ನೋಯ್ಡಾ ಹಿಂಸಾಚಾರ: ತಮಿಳುನಾಡಿನ ಮಾಸ್ಟರ್ ಮೈಂಡ್ ಬಂಧನ
ವೇತನ ಸಂಬಂಧಿಸಿ ನೋಯ್ಡಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಮಾಸ್ಟರ್ ಮೈಂಡ್ ತಮಿಳುನಾಡಿನ ವ್ಯಕ್ತಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಶನಿವಾರ ಬಂಧಿಸಿದೆ. ಪ್ರತಿಭಟನೆ ಸಂದರ್ಭದಲ್ಲಿ ಆತ ನೋಯ್ಡಾದಲ್ಲಿ ಇದ್ದನು. ಪ್ರತಿಭಟನಾಕಾರರನ್ನು ಒಗ್ಗೂಡಿಸಲು ಕ್ಯೂಆರ್ ಕೋಡ್, ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದನು ಎಂದು ಆರೋಪಿಸಲಾಗಿದೆ.
ಸಂಗ್ರಹ ಚಿತ್ರ -
ನೋಯ್ಡಾ: ವೇತನ ಹೆಚ್ಚಳ (labour wages) ಸಂಬಂಧಿಸಿ ಇತ್ತೀಚೆಗೆ ನೋಯ್ಡಾದಲ್ಲಿ (Noida violence) ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾದ ಮಾಸ್ಟರ್ ಮೈಂಡ್ ತಮಿಳುನಾಡಿನ (Tamilnadu) ವ್ಯಕ್ತಿಯನ್ನು ಶನಿವಾರ ಉತ್ತರ ಪ್ರದೇಶದ (Uttar Pradesh) ವಿಶೇಷ ಕಾರ್ಯಪಡೆ ಪೊಲೀಸರು ಬಂಧಿಸಿದರು. ಆರೋಪಿಯನ್ನು ಆದಿತ್ಯ ಆನಂದ್ ಎಂದು ಗುರುತಿಸಲಾಗಿದೆ. ನೋಯ್ಡಾದಲ್ಲಿ ನಡೆದ ಪ್ರತಿಭಟನೆ ವೇಳೆ ಆತ ಪ್ರತಿಭಟನಾಕಾರರನ್ನು ಒಗ್ಗೂಡಿಸಲು ಕ್ಯೂಆರ್ ಕೋಡ್, ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದನು. ಜನರನ್ನು ಪ್ರಚೋದಿಸಲು ಪ್ರಚೋದನಕಾರಿ ಭಾಷಣಗಳನ್ನು ಕೂಡ ಮಾಡಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ.
ಹರಿಯಾಣ, ಉತ್ತರ ಪ್ರದೇಶ ಸರ್ಕಾರದ ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿ ನೋಯ್ಡಾದಲ್ಲಿ ಸೋಮವಾರ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿತ್ತು. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಭಾನುವಾರ ರಾತ್ರೋರಾತ್ರಿ ಯೋಜನೆಯನ್ನು ರೂಪಿಸಲಾಗಿತ್ತು. ವಾಟ್ಸಾಪ್ ಗುಂಪುಗಳಲ್ಲಿ ಪ್ರಚೋದನಕಾರಿ ವಿಷಯ ಮತ್ತು ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು. ಪ್ರತಿಭಟನೆಯು ಹಿಂಸಾತ್ಮಕ ರೂಪ ತಾಳಿದ್ದು, ಎರಡನೇ ದಿನವೂ ಮುಂದುವರಿದಿತ್ತು.
Fake Govt Job Scam: ಹಾವೇರಿಯಲ್ಲಿ ಸರ್ಕಾರಿ ಉದ್ಯೋಗದ ಆಮಿಷ ತೋರಿ 25 ನಿರುದ್ಯೋಗಿಗಳಿಗೆ ಕೋಟ್ಯಂತರ ರೂ. ವಂಚನೆ
ಹಿಂಸಾಚಾರವನ್ನು ಸಂಘಟಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಹಲವಾರು ವ್ಯಕ್ತಿಗಳನ್ನು ಯುಪಿ ಎಸ್‌ಟಿಎಫ್ ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಾದ್ಯಂತ ವ್ಯಾಪಕ ದಾಳಿಗಳನ್ನು ನಡೆಸಲಾಗಿದೆ. ಈ ವೇಳೆ ಆದಿತ್ಯ ಆನಂದ್ ನನ್ನು ತಮಿಳುನಾಡಿನ ತಿರುಚ್ಚಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಇತರ ಹಲವರನ್ನು ಕೂಡ ಬಂಧಿಸಲಾಗಿದೆ.
ನೋಯ್ಡಾದಲ್ಲಿ ನಡೆದ ಹಿಂಸಾಚಾರದ ಬಳಿಕ ಆನಂದ್ ಪರಾರಿಯಾಗಿದ್ದನು. ಆತನಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ನೋಯ್ಡಾ ಪೊಲೀಸರು ಆತನ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಕೂಡ ಘೋಷಿಸಿದರು.
ಎನ್‌ಐಟಿ ಜಮ್ಶೆಡ್‌ಪುರದಲ್ಲಿ ಬಿಟೆಕ್ ಪೂರ್ಣಗೊಳಿಸಿರುವ ಆನಂದ್ ಪ್ರತಿಭಟನೆಯ ಸಮಯದಲ್ಲಿ ನೋಯ್ಡಾದಲ್ಲಿದ್ದನು. ಆತನೇ ಪ್ರತಿಭಟನಾಕಾರರನ್ನು ಒಗ್ಗೂಡಿಸಿ ಪ್ರಚೋದಿಸಿದ್ದನು ಎಂದು ಆರೋಪಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 13 ಮತ್ತು 14 ರಂದು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಾದ್ಯಂತ 80 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿವಿಧ ವಲಯಗಳ ಸುಮಾರು 40,000 ರಿಂದ 45,000 ಕಾರ್ಮಿಕರು ಒಟ್ಟುಗೂಡಿ ಪ್ರತಿಭಟನೆ ನಡೆಸಿದರು. ಇದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆ ತಡೆ ಉಂಟಾಗಿತ್ತು. ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚಿದ ಘಟನೆಗಳು ಕೂಡ ನಡೆದಿತ್ತು.
ನಾಸಿಕ್ ಸ್ವಯಂಘೋಷಿತ ದೇವಮಾನವನ ಆಪ್ತ ಸಹಾಯಕ, ಪತ್ನಿ ರಸ್ತೆ ಅಪಘಾತದಲ್ಲಿ ಸಾವು; ಹೆಚ್ಚುತ್ತಿದೆ ಅನುಮಾನ
ಹಿಂಸಾಚಾರದಲ್ಲಿ ಭಾಗಿಯಾಗಿರುವವರಲ್ಲಿ ಹೆಚ್ಚಿನವರು ನಿಜವಾದ ಕಾರ್ಮಿಕರಲ್ಲ. ಬಂಧಿತ ಹಲವಾರು ವ್ಯಕ್ತಿಗಳು ಮಜ್ದೂರ್ ಬಿಗುಲ್ ಮತ್ತು ಆಪಾದಿತ ನಗರ ನಕ್ಸಲ್ ಜಾಲದೊಂದಿಗೆ ಸಂಬಂಧ ಹೊಂದಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.