ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕದನ ವಿರಾಮ ಮಾತುಕತೆ: ಇರಾನ್‌ನ ಆಶಯ ಪಟ್ಟಿ ಕಸದ ಬುಟ್ಟಿ ಸೇರಿದೆ ಎಂದ ಡೊನಾಲ್ಡ್ ಟ್ರಂಪ್ ಆಪ್ತೆ

ಅಮೆರಿಕ, ಇಸ್ರೇಲ್ ಸೇನಾ ಪಡೆಯು ಇರಾನ್ ವಿರುದ್ಧ ನಡೆಸುತ್ತಿರುವ ಸಂಘರ್ಷಕ್ಕೆ ತಾತ್ಕಾಲಿಕವಾಗಿ ವಿರಾಮ ಹೇಳಲಾಗಿದೆ. ಕದನ ವಿರಾಮ ಮಾತುಕತೆಯ ವೇಳೆ ಇರಾನ್ 10 ಅಂಶಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಬುಧವಾರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ಇರಾನ್‌ನ ಪ್ರಸ್ತಾಪಗಳು ಸಂಪೂರ್ಣ ತಿರಸ್ಕೃತ: ಅಮೆರಿಕ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಕದನ ವಿರಾಮಕ್ಕೆ (Ceasefire talks) ಸಂಬಂಧಿಸಿ ಇರಾನ್‌ನ (Iran war) 10 ಅಂಶಗಳ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಕಸದ ಬುಟ್ಟಿಗೆ ಎಸೆದಿದ್ದಾರೆ. ಇರಾನಿನ ಆಶಯವನ್ನು ಅವರು ಒಪ್ಪಂದದಲ್ಲಿ ಸ್ವೀಕರಿಸುತ್ತಾರೆ ಎನ್ನುವ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ (White house press secretary ) ಕ್ಯಾರೋಲಿನ್ ಲೀವಿಟ್ (Karoline Leavitt) ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇರಾನ್‌ನ ಪ್ರಸ್ತಾಪಗಳು ಸಂಪೂರ್ಣವಾಗಿ ತಿರಸ್ಕೃತಗೊಂಡಿದೆ ಎಂದು ಹೇಳಿದರು.

ಅಮೆರಿಕ, ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಮಾತುಕತೆಗಳಿಗೆ ಸಂಬಂಧಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಕ್ತ ಮಾತುಕತೆಗೆ ವಾಷಿಂಗ್ಟನ್ ಸೂಚಿಸಿದ್ದರೂ ಕೂಡ ಇರಾನ್‌ನ ಸಲ್ಲಿಸಿರುವ 10 ಅಂಶಗಳ ಕದನ ವಿರಾಮ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಕ್ಯಾರೋಲಿನ್ ಲೀವಿಟ್ ತಿಳಿಸಿದರು.

ಅಮೆರಿಕ-ಇರಾನ್ ಕದನ ವಿರಾಮ: ಪಾಕಿಸ್ತಾನದ ಪಾತ್ರ ಕೇವಲ 'ಪೋಸ್ಟ್ ಮ್ಯಾನ್' ಕೆಲಸವೇ ಅಥವಾ ನಿಜವಾದ ಸಂಧಾನಕಾರನೇ?

ಪ್ರಸ್ತುತ ಚರ್ಚೆಯಲ್ಲಿರುವ ಪ್ರಸ್ತಾಪವು ಟೆಹರಾನ್ ಈ ಮೊದಲು ಮಂಡಿಸಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನಾವು ಇರಾನಿಯನ್ನರಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ಅದು ಮಾತುಕತೆ ನಡೆಸಲು ಆಧಾರವಾಗಿದೆ ಎಂದು ನಿರ್ಧರಿಸಲಾಗಿದೆ. ಇರಾನಿಯನ್ನರು ಸ್ವೀಕಾರಾರ್ಹವಲ್ಲದ 10 ಅಂಶಗಳ ಯೋಜನೆಯನ್ನು ಮುಂದಿಟ್ಟರು. ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಹೇಳಿದರು.

