ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 5 ವರ್ಷದ ಮಗನನ್ನೇ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ಪರಪುರುಷನೊಂದಿಗೆ ಸಂಬಂಧ ಹೊಂದಿದ್ದನ್ನು ಮಗ ನೋಡಿದ ಎನ್ನುವ ಕಾರಣಕ್ಕೆ ಆತನನ್ನು ಕೊಂದು ಹಾಕಿದ ತಾಯಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ವಾಲಿಯರ್ ನ್ಯಾಯಾಲಯವು ಈ ತೀರ್ಪು ನೀಡಿದೆ.

ಮಗನನ್ನು ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ಸಂಗ್ರಹ ಚಿತ್ರ -

ಮಧ್ಯಪ್ರದೇಶ: ನೆರೆ ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ (Illicit relationship) ಹೊಂದಿದ್ದನ್ನು ಮಗ ನೋಡಿದ ಎನ್ನುವ ಕಾರಣಕ್ಕೆ ತಾಯಿಯೊಬ್ಬಳು ಮಗನನ್ನೇ ಕೊಂದಿದ್ದ (murder case) ಘಟನೆ 2023ರಲ್ಲಿ ನಡೆದಿತ್ತು. ಈ ಕುರಿತು ವಿಚಾರಣೆ ಕಾರ್ಯವನ್ನು ಪೂರ್ಣಗೊಳಿಸಿದ ಗ್ವಾಲಿಯರ್ ನ್ಯಾಯಾಲಯವು ತಾಯಿಗೆ ಜೀವಾವಧಿ ಶಿಕ್ಷೆಯನ್ನು (Life imprisonment) ವಿಧಿಸಿದೆ. ಜ್ಯೋತಿ ರಾಥೋಡ್ ಎಂಬ ಮಹಿಳೆ ನೆರೆ ಮನೆಯ ಉದಯ್ ಇಂಡೋಲಿಯಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ನೋಡಿದ ಐದು ವರ್ಷದ ಮಗ ಜತಿನ್ ನನ್ನು ಆಕೆ ಕೊಂದು ಹಾಕಿದ್ದಳು.

ಪ್ರಾಸಿಕ್ಯೂಷನ್ ಮಾಹಿತಿ ಪ್ರಕಾರ, 2023ರ ಏಪ್ರಿಲ್ 28ರಂದು ಪೊಲೀಸ್ ಕಾನ್ಸ್ಟೇಬಲ್ ಧ್ಯಾನ್ ಸಿಂಗ್ ರಾಥೋಡ್ ಅವರ ಪತ್ನಿ ಜ್ಯೋತಿ ರಾಥೋಡ್ ತನ್ನ ನೆರೆ ಮನೆಯ ಉದಯ್ ಇಂಡೋಲಿಯಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ಜ್ಯೋತಿಯ ಮಗ ಜತಿನ್ ನೋಡಿದ್ದಾನೆ. ಆತ ತಂದೆಗೆ ಈ ಕುರಿತು ಹೇಳಬಹುದೆಂದು ತಿಳಿದು ಭಯದಿಂದ ಮಗನನ್ನು ಕಟ್ಟಡದ ಎರಡನೆ ಅಂತಸ್ತಿನ ಛಾವಣಿಯಿಂದ ಕೆಳಗೆ ಎಸೆದಿದ್ದಳು. 24 ಗಂಟೆಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದ ಬಾಲಕ ಬಳಿಕ ಸಾವನ್ನಪ್ಪಿದ್ದಾನೆ.

ಅನ್ಸಾರ್ ಘಜ್ವತ್-ಉಲ್-ಹಿಂದ್ ಸಂಘಟನೆ ಬಲಪಡಿಸಲು ದೆಹಲಿ ಸ್ಫೋಟ; ವಿಚಾರಣೆ ವೇಳೆ ಬಯಲಾಯ್ತು ಉಗ್ರ ರಹಸ್ಯ: ಹೇಗಿತ್ತು ಪ್ಲ್ಯಾನ್‌?

ಆರಂಭದಲ್ಲಿ ಈ ಪ್ರಕರಣವನ್ನು ಅಪಘಾತ ಎಂದು ಪರಿಗಣಿಸಲಾಗಿತ್ತು. ಜತಿನ್ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ ಅಪರಾಧ ನಡೆದ ಹದಿನೈದು ದಿನಗಳ ಬಳಿಕ ಜ್ಯೋತಿ ಗಂಡನ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು.

ಮಗನ ಸಾವಿನ ಬಳಿಕ ಅನುಮಾನಗೊಂಡಿದ್ದ ಧ್ಯಾನ್, ಜ್ಯೋತಿಯ ಮೇಲೆ ನಿಗಾ ಇರಿಸಿದ್ದರು. ಆಕೆಯ ಮೊಬೈಲ್ ನ ಬಹು ಆಡಿಯೋ ಮತ್ತು ವಿಡಿಯೋ ಸಂಭಾಷಣೆಗಳನ್ನು ಕೇಳಿದ್ದರು. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳನ್ನು ಪರಿಶಿಸಲಿಸಿದ್ದರು. ಸಂಪೂರ್ಣ ದಾಖಲೆಗಳೊಂದಿಗೆ ಧ್ಯಾನ್ ಈ ಕುರಿತು ಪೊಲೀಸರಿಗೆ ದೂರು ನೀಡಿದರು.

DGP Ramachandra Rao: ಕಚೇರಿಯಲ್ಲೇ ಮಹಿಳೆ ಜತೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ; ವಿಡಿಯೊ ವೈರಲ್!

ಪ್ರಕರಣಕ್ಕೆ ಸಂಬಂಧಿಸಿ ಜ್ಯೋತಿಯ ಪ್ರೇಮಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ. ಆದರೆ ಬಳಿಕ ಆತನನ್ನು ಖುಲಾಸೆಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಜ್ಯೋತಿ ಮತ್ತು ಆಕೆಯ ಪ್ರಿಯಕರ ಉದಯ್ ನನ್ನು ಆರೋಪಿಗಳೆಂದು ಪರಿಗಣಿಸಲಾಗಿದ್ದರೂ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಪ್ರಸ್ತುತಪಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಜ್ಯೋತಿಯನ್ನೇ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಉದಯ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇರುವುದನ್ನು ಉಲ್ಲೇಖಿಸಿರುವ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿದೆ.