ಇರಾನ್ ವಿರುದ್ಧ ಅಣ್ವಸ್ತ್ರ ಬಳಕೆಗೆ ಮುಂದಾಯ್ತಾ ಅಮೆರಿಕ? ಡೊನಾಲ್ಡ್ ಟ್ರಂಪ್ ಸರ್ವ ನಾಶದ ಬೆದರಿಕೆಗೆ ಜಗತ್ತೇ ತಲ್ಲಣ
Donald Trump: ʼʼಇಂದು ರಾತ್ರಿ ಇರಾನ್‌ನ ಇಡೀ ನಾಗರಿಕತೆಯೇ ಸರ್ವ ನಾಶವಾಗಲಿದೆʼʼ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿದ್ದಾರೆ. ಆ ಮೂಲಕ ಅಮೆರಿಕ ಅಣ್ವಸ್ತ್ರ ಬಳಸಲಿದ್ಯಾ ಎನ್ನುವ ಆತಂಕ ಜಗತ್ತನ್ನೇ ಕಾಡತೊಡಗಿದೆ. ಸದ್ಯ ಈ ಬೆಳವಣಿಗೆ ಜಗತ್ತೆ ಆತಂಕವನ್ನು ಕಣ್ಣಿನಿಂದ ನೋಡುತ್ತಿದೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಏ. 7: ʼʼಇಂದು ರಾತ್ರಿ ಇರಾನ್‌ನ ಇಡೀ ನಾಗರಿಕತೆಯೇ ಸರ್ವ ನಾಶವಾಗಲಿದೆʼʼ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿದ್ದಾರೆ. ಆ ಮೂಲಕ ಅಮೆರಿಕ ಅಣ್ವಸ್ತ್ರ ಬಳಸಲಿದ್ಯಾ ಎನ್ನುವ ಆತಂಕ ಜಗತ್ತನ್ನೇ ಕಾಡತೊಡಗಿದೆ. ಟ್ರಂಪ್ ಅವರ ಕೊನೆಯ ಗಡುವು ಕೊನೆಗೊಳ್ಳಲು ಕೆಲವೇ ಗಂಟೆ ಬಾಕಿ ಇರುವಾಗ ಇರಾನ್‌ನ ಪ್ರಮುಖ ತೈಲ ಸಂಗ್ರಹಾಗಾರ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ ಬೆನ್ನಲ್ಲೇ ಈ ಬೆದರಿಕೆ ಹೊರ ಬಿದ್ದಿದೆ.
ಈ ಬಗ್ಗೆ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಟ್ರಂಪ್, ʼʼಇರಾನ್‌ನ ಸಂಪೂರ್ಣ ನಾಗರಿಕತೆಯೇ ಇಂದು ರಾತ್ರಿ ನಾಶವಾಗಲಿದೆ. ಮತ್ತೆಂದೂ ಇರಾನ್‌ಗೆ ಹಿಂದಿರುಗುವುದಿಲ್ಲ. ಆ ರೀತಿ ಆಗಬೇಕೆಂದು ನಾನು ಬಯಸುವುದಿಲ್ಲ. ಆದರೆ ಆ ರೀತಿ ಆಗುವ ಸಾಧ್ಯತೆಯೂ ಇಲ್ಲದಿಲ್ಲ” ಎಂದು ಹೇಳಿದ್ದಾರೆ.
"ಈಗ ನಾವು ಸಂಪೂರ್ಣ ಆಡಳಿತ ಬದಲಾವಣೆಯನ್ನು ಹೊಂದಿದ್ದೇವೆ. ಬಹುಶಃ ಇಂದು ರಾತ್ರಿ ಅದ್ಭುತವಾದ ಏನಾದರೂ ಸಂಭವಿಸಬಹುದು. ವಿಶ್ವದ ಸುದೀರ್ಘ ಮತ್ತು ಸಂಕೀರ್ಣ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಕ್ಷಣವಾಗಲಿದೆ. 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಕೊನೆಗೊಳ್ಳಲಿದೆ. ಇರಾನ್‌ನ ಜನರಿಗೆ ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ:
#BREAKING: Trump issues massive threat against Iran hours before deadline ends.
