ಇಸ್ರೇಲ್ ದಾಳಿಗೆ ಬಲಿಯಾದ ಮತ್ತೊಬ್ಬ ಇರಾನ್ ನಾಯಕ
ಇರಾನ್‌ನ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರನ್ನು ಇಸ್ರೇಲ್ ಹತ್ಯೆಗೈದಿದೆ. ಖತೀಬ್ ಅವರನ್ನು ಬುಧವಾರ ರಾತ್ರಿಯಿಡೀ ನಡೆದ ದಾಳಿಯಲ್ಲಿ ಹತ್ಯೆ ಮಾಡಲಾಗಿದ್ದು, ಅವರ ಸಾವನ್ನು ಇರಾನ್ ದೃಢಪಡಿಸಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಅವರನ್ನು ಕೊಳ್ಳಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಿಲಿಟರಿಗೆ ಮುಕ್ತ ಅವಕಾಶ ನೀಡಿದ್ದರು ಎಂದು ಕಾಟ್ಜ್ ಹೇಳಿದರು.
ಸಂಗ್ರಹ ಚಿತ್ರ -
ಇಸ್ರೇಲ್: ಇರಾನ್‌ನ (Iran) ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ (Intelligence Minister Esmail Khatib) ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Israel's Defence Minister Israel Katz) ತಿಳಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಅವರು ಹೆಚ್ಚುವರಿ ಅನುಮೋದನೆಗಳನ್ನು ಪಡೆಯದೆ ಇರಾನಿನ ಹಿರಿಯ ಅಧಿಕಾರಿಯನ್ನು ಕೊಲ್ಲಲು ಮಿಲಿಟರಿಗೆ ಮುಕ್ತ ಅವಕಾಶ ನೀಡಿದ್ದರು. ಹೀಗಾಗಿ ಬುಧವಾರ ರಾತ್ರಿಯಿಡೀ ನಡೆದ ದಾಳಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದ್ದು, ಅವರ ಸಾವನ್ನು ಇದುವರೆಗೆ ಇರಾನ್ ದೃಢಪಡಿಸಿಲ್ಲ ಎಂದು ಕಾಟ್ಜ್ ಹೇಳಿದರು.
ಎಸ್ಮಾಯಿಲ್ ಖತೀಬ್ ಅವರ ಸಾವನ್ನು ದೃಢಪಡಿಸಿರುವ ಇಸ್ರೇಲ್ ಕಾಟ್ಜ್, ಬುಧವಾರ ರಾತ್ರಿಯಿಡೀ ದಾಳಿ ನಡೆಸಿ ಎಸ್ಮಾಯಿಲ್ ಖತೀಬ್ ಅವರ ಹತ್ಯೆ ಮಾಡಲಾಗಿದೆ. ಇರಾನ್ ಖತೀಬ್ ಅವರ ಸಾವನ್ನು ದೃಢಪಡಿಸಿಲ್ಲ. ಖತೀಬ್ ಅವರ ಸಾವಿನ ಘೋಷಣೆ ವೇಳೆ ಹಲವಾರು ಅಚ್ಚರಿಯ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ನಾವು ಅವರೆಲ್ಲರನ್ನೂ ತಡೆಯುತ್ತೇವೆ ಮತ್ತು ಬೇಟೆಯಾಡುತ್ತೇವೆ ಎಂದು ಹೇಳಿದ ಕಾಟ್ಜ್, ಹೆಚ್ಚುವರಿ ಅನುಮೋದನೆಗಳನ್ನು ಪಡೆಯದೆ ಹಿರಿಯ ಇರಾನಿನ ಅಧಿಕಾರಿಯನ್ನು ಕೊಲ್ಲಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಿಲಿಟರಿಗೆ ಮುಕ್ತ ಅವಕಾಶ ನೀಡಿದ ಬಳಿಕ ಕಳೆದ ಎರಡು ದಿನಗಳಲ್ಲಿ ನಡೆದ ಇರಾನಿನ ನಾಯಕರಲ್ಲಿನ ಮೂರನೇ ಸಾವು ಇದಾಗಿದೆ. ಮಂಗಳವಾರ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳ ಸ್ವಯಂಸೇವಕ ಬಸಿಜ್ ಪಡೆಯ ಮುಖ್ಯಸ್ಥ ಘೋಲಮ್ರೆಜಾ ಸೊಲೈಮಾನಿ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ತಿಳಿಸಿದರು.
