2026ರ ಮಹಿಳಾ ಏಷ್ಯಾ ಕಪ್, ಏಷ್ಯಾ ಗೇಮ್ಸ್ ಟೂರ್ನಿಗಳಿಂದ ಜೆಮಿಮಾ ರೊಡ್ರಿಗಸ್ ಔಟ್!
ದಿ ಹಂಡ್ರೆಡ್ ಟೂರ್ನಿಯಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾದ ಭಾರತ ತಂಡದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಅವರು ಏಷ್ಯಾ ಗೇಮ್ಸ್ ಮತ್ತು ಏಷ್ಯಾ ಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ಪ್ರತೀಕಾ ರಾವಲ್‌ಗೆ ಭಾರತ ಮಹಿಳಾ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.
ಏಷ್ಯಾ ಗೇಮ್ಸ್, ಏಷ್ಯಾ ಕಪ್ ಟೂರ್ನಿಯಿಂದ ಜೆಮಿಮಾ ರೊಡ್ರಿಗಸ್ ಔಟ್. -
ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ (Jemimah Rodrigues) ಮುಂಬರುವ ಮಹಿಳಾ ಏಷ್ಯಾ ಕಪ್ (women's Asia Cup) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಟೂರ್ನಿ ಆಗಸ್ಟ್ 28ರಂದು ಆರಂಭವಾಗಲಿದೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಜೆಮಿಮಾ ಅವರು, ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಾಗಿದ್ದರು. ಈ ಗಾಯದ ಕಾರಣ ಅವರು ದಿ ಹಂಡ್ರೆಡ್‌ನಿಂದಲೂ ಹೊರಗುಳಿದಿದ್ದರು. ಈ ಬೆಳವಣಿಗೆಯನ್ನು ಬಿಸಿಸಿಐ ಕೂಡ ಖಚಿತಪಡಿಸಿದೆ. ಪ್ರಸ್ತುತ ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
“ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ದಿ ಹಂಡ್ರೆಡ್ ಟೂರ್ನಿಯ ಪಂದ್ಯವೊಂದರಲ್ಲಿ ಆಡುತ್ತಿದ್ದ ವೇಳೆ ಜೆಮಿಮಾ ರೋಡ್ರಿಗಸ್ ಅವರ ಬಲಗಾಲಿನಲ್ಲಿ ಹ್ಯಾಮ್‌ಸ್ಟ್ರಿಂಗ್‌ಗೆ ಗಾಯವಾಗಿದೆ. ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ತಂಡ ಅವರನ್ನು ತಪಾಸಣೆ ನಡೆಸುತ್ತಿದೆ. ಪರೀಕ್ಷೆಯಲ್ಲಿ ಹೈ-ಗ್ರೇಡ್ ಟಿಯರ್ (ಗಂಭೀರ ಸ್ನಾಯು ಹರಿತ) ಇರುವುದು ದೃಢಪಟ್ಟಿದೆ. ಇದರ ಪರಿಣಾಮವಾಗಿ, ಯುಎಇಯಲ್ಲಿ ನಡೆಯಲಿರುವ ಎಸಿಸಿ ಮಹಿಳಾ ಏಷ್ಯಾ ಕಪ್ ಮತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯಾ ಕ್ರೀಡಾಕೂಟದಿಂದ ಅವರು ಹೊರಗುಳಿದಿದ್ದಾರೆ,” ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
IND vs SL: ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆರ್ ಅಶ್ವಿನ್!
ಜೆಮಿಮಾ ರೊಡ್ರಿಗಸ್ ಸ್ಥಾನಕ್ಕೆ ಪ್ರತೀಕಾ ರಾವಲ್
ಭಾರತದ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರ ಬದಲಿಗೆ ಪ್ರತಿಕಾ ರಾವಲ್ ಅವರನ್ನು ಮುಂಬರುವ ಮಹಿಳಾ ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. 25ರ ವಯಸ್ಸಿನ ಪ್ರತಿಕಾ ರಾವಲ್ ಇನ್ನೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಅಲ್ಲದೆ, ಅವರು ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯಲ್ಲಿಯೂ ಆಡಿಲ್ಲ.