ಕದನ ವಿರಾಮ ಮಾತುಕತೆಯಲ್ಲಿ ಹೊಸ ಮಾರ್ಪಡಿಸಿದ ಯೋಜನೆಯ ಕುರಿತು ಮಾತುಕತೆ ನಡೆಸಲು ನಮ್ಮದೇ ಆದ 15 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದೇವೆ. ಇದರ ಆಧಾರದಲ್ಲೇ ಮಾತುಕತೆ ನಡೆಸಲು ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡ ನಿರ್ಧರಿಸಿದೆ ಎಂದು ಅವರು ತಿಳಿಸಿದರು.



ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷ ಇದೀಗ ವಿರಾಮಕ್ಕೆ ಎರಡು ಪಕ್ಷಗಳು ಒಪ್ಪಿಕೊಂಡಿವೆ. ಕದನ ವಿರಾಮ ಕುರಿತಾದ ಮೊದಲ ಸುತ್ತಿನ ಮಾತುಕತೆಗಳು ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಯುಎಸ್ ನಿಯೋಗವನ್ನು ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ನೇತೃತ್ವ ವಹಿಸಲಿದ್ದಾರೆ ಎಂದು ಲೀವಿಟ್ ತಿಳಿಸಿದರು.

ಒಪ್ಪಂದ ವಿಚಾರ ಪೂರ್ಣಗೊಳ್ಳದೆ ಇದ್ದರೂ ವಾಷಿಂಗ್ಟನ್ ಮತ್ತು ಟೆಹರಾನ್ ಇದು ನಮ್ಮದೇ ವಿಜಯ ಎಂದು ಹೇಳಿಕೊಂಡಿವೆ. ಸಂಘರ್ಷಕ್ಕೆ ಪ್ರಮುಖ ಕಾರಣವಾದ ಇರಾನ್‌ನ ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಗಳ ಭವಿಷ್ಯವೇನು ಎಂಬುದರ ಕುರಿತು ಇನ್ನು ಯಾವುದೇ ಸ್ಪಷ್ಟ ನಿಲುವು ತಳೆಯಲಾಗಿಲ್ಲ. ಇನ್ನು ಹೊರ್ಮುಜ್ ಜಲಸಂಧಿಯ ನಿಯಮಗಳ ಬಗ್ಗೆಯೂ ಗೊಂದಲಗಳಿದ್ದು, ಇಲ್ಲಿ ಸಾಗುವ ಹಡಗುಗಳ ಮೇಲೆ ಇರಾನ್ ಸುಂಕ ವಿಧಿಸುವ ಸಾಧ್ಯತೆ ಇದೆ. ಆದರೆ ಇದನ್ನು ಅಮೆರಿಕ ವಿರೋಧಿಸಲಿದೆ ಎನ್ನಲಾಗುತ್ತಿದೆ.

ಇರಾನ್ ಯುದ್ಧ ಕದನ ವಿರಾಮ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ತೈಲ, ಅನಿಲದ ಲೆಕ್ಕಾಚಾರ

ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆ ಇಸ್ರೇಲ್ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ದಾಳಿ ತೀವ್ರಗೊಂಡಿದೆ. ಈ ದಾಳಿಯಲ್ಲಿ ಬುಧವಾರ ಕನಿಷ್ಠ 182 ಮಂದಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಕದನ ವಿರಾಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸೇರಿದಂತೆ ಇರಾನಿನ ಅಧಿಕಾರಿಗಳು ಲೆಬನಾನ್ ಒಪ್ಪಂದದ ಭಾಗವಾಗಿದೆ ಎಂದು ಹೇಳಿದ್ದರೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕದನ ವಿರಾಮ ಮಾತುಕತೆಗಳು ಲೆಬನಾನ್ ಪ್ರದೇಶಕ್ಕೆ ಸೇರಿರುವುದಲ್ಲ ಎಂದು ಹೇಳಿದ್ದಾರೆ.