ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Technology: ಮಿಂಚಿನ ದಾಳಿ ನಿಯಂತ್ರಣಕ್ಕೆ ವಿಶ್ವದ ಮೊದಲ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಜಪಾನ್

ಮಿಂಚಿನ ದಾಳಿ ಸಾಕಷ್ಟು ಜೀವ ಹಾನಿಯನ್ನು ಉಂಟು ಮಾಡುತ್ತದೆ. ಮಾತ್ರವಲ್ಲದೆ ಗಮನಾರ್ಹ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯನ್ನು ಮಾಡುತ್ತದೆ. ಇನ್ನುಮುಂದೆ ಇದರ ಚಿಂತೆ ಇಲ್ಲ. ಯಾಕೆಂದರೆ ಜಪಾನಿನ ವಿಜ್ಞಾನಿಗಳು ಈಗ ಮೋಡಗಳನ್ನು ಪ್ರವೇಶಿಸುವ ಮತ್ತು ಅವುಗಳೊಳಗೆ ರೂಪುಗೊಂಡ ಮಿಂಚನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ವಿಶೇಷ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಮಿಂಚಿನ ದಾಳಿ ತಪ್ಪಿಸಲು ಸಿದ್ಧವಾಯ್ತು ಡ್ರೋನ್

ಟೋಕಿಯೋ: ಗುಡುಗು ಮಿಂಚು (lightning strike) ಕಾಣಿಸಿದರೆ ಸಾಕು ಎಲ್ಲರ ಹೃದಯದಲ್ಲಿ ಸಣ್ಣದೊಂದು ಭಯ ಉದ್ಘವವಾಗುತ್ತದೆ. ಯಾಕೆಂದರೆ ಇದು ಮಾಡುವ ಹಾನಿಯ ಪ್ರಮಾಣ ಬಹುತೇಕ ಎಲ್ಲರ ಅರಿವಿಗೂ ಬಂದಿರುತ್ತದೆ. ಆದರೆ ಇನ್ನು ಮುಂದೆ ಇದಕ್ಕೆ ಹೆದರಬೇಕಿಲ್ಲ. ಯಾಕೆಂದರೆ ಮಿಂಚಿನ ದಾಳಿಯನ್ನು ನಿಯಂತ್ರಿಸಲು ಜಪಾನ್ (Japan) ಈಗ ವಿಶ್ವದ ಮೊದಲ ತಂತ್ರಜ್ಞಾನವನ್ನು (Drone technology) ಅಭಿವೃದ್ಧಿಪಡಿಸಿದೆ. ವಾರ್ಷಿಕವಾಗಿ ಜಪಾನ್‌ನಲ್ಲಿ ಮಿಂಚಿನ ದಾಳಿಯಿಂದಲೇ ಬರೋಬ್ಬರಿ 113.66 ಶತಕೋಟಿ ರೂ. ಗಳಿಗೂ ಹೆಚ್ಚು ನಷ್ಟವಾಗುತ್ತದೆ. ಇದಕ್ಕೆ ಪರಿಹಾರ ಹುಡುಕಿದ ವಿಜ್ಞಾನಿಗಳು ಇದೀಗ ಮಿಂಚಿನ ದಾಳಿಯನ್ನು ಬೇರೆ ಕಡೆ ತಿರುಗಿಸಬಹುದಾದ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಮಿಂಚಿನ ದಾಳಿ ಸಾಕಷ್ಟು ಜೀವ ಹಾನಿಯನ್ನು ಉಂಟು ಮಾಡುತ್ತದೆ. ಮಾತ್ರವಲ್ಲದೆ ಗಮನಾರ್ಹ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯನ್ನು ಮಾಡುತ್ತದೆ. ಇದು ಪ್ರತಿ ಮಳೆಗಾಲದಲ್ಲೂ ಸಂಭವಿಸುತ್ತದೆ. ಯಾಕೆಂದರೆ ಅವುಗಳನ್ನು ತಪ್ಪಿಸುವುದು ಈವರೆಗೆ ಅಸಾಧ್ಯವೇ ಆಗಿತ್ತು. ಯಾಕೆಂದರೆ ಮಿಂಚನ್ನು ನಿಯಂತ್ರಿಸುವ ಯಾವುದೇ ಶಕ್ತಿ ಇರಲಿಲ್ಲ. ಆದರೆ ಜಪಾನಿನ ವಿಜ್ಞಾನಿಗಳು ಈಗ ಮೋಡಗಳನ್ನು ಪ್ರವೇಶಿಸುವ ಮತ್ತು ಅವುಗಳೊಳಗೆ ರೂಪುಗೊಂಡ ಮಿಂಚನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ವಿಶೇಷ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಮಿಂಚಿನ ಹೊಡೆತಗಳ ಭಯವನ್ನು ದೂರ ಮಾಡಬಹುದಾಗಿದೆ.

