ಟ್ರಂಪ್‌ಗೆ ಕೊನೆಗೂ ಒಲಿದ ನೊಬೆಲ್ ಶಾಂತಿ ಪ್ರಶಸ್ತಿ! ಲಾಬಿಗೆ ಮಣಿದರೇ ಮಾರಿಯಾ ಮಚಾದೊ?
ಹೋದಲ್ಲೆಲ್ಲಾ ನೊಬೆಲ್ ಶಾಂತಿ ಪ್ರಶಸ್ತಿ ತನಗೆ ನೀಡಬೇಕು ಎಂದು ಲಾಭಿ ನಡೆಸುತ್ತಿದ್ದ ಟ್ರಂಪ್ ಹೋರಾಟಕ್ಕೆ ಇದೀಗ ಜಯ ದೊರಕಿದಂತಾಗಿದೆ. 2025 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ ಅವರು ವೆನೆಜುವೆಲಾದ "ಸ್ವಾತಂತ್ರ್ಯ ಹೋರಾಟ" ಕ್ಕೆ ನೀಡಿದ ಬೆಂಬಲಕ್ಕಾಗಿ ತಮ್ಮ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದ್ದಾರೆ.
ಸಂಗ್ರಹ ಚಿತ್ರ -
ಹೋದಲ್ಲೆಲ್ಲಾ ನೊಬೆಲ್ ಶಾಂತಿ (Nobel Prize) ಪ್ರಶಸ್ತಿ ತನಗೆ ನೀಡಬೇಕು ಎಂದು ಲಾಭಿ ನಡೆಸುತ್ತಿದ್ದ ಟ್ರಂಪ್ (Donald Trump) ಹೋರಾಟಕ್ಕೆ ಇದೀಗ ಜಯ ದೊರಕಿದಂತಾಗಿದೆ. 2025 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ (Maria Corina Machado) ಅವರು ವೆನೆಜುವೆಲಾದ "ಸ್ವಾತಂತ್ರ್ಯ ಹೋರಾಟ" ಕ್ಕೆ ನೀಡಿದ ಬೆಂಬಲಕ್ಕಾಗಿ ತಮ್ಮ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದ್ದಾರೆ . ಟ್ರಂಪ್ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಗೆ ಧನ್ಯವಾದ ಅರ್ಪಿಸುತ್ತಾ, ಅವರನ್ನು ತುಂಬಾ ಅದ್ಭುತ ಮಹಿಳೆ ಎಂದು ಕರೆದರು.
ಗುರುವಾರ ಶ್ವೇತಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ಹಸ್ತಾಂತರ ಮಾಡಿದರು. ನೊಬೆಲ್ ಚಿನ್ನದ ಪದಕವು ಈಗ ಟ್ರಂಪ್ ಅವರ ಬಳಿಯೇ ಉಳಿದಿದೆ ಎಂದು ಶ್ವೇತಭವನದ (White House) ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಕಾರ್ಯಕ್ರಮದ ಬಳಿಕ ಮಚಾದೊ ಚಿನ್ನದ ಪದಕವನ್ನು ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಅವರ ವಿಶಿಷ್ಟ ಬದ್ಧತೆಗೆ ಮನ್ನಣೆಯಾಗಿ ಅಮೆರಿಕದ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಪ್ರದಾನ ಮಾಡಿದ್ದೇನೆ ಮಚಾದೊ ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಸಿಕ್ಕಿದ ನಂತರ ಮರಿಯಾ ಅವರು ಈ ಪ್ರಶಸ್ತಿಯನ್ನು ನಾನು ಟ್ರಂಪ್ ಅವರಿಗೆ ಅರ್ಪಿಸುವುದಾಗಿ ಅಕ್ಟೋಬರ್ 10 ರಂದೇ ಪ್ರಕಟಿಸಿದ್ದರು. ನೊಬೆಲ್ ಶಾಂತಿ ಪಾರಿತೋಷಕವು ಎಲ್ಲಾ ವೆನೆಜುವೆಲಾ ಜನರ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಪುಸ್ಕಾರವನ್ನ ವೆನೆಜುವೆಲಾದ ದುಃಖಿತ ಜನರು ಹಾಗೂ ಪ್ರಜಾಪ್ರಭುತ್ವಪರ ಚಳವಳಿಗೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದರು.
ನೊಬೆಲ್ ನಿಯಮಗಳು ಏನು ಹೇಳುತ್ತವೆ
ನಾರ್ವೇಜಿಯನ್ ನೊಬೆಲ್ ಸಂಸ್ಥೆ ಮತ್ತು ನೊಬೆಲ್ ಸಮಿತಿಯ ಪ್ರಕಾರ, ಒಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದ ನಂತರ, ಅದನ್ನು ಬೇರೆಯವರಿಗೆ ವರ್ಗಾಯಿಸಲು, ಹಂಚಿಕೊಳ್ಳಲು ಅಥವಾ ನೀಡಲು ಸಾಧ್ಯವಿಲ್ಲ. ಇದು ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಡಿಯಲ್ಲಿ ಸ್ಥಾಪಿಸಲಾದ ಪ್ರತಿಷ್ಠಾನದ ಶಾಸನಗಳಲ್ಲಿ ಒಂದು ಮೂಲಭೂತ ತತ್ವವಾಗಿದೆ. ಪ್ರಶಸ್ತಿ ವಿಜೇತರು ಭೌತಿಕ ಪದಕ ಅಥವಾ ನಗದು ಪ್ರಶಸ್ತಿಯೊಂದಿಗೆ ತಮಗೆ ಇಷ್ಟವಾದದ್ದನ್ನು ಮಾಡಬಹುದು, ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಅಧಿಕೃತ ಬಿರುದು ಮತ್ತು ಗೌರವವು ಆಯ್ಕೆಯಾದ ಪ್ರಶಸ್ತಿ ವಿಜೇತರೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಮತ್ತು ಅದನ್ನು ಬೇರೆ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
ನೊಬೆಲ್ ಪದಕ ಹೇಗಿರುತ್ತದೆ
ನೊಬೆಲ್ ಶಾಂತಿ ಪ್ರಶಸ್ತಿ ಪದಕವು ಚಿನ್ನದ ಡಿಸ್ಕ್ ಆಗಿದ್ದು, 6.6 ಸೆಂ.ಮೀ ಅಗಲ ಮತ್ತು 196 ಗ್ರಾಂ ತೂಕವಿರುತ್ತದೆ. ಇದು ಮುಂಭಾಗದಲ್ಲಿ ಆಲ್ಫ್ರೆಡ್ ನೊಬೆಲ್ ಅವರ ಭಾವಚಿತ್ರವನ್ನು ತೋರಿಸುತ್ತದೆ ಮತ್ತು ಹಿಂಭಾಗದಲ್ಲಿ, ಸಹೋದರತ್ವವನ್ನು ಸಂಕೇತಿಸಲು ಮೂವರು ಬೆತ್ತಲೆ ಪುರುಷರು ಪರಸ್ಪರ ಭುಜಗಳನ್ನು ಹಿಡಿದಿದ್ದಾರೆ. ವಿನ್ಯಾಸವು 120 ವರ್ಷಗಳಿಗೂ ಹೆಚ್ಚು ಕಾಲ ಹಾಗೆಯೇ ಉಳಿದಿದೆ.