ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

12th Global Achievers Awards in South Africa: ವಿವಿಧ ಕ್ಷೇತ್ರದವರನ್ನೂ ಒಂದೆಡೆ ಸೇರಿಸುವುದು ಸುಲಭ ಅಲ್ಲ

ವಿವಿಧ ಕ್ಷೇತ್ರಗಳ 300ಕ್ಕೂ ಹೆಚ್ಚು ಮಂದಿ ಒಂದೇ ವೇದಿಕೆಯಲ್ಲಿ ಸೇರುವುದು ಅಪರೂಪದ ಸಂಗತಿಯಾಗಿದೆ. 12 ಆವೃತ್ತಿಗಳ ಮೂಲಕ ನಡೆದ ಈ ಸಮ್ಮೇಳನದಲ್ಲಿ ರಿಯಲ್ ಎಸ್ಟೇಟ್, ಹಣ ಕಾಸು, ವೈದ್ಯಕೀಯ, ರಾಜಕೀಯ, ಉದ್ಯಮ, ಸೇವಾ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಸುಮಾರು 300-350 ಮಂದಿ ಭಾಗಿಯಾಗಿದ್ದಾರೆ.

ವಿವಿಧ ಕ್ಷೇತ್ರದವರನ್ನೂ ಒಂದೆಡೆ ಸೇರಿಸುವುದು ಸುಲಭ ಅಲ್ಲ

-

Ashok Nayak
Ashok Nayak Mar 2, 2026 8:00 AM

ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಒಂದೇ ವೇದಿಕೆಯಲ್ಲಿ ಸೇರಿಸು ವುದು ಸುಲಭದ ವಿಷಯವಲ್ಲ. ಆದರೆ ಈ ವಿಷಯದಲ್ಲಿ ವಿಶ್ವೇಶ್ವರ ಭಟ್ ಹಾಗೂ ವಿಶ್ವವಾಣಿ ಕುಟುಂಬ ಯಶಸ್ವಿಯಾಗಿದೆ ಎಂದು ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ. ನೀಲೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳ 300ಕ್ಕೂ ಹೆಚ್ಚು ಮಂದಿ ಒಂದೇ ವೇದಿಕೆಯಲ್ಲಿ ಸೇರುವುದು ಅಪರೂಪದ ಸಂಗತಿಯಾಗಿದೆ. 12 ಆವೃತ್ತಿಗಳ ಮೂಲಕ ನಡೆದ ಈ ಸಮ್ಮೇಳನದಲ್ಲಿ ರಿಯಲ್ ಎಸ್ಟೇಟ್, ಹಣ ಕಾಸು, ವೈದ್ಯಕೀಯ, ರಾಜಕೀಯ, ಉದ್ಯಮ, ಸೇವಾ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಸುಮಾರು 300-350 ಮಂದಿ ಭಾಗಿಯಾಗಿದ್ದಾರೆ.

ನಾವೆಲ್ಲರೂ ಒಂದೇ ಉದ್ಯಮದಿಂದ ಬಂದವರಲ್ಲ. ಪ್ರತಿಯೊಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದೇವೆ. ಆದರೆ ಇಲ್ಲಿ ನಾವು ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಒಂದಾಗಿದ್ದೇವೆ ಎಂದರು.

ಇದನ್ನೂ ಓದಿ: 12th Global Achievers Awards in South Africa: ವಿವಿಧತೆಯಲ್ಲಿ ವಿಶೇಷತೆ ನೀಡಿದ ವಿಶ್ವವಾಣಿ

ಈ ವೇದಿಕೆ ಕೇವಲ ಪರಿಚಯದ ಮಟ್ಟದಲ್ಲಿಲ್ಲ, ಪರಸ್ಪರ ಸಹಕಾರ, ಮಾರ್ಗದರ್ಶನ, ವ್ಯವಹಾರಿಕ ಬೆಳವಣಿಗೆ ಮತ್ತು ಮಾನಸಿಕ ಬೆಂಬಲ ನೀಡುವ ವೇದಿಕೆಯಾಗಿದೆ. ನಾಳೆ ಯಾರಿಗಾದರೂ ವ್ಯವಹಾರಿಕ ಸಹಾಯ ಬೇಕಾದರೂ, ಸಲಹೆ ಬೇಕಾದರೂ, ಸಾಂತ್ವನ ಬೇಕಾದರೂ ನೇರವಾಗಿ ಸಂಪರ್ಕಿಸಬಹುದಾದ ಬಾಂಧವ್ಯ ಇಲ್ಲಿ ರೂಪುಗೊಂಡಿದೆ ಎಂದರು.

ಈ ಕುಟುಂಬಕ್ಕೆ ಮೊದಲ ಆದ್ಯತೆ ಪ್ಯಾರಿಸ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ದುಬೈ ಕಾರ್ಯಕ್ರಮಗಳ ನಡುವೆಯೂ ಕುಟುಂಬದೊಂದಿಗೆ ಸಮಯ ಕಳೆಯಲು ಮಾಡಿದ ತ್ಯಾಗವನ್ನು ನೆನಪಿಸಿಕೊಂಡ ಅವರು, ವಿಶ್ವವಾಣಿ ಕುಟುಂಬದೊಂದಿಗೆ ಇರಲು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಟಿಕೆಟ್ ರದ್ದುಪಡಿಸಿದ್ದೇನೆ. ಈ ಕುಟುಂಬವೇ ನನಗೆ ಮೊದಲ ಆದ್ಯತೆ.

ಇದೇ ರೀತಿ, ದುಬೈಯಲ್ಲಿ ಆಯೋಜಿಸಲಾದ ದೊಡ್ಡ ಕಾರ್ಯಕ್ರಮವನ್ನೂ ಬಿಟ್ಟು, ಮೂರು ದಿನಗಳ ಈ ಸಮ್ಮೇಳನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ತೀರ್ಮಾನಿಸಿ ದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ಒಳಗೊಂಡ ಪುನರ್ಮಿಲನ ಸಮ್ಮೇಳನವನ್ನು ಕ್ರೂಸ್‌ನಲ್ಲಿ ನಾಲ್ಕೈದು ದಿನಗಳ ಕಾಲ ಆಯೋಜಿಸುವ ಯೋಚನೆ ಇದೆ.

ಶಾಲೆಯ ರಿಯೂನಿಯನ್ನಂತೆ ಮತ್ತೆ ಒಂದಾಗುವ ಅವಕಾಶ ಇದರಿಂದ ಸಿಗುತ್ತದೆ. ಇದು ನಮ್ಮ ಸಂಬಂಧ ಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದರು. ಈ ಸಮ್ಮೇಳನವು ಕೇವಲ ವ್ಯವಹಾರಿಕ ನೆಟ್ವರ್ಕಿಂಗ್ ವೇದಿಕೆಯಾಗಿ ಮಾತ್ರವಲ್ಲ, ಬಾಂಧವ್ಯ, ಪರಸ್ಪರ ವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿ ಮೂಡಿಬಂದಿದೆ.

ಕುಟುಂಬವೇ ಶಕ್ತಿ, ಸಂಪರ್ಕವೇ ಸಂಪತ್ತು ಯಾವುದೇ ಸಹಾಯ ಬೇಕಿದ್ದರೂ ನನ್ನನ್ನು ಸಂಪರ್ಕಿಸಿ. ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.