🚨 𝗡𝗘𝗪𝗦 🚨
— BCCI Women (@BCCIWomen) August 14, 2026
Jemimah Rodrigues ruled out of Asia Cup and Asian Games; Pratika Rawal named replacement for the Asia Cup.
Details 🔽 #TeamIndia | #ACC | #WomensAsiaCup2026https://t.co/gxlBv04Fpj
2026ರ ಡಬ್ಲ್ಯುಪಿಎಲ್ ಆವೃತ್ತಿಗಾಗಿ ಪ್ರತಿಕಾ ಅವರನ್ನು ಯುಪಿ ವಾರಿಯರ್ಸ್ ತಂಡ ಖರೀದಿಸಿತ್ತು. ಆದರೆ 2025ರ ಏಕದಿನ ವಿಶ್ವಕಪ್ ಫೈನಲ್‌ಗೂ ಮುನ್ನ ಗಾಯಗೊಂಡಿದ್ದ ಕಾರಣ ಅವರು ಇಡೀ 2026ರ ಆವೃತ್ತಿಯಿಂದ ಹೊರಗುಳಿದಿದ್ದರು. 2025ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪ್ರತಿಕಾ, ಇದೀಗ ಜೆಮಿಮಾ ಅವರ ಸ್ಥಾನವನ್ನು ತುಂಬುವ ಅವಕಾಶ ಪಡೆದಿದ್ದಾರೆ.
ಭಾರತ ತಂಡದಲ್ಲಿ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ಗೆ ಮತ್ತೊಮ್ಮೆ ಚಾನ್ಸ್ ಸಿಗಬೇಕೆಂದ ನವದೀಪ್ ಸೈನಿ!
“ಮಹಿಳಾ ಆಯ್ಕೆ ಸಮಿತಿಯು ಏಷ್ಯಾ ಕಪ್ ಟೂರ್ನಿಯಲ್ಲಿ ಜೆಮಿಮಾ ರೋಡ್ರಿಗಸ್ ಅವರ ಬದಲಿಗೆ ಪ್ರತಿಕಾ ರಾವಲ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 30ಕ್ಕೆ ಭಾರತದ ಅಭಿಯಾನ ಆರಂಭ
ಭಾರತ ಮಹಿಳಾ ತಂಡದ ಏಷ್ಯಾ ಕಪ್ ಅಭಿಯಾನ ಆಗಸ್ಟ್ 30 ರಂದು ಥಾಯ್ಲೆಂಡ್ ವಿರುದ್ಧ ಆರಂಭವಾಗಲಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ತನ್ನ ಎರಡನೇ ಪಂದ್ಯವನ್ನು ಹಾಂಕಾಂಗ್ ವಿರುದ್ಧ ಆಡಲಿದೆ. ಸೆಪ್ಟಂಬರ್ 3 ರಂದು ಚೀನಾ ವಿರುದ್ಧ ಕಾದಾಟ ನಡೆಸಲಿದೆ. ನಂತರ ಸೆ 5 ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ಸ್ ಪಂದ್ಯಗಳು ಕ್ರಮವಾಗಿ ಸೆ 10 ಮತ್ತು 11 ರಂದು ನಡೆದರೆ, ಫೈನಲ್ ಪಂದ್ಯ ಸೆ 13 ರಂದು ನಡೆಯಲಿದೆ.
A look at #TeamIndia's squad for the upcoming ACC Women's Asia Cup 2026 🙌#ACC | #WomensAsiaCup2026 pic.twitter.com/a7fVxTjMMI
— BCCI Women (@BCCIWomen) August 14, 2026
ಏಷ್ಯನ್ ಗೇಮ್ಸ್‌ಗೆ ಇನ್ನೂ ಭಾರತ ಮಹಿಳಾ ತಂಡವನ್ನು ಪ್ರಕಟಿಸುವುದು ಬಾಕಿ ಇದೆ. ಈ ತಿಂಗಳಾಂತ್ಯದಲ್ಲಿ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.
ಏಷ್ಯಾ ಕಪ್ ಟೂರ್ನಿಗೆ ಪರಿಷ್ಕೃತ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ (ಉಪ ನಾಯಕಿ), ಶಫಾಲಿ ವರ್ಮಾ, ಭಾರತೀ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಠಾಕೂರ್, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್