HDFC Life: ನಿವೃತ್ತಿ ಯೋಜನೆ ಪ್ರಾರಂಭ ಮಾಡಲು ಇದುವೇ ಸೂಕ್ತ ಸಮಯ ಎಂದು ಸಾರಿದ ಹೆಚ್‌ಡಿಎಫ್‌ಸಿ ಲೈಫ್‌ನ ಹೊಸ ಜಾಹೀರಾತು ಅಭಿಯಾನ
HDFC Life: ನಿವೃತ್ತಿ ಯೋಜನೆ ಪ್ರಾರಂಭ ಮಾಡಲು ಇದುವೇ ಸೂಕ್ತ ಸಮಯ ಎಂದು ಸಾರಿದ ಹೆಚ್‌ಡಿಎಫ್‌ಸಿ ಲೈಫ್‌ನ ಹೊಸ ಜಾಹೀರಾತು ಅಭಿಯಾನ

ಬೆಂಗಳೂರು: ಭಾರತದ ಪ್ರಮುಖ ವಿಮಾದಾರರಲ್ಲಿ ಒಂದಾಗಿರುವ ಹೆಚ್‌ಡಿಎಫ್‌ಸಿ ಲೈಫ್ ಸೂಕ್ತ ಸಮಯದಲ್ಲಿ ನಿವೃತ್ತಿ ಯೋಜನೆಯನ್ನು ಮಾಡುವ ಅವಶ್ಯಕತೆಯ ಕುರಿತು ಸಾರುವ ತನ್ನ ಹೊಸ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಹಿರಿಯ ವಯಸ್ಸಿನ ಜನಸಂಖ್ಯೆಯು ಬೆಳೆಯುತ್ತಿದೆ. ಜೊತೆಗೆ ಅತ್ಯುತ್ತಮ ಆರೋಗ್ಯ ಸೇವೆ ಮತ್ತು ಅತ್ಯುತ್ತಮ ಜೀವನ ಗುಣಮಟ್ಟದಿಂದ ಜೀವಿತಾವಧಿ ಕೂಡ ಹಿಗ್ಗುತ್ತಿದ್ದು ಪ್ರತಿಯೊಬ್ಬರೂ ನಿವೃತ್ತಿ ಯೋಜನೆ ಮಾಡಬೇಕಾದುದು ಅವಶ್ಯ ಮತ್ತು ಅನಿವಾರ್ಯವಾಗಿದೆ.
2050ರ ವೇಳೆಗೆ ವ್ಯಕ್ತಿಗಳಿಗೆ ನಿವೃತ್ತಿಯ ಬಳಿಕ ಸುಮಾರು 30 ವರ್ಷಗಳ ಕಾಲ ಆದಾಯದ ಅವಶ್ಯಕತೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೆ ನಿವೃತ್ತಿ ಯೋಜನೆ ಅವಶ್ಯವಾಗಿದೆ. ಮೊದಲಿನಿಂದಲೇ ನಿವೃತ್ತಿ ಯೋಜನೆ ಮಾಡುವ ಅವಶ್ಯಕತೆಯ ಕುರಿತು ಜಾಗೃತಿ ಇದ್ದರೂ ಬಹುತೇಕರು ಮನಸ್ಸು ಮಾಡಿದರೂ ಕ್ರಿಯೆಯಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಶೇ.90 ವ್ಯಕ್ತಿಗಳು ತಾನು ಬಹಳ ತಡವಾಗಿ ನಿವೃತ್ತಿ ಯೋಜನೆ ಆರಂಭಿಸಿದ್ದರ ಕುರಿತು ಪಶ್ಚಾತ್ತಾಪ ಹೊಂದಿರುತ್ತಾರೆ.*
ಹೆಚ್‌ಡಿಎಫ್‌ಸಿ ಲೈಫ್ ನ ಹೊಸ ಜಾಹೀರಾತು ಅಭಿಯಾನವು ನಿವೃತ್ತಿ ಯೋಜನೆ ತಡ ಮಾಡಲು ಇರುವ ಸಾಮಾನ್ಯ ಕಾರಣಗಳ ಕುರಿತು ತಿಳಿಸುತ್ತದೆ. ಪೋಷಕರು ಸಾಮಾನ್ಯವಾಗಿ ತಮ್ಮ ಸ್ವಂತ ನಿವೃತ್ತಿ ಯೋಜನೆಗಿಂತ ಹೆಚ್ಚಾಗಿ ಹೋಮ್ ಲೋನ್ ತೀರಿಸಲು, ಮಕ್ಕಳ ಶಿಕ್ಷಣ ಅಥವಾ ತಕ್ಷಣದ ಕುಟುಂಬದ ಅಗತ್ಯಗಳನ್ನು ಪೂರೈಸುವುದಕ್ಕೆ ಹಣವನ್ನು ಬಳಸುತ್ತಿರುತ್ತಾರೆ. ಇವೆಲ್ಲಾ ಕಾರಣಗಳಿಂದ ನಿವೃತ್ತಿ ಯೋಜನೆ ಮುಂದಕ್ಕೆ ಹೋಗಿ ನಿವೃತ್ತಿ ಫಂಡ್ ಅನ್ನು ಬಹಳ ಕಡಿಮೆ ಮಾಡುತ್ತದೆ. ಯಾಕೆಂದರೆ ತಡವಾಗಿ ಯೋಜನೆ ಶುರು ಮಾಡಿದರೆ ಸಂಪತ್ತು ಕ್ರೋಢೀಕರಣಕ್ಕೆ ಕಡಿಮೆ ಸಮಯ ಸಿಗುತ್ತದೆ.
