ಟಿಬೆಟ್‌ನಲ್ಲಿ ಭೀಕರ ಪ್ರವಾಹ: ನೇಪಾಳದಲ್ಲಿ 98 ಮಂದಿ ಸಾವು, ಭಾರತೀಯರು ಸೇರಿ 500ಕ್ಕೂ ಹೆಚ್ಚು ಮಂದಿ ನಾಪತ್ತೆ; ಭೀಕರ ದುರಂತದ ವಿಡಿಯೊ ವೈರಲ್
Nepal Floods: ಟಿಬೆಟ್ ಗಡಿಯ ನೇಪಾಳದ ರಸುವಾ ಜಿಲ್ಲೆಯಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 98 ಮಂದಿ ಮೃತಪಟ್ಟಿದ್ದಾರೆ. ಸುಮಾರು 500 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 133 ಭಾರತೀಯರು ಮತ್ತು 37 ಎನ್‌ಆರ್‌ಐಗಳು ಸೇರಿದ್ದಾರೆ. ಟಿಬೆಟ್‌ನ ಗ್ಯಿರೋಂಗ್ ಪೋರ್ಟ್‌ನಿಂದ ಪ್ರವಹಿಸುವ ನೀರಿನ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಿದೆ.
ನೇಪಾಳದಲ್ಲಿನ ಭೀಕರ ಪ್ರವಾಹ -
ಕಠ್ಮಂಡು, ಆ. 26: ಟಿಬೆಟ್ ಗಡಿಯಲ್ಲಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ (Flash Flood) ಕನಿಷ್ಠ 98 ಮಂದಿ ಮೃತಪಟ್ಟಿದ್ದು, ಸುಮಾರು 500 ಮಂದಿ ನಾಪತ್ತೆಯಾಗಿದ್ದಾರೆ (Nepal Floods). ನಾಪತ್ತೆಯಾದವರಲ್ಲಿ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದ್ದಾರೆ. ಟಿಬೆಟ್‌ನ ಗ್ಯಿರೋಂಗ್ ಪೋರ್ಟ್ (Gyirong Port) ಬಳಿಯ ಪ್ರವಾಹದ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೇಲ್ಭಾಗದಿಂದ ಭಾರೀ ಪ್ರಮಾಣದ ಕೆಸರು, ಕಲ್ಲುಗಳು ಹಾಗೂ ಅವಶೇಷಗಳೊಂದಿಗೆ ನೀರು ಕ್ಷಣಾರ್ಧದಲ್ಲಿ ನುಗ್ಗಿ ವಾಹನಗಳನ್ನು ಕೊಚ್ಚಿಕೊಂಡು ಹೋಗಿದೆ. ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯವೂ ಕಂಡುಬಂದಿದೆ.
ಸುಮಾರು ಬೆಳಗ್ಗೆ 9 ಗಂಟೆಗೆ ಟಿಬೆಟ್ ಭಾಗದಿಂದ ಬಂದ ಪ್ರವಾಹ ಭೋಟೆ ಕೋಶಿ ನದಿ (Bhote Koshi River) ಮೂಲಕ ರಸುವಾ ಹಾಗೂ ಧಾಡಿಂಗ್ ಜಿಲ್ಲೆಗಳಿಗೆ ವ್ಯಾಪಿಸಿದ್ದು, ಕಠ್ಮಂಡುವಿನ ನೈಋತ್ಯದಲ್ಲಿರುವ ನುವಾಕೋಟ್ ಜಿಲ್ಲೆಯ ಮೇಲೂ ಪರಿಣಾಮ ಬೀರಿದೆ.
ನೇಪಾಳದಲ್ಲಿ ಸಂಭವಿಸಿದ ಪ್ರವಾಹ:
Very Horrific videos from China and Nepal.
— Woke Eminent (@WokePandemic) August 26, 2026
This could be the most dangerous flooding ever recorded on camera , its looks like an inland Tsunami
Hundreds might has lost their lives and infra worth Billions might have already been lost of these floods.
This migth impact India too… pic.twitter.com/PHyGejM4b9
ನೇಪಾಳದಲ್ಲಿ ಭೀಕರ ಪ್ರವಾಹ: ಸದ್ಗುರು ಈಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶದಲ್ಲಿ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ವಿದೇಶಿ ಪ್ರವಾಸಿಗರು ಹಾಗೂ 93 ನೇಪಾಳಿ ಪ್ರಜೆಗಳು ಸೇರಿದ್ದಾರೆ. ನಾಪತ್ತೆಯಾದ ಭಾರತೀಯರಲ್ಲಿ 59 ಮಂದಿ ಕೈಲಾಸ ಮಾನಸ ಸರೋವರ ಯಾತ್ರಿಕರು ಎಂದು ಪ್ರವಾಸ ಸಂಸ್ಥೆಯೊಂದು ತಿಳಿಸಿದೆ.
ನೇಪಾಳದಲ್ಲಿ ಕೊಚ್ಚಿ ಹೋದ ಸೇತುವೆ:
Scary visuals of flash floods in Nepal. pic.twitter.com/2wKHrX6tFn
— Piyush Rai (@Benarasiyaa) August 26, 2026
ಪ್ರವಾಹದ ಹಿನ್ನೆಲೆಯಲ್ಲಿ ನೇಪಾಳ ಸೇನೆ ಹೆಲಿಕಾಪ್ಟರ್‌ಗಳು ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ರವಾಹದ ಭೀಕರ ದೃಶ್ಯ:
🌊🇳🇵 Devastating floods in Nepal
— D.R. Boka ( सनातनी ) (@BokaThob2383) August 26, 2026
A massive flash flood from the Tibet side has wreaked havoc in Rasuwa district, surging through the Bhote Koshi River. The area around Gyirong Port on the Nepal-China border has also been severely affected...🌊⚠️
Homes, bridges, and roads washed… pic.twitter.com/b76qHzLHlm
ನೇಪಾಳದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮುಂಗಾರು ಮಳೆಯಿಂದ ಪ್ರತಿ ವರ್ಷವೂ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುತ್ತಿದ್ದು, ಈ ಬಾರಿ ಟಿಬೆಟ್ ಗಡಿಯ ಪ್ರದೇಶದಲ್ಲಿ ಸಂಭವಿಸಿದ ದುರಂತದ ನಿಖರ ಹಾನಿಯ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.