ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದರು. ಮಂಗಳವಾರ (ಆ.11) ರಾತ್ರಿ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಗಿ ಪುತ್ರ ಮನೋಹರ್‌ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಮರುದಿನ ಬೆಳಗ್ಗೆ, ಅವರ ಇಬ್ಬರೂ ಪೋಷಕರು ಕಾಣೆಯಾಗಿದ್ದಾರೆ ಎಂದು ಹೇಳಿದರು.

ಗುರುವಾರ (ಆ,13) ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸಾಯ್ರಾ ಪೊಲೀಸ್ ಠಾಣೆಯನ್ನು ಸುತ್ತುವರೆದರು. ವೃದ್ಧ ದಂಪತಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕೆಂದು ಒತ್ತಾಯಿಸಿದರು. ನೆರೆಹೊರೆಯವರು ಮತ್ತು ಇತರ ಶಂಕಿತರನ್ನು ಪೊಲೀಸರು ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ. ಸಾವಿನ ಹಿಂದಿನ ನಿಖರವಾದ ಉದ್ದೇಶ ಮತ್ತು ದಂಪತಿಗಳು ಯಾವ ಸಂದರ್ಭಗಳಲ್ಲಿ ಹತ್ಯೆಯಾದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.