ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದಲ್ಲ ಕೊಡಲಿಯಿಂದ ಹಲ್ಲೆ

Flydubai pilot attack: ಕಾಕ್‌ಪಿಟ್‌ನೊಳಗೆ ಪೈಲಟ್‌ಗೆ ಆಯುಧ ಹೇಗೆ ಸಿಕ್ಕಿತು? ಎಂಬುದು ಇದೀಗ ಬಹುತೇಕರ ಪ್ರಶ್ನೆಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಓಮನ್‌ನ ಸಹ ಪೈಲಟ್‌ ಚಾಕುವನ್ನು ಬಳಸಿ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರಿಗೆ ಇರಿದಿದ್ದಾನೆ ಎನ್ನಲಾಗಿತ್ತು. ಇದೀಗ ಕೊಡಲಿಯಿಂದ ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ಹಲ್ಲೆ ನಡೆದಿರುವ ಸಾಧ್ಯತೆ

ಸ್ಮಿತ್ ಮಚ್ಚಾರ್ (ಸಂಗ್ರಹ ಚಿತ್ರ) -

Priyanka P
Priyanka P Oct 1, 2026 4:07 PM

ಟೆಲ್‌ ಅವೀವ್‌, ಅ. 1: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಪೈಲಟ್ ಮೇಲೆ ಸಹ ಪೈಲಟ್ ದಾಳಿ ಮಾಡಿರುವ ಸುದ್ದಿ ಬರುತ್ತಿದ್ದಂತೆ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೈಲಟ್ ಸ್ಮಿತ್‌ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಕ್‌ಪಿಟ್‌ನೊಳಗೆ ಪೈಲಟ್‌ಗೆ ಆಯುಧ ಹೇಗೆ ಸಿಕ್ಕಿತು? ಎಂಬುದು ಇದೀಗ ಬಹುತೇಕರ ಪ್ರಶ್ನೆ. ಆರಂಭಿಕ ವರದಿಗಳ ಪ್ರಕಾರ, ಓಮನ್‌ನ ಸಹ ಪೈಲಟ್‌ ಚಾಕುವನ್ನು ಬಳಸಿ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರಿಗೆ ಇರಿದಿದ್ದಾನೆ ಎನ್ನಲಾಗಿತ್ತು. ಇದೀಗ ಕೊಡಲಿಯಿಂದ ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತನಿಖೆಯಲ್ಲಿ, ದಾಳಿಕೋರ ಸಹ-ಪೈಲಟ್ ಕಾಕ್‌ಪಿಟ್‌ಗೆ ಯಾವುದೇ ಚಾಕು ಅಥವಾ ಹೊರಗಿನಿಂದ ಬೇರೆ ಯಾವುದೇ ಆಯುಧವನ್ನು ತಂದಿರಲಿಲ್ಲ ಎಂಬುದು ತಿಳಿದುಬಂದಿದೆ. ಬದಲಿಗೆ, ವಿಮಾನದ ಕಾಕ್‌ಪಿಟ್‌ನಲ್ಲಿ ಇಡಲಾಗಿರುವ ಕ್ರ್ಯಾಶ್ ಆಕ್ಸ್‌ (Crash Axe) ಅಥವಾ ತುರ್ತು ಪರಿಸ್ಥಿತಿಗಾಗಿ ಇಡುವ ಕೊಡಲಿಯನ್ನು ಬಳಸಿ ಸಹೋದ್ಯೋಗಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಇದಕ್ಕೂ ಮೊದಲು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ, ಆರೋಪಿಯು ದಾಳಿ ವೇಳೆ ಕೊಡಲಿಯನ್ನು ಬಳಸಿದ್ದಾನೆ ಎಂದು ಉಲ್ಲೇಖಿಸಿದ್ದರು.

ಸಹ ಪೈಲಟ್‌ ತನ್ನ ಸಹೋದ್ಯೋಗಿಯ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ವಿಮಾನ ಅಪಾಯಕಾರಿಯಾಗಿ ಕೆಳಕ್ಕೆ ಇಳಿಯಲು ಆರಂಭಿಸಿತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಯಿತು. ದುಬೈನಿಂದ ವಿಮಾನ ಹೊರಟ ಸುಮಾರು ಎರಡೂವರೆ ಗಂಟೆಗಳ ಬಳಿಕ ಈ ಗೊಂದಲದ ಪರಿಸ್ಥಿತಿ ಉಂಟಾಯಿತು.

ಪೈಲಟ್ ಸ್ಮಿತ್ ಮಚ್ಚರ್ ಸಾಹಸ; ಮತ್ತೆ ಮುನ್ನೆಲೆಗೆ ಬಂದ 300ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಿದ್ದ ನೀರಜಾ ಭಾನೋಟ್‌ ಶೌರ್ಯಗಾಥೆ

ಈ ವೇಳೆ ವಿಮಾನವು 33,000 ಅಡಿ ಎತ್ತರದಿಂದ ಸುಮಾರು 17,000 ಅಡಿಗೆ (ಸುಮಾರು 10,000 ಮೀಟರ್‌ನಿಂದ 5,100 ಮೀಟರ್‌ಗೆ) ಕೇವಲ ಒಂದು ನಿಮಿಷದೊಳಗೆ ಇಳಿಯಿತು. ಬಳಿಕ ಜೋರ್ಡನ್‌ ಗಡಿಯ ಸಮೀಪ ವಿಮಾನವು ಅಸ್ಥಿರವಾಗಿ ವೃತ್ತಾಕಾರದಲ್ಲಿ ಹಾರಾಟ ನಡೆಸಿ, ಸುಮಾರು ಒಂದು ಗಂಟೆಯ ನಂತರ ಸೌದಿ ಅರೇಬಿಯಾದ ತಬುಕ್‌ ನಗರದಲ್ಲಿ ಲ್ಯಾಂಡ್‌ ಆಯಿತು.