ಹೆಚ್‌ಡಿಎಫ್‌ಸಿ ಲೈಫ್ ನ ಹೊಸ ಜಾಹೀರಾತಿನಲ್ಲಿ ತಮ್ಮ ಮಗು ಕಾಲೇಜಿಗೆ ಹೋಗುವಲ್ಲಿ ಪೋಷಕರು ನಿವೃತ್ತಿ ಯೋಜನೆಯನ್ನು ರೂಪಿಸಲು ಆರಂಭಿಸುವ ಮಹತ್ವದ ಕ್ಷಣವನ್ನು ತೋರಿಸಲಾಗಿದೆ. ಈ ಜಾಹೀರಾತಿನ ಮೂಲಕ ಪ್ರಸ್ತುತ ಕೌಟುಂಬಿಕ ಜವಾಬ್ದಾರಿಗಳನ್ನು ಪೂರೈಸುವುದರ ಜೊತೆಗೆ ಭವಿಷ್ಯದ ಆರ್ಥಿಕ ಸ್ಥಿತಿಗತಿಗಳನ್ನು ಕಾಪಾಡಿಕೊಳ್ಳುವ ಅಗತ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.
ಜಾಹೀರಾತು ಚಿತ್ರ ವೀಕ್ಷಿಸಲು ಇಲ್ಲಿ: https://www.youtube.com/watch?v=nk64Wbz6Ntw ಕ್ಲಿಕ್ ಮಾಡಿ.
ಈ ಕುರಿತು ಮಾತನಾಡಿದ ಹೆಚ್‌ಡಿಎಫ್‌ಸಿ ಲೈಫ್ ನ ಗ್ರೂಪ್ ಹೆಡ್ ಸ್ಟ್ರಾಟಜಿ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ವಿಶಾಲ್ ಸುಭರ್ವಾಲ್ ಅವರು, “ಉಳಿತಾಯವೆಲ್ಲವೂ ಖಾಲಿಯಾಗುವ ಕ್ಷಣ ಒಬ್ಬ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಎದುರಿಸಬಹುದಾದ ಅತಿ ದೊಡ್ಡ ಆತಂಕಕಾರಿ ಕ್ಷಣಗಳಲ್ಲಿ ಒಂದಾಗಿದೆ. ಉಳಿತಾಯದ ಶಕ್ತಿಯನ್ನು ಅರಿಯಬೇಕಾದರೆ ಯಾರೇ ಆದರೂ ಚಿಕ್ಕ ವಯಸ್ಸಿನಲ್ಲಿಯೇ ನಿವೃತ್ತಿ ಯೋಜನೆಯನ್ನು ಪ್ರಾರಂಭಿಸಬೇಕು. ಸಾಮಾನ್ಯವಾಗಿ ಭಾರತದಲ್ಲಿ ತಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವವರೆಗೆ ವ್ಯಕ್ತಿಗಳು ನಿವೃತ್ತಿ ಯೋಜನೆ ಮಾಡುವುದಿಲ್ಲ. ಈ ಜಾಹೀರಾತು ಅಭಿಯಾನದ ಮೂಲಕ ನಾವು ಒಬ್ಬ ವ್ಯಕ್ತಿಯು ತಮ್ಮ ಸುವರ್ಣ ವರ್ಷಗಳಲ್ಲಿ, ಚಿಕ್ಕಂದಿನಲ್ಲಿಯೇ ನಿವೃತ್ತಿ ಯೋಜನೆ ಮಾಡಲು ಪ್ರಾರಂಭ ಮಾಡಬೇಕು ಅನ್ನುವುದನ್ನು ಸಾರುತ್ತಿದ್ದೇವೆ ಮತ್ತು ನಿವೃತ್ತಿ ಯೋಜನೆ ಮಾಡಲು ಇದೇ ಸೂಕ್ತ ಸಮಯವಾಗಿದೆ” ಎಂದು ಹೇಳಿದರು.