— Aditya Raj Kaul (@AdityaRajKaul) April 7, 2026
“A whole civilization will die tonight, never to be brought back again.” pic.twitter.com/b4wi5Kkokw
ಅಣ್ವಸ್ತ್ರ ಬಳಕೆಗೆ ಮುಂದಾಯ್ತ ಅಮೆರಿಕ?
ಅಮೆರಿಕದ ಈ ಎಚ್ಚರಿಕೆ ಅಣ್ವಸ್ತ್ರ ಬಳಕೆಯ ಮುನ್ಸೂಚನೆ ಎನ್ನುವ ಆತಂಕ ಈಗ ಜಗತ್ತನ್ನು ಕಾಡುತ್ತಿದೆ. ಟ್ರಂಪ್ ಅವರ ಸರ್ವ ನಾಶದ ಬೆದರಿಕೆಯನ್ನು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅಧ್ಯಕ್ಷರಿಗೆ ಮಾತ್ರ ಅಧಿಕಾರವಿರುವ ಉಪಕರಣವನ್ನು ಅಮೆರಿಕ ಬಳಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಇದನ್ನು ಅನೇಕರು ಪರಮಾಣು ಶಸ್ತ್ರಾಸ್ತ್ರಗಳ ಉಲ್ಲೇಖ ಎಂದು ಅರ್ಥೈಸಿದ್ದಾರೆ. "ನಮ್ಮ ಟೂಲ್‌ಕಿಟ್‌ನಲ್ಲಿ ನಾವು ಇಲ್ಲಿಯವರೆಗೆ ಬಳಸದ ಶಸ್ತ್ರಾಸ್ತ್ರಗಳಿವೆ. ಇರಾನ್ ತನ್ನ ನಡವಳಿಕೆಯನ್ನು ಬದಲಿಸದಿದ್ದರೆ ಅಮೆರಿಕದ ಅಧ್ಯಕ್ಷರು ಅವುಗಳನ್ನು ಬಳಸಲು ನಿರ್ಧರಿಸಬಹುದುʼʼ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಟ್ರಂಪ್ ಬೆದರಿಕೆ ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಮುಂದೇನಾಗಲಿದೆ ಎಂದು ಭೀತಿಯಿಂದ ಎದುರು ನೋಡುವಂತಾಗಿದೆ.
ಭಾರತೀಯರಿಗೆ ಎಚ್ಚರಿಕೆ:
There is an operational Indian Embassy in Tehran, staffed by Indians.
— Tarun Raju (@btarunr) April 7, 2026
All those morons who chose to remain despite Indian advisory 3 months ago in January, will drag Indian government staff to the grave with them.
The Indian mission would've closed had they complied. https://t.co/2ZV4w3caOA
ಭಾರತೀಯರಿಗೆ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ ಅವರ 10 ದಿನಗಳ ಡೆಡ್‌ಲೈನ್ ಕೊನೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮುಂದಿನ 48 ಗಂಟೆಗಳ ಕಾಲ ಸುರಕ್ಷಿತ ಸ್ಥಳದಲ್ಲೇ ಇರುವಂತೆ ಸೂಚಿಸಿದೆ. ಅನಗತ್ಯ ಸಂಚಾರ ಮಾಡದಂತೆ ಎಚ್ಚರಿಸಿದೆ. ಅದರಲ್ಲೂ ಸೇನಾ ನೆಲೆ, ವಿದ್ಯುತ್ ಸ್ಥಾವರಗಳಂತಹ ಸೂಕ್ಷ್ಮ ಸ್ಥಳಗಳಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದೆ. ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲದಂತೆಯೂ ಸಲಹೆ ನೀಡಲಾಗಿದೆ. ಮನೆಯೊಳಗೇ ಇರಬೇಕೆಂದೂ, ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿಬೇಕೆಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತುರ್ತು ಅಗತ್ಯಗಳಿಗಾಗಿ 989128109115, 989128109102, 989128109109, 989932179359 ನಂಬರ್‌ಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ಅಮೆರಿಕ ನೀಡಿದ ಅಂತಿಮ ಗಡುವು ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.