ವಿಮಾನವು ಏರ್‌ ಟ್ರಾಫಿಕ್‌ ಕಂಟ್ರೋಲ್‌ನೊಂದಿಗೆ ನಡೆಸಿದ ಸಂವಹನವನ್ನು ಕೇಳಿಸಿಕೊಂಡ ವ್ಯಕ್ತಿಯೊಬ್ಬರ ಪ್ರಕಾರ, ವಿಮಾನವು ತಬುಕ್‌ನಲ್ಲಿ ಲ್ಯಾಂಡ್‌ ಆಯಿತು. ಪ್ರಯಾಣಿಕರೆಲ್ಲರೂ ಭೀತಿಯಿಂದ ಕಿರುಚುತ್ತಿದ್ದರು. ಪೈಲಟ್‌ನ ಧ್ವನಿ ನಡುಗುತ್ತಿದ್ದು, ಅವರು ಮೇಡೇ (Mayday) ಎಂದು ತುರ್ತು ಸಂದೇಶ ನೀಡಿದರು. ವಿಮಾನದಲ್ಲಿ ಹೈಜಾಕ್‌ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರ ಎಂದು ಹೇಳಿದರು.

ಕಾಕ್‌ಪಿಟ್‌ನಲ್ಲಿ ಕೊಡಲಿ ಏಕೆ ಇತ್ತು?

ಅಂತಾರಾಷ್ಟ್ರೀಯ ವಾಯುಯಾನ ನಿಯಮಗಳ ಅಡಿಯಲ್ಲಿ, ವಿಮಾನದಲ್ಲಿ ಕೊಡಲಿಯನ್ನು ಅಳವಡಿಸಲಾಗುತ್ತದೆ. ಪ್ರತಿ ವಾಣಿಜ್ಯ ವಿಮಾನದಲ್ಲಿ ಕೊಡಲಿಯನ್ನಿಡುವುದು ಕಡ್ಡಾಯ. ಅಪಘಾತದ ನಂತರ ಬಳಸಬಹುದಾದ ತುರ್ತು ಸಾಧನವಾಗಿ ದಶಕಗಳಿಂದ ಒಂದಲ್ಲ ಒಂದು ರೂಪದಲ್ಲಿ ಅವುಗಳನ್ನು ವಿಮಾನಗಳಲ್ಲಿ ಅಳವಡಿಸಲಾಗಿದೆ.

ವಿಮಾನದಲ್ಲಿಯೇ ಭಾರತೀಯ ಪೈಲಟ್‌ಗೆ ತುರ್ತು ಚಿಕಿತ್ಸೆ ನೀಡಿದ ದಂತವೈದ್ಯ ಹೇಳಿದ್ದೇನು?

ಈ ಹಿಂದೆ ವಿಮಾನಗಳ ಮುಖ್ಯ ಪ್ರಯಾಣಿಕರ ವಿಭಾಗದಲ್ಲಿ (ಕ್ಯಾಬಿನ್‌) ಕೊಡಲಿಗಳನ್ನು ಇಡಲಾಗುತ್ತಿತ್ತು. ಆದರೆ 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಗಳ ಬಳಿಕ ಅವುಗಳನ್ನು ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಯಿತು. ಈಗ ಈ ತುರ್ತು ಕೊಡಲಿಯನ್ನು ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳಿಗೆ ಸುಲಭವಾಗಿ ಕೈಗೆಟುಕುವಂತೆ ಇಡಲಾಗುತ್ತದೆ.

ಓಮಾನ್‌ ಕೋ ಪೈಲಟ್‌ನ ಗುರುತು ಮತ್ತು ಉದ್ದೇಶ ಇನ್ನೂ ತಿಳಿದಿಲ್ಲ. ಆತನನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಮತ್ತೊಂದೆಡೆ, ಸೌದಿ ಮತ್ತು ಯುಎಇ ಅಧಿಕಾರಿಗಳು ತನಿಖೆಗಳು ನಡೆಯುತ್ತಿವೆ ಎಂದು ದೃಢಪಡಿಸುವುದನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಹೆಚ್ಚಿನ ಮಾಹಿತಿ ನೀಡಿಲ್ಲ. ತನಿಖೆ ನಡೆಯುವವರೆಗೆ ಇಸ್ರೇಲ್‌ಗೆ ಮತ್ತು ಅಲ್ಲಿಂದ ಹೊರಡುವ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಫ್ಲೈದುಬೈ ಹೇಳಿದೆ.