ಮಿಂಚಿನ ದಾಳಿಯನ್ನು ಸಂಪೂರ್ಣವಾಗಿ ಈ ಡ್ರೋನ್ ಗಳು ನಿರ್ವಹಿಸುತ್ತದೆ ಎನ್ನುತ್ತಾರೆ ಜಪಾನ್ ವಿಜ್ಞಾನಿಗಳು. ಹೀಗಾಗಿ ಇದು ವಿಶ್ವದ ಮೊದಲ ಹವಾಮಾನ ನಿಯಂತ್ರಣ ತಂತ್ರಜ್ಞಾನವಾಗಿದೆ. ಈ ತಂತಜ್ಞಾನದ ಮೂಲಕ ಮಿಂಚನ್ನು ಸುರಕ್ಷಿತ ಸ್ಥಳದಲ್ಲಿ ಹೊಡೆಯುವಂತೆ ಮಾಡಬಹುದಾಗಿದೆ. ಜಪಾನ್‌ನಲ್ಲಿ ಮಿಂಚಿಗೆ ಸಂಬಂಧಿಸಿದ ಅಪಘಾತಗಳನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಜಪಾನ್‌ನ ನಿಪ್ಪಾನ್ ಟೆಲಿಗ್ರಾಫ್ ಮತ್ತು ಟೆಲಿಫೋನ್ ಕಾರ್ಪೊರೇಷನ್ ಇದನ್ನು ಅಭಿವೃದ್ಧಿಪಡಿಸಿದೆ.



ಪರೀಕ್ಷೆ ಯಶಸ್ವಿ

ಜಪಾನ್‌ನಲ್ಲಿ ಪ್ರತಿ ವರ್ಷ ಮಿಂಚಿನ ದಾಳಿಯಿಂದ ಸುಮಾರು 113.66 ಶತಕೋಟಿ ರೂ.ಗಿಂತ ಹೆಚ್ಚಿನ ನಷ್ಟವಾಗುತ್ತದೆ. ಇದನ್ನು ತಡೆಯಲು ಹೊಸ ತಂತ್ರಜ್ಞಾನವನ್ನು ಕಳೆದ ಡಿಸೆಂಬರ್‌ ಮತ್ತು ಜನವರಿಯಲ್ಲಿ ಜಪಾನ್‌ನ ಶಿಮಾನೆ ಪ್ರಿಫೆಕ್ಚರ್‌ನ ಹಮಡಾ ನಗರದಲ್ಲಿ ಪರೀಕ್ಷಿಸಲಾಯಿತು. ಇದರಲ್ಲಿ ಮೋಡಗಳ ನಡುವೆ ಡ್ರೋನ್ ಅನ್ನು 300 ಮೀಟರ್ ಎತ್ತರಕ್ಕೆ ಹಾರಿಸಿ ಮಿಂಚನ್ನು ಬೇರೆ ಕಡೆ ಅಂದರೆ ಸುರಕ್ಷಿತವಾದ ಪ್ರದೇಶಕ್ಕೆ ಹೊಡೆಯುವಂತೆ ಮಾಡಬಹುದು.

ಇದನ್ನೂ ಓದಿ: Pahalgam Terror Attack: ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ಭಾರತೀಯರ ರಕ್ತ ಹರಿಯುತ್ತದೆ; ನಾಲಗೆ ಹರಿಬಿಟ್ಟ ಪಾಕ್‌ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ

ಡ್ರೋನ್ ಅನ್ನು ನೆಲದಿಂದ ನಿಯಂತ್ರಿಸಲಾಗುತ್ತದೆ. ಡ್ರೋನ್ ಆಕಾಶಕ್ಕೆ ಹಾರಿ ನಿರ್ದಿಷ್ಟ ವಿದ್ಯುತ್ ಕ್ಷೇತ್ರವನ್ನು ಗುರುತಿಸಿ ಸಂಶೋಧಕರಿಗೆ ಮಾಹಿತಿ ನೀಡುತ್ತದೆ. ಬಳಿಕ ಸಂಶೋಧಕರು ಅದರ ಸ್ವಿಚ್ ಅನ್ನು ಸಕ್ರಿಯಗೊಳಿಸಿ ಮಿಂಚಿನ ದಿಕ್ಕನ್ನು ಬದಲಾಯಿಸುತ್ತಾರೆ. ಇದರಿಂದ ಅದು ಸುರಕ್ಷಿತ ಸ್ಥಳಕ್ಕೆ ಹೋಗಿ ಬಡಿಯುತ್ತದೆ. ಈ ತಂತ್ರಜ್ಞಾನವು ಪರೀಕ್ಷೆ ಸಮಯದಲ್ಲಿ ಯಶಸ್ವಿಯಾಗಿದೆ.

ಈ ಡ್ರೋನ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ವಿಶಿಷ್ಟ ಲೋಹವನ್ನು ಬಳಸಲಾಗಿದೆ. ಪಂಜರದ ರೀತಿ ಇರುವ ಡ್ರೋನ್ ಮಿಂಚಿನ ಹೊಡೆತಗಳನ್ನು ತಡೆದುಕೊಳ್ಳಬಲ್ಲದು. ಮಿಂಚು ಡ್ರೋನ್‌ನ ಕೆಲವು ಸೂಕ್ಷ್ಮ ಪ್ರದೇಶಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಈ ಡ್ರೋನ್‌ ಮೂಲಕ ನಗರ, ಪ್ರಮುಖ ಕಟ್ಟಡ, ಕಾರ್ಖಾನೆ ಮತ್ತು ಇತರ ಮೂಲಸೌಕರ್ಯಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ. ಇದರಲ್ಲಿ ಮಿಂಚನ್ನು ಆಕರ್ಷಿಸಲು ಅತ್ಯುನ್ನತ ರಚನೆಯ ಆಂಟೆನಾವನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.