ಲಿವ್ ಇನ್‌ನಲ್ಲಿದ್ದ ಸಂಗಾತಿಯನ್ನು ಕೊಂದು ಸುಟ್ಟು ಹಾಕಿದ ಇಬ್ಬರು ಹೆಂಡಿರ ಗಂಡ
ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬ ಮೂರನೆಯವಳೊಂದಿಗೆ ಲೀವ್ ಇನ್ ಸಂಬಂಧದಲ್ಲಿದ್ದು, ಆಕೆಯನ್ನು ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಝಾನ್ಸಿ ಜಿಲ್ಲೆಯ ನಿವೃತ್ತ ರೈಲ್ವೆ ಉದ್ಯೋಗಿ ಈ ದುಷ್ಕ್ರತ್ಯ ಎಸಗಿದ ಆರೋಪಿ. ಮಹಿಳೆಯ ಕೊಲೆಯಾದ ವಾರಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ: ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬ (retired railway employee ) ತನ್ನೊಂದಿಗೆ ಲೀವ್ ಇನ್ ರಿಲೇಷನ್ ನಲ್ಲಿದ್ದ ಮಹಿಳೆಯನ್ನು ಕೊಂದು (Murder case) ಟ್ರಂಕ್ ನಲ್ಲಿ ಬಚ್ಚಿಟ್ಟು, ಕಲ್ಲಿದ್ದಲು, ಮರದ ತುಂಡುಗಳನ್ನು ಹಾಕಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಆರೋಪಿ ಈ ಹಿಂದೆ ಎರಡು ಮದುವೆಯಾಗಿದ್ದು, ಮೂರನೇಯವಳೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಟ್ರಂಕ್ ವಿಲೇವಾರಿಗೆಂದು ಬಂದ ಲೋಡರ್ ಚಾಲಕನೊಬ್ಬ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಝಾನ್ಸಿ ಜಿಲ್ಲೆಯ ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ (62) ಎಂಬಾತ ತನ್ನ ಲೀವ್ ಇನ್ ಸಂಗಾತಿ ಪ್ರೀತಿ (32) ಎಂಬಾಕೆಯನ್ನು ಕೊಂದು ಆಕೆಯ ದೇಹವನ್ನು ನೀಲಿ ಟ್ರಂಕ್‌ನಲ್ಲಿ ಬಚ್ಚಿಟ್ಟು, ಬಳಿಕ ಕಲ್ಲಿದ್ದಲು ಮತ್ತು ಮರದ ತುಂಡುಗಳನ್ನು ಹಾಕಿ ಸುಟ್ಟಿದ್ದಾನೆ.
Road Accident: ಕಾಲೇಜು ಬಸ್ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ ತಾಯಿ -ಮಗ ಸಾವು; ಚಾಲಕ ಎಸ್ಕೇಪ್
ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಪೊಲೀಸರು, ಪ್ರೀತಿಯ ಕೊಲೆಯಾದ ಒಂದು ವಾರದ ಬಳಿಕ ಲೋಡರ್ ಚಾಲಕನೊಬ್ಬ ಟ್ರಂಕ್ ವಿಲೇವಾರಿಗೆಂದು ಬಂದಾಗ ಅನುಮಾನಗೊಂಡು ಶನಿವಾರ ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದರು.
ಚಾಲಕ ನೀಡಿದ ಮಾಹಿತಿ ಮೇರೆಗೆ ಪೊಲೀಸರು ತಡರಾತ್ರಿ ಸ್ಥಳಕ್ಕೆ ಆಗಮಿಸಿದ್ದು, ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದಲ್ಲಿ ನೀಲಿ ಟ್ರಂಕ್ ನಲ್ಲಿ ಬೂದಿ, ಕಲ್ಲಿದ್ದಲು ಮತ್ತು ಭಾಗಶಃ ಸುಟ್ಟ ಮೂಳೆಗಳು ಕಂಡುಬಂದಿದೆ. ರಾಮ್ ಸಿಂಗ್ ಈ ಹಿಂದೆ ಇಬ್ಬರು ಮಹಿಳೆಯರೊಂದಿಗೆ ವಿವಾಹವಾಗಿದ್ದನು. ಪ್ರೀತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಎನ್ನಲಾಗಿದೆ. ಪ್ರಕರಣದ ಬಳಿಕ ಸಿಂಗ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.
ಪ್ರೀತಿ ಕೂಡ ವಿವಾಹಿತೆಯಾಗಿದ್ದು, ಐಟಿಐ ಪ್ರದೇಶದ ಬಳಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆದರೆ ಸಿಪ್ರಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲೆಹರ್ ಗಾಂವ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಿಂಗ್ ಜೊತೆಯೂ ಆಕೆ ಆಗಾಗ್ಗೆ ಬಂದು ವಾಸವಾಗಿದ್ದಳು.
ಗಂಡ ಹೊಸ ಫೋನ್ ಕೊಡಿಸಿಲ್ಲ ಎಂದು ಮಹಿಳೆ ಆತ್ಮಹತ್ಯೆ
ರಾಮ್ ಸಿಂಗ್‌ಗೆ ಇಬ್ಬರು ಹೆಂಡತಿಯರಿದ್ದು ಇಬ್ಬರ ಹೆಸರು ಗೀತಾ ಎನ್ನಲಾಗಿದೆ. ಒಬ್ಬಳು ನಂದನ್‌ಪುರದಲ್ಲಿ ಇನ್ನೊಬ್ಬಳು ಕೊಟ್ವಾಲಿ ಪ್ರದೇಶದಲ್ಲಿ ವಾಸವಾಗಿದ್ದಳು. ಎರಡನೇ ಪತ್ನಿ ಸಿಂಗ್ ಮಾಡಿರುವ ಅಪರಾಧದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಳೆ.
ಹಣದ ಬಗ್ಗೆ ಅವರಿಬ್ಬರ ಮಧ್ಯೆ ಆಗಾಗ್ಗೆ ವಾದಗಳು ನಡೆಯುತ್ತಿತ್ತು. ಇದಕ್ಕಾಗಿಯೇ ಆತ ಪ್ರೀತಿಯನ್ನು ಕೊಂದಿರಬಹುದು ಎಂದು ಆಕೆ ತಿಳಿಸಿದ್ದಾಳೆ ಎಂದು ಸರ್ಕಲ್ ಅಧಿಕಾರಿ (ನಗರ) ಲಕ್ಷ್ಮಿಕಾಂತ್ ಗೌತಮ್ ಅವರು ತಿಳಿಸಿದ್ದಾರೆ.