ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೀತಿಗಾಗಿ ಪೊಲೀಸ್‌ ಅಧಿಕಾರಿಯಾಗಿದ್ದ ಅಪ್ಪನನ್ನೇ ಕೊಂದ ಮಗಳು; ಮೂರು ವರ್ಷಗಳ ಬಳಿಕ ಬಯಲಾಯ್ತು ರಹಸ್ಯ

ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಜಯಂತ್ ಬಲ್ಲವಾರ್ ಅವರ ಸಾವಿನ ಪ್ರಕರಣದಲ್ಲಿ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸ್‌ ಹುದ್ದೆಯಲ್ಲಿರುವ ಅವರ ಮಗಳೇ ಬಲ್ಲಾವರ್‌ ಅವರನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಏಪ್ರಿಲ್ 25, 2023 ರ ಬೆಳಿಗ್ಗೆ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

ಪ್ರೀತಿಗಾಗಿ ಪೊಲೀಸ್‌ ಆಗಿದ್ದ ಅಪ್ಪನನ್ನೇ ಕೊಂದ ಮಗಳು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 27, 2026 8:07 PM

ಮುಂಬೈ: ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಜಯಂತ್ ಬಲ್ಲವಾರ್ ಅವರ ಸಾವಿನ ಪ್ರಕರಣದಲ್ಲಿ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸ್‌ (Murder Case) ಹುದ್ದೆಯಲ್ಲಿರುವ ಅವರ ಮಗಳೇ ಬಲ್ಲಾವರ್‌ ಅವರನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಏಪ್ರಿಲ್ 25, 2023 ರ ಬೆಳಿಗ್ಗೆ ಅಧಿಕಾರಿ ಜಯಂತ್ ಬಲ್ಲವಾರ್ ಎಂದಿನಂತೆ ಮನೆಯಿಂದ ಕರ್ತವ್ಯಕ್ಕೆ ಹೊರಡಲು ಸಿದ್ಧರಾಗಿದ್ದರು. ಅವರ ಮಗಳು ಆರ್ಯ ಬಲ್ಲವಾರ್ ತನ್ನ ತಂದೆಗೆ ಮಿಲ್ಕಶೇಕ್‌ ನೀಡಿದ್ದಳು. ಚಂದ್ರಾಪುರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಆಡಳಿತ ಕಟ್ಟಡವನ್ನು ತಲುಪುವ ಹೊತ್ತಿಗೆ ಅವರಿಗೆ ತಲೆತಿರುಗುವಿಕೆ ಅನುಭವವಾಯಿತು. ಅವರು ಕುಸಿದು ಬಿದ್ದು ಸಾವನ್ನಪ್ಪಿದರು. ಆ ಸಮಯದಲ್ಲಿ, ಸಾವಿಗೆ ಕಾರಣವನ್ನು ಕೇವಲ ಹಠಾತ್ ಅನಾರೋಗ್ಯ ಎಂದು ದಾಖಲಿಸಲಾಗಿತ್ತು. ಯಾವುದೇ ಅಪರಾಧದ ಶಂಕೆ ಇರಲಿಲ್ಲ.

ಇದೀಗ ಕೊಲೆ ಪ್ರಕರಣದಲ್ಲಿ ಮೂರು ವರ್ಷಗಳ ನಂತರ, ಮಗಳು ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಆರ್ಯ ಬಲ್ಲವಾರ್ 2022 ರಿಂದ ಆಶಿಶ್ ಶೆಡ್ಮಾಕೆ ಎಂಬಾತನನ್ನು ಪ್ರೀತಿಸುತ್ತಿದ್ದರು. ಇದಕ್ಕೆ ಆಕೆಯ ತಂದೆಯ ವಿರೋಧವಿತ್ತು. ಆರ್ಯ ತನ್ನ ಸೋದರಸಂಬಂಧಿ 22 ವರ್ಷದ ಚೈತನ್ಯ ಗೆಡಮ್ ಅವರನ್ನು ಸಂಪರ್ಕಿಸಿ ವಿಷ ಪಡೆಯಲು 5,000 ರೂ.ಗಳನ್ನು ನೀಡಿದ್ದಳು. ಆ ದಿನ ಬೆಳಿಗ್ಗೆ, ಆರ್ಯ ತನ್ನ ತಂದೆ ಕರ್ತವ್ಯಕ್ಕೆ ಹೋಗಲು ಸಿದ್ಧರಾಗುತ್ತಿದ್ದಂತೆ ಮಿಲ್ಕ್‌ಶೇಕ್‌ಗೆ ವಿಷವನ್ನು ಬೆರೆಸಿ ಕೊಟ್ಟು ಕೊಲೆ ಮಾಡಿದ್ದಾಳೆ. ಬಳಿಕ ಏನೂ ಆಗಿಲ್ಲವೆಂಬಂತೆ ತನ್ನ ಪ್ರಿಯಕರನೊಟ್ಟಿಗೆ ವಿವಾಹವಾಗಿದ್ದಾಳೆ.

ಆದರೆ ಆ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಆಶಿಶ್ ಕೆಟ್ಟ ನಡುವಳಿಕೆಯಿಂದಾಗಿ ಪೊಲೀಸ್‌ ಇಲಾಖೆಯಿಂದ ವಜಾ ಮಾಡಲಾಗಿದೆ. ಕಳೆದ ವಾರ, ಆಶಿಶ್ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಪತ್ನಿಯೇ ಆಕೆಯ ತಂದೆಗೆ ವಿಷ ನೀಡಿದ್ದಾಗಿ ಆತ ಹೇಳಿದ್ದಾನೆ. ಇದೀಗ ಪೊಲೀಸರು ಆರ್ಯ ಬಲ್ಲವಾರ್, ಆಕೆಯ ಪತಿ ಆಶಿಶ್ ಶೆಡ್ಮಾಕೆ, ಆಕೆಯ ಸೋದರಸಂಬಂಧಿ ಚೈತನ್ಯ ಗೆದಮ್ ಮತ್ತು ವಿಷ ಸರಬರಾಜು ಮಾಡಿದ ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ.

ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?; ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

ಪ್ರತ್ಯೇಕ ಘಟನೆಯಲ್ಲಿ, ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಲವ್ವರ್ ಜೊತೆ ಸೇರಿ ಹೆತ್ತಮ್ಮನನ್ನೇ ಹತ್ಯೆ ಮಾಡಿದ ಕೊಲೆ ರಹಸ್ಯ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿತ್ತು. ಮೃತ ತಾಯಿಯನ್ನು ಅಂಜು ದಾಸರಿ ರಾಮಯ್ಯ (40) ಎಂದು ಗುರುತಿಸಲಾಗಿದ್ದು, ಅವರ 16 ವರ್ಷದ ಮಗಳು ಹಾಗೂ ಆಕೆಯ ಪ್ರಿಯಕರ ಮೋಂಟಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.