ಲಿಯೋ ಬರ್ನೆಟ್, ಸೌತ್ ಏಷಿಯಾದ ಚೀಫ್ ಕ್ರಿಯೇಟಿವ್ ಆಫೀಸರ್ ವಿಕ್ರಮ್ ಪಾಂಡೆ ಮಾತನಾಡಿ, "ಸಾಮಾನ್ಯವಾಗಿ ತಮ್ಮ ಐವತ್ತರ ದಶಕದ ಮಧ್ಯಭಾಗದಲ್ಲಿ ಬಹಳಷ್ಟು ಮಂದಿಗೆ ತಾವಿನ್ನೂ ತಮ್ಮ ನಿವೃತ್ತಿಗಾಗಿ ಹಣ ಕೂಡಿಸಿಲ್ಲ ಎಂಬುದು ಅರಿವಾಗುತ್ತದೆ. ಆದರೆ ಆ ಹೊತ್ತಿಗೆ ಬಹಳ ತಡವಾಗಿರುತ್ತದೆ. ಹೆಚ್‌ಡಿಎಫ್‌ಸಿ ಲೈಫ್ ನ ಈ ಜಾಹೀರಾತು ಅಭಿಯಾನದಲ್ಲಿ ಖಾಲಿ ಮನೆಯಲ್ಲಿ ಕುಳಿತ ದಂಪತಿ ಇಬ್ಬರು ಹೊಸ ಜೀವನ ಪ್ರಯಾಣ ಮಾಡುವುದನ್ನು ತೋರಿಸುತ್ತದೆ ಮತ್ತು ಆರ್ಥಿಕ ಆದ್ಯತೆಗಳನ್ನು ಬದಲಿಸುವ ಕುರಿತ ಸಂದೇಶವನ್ನು ನೀಡುತ್ತದೆ. ಜೊತೆಗೆ ಮುಂದಿನ ಹಂತದ ಜೀವನಕ್ಕೆ ಮತ್ತು ನಿವೃತ್ತಿಗೆ ಸೂಕ್ತ ಯೋಜನೆ ರೂಪಿಸಿಕೊಳ್ಳುವ ಮಹತ್ವದ ಕುರಿತು ಸಾರುತ್ತದೆ. ಅಲ್ಲದೇ ಇಂಥಾ ಯೋಜನೆ ರೂಪಿಸಲು ಹೆಚ್‌ಡಿಎಫ್‌ಸಿ ಲೈಫ್ ಗಿಂತ ಉತ್ತಮ ಬೇರೆ ಯಾರಿದ್ದಾರೆ ಅಲ್ಲವೇ" ಎಂದು ಹೇಳಿದರು.
ಈ ಜಾಹೀರಾತನ್ನು ಟೆಲಿವಿಷನ್, ಡಿಜಿಟಲ್ ಮತ್ತು ಇತರ ಸಮೂಹ ಮಾಧ್ಯಮಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗು ತ್ತದೆ ಮತ್ತು ಹೆಚ್ಚಿನ ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತದೆ.