ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯಾ ಸರಣಿ; ಮತ್ತೊಬ್ಬ ಯುವಕನ ಕೊಲೆ: ಯೂನುಸ್‌ ಸರ್ಕಾರ ಏನು ಮಾಡ್ತಿದೆ?

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಅವ್ಯಾಹತವಾಗಿ ಮುಂದುವರಿದಿದೆ. ಶುಕ್ರವಾರ (ಜನವರಿ 16) ಹಿಂದೂ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಮುಸ್ಲಿಂ ರಾಜಕೀಯ ಮುಖಂಡ ಹತ್ಯೆಗೈದಿದ್ದಾನೆ. ಪೆಟ್ರೋಲ್‌ ಹಣ ಕೇಳಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ

ರಿಪನ್‌ ಸಹಾ ಮತ್ತು ಸಾಂದರ್ಭಿಕ ಚಿತ್ರ -

Ramesh B
Ramesh B Jan 17, 2026 5:27 PM

ಢಾಕಾ, ಜ. 17: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಮುಂದುವರಿದೆ (Bangladesh Unrest). ಇಂಧನ ಹಾಕಿಸಿ ಹಣ ಕೊಡದಿರುವುದನ್ನು ಪ್ರಶ್ನಿಸಿದ ಪೆಟ್ರೋಲ್‌ ಬಂಕ್‌ನ ಹಿಂದೂ ಸಿಬ್ಬಂದಿಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಶುಕ್ರವಾರ (ಜನವರಿ 16) ಘಟನೆ ನಡೆದಿದ್ದು, ಆ ದೇಶದ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯಲ್ಲಿ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದ್ದು, ಮೃತನನ್ನು 30 ವರ್ಷದ ರಿಪನ್‌ ಸಹಾ (Ripon Saha) ಎಂದು ಗುರುತಿಸಲಾಗಿದೆ. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸದರ್‌ ಉಪಝಿಲ್ಲಾ ಪೆಟ್ರೋಲ್‌ ಬಂಕ್‌ನ ಉದ್ಯೋಗಿಯಾಗಿದ್ದ ಸಹಾ ಮೇಲೆ ಶುಕ್ರವಾರ ಕಾರು ಹತ್ತಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸ್ಥಳೀಯ ನಾಯಕ ಅಬುಲ್‌ ಹಶೀಮ್‌ ಮತ್ತು ಆತನ ಚಾಲಕ ಕಮಲ್‌ ಹೊಸೈನ್‌ ಕೊಲೆಗಾರರು ಎಂದು ಗುರುತಿಸಲಾಗಿದ್ದು, ಸದ್ಯ ಬಂಧನಕ್ಕೊಳಗಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ:



ಘಟನೆ ವಿವರ

ಪೊಲೀಸ್‌ ವರದಿಯ ಪ್ರಕಾರ, ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (Bangladesh Nationalist Party) ಮತ್ತು ಅದರ ವಿದ್ಯಾರ್ಥಿ ಘಟಕ ಜುಡೊ ದಳ (Jubo Dal)ದ ಮಾಜಿ ನಾಯಕ ಅಬುಲ್‌ ಹಶೀಮ್‌ ಶುಕ್ರವಾರ ಪೆಟ್ರೋಲ್‌ ಬಂಕ್‌ಗೆ ಆಗಮಿಸಿ ತನ್ನ ಕಪ್ಪು ಲ್ಯಾಂಡ್‌ ಕ್ರೂಸರ್‌ ಕಾರ್‌ ಟ್ಯಾಂಕ್‌ ತುಂಬಿಸಿದ್ದಾನೆ. ಬಳಿಕ ಹಣ ಪಾವತಿಸದೆ ಬಂಕ್‌ನಿಂದ ಹೊರ ಹೋಗಲು ಯತ್ನಿಸಿದ್ದಾನೆ.

ಈ ವೇಳೆ ರಿಪನ್‌ ಸಹಾ ವಾಹನದ ಮುಂದೆ ಹೋಗಿ ಹಣ ಕೇಳಿದರು. ಹಶೀಮ್‌ ಈ ವೇಳೆ ಚಾಲಕ ಕಮಲ್‌ ಹೊಸೈನ್‌ಗೆ ಕಾರು ನಿಲ್ಲಿಸದೇ ಇರಲು ಸೂಚಿಸಿ ಸಹಾ ಮೇಲೆ ಹರಿಸಲು ಸೂಚಿಸಿದ್ದಾನೆ. ಇದರಿಂದ ಸಹಾ ಗಂಭೀರ ಗಾಯಗೊಂಡು ನೆಲಕ್ಕೆ ಉರುಳಿದರು.

ಸಹಾ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ʼʼಹಣ ಪಾವತಿ ಮಾಡದ್ದನ್ನು ಪ್ರಶ್ನಿಸಿದ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವ ಕಾರನ್ನು ಹತ್ತಿಸಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ನರಮೇಧ, 18 ದಿನಗಳಲ್ಲಿ 6ನೇ ಬಲಿ

ಬಲೆಗೆ ಬಿದ್ದ ಪಾಪಿಗಳು

ಘಟನೆಯ ಬಳಿಕ ಪೊಲೀಸರು ತೀವ್ರ ಶೋಧ ನಡೆಸಿ ಅಬುಲ್‌ ಹಶೀಮ್‌ ಮತ್ತು ಚಾಲಕನ್ನು ಬಂಧಿಸಿದ್ದಾರೆ. ಕೃತ್ಯ ಎಸಗಿದ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕೊಲೆ ಹಿಂದೂಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಿರಂತರವಾಗಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯ ತೀವ್ರ ಕಳವಳಕ್ಕೂ ಕಾರಣವಾಗಿದೆ. 1 ತಿಂಗಳ ಅಂತರದಲ್ಲಿ ಬಾಂಗ್ಲಾದೇಶದಲ್ಲಿ 10ಕ್ಕಿಂತ ಅಧಿಕ ಹಿಂದೂಗಳನ್ನು ಹತ್ಯೆ ಮಾಡಲಾಗಿದ್ದು, ಯೂನುಸ್‌ ಸರ್ಕಾರದ ವಿರುದ್ಧ ಹಲವರು ಧ್ವನಿ ಎತ್ತುತ್ತಿದ್ದಾರೆ.