ಎಸ್ಮಾಯಿಲ್ ಖತೀಬ್
ಶಿಯಾ ಧರ್ಮಗುರುವಾಗಿರುವ ಖತೀಬ್, ಇರಾನ್‌ನ ನ್ಯಾಯಾಂಗ ಮತ್ತು ಗುಪ್ತಚರ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. 1980ರ ದಶಕದಲ್ಲಿ ಇರಾನ್ ಮತ್ತು ಇರಾಕ್ ಯುದ್ಧದಲ್ಲಿ ಕ್ರಾಂತಿಕಾರಿ ಗಾರ್ಡ್‌ನಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈ ವೇಳೆ ಗಾಯಗೊಂಡಿದ್ದರು. 2022ರಲ್ಲಿ ಅವರೊಗೆ ಯುಎಸ್ ನಿಷೇಧ ಹೇರಿತ್ತು.
ಇರಾನ್‌ನ ದಕ್ಷಿಣ ಖೋರಾಸನ್ ಪ್ರಾಂತ್ಯದ ಘಯೇನಾತ್‌ನಲ್ಲಿ ಜನಿಸಿದ ಖತೀಬ್, ಇರಾನ್‌ನ ರಾಜಕೀಯ ಗುರಿಗಳನ್ನು ಬೆಂಬಲಿಸಲು ಸೈಬರ್ ಬೇಹುಗಾರಿಕೆ ಮತ್ತು ರಾನ್ಸಮ್‌ವೇರ್ ದಾಳಿಯಲ್ಲಿ ಭಾಗಿಯಾಗಿರುವ ಸೈಬರ್ ಬೆದರಿಕೆಗೆ ಸಂಬಂಧಿಸಿದ ಹಲವಾರು ನೆಟ್‌ವರ್ಕ್‌ಗಳಿಗೆ ನಿರ್ದೇಶನ ನೀಡುತ್ತಾರೆ. ಇವರು ಅಲ್ಬೇನಿಯನ್ ನಿವಾಸಿಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ಸೋರಿಕೆಗೂ ಕೂಡ ಕಾರಣರಾಗಿದ್ದರು ಎನ್ನುವ ಆರೋಪವಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಫೆಬ್ರವರಿ 28 ರಂದು ದಾಳಿ ನಡೆಸಿ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಸಂಘರ್ಷ ತೀವ್ರಗೊಂಡಿತ್ತು. ಇದರ ಬಳಿಕ ಇಸ್ರೇಲ್ ಇರಾನ್‌ನ ಬಸಿಜ್ ಪಡೆಯ ಮುಖ್ಯಸ್ಥನನ್ನು ಕೊಂದು ಹಾಕಿತ್ತು. ಈ ದಾಳಿಯಲ್ಲಿ ಜನರಲ್ ಘೋಲಮ್ ರೆಜಾ ಸೊಲೈಮಾನಿ ಅವರು ಕೂಡ ಉನ್ನತ ಸಿಬ್ಬಂದಿಯೊಂದಿಗೆ ಹತ್ಯೆಯಾಗಿದ್ದಾರೆ ಎಂದು ಹಿರಿಯ ಇಸ್ರೇಲಿ ಮಿಲಿಟರಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತೀಯ ಹಡಗುಗಳಿಗೆ ನೌಕಾಪಡೆಯೇ ಶ್ರೀರಕ್ಷೆ, ಬೆಂಗಾವಲು ಹೇಗಿದೆ ಗೊತ್ತಾ?
ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿರುವ ಟರ್ಕಿ, ಟೆಹರಾನ್ ನಾಯಕರನ್ನು ಇಸ್ರೇಲ್ ಗುರಿಯಾಗಿಸಿಕೊಂಡಿರುವುದು ಕಾನೂನುಬಾಹಿರ ಎಂದು ತಿಳಿಸಿದೆ.