ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್ ಕ್ಯಾಂಪಸ್‌ನಲ್ಲಿ ಅದ್ದೂರಿ 'ಜೆಮಿನಿ ಡೇ' ಆಚರಣೆ
ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾ ಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ ಕ್ಯಾಂಪಸ್‌ನಲ್ಲಿ ಗೂಗಲ್ ಜೆಮಿನಿ ಡೇ ಆಚರಿಸಲಾಗಿದ್ದು, ವಿದ್ಯಾರ್ಥಿ ಗಳು ಮತ್ತು ಬೋಧಕರಿಗಾಗಿ ಬರೋಬ್ಬರಿ 10,100 ಜೆಮಿನಿ ಎಂಟರ್‌ಪ್ರೈಸ್ ಫಾರ್ ಎಜುಕೇಶನ್ ಲೈಸೆನ್ಸ್‌ಗಳನ್ನು ಪರಿಚಯಿಸಲಾಗಿದೆ.
-
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ ಕ್ಯಾಂಪಸ್‌ನಲ್ಲಿ ಗೂಗಲ್ ಜೆಮಿನಿ ಡೇ ಆಚರಿಸಲಾಗಿದ್ದು, ವಿದ್ಯಾರ್ಥಿ ಗಳು ಮತ್ತು ಬೋಧಕರಿಗಾಗಿ ಬರೋಬ್ಬರಿ 10,100 ಜೆಮಿನಿ ಎಂಟರ್‌ಪ್ರೈಸ್ ಫಾರ್ ಎಜುಕೇಶನ್ ಲೈಸೆನ್ಸ್‌ಗಳನ್ನು ಪರಿಚಯಿಸಲಾಗಿದೆ.
ಕಲಿಕೆ, ಬೋಧನೆ, ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಆಳವಾಗಿ ಅಳವಡಿಸಿಕೊಳ್ಳುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಗೂಗಲ್ ಇಂಡಿಯಾ, ಅದರ ತಂತ್ರಜ್ಞಾನ ಪಾಲುದಾರ ಸಂಸ್ಥೆ ಪ್ಯಾರಡೈಮ್‌ಐಟಿ ಮತ್ತು ಯುಪಿಇಎಸ್ ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಗೂಗಲ್ ಕ್ಲೌಡ್‌ನ ಎಡ್-ಟೆಕ್ ವಿಭಾಗದ ಭಾರತೀಯ ಮುಖ್ಯಸ್ಥ ವೈಭವ್ ಕುಮಾರ್ ಶ್ರೀವಾಸ್ತವ, ಗೂಗಲ್ ಇಂಡಿಯಾದ ಆಂಚಲ್ ಚೋಪ್ರಾ, ಮನೋಜ್ ಭುಟಾನಿ ಮತ್ತು ಪ್ಯಾರಡೈಮ್‌ಐಟಿ ಸಿಇಒ ಶ್ರೀಧರ್ ಗಾಧಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ಸಂವಾದ ನಡೆಸಲಾಯಿತು. ಶಿಕ್ಷಣದಲ್ಲಿ ಜನರೇಟಿವ್ ಎಐ ಪಾತ್ರ ಮತ್ತು ಅದನ್ನು ಬಳಸಿ ಹೊಸ ಸಮಸ್ಯೆಗಳನ್ನು ಹೇಗೆ ಸುಲಭವಾಗಿ ಪರಿಹರಿಸಬಹುದು ಎಂಬುದರ ಕುರಿತು ಚರ್ಚೆಗಳು ನಡೆದವು. ಬಲೂನ್ ಹಾರಿಸುವ ಮೂಲಕ 'ಜೆಮಿನಿ ಡೇ'ಗೆ ಅಧಿಕೃತ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳ ಕಲಿಕೆ ಮತ್ತು ಬೋಧನೆಯಲ್ಲಿ ಎಐ ಅಳವಡಿಕೆ
ಈ ಉಪಕ್ರಮದ ಬಗ್ಗೆ ವಿವರ ನೀಡಿದ ಯುಪಿಇಎಸ್ ಉಪಕುಲಪತಿ ಡಾ.ಸುನೀಲ್ ರೈ, “ಎಐ - ಫಸ್ಟ್ ಯೂನಿವರ್ಸಿಟಿ ಎಂದರೆ ಕೇವಲ ತಂತ್ರಜ್ಞಾನ ನೀಡುವುದಲ್ಲ, ಬದಲಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಬೋಧನೆಯಲ್ಲಿ ಎಐ ಅನ್ನು ಅರ್ಥಪೂರ್ಣವಾಗಿ ಅಳವಡಿಸುವುದು. ಗೂಗಲ್ ಕ್ಲೌಡ್ ಜೊತೆಗಿನ ಈ ಒಪ್ಪಂದವು ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಿದ್ಧಪಡಿಸುವ ಪ್ರಮುಖ ಹೆಜ್ಜೆಯಾಗಿದೆ,” ಎಂದರು.
ಗೂಗಲ್ ಕ್ಲೌಡ್‌ನ ವೈಭವ್ ಕುಮಾರ್ ಶ್ರೀವಾಸ್ತವ ಮಾತನಾಡಿ, "ಗೂಗಲ್ ಕ್ಲೌಡ್ ಹೊಂದಿರುವ ಮೊದಲ ಡಿಜಿಟಲ್ ಕ್ಯಾಂಪಸ್‌ಗಳಲ್ಲಿ ಯುಪಿಇಎಸ್ ಕೂಡ ಒಂದಾಗಿದೆ. ಉತ್ತರ ಭಾರತದ ಅತಿದೊಡ್ಡ ಜೆಮಿನಿ ಕ್ಯಾಂಪಸ್ ಅನ್ನು ಇಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಇದು ಕೇವಲ ಉದ್ಯೋಗಿಗಳನ್ನು ಮಾತ್ರವಲ್ಲ, ಭವಿಷ್ಯದ ಉದ್ಯೋಗ ಸೃಷ್ಟಿಕರ್ತರನ್ನು ಬೆಳೆಸಲು ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಏನು ಲಾಭ?
ಈ ಜೆಮಿನಿ ಎಂಟರ್‌ಪ್ರೈಸ್ ಬಳಕೆಯಿಂದ ಯುಪಿಇಎಸ್ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಅತ್ಯಾಧುನಿಕ ಎಐ ಸಾಮರ್ಥ್ಯಗಳನ್ನು ತಮ್ಮ ದೈನಂದಿನ ಅಧ್ಯಯನದಲ್ಲಿ ಬಳಸಿಕೊಳ್ಳಬಹುದು. ಹೊಸ ಎಐ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಭವಿಷ್ಯದ ಎಐ ಆಧಾರಿತ ಕಾರ್ಪೊರೇಟ್ ಜಗತ್ತಿಗೆ ವಿದ್ಯಾರ್ಥಿಗಳು ಸಂಪೂರ್ಣವಾಗಿ ಸಜ್ಜಾಗಲಿದ್ದಾರೆ.
2003ರಲ್ಲಿ ಉತ್ತರಾಖಂಡದಲ್ಲಿ ಸ್ಥಾಪಿತವಾದ ಯುಪಿಇಎಸ್ ಯುಜಿಸಿ ಮಾನ್ಯತೆ ಪಡೆದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯವಾಗಿದೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಟಿಸಿಎಸ್, ಇನ್ಫೋಸಿಸ್ ಮುಂತಾದ ವಿಶ್ವದ ಬೃಹತ್ ಕಂಪನಿಗಳಲ್ಲಿ ಯುಪಿಇಎಸ್‌ನ 40,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.