ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಘರ್ಷ ವಾತಾವರಣದ ನಡುವೆಯೇ ತೈಲ ರಫ್ತು ಆರಂಭಿಸಿದ ಇರಾಕ್

ಇರಾನ್ ಮತ್ತು ಇಸ್ರೇಲ್ ಹಾಗೂ ಯುಎಸ್ ಸೇನಾ ಪಡೆಗಳ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಘರ್ಷದ ಆತಂಕದ ನಡುವೆಯೇ ಇದೀಗ ಇರಾಕ್ ತೈಲ ರಫ್ತು ಚಟುವಟಿಕೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಇರಾಕ್ ಗೆ ಟರ್ಕಿ ಸಾಥ್ ನೀಡಿದೆ.

ಇರಾಕ್ ನಿಂದ ತೈಲ ರಫ್ತು ಆರಂಭ

ಸಂಗ್ರಹ ಚಿತ್ರ -

ಟೆಹರಾನ್: ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ಇರಾನ್ ಮೇಲೆ ದಾಳಿ (Iran conflict) ನಡೆಸಿದ ಬಳಿಕ ಇದಕ್ಕೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು (Strait Of Hormuz) ಮುಚ್ಚಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು (oil crisis) ಉಂಟಾಗುವಂತೆ ಮಾಡಿತ್ತು. ಇದರ ಪರಿಣಾಮ ತೈಲ ಬೆಲೆ (Oil Price) ಗಗನಕ್ಕೇರಲು ಪ್ರಾರಂಭವಾಯಿತು. ಇದು ಹೀಗೆ ಮುಂದುವರಿದರೂ ಈ ನಡುವೆ ಸಾಕಷ್ಟು ಅಡೆತಡೆಗಳು ಇದ್ದರೂ ಕೂಡ ಇರಾಕ್ ಇದೀಗ ತೈಲ ರಫ್ತು (Oil export) ಚಟುವಟಿಕೆಯನ್ನು ಪ್ರಾರಂಭ ಮಾಡಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳ ನಡುವೆ ಟರ್ಕಿ ಮೂಲಕ ಇರಾಕ್ ತೈಲ ರಫ್ತು ಪುನರಾರಂಭಿಸಿದೆ. ಉತ್ತರ ತೈಲ ಕಂಪನಿಯು ಸೆಹಾನ್ ಬಂದರಿಗೆ ಕಿರ್ಕುಕ್ ತೈಲವನ್ನು ಪಂಪ್ ಮಾಡುವುದು ಮತ್ತು ರಫ್ತು ಮಾಡುವುದನ್ನು ಪುನರಾರಂಭಿಸಲು ಸರ್ಲೋ ಪಂಪಿಂಗ್ ಸ್ಟೇಷನ್ ಅನ್ನು ನಿರ್ವಹಿಸಲು ಪ್ರಾರಂಭಿಸಿರುವುದಾಗಿ ಇರಾಕ್ ಹೇಳಿದೆ.

ನವರಾತ್ರಿ, ಯುಗಾದಿ ಮತ್ತು ಈದ್ ಸಂಭ್ರಮಕ್ಕಾಗಿ Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

ಜಲಸಂಧಿಯಲ್ಲಿನ ತೊಂದರೆಯಿಂದ ದೇಶದ ಉತ್ಪಾದನೆ ಕುಸಿದಿದ್ದು, ಇರಾಕ್ ಬುಧವಾರ ಟರ್ಕಿಯ ಸೆಹಾನ್ ಬಂದರಿನ ಮೂಲಕ 2,50,000 ಬ್ಯಾರೆಲ್‌ಗಳ ಸೀಮಿತ ತೈಲ ರಫ್ತುಗಳನ್ನು ಪ್ರಾರಂಭಿಸಿತ್ತು.

ಒಪಿಇಸಿ ಕಾರ್ಟೆಲ್‌ನ ಸ್ಥಾಪಕ ಸದಸ್ಯರಾಗಿರುವ ಕಚ್ಚಾ ತೈಲ ಮಾರಾಟವು ಇರಾಕ್‌ನ ಬಜೆಟ್ ಆದಾಯದ ಶೇ. 90ರಷ್ಟಿದೆ. ಫೆಬ್ರವರಿ 28 ರಂದು ಇರಾನ್, ಇಸ್ರೇಲ್ ಮತ್ತು ಯುಎಸ್ ನಡುವೆ ಯುದ್ಧ ಪ್ರಾರಂಭವಾಗುವ ಮೊದಲು ಇರಾಕ್ ದಿನಕ್ಕೆ ಸರಿಸುಮಾರು 3.5 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ದಕ್ಷಿಣ ಬಾಸ್ರಾ ಕ್ಷೇತ್ರಗಳಿಂದ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿಸುತ್ತಿತ್ತು.

ತೈಲ ರಫ್ತು ಮಾಡಲು ಪರದಾಡುತ್ತಿದ್ದ ಇರಾಕ್ ಗೆ ಈಗ ಅದನ್ನು ಸಾಗಿಸಲು ಕುರ್ದಿಸ್ತಾನ್‌ನೊಂದಿಗೆ ದೀರ್ಘಕಾಲದ ಮಾತುಕತೆಗಳನ್ನು ಪೂರ್ಣಗೊಳಿಸಿದ್ದಾರೆ. ಈ ಪ್ರದೇಶದ ಪೈಪ್‌ಲೈನ್ ಮೂಲಕ ತೈಲವನ್ನು ಹರಿಯುವಂತೆ ಮಾಡಲು ಒಪ್ಪುವ ಮೊದಲು ಕುರ್ದಿಶ್ ಅಧಿಕಾರಿಗಳು ಹಲವಾರು ಬೇಡಿಕೆಗಳನ್ನು ಕೂಡ ಇಟ್ಟಿದ್ದಾರೆ. ಕುರ್ದಿಸ್ತಾನ್ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಸರ್ಲೋ ತೈಲ ಕೇಂದ್ರವು ಬೆಳಗ್ಗೆ 6.30ಕ್ಕೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

80,886 ಮೆಟ್ರಿಕ್ ಟನ್ ಕಚ್ಚಾ ತೈಲದೊಂದಿಗೆ ಗುಜರಾತ್‌ ತಲುಪಿದ ಜಗ್‌ಲಡ್ಕಿ ಹಡಗು

ವಿಶ್ವದ ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗದಷ್ಟು ಸಾಮಾನ್ಯವಾಗಿ ಸಾಗಿಸಲ್ಪಡುವ ಜಲಸಂಧಿಯನ್ನು ಇರಾನ್ ಹೆಚ್ಚಿನ ದೇಶಗಳ ಹಡಗುಗಳಿಗೆ ಮುಚ್ಚಿದೆ. ಇರಾಕ್‌ನ ತೈಲ ಸಚಿವ ಹಯಾನ್ ಅಬ್ದೆಲ್ ಘನಿ ಅವರು ಇರಾನ್‌ನೊಂದಿಗೆ ಸಂಪರ್ಕ ನಡೆಸುತ್ತಿರುವುದಾಗಿ ಹೇಳಿದ್ದು, ತೈಲ ಟ್ಯಾಂಕರ್‌ಗಳ ಸಾಗಾಟಕ್ಕೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.